ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ನಂಬಿಕೆಯೇ ಆಧಾರ.. ಎಂಬ ದೊಡ್ಡ ಸಮಸ್ಯೆ.

September 23, 2007 - 12:39pm — mahesha

ಇಂದು ನಮ್ಮ ಸುತ್ತಮುತ್ತ ಏನೆಲ್ಲ ಗೊಡವೆಗಳು, ತೊಂದರೆಗಳು, ಇಕ್ಕಟ್ಟು-ಎಡವಟ್ಟುಗಳಿವೆ. ಇವೆಲ್ನ ನಾವು ನಾಳ್ನಾಳೂ ಎದುರಿಸಿಕೊಂಡು, ಬದುಕಿಕೊಂಡಿದ್ದೀವಿ, ಹಾಗೆ ಸತ್ತುಕೊಂಡಿದ್ದೀವಿ. ಬದುಕುವುದೇ ಒಂದು ದೊಡ್ಡ ಪಜೀತಿಯಾಗಿರುವಾಗ, ಈ ಪಜೀತಿಗಳಿಗೆ ಇನ್ನು ಹೆಚ್ಚೆಚ್ಚು ಪಜೀತಿಗಳನ್ನು ತುಂಬಿಕೊಳ್ಳುತ್ತಿದ್ದೀವಿ. ಒಟ್ಟಿನಲ್ಲಿ ನಾವು ನೇರವಾಗಿ ನುಣುಪು-ಬಾಳನ್ನು ಮೆಚ್ಚುವವರು ಅಲ್ಲ ಅನ್ನಿಸ್ತದೆ. ನಮಗೆ ಬದುಕಲು ಈವೆಲ್ಲ ಗೊಡವೆ ಬೇಕೇಬೇಕೇನೋ.

ಇಬ್ಬರು ಹುಯೂಮನರ(humans) ಬೆರಳಚ್ಚು ಹೇಗೆ ಹೊಂದವೋ, ಹಾಗೆ ಅವರ ಮನಗಳು ಒಂದೇ ಬಗೆಯಲ್ಲಿ ಹೊಂದವೂ. ಇದಕ್ಕೆ ಏನು ಓಸುಗರ, ಅಂತ ಹುಡುಕಿಕೊಂಡು ಹೋದ್ರೆ, ಉತ್ರ ಸಿಗ್ತದಾ? ಒಮ್ಮೆ ನೋಡೋಣ.

ಈಗ ನಾವು ಒಂದು ಸರಕು ತಗೆದುಕೊಳ್ಳೋಣ. ಮಾದರಿಯಾಗಿ ಒಂದು ದುಂಡುಗಲ್ಲು. ಇದನ್ನು ನೋಡಿ ಹಲವರು ಹಲವಾರು ಬಗೆಯಲ್ಲಿ ಹೇಳಬಹುದು
೧) ಇದೊಂದು ದುಂಡುಗಲ್ಲು. ದುಂಡಗಿದೆ.
೨) ಇದೊಂದು ದುಂಡುಗಲ್ಲು. ಕಲ್ಲು ಗಟ್ಟಿ, ತೂಕ.
೩) ಇದೊಂದು ದುಂಡುಗಲ್ಲು, ಗುಂಡುಗಲ್ಲು, ಗುಂಡಪ್ಪ. ಅಂದ್ರೆ ಸಿವಲಿಂಗ
೪) ಇದೊಂದು ದುಂಡುಗಲ್ಲು, ಒರಳಿಗೆ ಹಾಕಿ ರುಬ್ಬಲು ಆದೀತು
೫) ಇದೊಂದು ದುಂಡುಗಲ್ಲು, ಇದು ನೋಡಕ್ಕೆ ಸಕ್ಕತ್ತಾಗಿದೆ, ನಮ್ಮ ಮನೆ ಅಂಗಳದ ಮೂಲೆಯಲ್ಲಿ ಇಟ್ಟು ಇದಕ್ಕೆ ಸಿಂಗರಮಾಡಬೋದು.
.
.
.
.

ದುಂಡುಗಲ್ಲು ಒಂದೇ, ಆದ್ರೆ ಒಬ್ಬೊಬ್ಬರು ಒಂದೊಂದು ಗುಣಗಳನ್ನು ಹಿಡಿದರು. ಕೆಲವರು ಅದರ ರೂಪವನ್ನು ನೋಡಿದರು, ಕೆಲವರು ಅದಕ್ಕೊಂದು ಕತೆಯನ್ನು ಗಂಟುಹಾಕಿ ಶಿವಲಿಂಗ ಅಂದರು. ಈಗ ಇವೆಲ್ಲ ಸಂಗತಿಗಲ್ಲಿ ಯಾವುದು ಸರಿ? ಯಾವುದು ಮೇಲು? ಅನ್ನೋ ಮಾತುಕತೆಗೆ ಇಳಿದರೆ ಅದಕ್ಕೊಂದು ಕೊನೆಯುಂಟೇ, ತೀರುಂಟು, ತೀರ್ಮಾನವುಂಟೇ?

ಈ ಗೊಡವೆಯಲ್ಲಿ ಎಲ್ಲರು ಅವರವರ ನಂಬಿಕೆಯ ಹಿನ್ನೆಲೆಯಲ್ಲೇ ಮಾತಾಡುವರು. ಎಲ್ಲರ ಮಾತು ಅವರವರ ನಂಬಿಕೆಯ ಆಧಾರ/ಬೆಂಬಲದಲ್ಲಿ ಸರಿಯೇ. ಹೀಗಿರುವಾಗ ಸುಮ್ನೆ ಒಂದು ಕೂಟ ತಾನು ನಂಬಿದ್ದೇ ಸರಿ, ಎಂದು ಬೇರೊಂದು ನಂಬು-ಕೂಟ(belief-group)ವನ್ನು ಹಳಿಯುವುದು, ಅವರನ್ನು ಅಳಿಸಿಹಾಕಬೇಕೆನ್ನುವುದು, ಇದಕ್ಕೆ ಏನಾರ ಹುರುಳುಂಟೇ? ಇದ್ರೂ, ಮುಂದೆ ಇವರ ನಂಬಿಕೆಯನ್ನು ಕಿತ್ತೆಸೆಯುವ ಮತ್ತೊಂದು ನಂಬು-ಕೂಟ ಬರೊಲ್ಲ ಅಂತ ಏನು ನಿಕ್ಕುವ?

ಒಟ್ಟಿನಲ್ಲಿ, ನಂಬಿಕೆಯೇ ಕೊನೆ, ಇದರ ಮುಂದೇ, ಇದುರು ಏನೂ ಇರಬಾರದು ಅನ್ನೋ ಗೊಡವೆಗೆ ಎಂದೂ ಕೊನೆಯಿಲ್ಲ. ಹೊಸಹೊಸ ನಂಬುಗೆಗಳು, ಅದರ ನಂಬುಗರು ಬರ್ತಾನೇ ಇರ್ತಾರೇ, ಹಾಗೆ ಹಳೆನಂಬುಗೆಗಳು ಬಿದ್ದು, ಹೊಸಹೊಸವು ಏಳ್ತಾನೆ ಇರ್ತಾವೆ. ಆದ್ರೆ ಇವೆಲ್ಲದರ ನಡುವೆ ನಿಕ್ಕುವವಾಗಿ ಎಂದೂ ಈ ಗೊಡವೆಗೆ ತಲೆಗಿವಿಗೊಡದ ಮಂದಿಗಳ ಬದುಕುಗಳ ಸುರು ಮತ್ತು ಕೊನೆಗಳು ಹೇಗೋ ಆಗ್ತಾ ಇರ್ತವೆ.

ಸಮಸ್ಯೆಯನ್ನು ಬಿಡಿಸುವ ಒಂದು ದಾರಿ, ಸಮಸ್ಯೆಯಿಂದ ನಮ್ಮನ್ನು ನಾವು ದೂರ ಮಾಡಿಕೊಂಡು ಬಿಡೋದು Smiling

~.~
  • mahesha ರವರ ಬ್ಲಾಗ್
  • Login or register to post comments
  • 257 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾವು ಮಾಡಿದವರು ನಮಗೆ (ಎಡರೊತ್ತಿನಲ್ಲಿ) ಆಗಲ್ಲ - ತಿಳಿವು/ನೀತಿ
  • ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.
  • ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
  • ಇಪ್ಪತ್ತಯ್ದಾಗ್ತಾ ಇದೆ!
  • ಸಮ್ಮಿಶ್ರ ಎಂಬ ಕಲಸುಮೇಲೊಗರ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator