ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Sampada Blogs › mahesha ರವರ ಬ್ಲಾಗ್

ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

October 23, 2007 - 6:50pm — mahesha

ಈ ಸಂಜೆ ಯಾಕಾಗಿದೆ ನೀನಿಲ್ಲದೇ
ಈ ಸಂತೆ ಸಾಕಾಗಿದೆ ನೀನಿಲ್ಲದೇ...

ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ, ಈ ಮೌನ ಬಿಸಿಯಾಗಿದೆ

ಲಾ .... Smiling

ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ

ನೆನಪೆಲ್ಲವು ಹೂವಾಗಿದೆ
ಮೈಯೆಲ್ಲವು ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ, ಈ ಜೀವ ಕಸಿಯಾಗಿದೆ

ನೀನಿಲ್ಲದೇ ಆ ಚಂದಿರ
ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸುನೀಗಿದೆ

ಆಕಾಶದಿ ಕಲೆಯಾಗಿದೆ
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ, ಈ ಗಾಯ ಹಸಿಯಾಗಿದೆ

ಜಯಂತ ಕಾಯ್ಕಿಣಿಗೆ ಜೈ Smiling

http://uncutvideo.aol.com/tags/geleya/86b519d75ee5c2148a35bdc59e57f976?i...


ಬಿಸಿ,ಕಸಿ, ಹಸಿ ಒರೆಗಳ ಬಳಕೆ ಬೊಂಬಾಟ್!!

~.~
  • mahesha ರವರ ಬ್ಲಾಗ್
  • Login or register to post comments
  • 1091 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 23, 2007 - 6:55pm — mahesha

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

mahesha's picture

ಈ ಹಾಡಿನ ಅಲಂಕಾರ, ಛಂದಸ್ಸು, ಶೈಲಿ ಮುಂತಾದವ ಬಗ್ಗೆ ಮಾತಾಡಿ...

ಹೋಲಿಕೆಗಳು ಚನ್ನಾಗಿದೆ. ರೂಪಕಾಲಂಕಾರಗಳೇ ಇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 24, 2007 - 9:37am — ವೈಭವ

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

ವೈಭವ's picture

ಇವನಿಗೆ ನಲ್ಲೆ ಹತ್ತಿರ ಇಲ್ಲದಿರುವುದು ಇಶ್ಟೆಲ್ಲ ಆಗಕ್ಕೆ ಓಸುಗರ. Smiling

ಪಾಪ. ಬದುಕನ್ನ ಸಂತೆ ಅನ್ಕೊಂಡಿದಾನೆ ಅದರ ಗಲಾಟೆ ಸಾಕಾಗಿಹೋಗಿದಿಯಂತೆ. ಒಬ್ಬಂಟಿಯಾಗಿ ಇದ್ದು ಇವನಿಗೆ 'ವಿರಹ'ದ ಬಿಸಿ ಏರುತ್ತಿರಬೇಕು. Smiling

ತಾರಾಗಣಗಳು ಕೂಡ ಇವನಿಗೆ ಕಿಡಿಯಾಗಿ ಕಾಣಿಸ್ತ ಇದೆ ಆದ್ರೂ ತಂಗಾಳಿ ಇವನಿಗೆ ಪಿಸುಮಾತು ಹೇಳ್ತಾ ಇದೆ. Smiling :)

ನೆನಪು= ಹೂವು, ಮೈ= ಮುಳ್ಳು ...ಇದು ಸಕ್ಕತ್. ಇಲ್ಲಿ ಕಸಿ ಅಂದ್ರೆ grafting ಇರಬಹುದು.
ಕಸಿ ಮಾಡುವಾಗ ಗಿಡಕ್ಕೆ ಗಾಯ (ಹಸಿಗಾಯ) ಆಗುತ್ತೆ ಮತ್ತು ಗಿಡಕ್ಕೆ ಒಂದು ಹೊಸ ಹುಟ್ಟು ಸಿಗುತ್ತೆ.

ಇನ್ನು ಸಂಜೆಯ ಕೆಂಪು ಅವ್ನಿಗೆ ಕೊಲೆ ತರ ಕಾಣಿಸ್ತಾ ಇದೆ. Smiling ಕಾಯ್ಕಿಣಿಯವರು 'ಕೊಲೆ' ಬಳಸೋದು ಜಾಸ್ತಿ. 'ಕೊಲ್ಲು ಹುಡುಗಿ ಒಮ್ಮೆ ನನ್ನ' ಅಂತ
ಮುಂಗಾರು ಮಳೇಲಿ ಹೇಳಿದ್ರು.

ಕಾಯ್ಕಿಣಿ, ಮನೊ ಮೂರುತಿ ಮತ್ತು ಡೈರಕ್ಟರ್ ಹರ್ಶ ಎಲ್ಲರಗೂ ಗೆಲ್. ಬರೀ ಕೇಳಕ್ಕೆ ಅಲ್ದೆ ನೋಡಕ್ಕೂ ಈ ಹಾಡು ಕಣ್ಣಿಗೆ ಹಬ್ಬ.

ನನ್ನಿ ಮಾಯ್ಸ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 24, 2007 - 9:52am — mahesha

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

mahesha's picture

ಅಲ್ಲಿ...

ಆ 'ಕಸಿ' ಕಸಿಬಿಸಿ/ಕಸಿವಿಸಿಯ ಕಸಿ.... ಅಂತ ನಾನು ಅರಿತುಕೊಂಡೆನು.

ಕಸಿಗೆ ಇಲ್ಲಿ ನೋಡಿ...

http://dsal.uchicago.edu/cgi-bin/philologic/getobject.pl?c.0:1:1096.burr...

http://dsal.uchicago.edu/cgi-bin/philologic/getobject.pl?c.0:1:1254.burr...

http://dsal.uchicago.edu/cgi-bin/philologic/getobject.pl?c.0:1:1109.burr...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 23, 2007 - 10:22pm — tarlesubba

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

tarlesubba's picture

ಈ ಸಂತೆ ಸಾಕಾಗಿದೆ ನೀನಿಲ್ಲದೆ ...

ಜಯಂತ ಕಾಯ್ಕಿಣಿ ಕನ್ನಡದ gulzaar

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 6:40pm — tarlesubba

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

tarlesubba's picture

ಮಹೇಷರಾಯರೆ ಒಂದು ಉಪಕಾರ ಆಗಬೇಕಗಿದೆ...
ಇದು ಮಿಲನ ಚಿತ್ರದ ಒಂದು ಹಾಡು. ಇದನ್ನ ಇಲ್ಲಿ ಕೇಳ ಬಹುದು.
ಅಲ್ಲಿ ಕೇಳಿದನ್ನ ಇಲ್ಲಿ ಇಳಿಸಿದೀನಿ, ಕಾಗುಣಿತ ತಪ್ಪಿದ್ದೀನಿ ಕ್ಷಮಿಸಬೇಕು

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದಾ ಮೇಲೆ ದನಿಯೂಂದು ಕಾಡಿದೆ
ಹೇಳುವುದು ಎನೋ ಉಳಿದು ಹೊಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ.

ನೋವಿನಲ್ಲಿ ಜೀವಜೀವಾ ಅರಿತಾನಂತರ
ನಲಿವು ಬೇರೆ ಯೇನಿದೆ ಎಕೇ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೆ ಸಾರಿ ನೀ ಕೆಳೇಯ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೆಗೆ ತಿಳಿಯದಾಗಿದೆ

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಟವ ಮಾಡಿದೆ ಹ್ರುದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೆ ಎತಕೆ ಕಂಪನ
ಹ್ರುದಯವು ಇಲ್ಲಿ ಕಳೆದು ಹೊಗಿದೆ
ಹುಡುಕಲೆ ಬೇಕೆ ತಿಳಿಯದಾಗಿದೆ.

-- ಜಯಂತ ಕಾಯ್ಕಿಣಿ

ಇಲ್ಲಿ ರಿಂಗಣ ಅಂದ್ರೆ ಟ್ರಿಂಗ್ ಟ್ರಿಂಗ್ ರಿಂಗಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 7:14pm — mahesha

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

mahesha's picture

ಮೊದಲು ರಿಂಗಣ ಕನ್ನಡವಾ ಅಂತ ನೋಡಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 8:22pm — tarlesubba

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

tarlesubba's picture

ಗೊತಿಲ್ಲ ಅದಿಕ್ಕೆ ಕೇಳಿದ್ದು. ಅದು ಅಲ್ಲದಿದ್ದರೊ ರಿಂಗು onomatopoeia ಅಂತನ್ನ್ಕೋಂಡು ರಿಂಗಣ ringing ಅನ್ಕೊಬಹುದ?

ಇನ್ನೋಂದ್ ಪ್ರಶ್ನೆ ...
ಕರ್ನಾಟಕದ ಗಂಡು ಕರ್ನಾಟಕದ ಹೆಣ್ಣು ಕರ್ನಾಟಕದ ಜನ ಕನ್ನಡ ಗಂಡು ಕನ್ನಡ ಹೆಣ್ಣು ಕನ್ನಡ ಜನ ಇವಕೆಲ್ಲ ಬೇರೆ ಬೇರೆ ಪದ ಎನು?
ಕನ್ನಡತಿ = ಕನ್ನಡ + ಒಡತಿ ?
ಇದಕ್ಕೆ ಪುಲ್ಲಿಂಗ ಎನು? ಕನ್ನಡಿಗ ಆದರೆ ಕನ್ನಡ ಜನಕ್ಕು ಇದೆ ಪದ.

ಕನ್ನೋಡೆಯ/ಕನ್ನಡೆಯ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 8:54pm — mahesha

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

mahesha's picture

ಕನ್ನಡ ಅಂದ್ರೆ ಕನ್ನಡ ನುಡಿ + ಮಂದಿ + ನೆಲ + ನಡೆ(ಸಂಸ್ಕೃತಿ) ( ಜಪಾನ್ ತರ )

ಕನ್ನಡರು = ಕನ್ನಡ ನೆಲದ/ನುಡಿಯ/ನಡೆಯ ಮಂದಿ
ಕನ್ನಡನು = ಕನ್ನಡದವನು
ಕನ್ನಡಳು = ಕನ್ನಡದವಳು
ಕನ್ನಡದ್ದು = ಕನ್ನಡದ ಅದು
ಕನ್ನಡದವು = ಕನ್ನಡದ ಅವು

ಕನ್ನಡಿಗ/ಕನ್ನಡಗಾರ ಇವು = ಕನ್ನಡನು
ಕನ್ನಡತಿ/ಕನ್ನಡಗಿತ್ತಿ/ಕನ್ನಡಗಾರ್ತಿ = ಕನ್ನಡಳು

ಇಲ್ಲೆ ಕನ್ನಡ + ಒಡತಿ ಅಲ್ಲ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 10:26pm — tarlesubba

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

tarlesubba's picture

ಉಪಕಾರ ಆಯಿತು. ಕನ್ನಡನು, ಕನ್ನಡಳು ಸೊಲ್ಪ ನುಡಿಯೊಕೆ ಕಷ್ಟ

ನಾ ಹೇಳಿದ್ದು ಹಂಗಲ್ಲ. ಇದೆಲ್ಲ ಒಂತರ ನನಗೆ ಒಂತರ ಆಳ. ಆದರೆ ಕನ್ನಡ ನೆಲ ಅಂದ್ರಲ್ಲ ಅದಿಕ್ಕೆ ನೀರಿಗಿಳಿತಿನಿ.

ಆ.ಮು. ಹೇಳಿದ ಹಾಗೆ, ಕರ್ನಾಟಕ ಸಾಹಿತ್ಯ ಪರಿಷತ್ತು ಆಗಬೇಕಿತ್ತು ಅದರಲ್ಲಿ ತುಳು, ಕೊಡವ, ಕೊಂಕಣೀ, ಸಂಕೆತಿ, ಅಯ್ಯಂಗಾರರ ತಮಿಳು, ದಕ್ಕನಿ, ನಮ್ಮಲಿನ ತೆಲುಗು ಇದಕೆಲ್ಲ ಜಾಗ ಇರಬೇಕು. ಇದನ್ನ ಇನ್ನಷ್ಟು ಎಳೇದರೆ, ಶಾಲೇಲಿ ಕನ್ನಡ, ಸಮಾಜ ಕನ್ನಡದಲ್ಲಿ, science maths english ಅಲ್ಲಿ, ಅಲ್ಲದೆ ತುಳು/ಕೊಂಕಣೀ/ಸಂಕೆತಿ/ತಮಿಳು/ದಕ್ಕನಿ/ತೆಲುಗು ಒಂದು ಭಾಷೆ. ಆಪ್ತಮಿತ್ರ ಸಿನೇಮಾದಲ್ಲಿ ರಾರಾ ತುಳು ಯಾಕಿರಬಾರದು? ಮುಂಗಾರು ಮಳೆಲಿ ಕೊಡವ ಕೇಳಿ ಬಂದಿದ್ದರೆ? ಒಂದಾನೊಂದು ಕಾಲದಲ್ಲಿ ತರ ಇನ್ನಷ್ಟು ಚಿತ್ರ ಒಂದೆ ತ್ರಾಸದಲ್ಲಿದ್ದರೆ? ಟೀವಿಲಿ ಬೇರೆ ಬೇರೆ ತರಹದ ಕನ್ನಡ ಯಾಕೆ ಕೇಳಿ ಬರಬಾರದು? ಕಾಯ್ಕಿಣಿ ನುಡೀಲಿ ನೀವು ಕರಾವಳಿ ಕನ್ನಡ ನೊದಬಹುದು. ಸರಿಯಾಗಿ ಕಟ್ಟಿಕೊಟ್ಟರೆ ಜನ ತಗೊತಾರೆ ಅನ್ನೊದಿಕ್ಕೆ ಉದಾಹರಣೆ.

ನನ್ನ್ ಲೆಕ್ಕದಲ್ಲಿ, ನಮ್ಮ ಹಿರಿಯರು ಕೆತ್ತಿಟ್ಟಿರೊ ಕನ್ನಡಿಗರ ಕರ್ನಾಟಕ ನೆಲ, ಸಮಾಜ ಇನ್ನು ನೂರಿನೂರು ವರ್ಷ ಉಳೀಬೇಕಾದರೆ ಕನ್ನಡ ಮೀರಿದ "ಕರ್ನಾಟಕತೆ" ಬೇಕು. ಕರಾವಳಿ ಇಲ್ಲದ ಕರ್ನಾಟಕ ಇಲ್ಲ ಕೊಡವರಿಲ್ಲದ ಗಂಧದ ಗುಡಿ ಇಲ್ಲ. ಕರ್ನಾಟಕದಲ್ಲಿ ಬೇರೆ ಭಾಶೆ ಅವರೂ ಇದಾರೆ. ಹಿಂದಿದ್ದ ಹಾಗೆ ಈಗಿಲ್ಲ. ಈಗ ನಮಗೆ ಪಾಕಿಸ್ತಾನದ ಉದಾಹರಣೆ ಇದೆ. ಈಗಿರೋ ಹಗಲ್ಲಲ್ಲಿ ನಾವು ತಮಿಳರು ಕತ್ತಲೇಲಿ ಆಡಿದ ಆಟ ಆಡಕ್ಕಾಗೊಲ್ಲ. ಆದರು ಆಡಬಾರದು.

ಭಾಷಣ ಬಿಗಿದಿದ್ದು ಸಾಕು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 8:55am — mahesha

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

mahesha's picture

ವಿಷಯಾಂತರ.

ಕನ್ನಡದೇಶ ಅನ್ನೋದು ಕಾವೇರಿಯಿಂದ ಗೋದವರಿವರೆಗೆ ಇತ್ತು.. ಅಲ್ಲಿರುವವರೆಲ್ಲ ಕನ್ನಡರು ಅನ್ನೋದಕ್ಕೆ ದಾಕಲೆಗಳಿವೆ...

ತುಳು ನಮ್ಮ ನೆಲದ್ದೇ.. ಹಿಂದಿನ ತುಳು ಅರಸರೂ ಕನ್ನಡದಲ್ಲೇ ಶಾಸನ ಬರೆಸಿಕೊಂಡಿದ್ದಾರೆ, ಮತ್ತು ಅವರು ಕನ್ನಡನೆಲದವರೇ ಎಂದು ಅಂದುಕೊಂಡಿದ್ದಿರಬೋದು...( ತುಳು ಶಾಸನಗಳು ಇವೆಯೇ? ಅಲುಪರು ಕನ್ನಡದಲ್ಲಿ ಶಾಸನ ಬರೆಸಿದ್ದಲ್ವ? )
ತುಳು ಮತ್ತು ಕೊಂಕಣಿಗಳಿಗೆ ಸರಕಾರದ ಅಕಾಡೆಮಿಗಳಿವೆ( ಕರ್ನಾಟಕ ಸರಕಾರದ್ದು )

ಇನ್ನು ಸಂಕೇತಿ / ದಕ್ಕನಿ / ಅಯ್ಯಂಗಾರರ ತಮಿಳು = ಇವು ವಲಸಿಗರ ನುಡಿಗಳು..

ತಮಿಳು-ತೆಲುಗು, ಇವಕ್ಕೆ ಅವರರೇ ನಾಡಿದೆಯಲ್ಲ. ಇನ್ನು ಇವರಿಗೆ ನಮ್ಮ ನೆಲದಲ್ಲಿ ಇಂಬು ಬೇಕಾಗಿಲ್ಲ.!

ಇನ್ನು ನಿಮ್ಮ ಕರಾವಳಿ ಹೇಗೆ ಬೇರೆ ಕಡೆಗಳಿಗಿಂತ ವಿಶೇಷ ಅಂತ ನನಗೆ ಅರಿತವಾಗಿಲ್ಲ.
....................................................................
ನಿಮಗೆ ನನ್ನ ಸ್ವಂತ ಅಭಿಪ್ರಾಯ ಬೇಕಾದ್ರೆ.. ಕೇಳ್ರಿ..

ತುಳುಗೆ ಒಂದು ಬೇರೆ ರಾಜ್ಯ ಮಾಡೋದೇ ಸರಿ... ಹಾಗೇ ಕೊಡವಕ್ಕೂ...

ಆದ್ರೆ ವಲಸೆ ಬಂದು ಮಂದಿಗೆಲ್ಲ ನೆಲಕೊಡಕ್ಕೆ ಬರಲ್ಲ. ಹಾಗೆ ಮಾಡಿದ್ರೆ ಇವೊತ್ತಿನ ಕರ್ನಾಟಕದ ಬರೀ ೬೫% ನೆಲ ಕನ್ನಡನೆಲ ಅಂತ ಆಗ್ತದೆ.
..........................................

ಇನ್ನು ನೀವು ಕರಾವಳಿಯವರಾಗಿದ್ರೆ ( ನನ್ನ ಸಲಹೆ ಕೇಳಿದಕ್ಕೆ ಹೇಳ್ತಿನಿ), ನಿಮ್ಮ ಮನೆಮಾತು ಕನ್ನಡವಲ್ಲದಿದ್ರೆ.. ಹೀಗೆ ಮಾಡಬೋದು

೧) ನಾವು ಕನ್ನಡಿಗರೇ, ಎಂದು ಕರ್ನಾಟಕತೆ = ಕನ್ನಡತನ ಎಂದು ಇರಬೋದು.. ಆದ್ರೆ ಯಾಕೋ ಇದು ನಿಮಗೆ ಒಪ್ಪಿಗೆ ಇಲ್ಲ ಅನ್ನಿಸ್ತದೆ. Smiling
೨) ನಿಮ್ಮ ನುಡಿ ತುಳು/ಕೊಡವ ಆಗಿದ್ರೆ, ಹೋಗಿ ಬೇರೆ ರಾಜ್ಯ ಕೇಳಿ.
೩) ನಿಮ್ಮದು ತುಳು/ಕೊಡವ ಬಿಟ್ಟು ಬೇರೆ ಆಗಿದ್ರೆ, ಕನ್ನಡನೆಲವನ್ನ ಕೇಳಿ ನೋಡಿ.. ನಿಮಗೆ ಬೆಳಗಾವಿಯ ಮೊರೆ ಮತ್ತು ಕಾರವಾರದ ಕೊಂಕಣಿ ಮಂಚ್ ಅವರಿಗೆ ಆದ ಮರ್ಯಾದೆ ಮಾಡಲು ಜನ ಕಾಯ್ತಿರ್ತಾರೆ. Smiling
..................................................

ಕರಾವಳಿ ಮಂದಿಯೇ ಮೇಲೆ ಬಿದ್ದು ಮೈಸೂರಿಗೆ ಸೇರಿದ್ದು ಹೊರತು, ಒಳನಾಡಿನ ಮಂದಿ ಅವರನ್ನ ಕರೆದಿರಲಿಲ್ಲ ಅನ್ನೋ ಮಾತು ನಮ್ಮ ಕಾವೇರಿ ಸೀಮೆಯಲ್ಲಿದೆ. ಕರಾವಳಿ ಮಂದಿ ಯಾಕೆ ಮಯ್ಸೂರಿಗೆ ಸೇರಿಕೊಂಡ್ರು ಅನ್ನೋ ಕಾರಣಗಳು ಇವೆ... ಅಂದೇ ಅವರು ತಮ್ಮದೇ ರಾಜ್ಯ ಮಾಡಿಕೊಳ್ಳಬೋದಿತ್ತು... ಆದ್ರೆ.. ಯಾಕೆ ಅವರು ನಮ್ಮ ಜೊತೆ ಸೇರಿಕೊಂಡ್ರು ಅನ್ನೋದನ್ನ ನೀವೇ ಓದಿ... ಕರಾವಳಿ ಮಂದಿಯಲ್ಲೂ ಕನ್ನಡತನ ಇದ್ದುದಕ್ಕೇ ಅಲ್ವ ಅವರು ಕನ್ನಡ ಅನ್ನೋ ಹೆಸರಡಿ ಸೇರಿದ್ದು?( ಕರಾವಳಿ ನಮ್ಮ ಮಯ್ಸೂರಿಗೆ ಸೇರಿದಾಗ, ಕರ್ನಾಟಕ ಅನ್ನೋದು ಇರಲಿಲ್ಲ ಗೊತ್ತುಂಟಾ.. ಅಂದು ಇದ್ದದ್ದು ಮಯ್ಸೂರೇ! )

ನಿಮ್ಮ ಹುನ್ನಾರ/ಯೋಚನೆ ನಮ್ಮ ಕರ್ನಾಟಕದ ರಾಜ್ಯಭಾಷೆಗಳನ್ನಾಗಿ ನೀವು ಹೇಳಿದ ನುಡಿಗಳನ್ನೂ ಸೇರಿಸಬೇಕು ಅಂತ ಇದ್ರೆ...... Smiling... ಒಮ್ಮೆ try ಮಾಡಿ!

ನನ್ನ ಭಾಷಣ ಸಾಕು... ಸುಮ್ನೆ ಬೇಸರವಾಗ್ತದೆ ನಿಮಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 26, 2007 - 7:29pm — tarlesubba

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

tarlesubba's picture

hoyy raayre.. odidini solpa TaiM koDi.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 27, 2007 - 12:40am — hpn

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

hpn's picture

ಈ ಹಾಡು ಕೇಳಿದಾಗಿನಿಂದ ಇದು ತಲೆಯಲ್ಲೇ ನೂರಾರು ಸಾರಿ ತಂತಾನೆ ಪ್ಲೇ ಆಗುತ್ತಲಿದೆ. ಹೊರಗೇ ಹೋಗವಲ್ದು!

ಈ ಹಿಂದೆ ಒಂದ್ಸಾರಿ ನಾನು ಮೊಳಗುವ ಹಾಡುಗಳು ಎಂಬ ಬರಹದಲ್ಲಿ ಈ ರೀತಿ ತಲೆಯಲ್ಲಿ ಟೆಂಟು ಹಾಕುವ ಹಾಡುಗಳ ಬಗ್ಗೆ ಬರೆದಿದ್ದೆ. ಈ ಹಾಡು ಕೂಡ ಅಂಥದ್ದೊಂದು! Smiling

ಹಾಡು ಬಹಳ ಮೆಲೋಡಿಯಸ್ ಆಗಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಶ್ಡೆನ್ ಪ್ರಶಸ್ತಿ
  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
  • ಒಂದೆ ಬಾರಿ ನನ್ನ ನೋಡಿ...
  • ಗಾಳಿಪಟ
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
  • 'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'
  • ಕಳಚಿಬೀಳುವ ಮುಖವಾಡ
  • ಕಲಿಕೆಗೆಲ್ಲಿದೆ ಕೊನೆ...
  • bio data
  • ಸಂತೋಷಕ್ಕೆ............. (ಗೀತಾ) ಜಪಾನಿ ವೇದಿಕೆಯಲ್ಲಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 5:10am
  • venkatesh
    ಉ: ಮರುಕಳಿಸಿದ ನೆನಪು
    December 3, 2008 - 4:45am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator