ಮನಸೇ
ದೂರದ ಆಸೆಯ ಅಂಬು ನಾಟಿ ನೆತ್ತರು ಬರದ ನೋವಿನ ಗಾಯಕೆ ನಲುಗುವ ಹುಚ್ಚು ಮನಸೇ
ಕಾಣದ ಅಂಚಿನ ನೀರಲಿ ಆರದೆ ಮುಳಗುತಾ ಈಜಲು ಎಳಸುವ ಪೆದ್ದು ಮನಸೇ.
ಎಟುಕದ ಬಾನಿನ ಮೇಲಿನ ಮುಗಿಲಿನ ಮೇಲೆಡೆ ಹಾರಲು ಜಿಗಿಯುತ ನಲಿದಿಹ ಹುಸಿಮನಸೇ
ತೀರದ ಎಣಿಸದ ಹಲಕೆಲ ಹಂಬಲದ ಹೊರೆಯ ತೂಕಕೆ ಬಾಗಿ ಬಳಕುವ ಚಲು-ಮನಸೇ
.
.
.
.
.
.
.
.
.
.
.
.
.
.
ದೂರದ = ದೂರು ನೀಡದ, without complaint
ಅಂಬು = arrow
ಆರದೆ = unable to do
ಎಳಸು = to desire

- mahesha ರವರ ಬ್ಲಾಗ್
- Login or register to post comments
- 481 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮನಸೇ
ದೂರದ ಆಸೆಯ ಅಂಬು ಅಂದ್ರೆ ಎಲ್ಲೋ ಇರುವ ಆಸೆ ಅಂತ ಅಲ್ವಾ? ದೂರು ನೀಡದ ಆಸೆ ಅಂದ್ರೆ?
ಉ: ಮನಸೇ
ದೂರದ = ದೂರದಲ್ಲಿರುವುದರ ಇದೂ ಸರಿ
ದೂರು = to complain
ದೂರುವ = one which complains
ದೂರದ = one which doesn't complain!
ಎರಡೂ ಸರಿ!
ನಂನ ಕವನ ಅರಿಯುವ ಜತನಗಾರರಿಗೆ ನಂನಿ!!
ಉ: ಮನಸೇ
ಕಾಣದ ಅಂಚಿನ ನೀರಲಿ ಆರದೆ ಮುಳಗುತಾ ಈಜಲು ಎಳಸುವ ಪೆದ್ದು ಮನಸೇ.
ಆರದೆ? ಅಂದ್ರೆ unable to do ಎಂದಿದೆ ಆದರೆ ಅದು ಆಗದೆ ಎಂದಿರಬೇಕಲ್ಲವಾ?
ರೂಪ
ಉ: ಮನಸೇ
ಅಲ್ಲ...
ಆಯ್ = to happen
ಆರ್ = to be able to
ಓಡಲಾರುವನು X ಓಡಲಾರನು
He can run X He cannot run.
ಉ: ಮನಸೇ
ಆದರೂ
"ಆರದೆ" ಕ್ರಿಯಾಪದದ ಜೊತೆ ಸೇರಿದರೆ ಸರಿಯಾದ ಅರ್ಥ ಬರುತ್ತದೆ ಅನ್ನಿಸುತ್ತಿದೆ.
ರೂಪ
ಉ: ಮನಸೇ
ಹಾಗೆ ಇಲ್ಲ!
ಹೇಸು = to hate
ಹೇಸ್ತೀನಿ ನಿನ್ನ = I hate you.
ಆದರೆ ನಾವು "ಅವನು ಹೇಸಲ್ಲ" = he doesn't hate to ಎಂದು ಬಳಸೋದು ಹೆಚ್ಚು.!
ನಮಗೆ ಆರ್ ನ ಇಂತ ಬಳಕೆಗಳು ಅಲುವಾಟವಿಲ್ಲ!
ಉ: ಮನಸೇ
ಹೇಸು = ಅಸಹ್ಯ ಪಡು
ಹೇಸಲ್ಲ = ಅಸಹ್ಯಪಡಲ್ಲ
ಹೇಸಿಗೆ = ಅಸಹ್ಯವಾದದ್ದು
Ka. pēsu, hēsu to feel aversion, have a dislike; n. aversion, disgust; pēsike, hēsike, ēsike, hēsige aversion, disgust, nastiness, object that causes disgust.
ಸವಿತೃ
ಉ: ಮನಸೇ
have a dislike = hate ಅಲ್ವ?
ಸರಿ.. ನನ್ನಿ!
ಉ: ಮನಸೇ
ಹಹ..
ಈ ಪದ್ಯದ ಹಿನ್ನಲೆ ನಂಗ್ ಗೊತ್ತಾತು. ನೀನು ಈ ವಿಸ್ಯಕ್ಕೆ ಈಟೋಂದು ತಲೆ ಕೆಡಿಸಿಕೊಳ್ಳಿರಬೇಕಿರಲಿಲ್ಲ ಅನ್ಸುತ್ತೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು