ಪ್ರೌಢಲೇಖನಗಳ ರಹಸ್ಯ
ಪ್ರೌಢಲೇಖನಗಳೆಂದರೆ ಪ್ರೌಢಶಾಲೋತ್ತೀರ್ಣರಾದವರಿಗೂ ಅರ್ಥಕಾರ್ಯಸಾಹಸವಾಗುವಂತವು. ಹಾಗೂ ಅದರ ಲೇಖಕರು ಬಹುಪಠಣದಿಂದ ಉಲ್ಲೇಖಿಸುವ ಮಹತ್ತರ ಅಂಶಗಳನ್ನು ಅರ್ಥೈಸಿಕೊಳ್ಳಲು ಅವರಷ್ಟೇ ಪುಸ್ತಕಪಠಣಾನಿವಾರ್ಯವಾದವು.
ಪ್ರೌಢಲೇಖನಗಳ ಅನ್ಯೈಕ ರಹಸ್ಯವೆಂದರೆ, ಅದರಲ್ಲಿ ಎಂದೂ ಏಕೈಕವಾಕ್ಯವೂ ಸರಳ ಸಂಭಾಷಣಾಭಾಷಾ ಸಾಮೀಪ್ಯರಾಹಿತ್ಯದ ಉತ್ತುಂಗದಲ್ಲಿ ರಾರಾಜಿಸುತ್ತವೆ. ವಾಕ್ಯರಚನಾಸೌಂದರ್ಯದ ಔನತ್ಯ ಅಬ್ಬಬ್ಬ.. ಅಸಾಮಾನ್ಯ ಗ್ರಾಹ್ಯಮಾತ್ರ.
ಪ್ರೌಢಲೇಖನಗಳನ್ನು ಸರಳೀಕರಿಸಿ ಲಿಖಿಸಿದರೆ ಅವುಗಳ ಪ್ರೌಢತ್ವನಷ್ಟನಿಶ್ಚಿತಸಂಭವ.
ಮತ್ತೊಂದು ವಿಪಿನಸಂವಾದ!

- mahesha ರವರ ಬ್ಲಾಗ್
- Login or register to post comments
- 190 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪ್ರೌಢಲೇಖನಗಳ ರಹಸ್ಯ
ನಿಮ್ಮ ಲೇಖನಗಳು ಇತ್ತೀಚೆಗೆ ತುಂಬ ಪಾಂಡಿತ್ಯ ಪೂರ್ಣವಾಗಿ ಬರುತ್ತಿವೆ . ( ಅರ್ಥ ಆಗುತ್ತಿಲ್ಲ )
ಕ್ರಿಯಾಪದ ಮತ್ತು ಪ್ರತ್ಯಯಗಳನ್ನೂ ಸಂಸ್ಕೃತದಲ್ಲೇ ಬರೆದುದಾದರೆ ನೀವೂ ಸಂಸ್ಕೃತಪಂಡಿತರಾಗಿ ಎಸ್ಟಾಬ್ಲಿಶ್ ಆಗಿ ಉಭಯಭಾಷಾಪಂಡಿತ ಕನ್ನಡ ಕವಿಪರಂಪರೆಯನ್ನು ಮುಂದುವರೆಸುವವರಾಗಬಹುದು .
ಶುಭಮಸ್ತು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪ್ರೌಢಲೇಖನಗಳ ರಹಸ್ಯ
ಬರಹ ಮತ್ತೆ ಮತ್ತೆ ಓದುವಂತಿದೆ.
*ಅಶೋಕ್
ಉ: ಪ್ರೌಢಲೇಖನಗಳ ರಹಸ್ಯ
ಮತ್ತೆ ಮತ್ತೆ ಪಠಿಸುವಂತಿದೆ! ಎನ್ನಬಹುದು
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/
ಉ: ಪ್ರೌಢಲೇಖನಗಳ ರಹಸ್ಯ
ಪುನಃ ಪುನಃ ಪಠಣ ಯೋಗ್ಯವೆಂದು ಭಾಸವಾಗಿದಕ್ಕೆ ಧನ್ಯವಾದಗಳು
ನನ್ನಿ