ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ನಂಗೆ ಹಿಡಿಸಿತು.
ಇದನ್ನು ನೋಡಿ, ನಂಗೆ McDonald burger ಸೇರ್ಲಿಲ್ಲ! ![]()

- mahesha ರವರ ಬ್ಲಾಗ್
- Login or register to post comments
- 533 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಂಗೆ ಹಿಡಿಸಿತು.
ಇದನ್ನು ನೋಡಿ, ನಂಗೆ McDonald burger ಸೇರ್ಲಿಲ್ಲ! ![]()




ಪ್ರತಿಕ್ರಿಯೆಗಳು
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಸೂಪರ್
ಚಿತ್ರ ಇನ್ನು ನೋಡಿಲ್ಲ. ಚಿತ್ರದ ಬಗ್ಗೆ ಓದಿ ತುಂಬ ಖುಷಿಯ್ಯಾತು.
ಮಾಯಾ ಮಾಯಾ ಎಲ್ಲ ಮಾಯಾ
ನಾಳೆ ನಾವು ಮಾಯಾ !?!
-ನಿಮ್ಮ ಬೆಂಬಿಡದ ಬೇತಾಳ .....
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಬೇತಾಳ ನೀನು ಅಮೆರಿಕದಲ್ಲಿ ಇದ್ರೆ ಈ ಸಿನಿಮ ನೋಡ್ದೋರು, ನಮ್ಮ ಕರಿನಾಡಿಗೆ ಬಂದ ಕೂಡಲೇ ಕೊಂದು ಹಾಕಿಯಾರು, ಎಚ್ಚರ!
ಈ ಬಂದು ರಾಗಿ ಹುರಿಹಿಟ್ಟು ತಿಂದು, ನಮ್ಮ ಕಾವೇರಿ ಸೀಮೆಯ ರಾಗಿ ತಿಂದೆ ಅಂತ ಧನ್ಯತೆಯ ಕಣ್ಣೀರು ಸುರಿಸುತ್ತಾ ಇದ್ದೀನಿ!
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಯಾಕ್ರೀ, ಅಮೆರಿಕೆಯಲ್ಲಿ ಇದ್ದೋರೆಲ್ಲ ಬರ್ಗರ್ ತಿಂತಾ ಇರ್ತಾರೆ ಅನ್ನೋದು ನಿಮ್ಮ ಅಭಿಪ್ರಾಯವೇ?
-ಹಂಸಾನಂದಿ
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಹಮ್ಸಾನಂದಿಗಳೇ,
ಒಮ್ಮೆ ಮಾತಾಡ್ ಮಾತಾಡ್ ಮಲ್ಲಿಗೇ ನೋಡ್ರಿ.
ಅಮೆರಿಕದೋರು ಯಾವಾಗಲೂ ತಿಂತಾರ ಅಂದ್ನಾ?
ನಂಗೆ ಬರಗರ್ರು ಸಿಕ್ಕಾಪಟ್ಟೆ ಇಸ್ಟ. ಇನ್ನೇನು ನಾನು ಅಮೆರಿಕಕ್ಕೇ ಬರಬೋದು, ಬಂದ್ರೆ JACK IN THE BOX, Baja Fresh, McDonalds, Jamba Juice, Starbucks, ಇಲ್ಲೆಲ್ಲ ಕುಡಿದು ತಿಂದು ಇರ್ತೀನಿ.
ಮೊದಲ ಸರತಿ ಬಂದಾಗ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ದುಮ್ಮಕ್ಕೆ ಆಗಿದ್ದೆ. !
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ದುಮ್ಮಕ್ಕೆ ಆಗಿದ್ದೆ. !
>>> ಯಾಕ್ರೀ ನಿಮ್ಗೇ ದುಡ್ಡು ಕಡಿಮೆ ಕೊಡ್ತಾರಾ ??
ಅಲ್ಲಿ ಡುಮ್ಮುಕ್ಕಾಗೋದರ ಬಗ್ಗೆ ಒ೦ದು ಅಧ್ಯಾಯನ ಮಾಡವನೇ ಒಬ್ಬ ಪುಣ್ಯಾತ್ಮ.
ಈತನ ಪ್ರಕಾರ ಅಲ್ಲಿಯ ಬಡವರಿಗೆ ಬರೀ ಈ ಫಾಸ್ಟ್ ಪುಡ್ ಮಾತ್ರ ಲಭ್ಯ. ಅದರಿ೦ದಲೇ ಅವರು ಹೊಟ್ಟೆ ತು೦ಬಾ ಫಾಸ್ಟ್ ಪುಡ್ ತಿನ್ನುತ್ತಾರೆ . ಆದ್ರೆ ಅದು ಆರೋಗ್ಯಕರವಾದದಲ್ಲಾ.
http://www.michaelpollan.com/article.php?id=88
A few years ago, an obesity researcher at the University of Washington named Adam Drewnowski ventured into the supermarket to solve a mystery. He wanted to figure out why it is that the most reliable predictor of obesity in America today is a person's wealth. For most of history, after all, the poor have typically suffered from a shortage of calories, not a surfeit. So how is it that today the people with the least amount of money to spend on food are the ones most likely to be overweight ?
ಜೋಪಾನ ಸಿಕ್ಕಾಪಟ್ಟೆ ತಿ೦ದೂ ಆರೋಗ್ಯ ಕೆಡೆಸಿ ಕೊಳ್ಳಬೇಡಿ.
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ನಾನು ಅಲ್ಲಿಗೆ ಮೊದಲು ಹೋದಾಗ ಎನ್ ತಿನ್ನೋದು ಅಂತ ನಂಗೆ ಗೊತ್ತಿರನಿಲ್ಲ ಬುದ್ದಿ. ಅದಕ್ಕೆ ಕಂಡಿದ್ನೆಲ್ಲ ತಿಂದೆಂ.
ನೀವು ಮಾತಾಡ್ ಮಾತಾಡ್ ಮಲ್ಲಿಗೆ ನೋಡ್ರಿ. ನಿಮಗೆ ಹಿಡಿಸ್ತದೆ.!( ಅಂತ ನಾನು ಅಂದುಕೊತೀನಿ )
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ನೋಡಿದೆ !!!
ನ೦ಗೆ ಅಮೇರಿಕಾ ವಿರುದ್ಧ + MNC ವಿರುದ್ಧ ಮಾತಾಡಿ, ಜನರನ್ನು ದಿಕ್ಕು ತಪ್ಪಿಸುವ ದನಿ ಇದೆ ಅನ್ನಿಸಿತು.
ನಗತ್ತಿಹಳ್ಳಿಗೆ ಅಮೇರಿಕಾ ಬಗ್ಗೆ ಸ್ವಲ್ಪ ಬೇಸರ ಇತ್ತು ಅನ್ಸತ್ತೆ , ಅದನ್ನೇ ಮು೦ದೆ ಮಾಡಿಕೊ೦ಡು ಸಿನಿಮಾ ತೆಗೆದಿದ್ದಾರೆ,
ಮೊನ್ನೆ ಚಿಕ್ಕನಾಯಕನ ಹಳ್ಳಿಗೆ ಹೋಗಿದ್ದೆ, ಅಲ್ಲಿ ಪೂರ್ತಿ ಮೈನಿ೦ಗ್ .
ಆದರೆ ಅಲ್ಲಿ ಇರುವ ಮೈನಿ೦ಗ್ ಕ೦ಪನಿಗಳೆಲ್ಲಾ ಭಾರತೀಯ ಸ್ವದೇಶಿ MLA ಗಳದು .
ಯಾರೂ ಪರಿಸರ + ಲೇಬರ್ ಬಗ್ಗೆ ಚೂರು ತಲೆ ಕೆಡೆಸಿಕೊಳ್ಳುವುದಿಲ್ಲಾ.
ಪೂರ್ತಿ ಹಾಳಾಗಿದೆ, ಅದೂ ಅವರು Iron Ore Export ಮಾಡ್ತಾರೆ, ಅದನ್ನು Steel ಮಾಡೀ ಮಾರಿದರೆ
ದುಡ್ಡೂ ಜಾಸ್ತಿ ಬರುತ್ತಿತ್ತು.ನಾವು ಬಳಸ ಬಹುದಾಗಿತ್ತು.
ಸುಮ್ಮನೇ MNC ವಿರುದ್ಧ ಗಲಾಟೆ ಮಾಡೋದು ಅರ್ಥ ಹೀನ ಅನ್ಸತ್ತೆ.
ಈಗ ನೋಡಿ LINUX VS MICROSOFT ಜಗಳದಲ್ಲಿ ಮಜಾ ಇದೆ , ಕೆಚ್ಚು ಇದೆ.
ಈ ಗಾ೦ಧೀ ಶೈಲಿಯಲ್ಲಿ "ಅಯ್ಯೋ ಪಾಪ" ಅನ್ನುವ ಭಾವವಿದೆ - ಗೆಲ್ಲುವುದಕ್ಕೆ ಯಾವುದೇ ಉಪಾಯವಿಲ್ಲದೆ
ಸುಮ್ಮನೇ ನರಳಾಟದಲ್ಲಿ ಶಾ೦ತಿ ಪಡೆಯೋಕ್ಕೆ ಯತ್ನಿಸುವು ಈ ಮಾರ್ಗ ಈಗ ಸೂಕ್ತವೇ ??
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ನೀವು ಸಿನಿಮ ನೋಡಿ ತಾನೆ ಹೇಳ್ತಾ ಇರೋದು?
ನೀವು ಎತ್ತಿದ್ದ ಸಂಗತಿಗಳಿಗೂ ಅಲ್ಲಿ ಉತ್ರವಯ್ತಲ್ಲ, ವಸಿ ಸರಿಯಾಗಿ ನೋಡ್ರಲಾ!
ಯಾವ್ ಸಿನಿಮನೆಯಾಗ್ ನೋಡಿದ್ರಿ?
ಸುಮ್ನೆ ಉದ್ದುದ್ದ ಬರೆ ಬ್ಯಾಡ್ರಿ ಬುದ್ದಿ, ಸಿನಿಮದಾಗೆ ನಿಮ್ಮ ಪ್ರಸ್ನೆಗೆ ಉತ್ರ ನಿಕ್ಕುವ ಅಯ್ತೆ! ಅದನ್ನ ನಾನ್ಯಾಕಾ ಹೇಳ್ಲಿ. ನೀವು ದೊಡ್ಡ ಬುದ್ದಿ, ಎಲ್ಲ ಸಲೀಸಾಗಿ ತಲೆಗಿಳಿಸಿಕೊಳ್ಳೋರು.!!
ಮತ್ತಾ ಇಲ್ಲಿ ಲಿನಕ್ಸು, ವಿಂಡೋಸು ಈ ಸುದ್ದಿ ಯಾಕ್ರಲಾ? ನಿಮಗೆ ಅರ್ಥ ಗೊತ್ತಾಗ್ತಿಲ್ಲ, ಅಂತ ನಿಮಗೆ ಅರ್ಥ ಹೀನ ಅನ್ನಿಸ್ತೈತೆ, ಅಂತ ನಂಗೆ ಅನ್ನಿಸ್ತಯ್ತೆ.
ಹೀಗೆ ಒಬ್ಬಬ್ರಿಗೆ ಒಂದೊಂದು ತರ ಅನ್ನಿಸ್ತಾನೇ ಇರ್ತಯ್ತೆ, ಅದಕ್ಕೆ ಅದೇ ದೊಡ್ಡದ್ದು ಅನ್ನಕ್ಕೆ ಆಗಕ್ಕಿಲ್ಲ.!!
ಒಟ್ಟಾರೆ ಸಿನಿಮ ಚಂದಾಗಯ್ತೆ, ಬಲು ಮಂದಿ ಹೇಳ್ತಾವ್ರೆ. ನಂಗೂ ಚಂದಾಕೇ ಇತ್ತು. ವೈಭವರಗೂ ಚಂದಾಕೇ ಇತ್ತು. Times of Indiaದೋರು ನಾಲ್ಕು ಮಿಂಚುಕ್ಕಿ/stars ಇಕ್ಕವ್ರೆ. ಆಯ್ತಾ!!
ನೀವು ದಿಟವಾಗ್ಲೂ ಸಿನಿಮ ನೋಡಿ ಬರೆದ್ರಾ ಇಲ್ಲಾ ಹಿಂಗೆ ಬುರುಡೆ ಬಿಡ್ತ ಇದ್ದೀರ? ನಂಗ್ಯಾಕೋ ನೀವು ಸಿನಿಮ ನೋಡಿರೋದ್ರ ಮ್ಯಾಲೆ ಐಬಯ್ತೆ!
"ಸುಮ್ಮನೇ ನರಳಾಟದಲ್ಲಿ ಶಾ೦ತಿ ಪಡೆಯೋಕ್ಕೆ ಯತ್ನಿಸುವು ಈ ಮಾರ್ಗ ಈಗ ಸೂಕ್ತವೇ ??" ಇದು ನೀವು ಲಿನಕ್ಸು, ವಿಂಡೋಸ್ ಬಗ್ಗೆ ಕೇಳಿದ್ದೋ? ಸಿನಿಮ ಬಗ್ಗೆ ಕೇಳಿದ್ದೋ?
ಲಿನಕ್ಸು ಬಗ್ಗೆ ಆದ್ರೆ, ನರಳಾಡೋರು ನರಳಾಡ್ಲಿ ಬಿಡ್ರಿ. ಲಿನಕ್ಸು ಹೋರಟಗಾರರು ಅವರವರ ಇಷ್ಟಕಷ್ಟ ಅದು. ನೀವು ಬೇಕಾದ್ರೆ ಲಿನಕ್ಸು ಬಳಸಿ ಇಲ್ಲ ಬುಡು. ಇದಕ್ಕೆ ಮಾತಾಡ್ ಮಾತಾಡು ಮಲ್ಲಿಗೆಗೂ ಎಂತು ನಂಟು?
ಇನ್ನ ಇದು ಸಿನಿಮ ಬಗ್ಗೆ ಆದ್ರೆ? ಹೋಗಿ ಸಿನಿಮ ನೋಡ್ತಿ, ಯಾಕೆ ಹೋರಾಟ ಬೇಕೂ ಅಂತ್ಲೇ ಮುಕ್ಕಾಲು ಸಿನಿಮ ಇರೋದು!!
ನೀವ್ ಒಳ್ಳೇ!!
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಅಯ್ಯಾ Respectable Citizen,
:)
ಚೆನ್ನಾಗಿದೆ ! ತು೦ಬಾ ಚೆನ್ನಾಗಿದೆ.
ಕತೆ, ಡಯ್ಲಾಗ್, ಕ್ಯಾಮರ ಗ್ರಾಫಿ, ನಟನೇ -- ಎಲ್ಲಾ ಬೊ೦ಬಾಟ್.
ಆದ್ರೇ ಹೊಸ್ ಸಮಸ್ಯೆಗಳಿಗೆ ಹಳೆದು ವರ್ಕ್ ಆಗೋಲ್ಲಾ ಅ೦ತಾ ಅಷ್ಟೇ.
ಈಗ ಮೇಧಾ ಪಟೇಕರ್ ನರ್ಮದ ಉಳಿಸೋಕ್ಕೆ ಹೋಗಿ ಏನಾಯ್ತು ??
ನಾನು ಉಪವಾಸ ಸತ್ಯಗ್ರಹ ಮಾಡಿದ್ದೇನೆ ....ಒ೦ದು ದಿನದ ಮಟ್ಟಿಗೆ... ಅದಕ್ಕೆ ಅ ಮಾರ್ಗದ ಬಗ್ಗೆ ಅನುಮಾನವಿದೆ.
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಅಯ್ಯಾ!!
ಸಿನಿಮ ಚಂದಾಗಿದ್ಯಾ, ಸಾಕು!!
ಅದು ಸಿನಿಮ, ಯಾವ Moral class ಅಲ್ಲ.!! ಅವರು ವಿಸಯ ಹೇಳವ್ರೆ ಹಂಗೆ ಎರಡು ಪರಿಆರ ಕೂಡ ಹೇಳವ್ರೆ.
ಇದೇ ನೋಡ್ರಲಾ ನಿಮ್ಮಂತಾ ದೊಡ್ಡ ದೊಡ್ಡ ಬುದ್ದಿಗಳ ಗೊಡವೆ,
"ಆದ್ರೇ ಹೊಸ್ ಸಮಸ್ಯೆಗಳಿಗೆ ಹಳೆದು ವರ್ಕ್ ಆಗೋಲ್ಲಾ ಅ೦ತಾ ಅಷ್ಟೇ."
ಅಲ್ಲಿ ಬೇರೆ ಹೊಸ ಪರಿಆರ ಕೂಡ ಹೇಳಯ್ತೆ. ಕೈಲಾಗದವರ ಉಪಾಸ, ಸತ್ಯಾಗರ ಒಂದೇ ಹೇಳಿಲ್ಲ ಅಲ್ಲಿ!! ನೀವು "ಎಲ್ಲ ಮಾಯ, ನೆತ್ತರ ಬಿತ್ತ" ಗುಂಪು ಸೇರ್ರಿ!
ಇರಲಿ.. ನಿಮ್ಗೆ ನಿಮ್ ಅನುಮಾನ ಇದ್ದೇ ಇರ್ತದೆ. ಅದಕ್ಕೆ ಏನೂ ಮಾಡಕ್ಕಾಗಲ್ಲ.
ಇನ್ನೊಂದು
"ಚೆನ್ನಾಗಿದೆ ! ತು೦ಬಾ ಚೆನ್ನಾಗಿದೆ.
ಕತೆ, ಡಯ್ಲಾಗ್, ಕ್ಯಾಮರ ಗ್ರಾಫಿ, ನಟನೇ -- ಎಲ್ಲಾ ಬೊ೦ಬಾಟ್."
ಇಸ್ಟೇ ಬೇಕಾಗಿರೋದು ಒಂದು ಒಳ್ಳೇ ಸಿನಿಮಾದಿಂದ ಅಲ್ವಾ!! ಇನ್ನು ಅತಿ moral class ಆದ್ರೆ ಜನ ಬತ್ತಾರ? ಒಂದ್ ಕೆಲಸ ಮಾಡಿ ಒಂದು full moral ಆಗಿರೋ ಚಿತ್ರಾ ಮಾಡ್ರಿ, ನೋಡುಮ ಏಟು ಮಂದಿ ಬತ್ತಾರ!!
ಅಣ್ಣಾ!!
ಈ ಉಪಾಸ ಬಿದ್ರೆ, ಏನೂ ಆಗಕ್ಕಿಲ್ಲ, ಬದಲಿಗೆ ಅದಿಕಾರ ಹಿಡಿದು ತಿಂಬೇಕು, ಉಂಬೇಕು!! 
ಅಂದೆಂತು ಉಪಾಸ ಮಾಡ್ದೆ? ನನ್ ಕೈಲಿ ಒಪ್ಪೊತ್ತು ತಿಂದೇ ಇರಕ್ಕೆ ಆಗಕ್ಕಿಲ್ಲ!!
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ನೋಡೋಣ ....
ಆದ್ರೆ ನಾನೇನು ತಪ್ಪು ಮಾಡಿದನಪ್ಪ, ನನ್ನ ಕೊಲ್ಲೊಕೆ ??? .. ನಾನು ಅಮೇರಿಕಾಗೆ ಬಂದಿರರೋದು ಕೆಲಸದ ಮ್ಯಾಲೆ
-ನಿಮ್ಮ ಬೆಂಬಿಡದ ಬೇತಾಳ .....
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಈ ಚಿತ್ರವನ್ನು ಸಾಕಷ್ಟು ರೈತರು ನೋಡುತ್ತಿದ್ದಾರೆ , ಇದರಿಂದ ಜನರಲ್ಲಿ ಜಾಗೃತಿ ಮೊಡುತ್ತಿದೆ ಅಂದುಕೊಳ್ಳೋಣವೇ ??
ಆದರೆ ಏನು ಪ್ರಯೋಜನವಿಲ್ಲ !!! ... ಸಾರ್ವಜನಿಕರ ದುಡ್ಡು ಪೋಲಾಗುತ್ತಿದೆ ... ಪರಿಹಾರ ಹುಡುಕುತ್ತಿಲ್ಲ ...
ನಮ್ಮ ಸಿ.ಎಂ , ಬರಿ ಗ್ರಾಮ ವಾಸ್ತವ್ಯದಲ್ಲಿ ಕಾಲ ಕೆಳೆಯುತ್ತಿದ್ದಾರೆ !!!
-ನಿಮ್ಮ ಬೆಂಬಿಡದ ಬೇತಾಳ .....