'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
ಮೈಸೂರ್ನ ರಣಜಿತ್ ಸಿನಿಮಮನೆಯಾಗೆ ಕಳೆದ ಸುಕ್ರುವಾರ ನಾವ್ ಈ ಚಿತ್ರ ನೋಡಿದ್ದು.
ಏನ್ ಸಂದಾಗೈತೆ ಅಂತೀರ!! ಮನೆಮಂದಿಯೆಲ್ಲ, ಎಲ್ಲ ಅಂದ್ರೆ, ಹೈಕಳು, ಹೆಂಗಸ್ರು, ಗಂಡಸ್ರು, ಮುದುಕ್ರು ಎಲ್ರೂ ಕೂತು ನಕ್ಕೊಂಡು ನೋಡೋ ಸಿನಿಮವದು.
ಸಿನಿಮದ ಮೊದಲು ಮತ್ತು ಕೊನೆಯಾಗೆ ಏನೋ ಸೋಜಿಗಗೊಳವೆ.
ನೀವು ನೋಡಿ ತಿಳೀತಯ್ತೆ. ಹಾಡುಗೊಳು, ನಟನೆ, ಎಲ್ಲ ಚೊಕ್ಕವಾಗೇ ಅವೆ.
ನಮ್ ಕಿರೀ ತಮ್ಮ ನಕ್ಕೂ ನಕ್ಕೂ, ಸಿನಿಮಾ ನೋಡ್ಕೊಂಡು ಕುಣೀತಿದ್ದ. ಸಿನಿಮಾ ಬೊಂಬಾಟಾಗಯ್ತೆ! ಇನ್ನೊಂದ್ದಪ ಹೋಗೂಮ ಅಂತೀವ್ಮಿ.
ಮಾಸ್ಟರ್ ಹಿರಣ್ಣಯ್ನೋರು, ಸ್ರೀನಿವಾಸ ಮೂರ್ತಿಯೋರು, ರಮೇಶ ಬಟ್ರೂ, ಚಿತ್ರ ಸೆಣಯ್ರು, ವೈಸಾಲಿ ಕಾಸವಳ್ಳಿಯೋರು, ಆ ಹೊಸ ಹುಡುಗಿ, ಸುದೀಪ್, ಆ ಕುಣಿತ ಮೇಸ್ಟ, ಕೋಮಲೋರು, ಎಲ್ರೂ ಬೊಂಬಾಟಾಗಿ ಮಾಡವ್ರೆ.
.
.
.
ಅದ್ಯಾವುದೋ ಹಿಂದಿ ಸಿನಿಮಾ 'ಬೇವರ್ಸಿಯೋ, ಬಾವರ್ಸಿಯೋ' ಅದೇನೋ ನಂಗೆ ಹೆಸರು ಸರಿಯಾಗಿ ಗೊತ್ತಿಲ್ಲ, ಅದರ ರಿಮೇಕಂತೆ ಕೆಲವ್ರು ಅಂದ್ರು, ನಮ್ಗೇನ್ ಗೊತ್ತು!! ಇರ್ನಿ ಅದಕ್ಕೇನೀಗ, 'ಒಳ್ಳೇದು ಹೆಂಗಾಸೆ ಬಂದ್ರೂ ತಗ' ಅಂದಾ ಏದದಲ್ಲೇ ಹೇಳಯ್ತಂತೆ.!!
ನೀವೂ ಒಂದ್ ಕಿತ ಆದ್ರೆ ನೋಡಿ!

- mahesha ರವರ ಬ್ಲಾಗ್
- Login or register to post comments
- 438 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
veena.
ನಂ.೭೩ ಶಾಂತಿ ನಿವಾಸ ಹಿಂದಿ ಚಿತ್ರ ’ಬಾವರ್ಚಿ’ ಯ ರಿಮೇಕ್ ಎಂದು ನಾನು ಕೇಳಿದ್ದೇನೆ. ಬಾವರ್ಚಿ ಎಂದರೆ ಅಡುಗೆ ಭಟ್ಟ ಎಂದು ಅರ್ಥ. ಸುದೀಪ್ ಅವರ ಚಿತ್ರವಾದರೆ ರಿಮೇಕ್ ಆದರೂ ಪರವಾಗಿಲ್ಲ ಚೆನ್ನಾಗಿರುತ್ತದೆ. ಅವರ ಸ್ವಾತಿ ಮುತ್ತು ನಾನು ಇಷ್ಟ ಪಟ್ಟ ಚಿತ್ರ. ಅರ್ಥವಾಗದ ತೆಲುಗು ತಮಿಳಿನಲ್ಲಿ ಮೂಲ ಚಿತ್ರ ವನ್ನು ನೋಡುವುದಕ್ಕಿಂತ, ರಿಮೇಕ್ ಕನ್ನಡ ಚಿತ್ರವನ್ನು ನೋಡುವುದು ಮೇಲು. ಹಾಗಂತ ಈ ಮಾತು ಎಲ್ಲ ರಿಮೇಕ್ ಚಿತ್ರಗಳಿಗೆ ಅನ್ವಯಿಸುವುದಿಲ್ಲ. ರಮೇಶ್, ಸುದೀಪ್ ಅಂತಹವರ ನಿರ್ದೇಶನ ನಮ್ಮ ಕನ್ನಡ ಚಿತ್ರರಂಗಕ್ಕೆ ಸದಾ ಸಿಕ್ಕಲ್ಲಿ ಅದು ನಮ್ಮ ಭಾಗ್ಯ.
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
ಇಲ್ಲಿ ತಿಳಿಸ್ದಕ್ಕೆ ನನ್ನಿ.... ನಾನು ಈ ಸಿನಿಮಾ ನೋಡುವ ಅಂತಿದೀನಿ
ಅಂಗೆ ನಗೆಗಾರ ಗಣೇಸನ 'ಚೆಲುವಿನ ಚಿತ್ತಾರ' ಎಂಗೈತೆ ಅಂತ ಒಸಿ ಯೋಳಣ್ಣ
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
ಹಿಂಗಯ್ತೆ ನೋಡಣ್ಣ!

http://sampada.net/blog/mahesha/25/06/2007/4648
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
ಓ ಅದಕ್ಕೆ ಇರ್ಬೋದು.... ನಮ್ಮ ಸಿನಿಮಾಗಳು ಬೇರೆ ನುಡಿಗಳ ಸಿನಿಮಾಗಳ ಜೊತೆ ಪೈಪೋಟಿ ನಡೆಸಿ ಚೆನ್ನಾಗಿ ಓಡ್ತಾವೆ ಅಂತ ಟಿವಿ೯ ನಲ್ಲಿ ಹೇಳ್ತಾ ಇದ್ರು
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
ನೀವ್ ಹೇಳೋ ಆ ಹಿಂದಿ ಸಿನಿಮಾ ರಿಮೇಕ್ ಆಗಲೆ ಕನ್ನಡದಲ್ಲಿ ಬಂದ್ ಹೋಗಿದೆ. ಶಶಿಕುಮಾರ್ ಹಿರೋ ಆಗಿರುವ 'ಸಕಲಕಲಾವಲ್ಲಭ'. 'ಶಾಂತಿನಿವಾಸ' ರಿಮೇಕ್ ನ ರಿಮೇಕ್ ಅನ್ನಬಹುದು.
'ಸಕಲಕಲಾವಲ್ಲಭ'ನೇ ಯಾಕೆ ಹಿಂದಿಗೆ ಹೋಗಿರ್ಬಾರ್ದು? ಏನೇ ಇರಲಿ ಮೊದಲ ಸರತಿ ನೋಡುವವರಿಗೆ ಮೋಸ ಇಲ್ಲ. ಒಳ್ಳೇ ನೀತಿ ಕತೆ.
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
ಸಂಗನ
ನೀವು ನೋಡ್ರಿ..
ನಮ್ ಮಾಸ್ಟರ್ ಹಿರಣ್ಣಯ್ಯ, ಸ್ರೀನಿವಾಸ ಮೂರ್ತಿಗಳು, ರಮೇಸ್ ಬಟ್ರು, ಆ ಹೊಸ ಹುಡುಗಿ.. ಇವ್ರೆಲ್ಲ ಚನ್ನಾಗಿ ಮಾಡವ್ರೆ!
ಹಾಡು, ಕುಣಿತ, ಸೀನು(scene) ಎಲ್ಲ ಚಂದಾಗವೆ!
ಉ: 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ