ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
ಕೊಲ್ಲೇ ನಂನಂನೇ
ಕೊಲ್ಲೇ ನಂನಂನೇ
ಕಡುಕಪ್ಪು ಕಂಣಲ್ಲೇ ಕೊಲ್ಲು
ಬಿಗಿದಪ್ಪಿ ತೋಳಲ್ಲೇ ಕೊಲ್ಲು
ಮುದ್ದಾದ ಮಾತಲ್ಲೇ ಕೊಲ್ಲು
ಬಾ ನಂನ ಪ್ರೀತೀಲೇ ಕೊಲ್ಲು
ಕ್ಶಣಕೊಂಮೆ ಕೊಲ್ಲು
ಕಣಕೊಂಮೆ ಕೊಲ್ಲು
ಕಾಡಿಸಿ ಪೀಡಿಸಿ
ಮುದ್ದಿಸಿ ಚುಂಬಿಸಿ ||ಕೊಲ್ಲೇ ನಂನಂನೇ||
ನಾಡಿಯಲ್ಲಿ ನೆತ್ತರು
ಹರಿಯೋದು ನಿಂತೇ ಹೋದರು
ದೂರಾಗಬೇಡ ತೊರೆದ್ ಹೋಗಬೇಡ
ಓ ಪ್ರೀತಿಯೇ ನೀನಿರು
ಪ್ರೀತಿಸೋರು ಎಲ್ಲರು
ಒಂದಾಗಲಿಲ್ಲ ಆದರು
ನಿಜಪ್ರೀತಿಗೆಂದು ಅಳಿವಿಲ್ಲವೆಂದು
ಇಲ್ಲೆಲ್ಲರೂ ಬಲ್ಲರು
ಈ ಪ್ರೀತಿಯು ಕಯ್ ಜಾರಿಯೂ
ಎಂದೆಂದಿಗೂ ನೀಂ ಪ್ರೇಮಿಯೋ ||ಕೊಲ್ಲೇ ನಂನಂನೇ||
ಎಲ್ಲೋ ಕುಶಿಯ ದಿಬ್ಬಣ
ಇಂನೆಲ್ಲೋ ನೋವಿನವ್ತಣ
ನಂಮಂತೆ ಎಂದೂ ನಡೆಯೋಲ್ಲ ಒಂದೂ
ನಾವೆಲ್ಲರೂ ಮೂಡರು
ಹೇಗೋ ನೀನು ನಕ್ಕರು
ಕಂಣೀರ ಒರಸಿಕೊಂಡರು
ನಿಂನೆದೆಯ ದುಕ್ಕ
ಈ ಬೂಮಿ ತೂಕ
ಅದಂ ಯಾರಿಲ್ಲಿ ಬಲ್ಲರು
ಸಂತೋಶವೂ ಸಂತಾಪವೊ
ಸಂಗಾತಿಯೇ ನೀಂ ಶಾಪವೋ ||ಕೊಲ್ಲೇ ನಂನಂನೇ||

- mahesha ರವರ ಬ್ಲಾಗ್
- Login or register to post comments
- 268 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
ಹಾಡಿಗಾಗಿ ನನ್ನಿ
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
ಕ್ಷಣ ಎನ್ನುವ ಬದಲು ಚಣ ಎಂದಿದ್ದರೆ ಇನ್ನೂ ಚೆನ್ನಿತ್ತೇನೋ?
ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
ಪರವಾಗಿಲ್ಲ ಬಿಡ್ರೀ(ತ್ಯಜಿಸ್ರೀ
)
ಕ್ಶಣ ಅದು !
ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
ಮಹೇಶ್,
ಹಾಡಿಗಾಗಿ ನನ್ನದೂ ನನ್ನಿ.
ಇಷ್ಟವಾದ ಹಾಡಿನ ಮೊದಲ ಲೈನ್ ಮಾತ್ರ ಹಾಡುವುದು ನನ್ನ ಅಭ್ಯಾಸ.
ಕೂತಾಗ,ನಿಂತಾಗ,ನಡೆವಾಗ..ಐತಲಕಡಿ..ಐತಲಕಡಿ..
ಅದರ ನಂತರ ಸುರುವಾಯಿತು-
ಜಿಂಕೆಮರೀನಾ ಜಿಂಕೆಮರೀನಾ..
ಈಗ 'ಕೊಲ್ಲೇ ನನ್ನನ್ನೇ..ಕೊಲ್ಲೇ ನನ್ನನ್ನೇ..'
'ಅಕ್ಕಪಕ್ಕದವರು ಜಗಳಮಾಡುತ್ತಿದ್ದೇವೆ ಅಂದುಕೊಂಡಾರು.'ಎಂದು ನನ್ನಾಕೆ ಈ ಹಾಡನ್ನು ಹಾಡಲೇ ಬಿಡುತ್ತಿಲ್ಲ.
ಈಗಿನ 'ನನಗೂ ಒಬ್ಬ ಗೆಳೆಯ ಬೇಕು' ಹಾಡು ಚೆನ್ನಾಗಿದೆ.
-ಗಣೇಶ.
ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
"ನನಗೂ ಒಬ್ಬ ಗೆಳೆಯ ಬೇಕು" ನನಗೂ ಮೆಚ್ಚು..
ನಂನಿ
ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
ನೀವು ಬರೆದಿದ್ದನ್ನ ಹೀಗೆ ಓದ್ಕೊಂಡೆ...
"ಐತಲಕಡಿ ಜಿಂಕೆ ಮರೀನಾ ಕೊಲ್ಲೇ..."
ಬರ್ತಾರ್ರೀ ಪ್ರಾಣಿ ಪ್ರೇಮಿಗಳು/ಪರಿಸರವಾದಿಗಳು ಅಟ್ಟಿಸ್ಕೊನ್ಡು....