ಮುಳಿಸು ಮಾವ
’ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹನು’ ಹಾಡಿನ ಈ ಸಾಲು, ಅಪ್ಪಟ ಕನ್ನಡ ಸಾಲು, ದಿಟವಾಗಲೂ ಕನ್ನಡ ಸೊಬಗು ತೋರಿಸುವುದು.
ಆ ಸಾಲು
’ಮುಳಿಸು ಮಾವನ ಮೇಲೆ ಮಗಳೇನ
ಮಾಡಿಹಳು ನಿಮ್ಮಗೇತಕೀ ಕಲ್ಲು ಮನಸು’
ಈ ಅಪ್ಪಟ ಕನ್ನಡ ಸೊಬಗಿನ ಸಾಲು.
ಹೇಗೆ..
೧) ಮುಳಿಸು, ಮಗಳೇನ, ಮಾಡಿಹಳು ಈ ಒರೆಗಳಲ್ಲಿ ಬರುವ ’ಳ’ ದ್ರಾವಿಡನುಡಿಗಳು ಮತ್ತು ಮರಾಟಿಯಲ್ಲಿ ಇದೆ. ಈ ಳ ಅನ್ನು ಬಡಗು ಇಂಡಿಯದವರಿಗೆ, ಬಂಗಾಳಿಗಳಿಗೆ ಆಗಲ್ಲ..
೨) ಮೇಲೆ, ಇದು ಮರಾಟಿ ಮರಾಟಿಗಳಿಗೆ ಅಗಲ್ಲ. ಚಿಕ್ಕ ಎ ಮರಾಟಿಗಳಿಗೆ ಕಶ್ಟ.
೩) ಇನ್ನು ಮಾಡಿಹಳು ಇದು ತೆಲುಗು ಮತ್ತು ತಮಿಳು ನುಡಿಗಳಿಗೆ ಹೊಂದಲ್ಲ.. ಇದು ಮಳಯಾಳಕ್ಕೂ ಹೊಂದಲ್ಲ....
ಹೀಗೆ ನೋಡಿ, ಈ ಅಪ್ಪಟ ಕನ್ನಡ ಸಾಲಲ್ಲಿ ಪೂರ್ತಿ ಕನ್ನಡದ ಸೊಗಡು ಇದೆ.
ಹವುದಲ್ವ!

- mahesha ರವರ ಬ್ಲಾಗ್
- Login or register to post comments
- 229 hits
- Email this blog





RSS:
ಪ್ರತಿಕ್ರಿಯೆಗಳು
ಉ: ಮುಳಿಸು ಮಾವ
ನನಗಿದು "ಮುಳಿಸು" ಅಂತ ಗೊತ್ತೇ ಇರಲಿಲ್ಲ. ಮುನಿಸು ಅಂದ್ಕೊಂಡಿದ್ದೆ! ಹಾಡಿನಲ್ಲಿ ಹಾಗೇನೇ ಇರೋದಲ್ವೆ? ನೀವು ನಿಜವಾಗ್ಲೂ ನಿಜ ಹೇಳ್ತಿದ್ದೀರೋ ಅಥವಾ ...?
ಮತ್ತೆ, ನೀವು ಒಬ್ಬರಿಗೆ "ಥರ" ಅಂದರೆ ನಡುಗುವುದು, ತರ=ಥರ ತಪ್ಪು ಅಂದಿರಲ್ವೆ? ಇಲ್ಲಿ ಭಟ್ಟರು ೭ನೇ ಪ್ಯಾರನಲ್ಲಿ "(ಡಾ. ಮನಮೋಹನ್‌ಸಿಂಗ್ ಥರದವರಿರುತ್ತಾರೆ ಅಷ್ಟೇ)." ಅಂತ ಥರವನ್ನು ಬಳಸಿದ್ದಾರೆ. ಇದು ತಪ್ಪೇ? ನಾನು ಕನ್ನಡದಲ್ಲಿ ಬರೆಯುವ ಪತ್ರಿಕೆಯವರಾದ್ರೂ ಕನ್ನಡ ಸರಿಯಾಗಿ ಉಪಯೋಗಿಸುತ್ತಾರೆ ಅಂದುಕೊಂಡು ನನ್ನ ಕನ್ನಡ ಕಲಿಕೆಗಾಗಿ ಅವರ ಅಂಕಣ ಓದುತ್ತಿದ್ದೆ. ಇನ್ನು ನನ್ನ ಕನ್ನಡ ಮಣ್ಣು ತಿಂದ ಹಾಗೇ ಬಿಡಿ
ಉ: ಮುಳಿಸು ಮಾವ
ಮನ್ನಿಸಿ.
ಭಟ್ಟರು ಎಲ್ಲಿ ಥರ ಬಳಸಿದ್ದಾರೆಂದರೆ, ಇಲ್ಲಿ - http://thatskannada.oneindia.in/column/bhat/2008/0425-dirty-politicians-...
ಉ: ಮುಳಿಸು ಮಾವ
ಮುಳಿಸು = ಮುನಿಸು ಸರಿ
ಶಿವರಾಮ ಕಾರಂತರ ಚೋಮನ ದುಡಿಯಲ್ಲಿ ಮುಣುಗು = ಮುಳುಗು. ಕನ್ನಡದ ನುಡಿಬಗೆ/ಡಯಲೆಕ್ಕಟುಗಳಲ್ಲಿ ಳ/ಲ => ಣ/ನ ಆಗಿ ಮಾರ್‍ಪಡೋದು ಇದೆ.
ಇನ್ನು
ಥರ ಅನ್ನೋ ಒರೆ ಪ್ರಿಸಮ್ ಒರೆಗಂಟಲ್ಲಂತೂ ಸಿಕ್ಕಿಲ್ಲ.. ಥರಥರ ಅನ್ನೋದು ನಡುಕದ ಅಣಕೊರೆ/ಅನುಕರಣೆ.
ತರಹ(ಹಿಂದಿ, ಉರ್‍ದು) = ತರ ಆಗಿದೆ
ತೆರ ಅನ್ನೋದು ಅಪ್ಪಟ ಕನ್ನಡ ಒರೆ.. ತೆರ = ಬಗೆ, ರೀತಿ, ತರಹ ( ಬಯ್ರಪ್ಪನವರ ನಾವೆಲ್ಲುಗಳಲ್ಲಿ ಓದಿದ ನೆನೆಪು )
ಇಂತು
=====================================
ಮಾಯ್ಸ!
ಉ: ಮುಳಿಸು ಮಾವ
ಹ್ಹ ಹ್ಹ
ಇದೂ ಒಂದು ಣಳಯಯೋರಭೇದಃ ಸೂತ್ರಕ್ಕೆ ಸೇರಿದ ಪದವೇ.
ತಮಾಷೆಯಲ್ಲ. ಕನ್ನಡದ ಹಲವು ಪದಗಳಲ್ಲಿ ಈ ಮಾರ್ಪಾಡು ಆಗಿದೆ
ಮುಣಿಸು <=>ಮುನಿಸು <=> ಮುಳಿಸು
ಮಣಲು <=> ಮಳಲು <=> ಮರಳು
ಹಳಗುಳಿ ಮಣೆ <=> ಹಳಗುಣಿ ಮಣೆ ( ಇದಕ್ಕೆ ಚೆನ್ನೆಮಣೆ ಅಂತಲೂ ಅಂತಾರೆ. ಹರಳುಗಳನ್ನು (ಅಥವಾ ಗೋಲಿಗಳನ್ನು) ಕುಳಿಗಳೊಳಗೆ ಹಂಚುವ ಆಟ.
ಈ ಕ್ಷಣಕ್ಕೆ ನೆನಪಾದವು ಇವು ಅಷ್ಟೇ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಮುಳಿಸು ಮಾವ
ನಂ ಕಡೆಗೂ, ಆಡು ಮಾತ್ನ್ಯಾಗಾ ಮುಳುಗು ಅನ್ನುದಕ್ಕ ಮುಣುಗು ಅಂತನ...ಅಂತೀವಿ.."ಅಂವಾ ನೀರಾಗಾ ಮುಣುಮುಣಿಗೆದ್ದಾ".
ತೆರ ಅಂದರ ಟ್ಯಾಕ್ಸ್ ಅನ್ನೂ ಅರ್ಥಾನೂ ಬರ್ತದ.