’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿಡ್ನಿಯಲ್ಲಿ ನೆಲೆಸಿರುವ ’ಅನಿವಾಸಿ’ಗಳು, ನನಗೆ ತಿಳಿದಿಯುವಂತೆ ಕನ್ನಡದ ಚಂದ್ರಶೇಖರ ಕಂಬಾರರ ನೆಗೞ್ಚು ’ಜೋಕುಮಾರಸ್ವಾಮಿ’ ನಾಟಕವನ್ನು ಆಡಿ, ಕನ್ನಡದ ನರುಗಂಪನ್ನು ಆಸ್ಟ್ರೇಲಿಯನೆಲಕ್ಕೂ ಹೊಮ್ಮಸಿದವರು.
ನಮ್ಮ ಸಂಪದದೊಳು ’ಅನಿವಾಸಿ’ ಎಂಬ ಪೆನ್‌ಹೆಸರಿಂದ ಹೆಸುರುವಾಸಿ ಮತ್ತು ನಮ್ಮಗೆಲ್ಲ ಗೊತ್ತಿರುವ ಸಿರಿ ’ಸುದರ್ಶನ್ ನಾರಾಯಣ್’ ಅವರು ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ನನ್ನ ಕಡೆಯಿಂದ ನಲಿವಿನ ಹಾರೈಕೆಗಳು.
ಈ ಸಂಗತಿ ನನಗೆ ಬಲು ಹಿಂದೇ ತಿಳಿದಿದ್ದರು ನಾನು ಬರೆಯುವದನ್ನು ಮರೆತು ಹೋಗಿದ್ದೆನ್.
ಇಂದು ದಟ್ಸ್‌ಕನ್ನಡ ಈ ಸುದ್ದಿಯನ್ನು ಬಿತ್ತರಿಸಿದೆ.
http://thatskannada.oneindia.in/nri/engagements/220807sidney-kannada-dia...

- mahesha ರವರ ಬ್ಲಾಗ್
- Login or register to post comments
- 433 hits
- Email this blog

RSS:
ಪ್ರತಿಕ್ರಿಯೆಗಳು
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನಿವಾಸಿ "ಸುದರ್ಶನ್"ರಿಗೆ ಅಭಿನಂದನೆಗಳು.
*ಅಶೋಕ್
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನಿವಾಸಿಗಳಿಗೆ ನಲಿವಾರೈಕೆಗಳು.
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನಿವಾಸಿಗಳೆ,
ನಲ್ಮೆಯ ಹಾರೈಕೆಗಳು
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹೇಶರಿಗೆ ಮತ್ತು ಹಾರೈಸಿದೆಲ್ಲರಿಗೂ ಥ್ಯಾಂಕ್ಯು.
ಅದು ಪ್ರಶಸ್ತಿ ಅಲ್ಲ-'ಸುವರ್ಣ ಕರ್ನಾಟಕ ರಂಗ ಪುರಸ್ಕಾರ' ಅಂತ.
ನಾಟಕ ಮಾಡಿ, ಆಡಿ, ಹಾಡಿ ಹುಚ್ಚಾಗಿದ್ದಾನೆ ಅಂತ ಹೇಳಿದ ಹಾಗೆ ಇರಬೇಕು ಅದು!
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏನೋ ಒ೦ದು ಪೇಪರ್ ನಲ್ಲಿ ಸುದ್ದಿಯಾಗಿ ಹೆಸರು ಬ೦ತಲ್ಲಾ.
ಇನೇನು ಬೇಕು ??
ಮು೦ದಿನ ಸರಿ ಪೋಟೋ ಜೊತೆ ಸುದರ್ಶನನ ಸ೦ದರ್ಶನವು ಬರಲಿ.
ಮುರಳಿ,
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಓ ಹಾಗಾ ನಂಗೆ ನಿಕ್ಕುವವಾಗಿ ಏನು ದೊರೆಯಿತು ನಿಮಗೆ ಅಂತ ಗೊತ್ತಿರಲಿಲ್ಲ. ನಾನು ದಟ್‌ಸ್‌ಕನ್ನಡದಲ್ಲಿ ಬಂದುದನ್ನು ಬರೆದೆಂ.
"ನಾಟಕ ಮಾಡಿ, ಆಡಿ, ಹಾಡಿ ಹುಚ್ಚಾಗಿದ್ದಾನೆ ಅಂತ ಹೇಳಿದ ಹಾಗೆ ಇರಬೇಕು ಅದು!"
ರೀ ನೀವು ಹಿಂಗೆಲ್ಲ, ಗೇಲಿ ಮಾಡಿಕೊಬೇಡಿ. ನಿಮ್ಮನ್ನು ಮೆಚ್ಚುವ ನಮಗೆ ಬೇಜಾರಾಗ್ತದೆ. ನಾವು ಏನು "ಹುಚ್ಚನ್ನು" ಮೆಚ್ಚೋ ಬೆಪ್ಪುಗಳಾ?
ಬೆಂಗಳೂರಿಗೆ ಇದನ್ನು ಪಡೆಯಕ್ಕೆ ಬತ್ತೀರ, ತಾನೆ? ಬಂದಾಗ ತಿಳಿಸ್ರಿ ನಂಗೆ, ನಾನು ಬತ್ತೀನಿ ಕಾರ್ಯಕ್ರಮಕ್ಕೆ.
ಈ ಹಾಳು ಸೊಂತ ಕೆಲಸದ ನಡುವೆ, ನಾನು ಶ್ರೀವತ್ಸಜೋಶಿಯವರ 'ವಿಚಿತ್ರಾನ್ನ'ದ ಬಿಡುಗಡೆ ನೋಡೋದು ತಪ್ಪಿ ಹೋಯ್ತು.
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾಟಕ ಆಡೋದು ಹುಚ್ಚೇ ಕಣ್ರೀ. ಹುಚ್ಚೇ ನಾಟಕಕ್ಕೆ ಸೆಳೆಯೋದು, ನಾಟಕ ಆಡ್ತಾ ಆಡ್ತಾ ಆ ಹುಚ್ಚು ದಟ್ಟವಾಗಿ ಸುತ್ತಿಕೊಳ್ಳೋದು. ಅದರಲ್ಲಿ ನನಗೆ ಬೇಜಾರೇ ಇಲ್ಲ. ಒಂಥರ ಗರ್ವಾನೆ. ಕೆಲವರಿಗೆ ಮಾತ್ರ ಈ ಥರ "ಹುಚ್ಚು" ಇರೋಕೆ ಸಾಧ್ಯ ಅಲ್ಲವ? "ಒಳ್ಳೆ ನುಡೀಲಿ" ಹೇಳ್ಬೇಕಂದರೆ - ವ್ಯಸನ ಅನ್ನಬೇಕೇನೋ!
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸರಿ ಹೋಯ್ತು!!
ನಿಮ್ಮ ಅಶನವಸನವ್ಯಸನಾದಿಗಳು ಸಮ್ಯಕ್‌ಸೌಖ್ಯವಾಗಿರಲಿ!!
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನಿವಾಸಿ,
ಬಹಳ ಸಂತಸದ ವಿಷಯ ; ಹೀಗೇ ನಾಟಕ ಆಡುತ್ತಿರಿ- ಆಡಿಸುತ್ತಿರಿ
-ಹಂಸಾನಂದಿ
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಥ್ಯಾಂಕ್ಸ್ ಹಂಸಾನಂದಿಯವರೆ,
ನಿಮಗೆ ಗೊತ್ತಿರಬಹುದು ಅಮೇರಿಕೆಲ್ಲಿರುವ ವಲ್ಲೀಶ ಶಾಸ್ತ್ರಿಗಳಿಗೂ ಈ ಪುರಸ್ಕಾರ ಸಂದಿದೆ.
ಹೊರನಾಡಿನಲ್ಲಿ ಕನ್ನಡ ನಾಟಕ ಚಟುವಟಿಕೆಯ ಬಗ್ಗೆ ಗಮನಹರಿಸುತ್ತಿರುವುದು ಒಳ್ಳೆಯದೇ ಅಲ್ಲವೆ?
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಭಿನಂದನೆಗಳು.
ಹೊರನಾಡಿನಲ್ಲಿ ನಾಟಕ ಚಟುವಟಿಕೆಯ ಕಡೆ ಗಮನಹರಿಸುತ್ತಿರುವುದು ಒಳ್ಳೆಯದೇ. ಆದರೆ ಅಲ್ಲಿ ನಡೆದ ಚಟುವಟಿಕೆಗಳು ಇಲ್ಲಿ ಓದಲ್ಪಡುವ ಮೀಡಿಯದಲ್ಲಿ ಇಲ್ಲಿ ನಡೆಯುವ ಚಟುವಟಿಕೆಗಳಿಗಿಂತ ಹೆಚ್ಚು ಸ್ಪೇಸ್ ಪಡೆಯುತ್ತಿರುವುದು, ಚರ್ಚೆಯಲ್ಲಿರುವುದು ಒಂದು ರೀತಿಯ ಮಿಕ್ಸೆಡ್ ಪ್ಯಾಕೇಜ್.
ಅದನ್ನ ಕುರಿತಾಗಿಯೇ ಹೀಗೊಂದು ಲೈಟಾದ conservative ರಿಮಾರ್ಕ್ ಕೂಡ ಸೇರಿಸಬಹುದೆ?: ಹೊರನಾಡಿನಲ್ಲಿ ಒಳನಾಡಿಗಿಂತ ಹೆಚ್ಚು ಚಟುವಟಿಕೆಯಾಗಿಬಿಟ್ಟರೆ ಎಂಬ ಭಯ (ನಮ್ಮಂತಹ India-only ಜನರಿಗೆ ವೀಸ ಕೊಡದಿದ್ದರೆ ಏನು ಗತಿ - ಅಲ್ಲಿಗೆ ಹೋಗಿ ನೋಡೋದಕ್ಕಾಗೋದಿಲ್ಲ).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂತು ನಮ್ಮ "ಅನಿವಾಸಿಗಳು" ತಮ್ಮ ಗುಟ್ಟು ಬಿಟ್ಟುಕೊಟ್ಟರು. ಕಂಗ್ರಾಟ್ಸ್ ಅನಿವಾಸಿಗಳೇ ನಿಮಗೆ. ಯಪ್ಪಾ ನಾಟಕದ "ಹುಚ್ಚಿನಿಂದಲೋ" ಅಥವಾ ನಿಗೂಢವಾದ ಬರಹವಣಿಗೆಯಿಂದಲೋ ಒಟ್ಟಿನಲ್ಲಿ ನಮಗೆ ಸದಾ ನಿಮ್ಮ ನಗುವಿನ ಫೋಟೋ ತೋರಿಸುತ್ತಾ (ಸಂಪದದಲ್ಲಿ ನಿಮ್ಮ ಹೆಸರಿನ ಅಡಿಗೆ ಬರುವ ಅ ಎಂಬ ಅಕ್ಷರ ತುಂಬ ಚೆನ್ನಾಗಿದೆ) ಓದುಗರಲ್ಲಿ ಮಂದಹಾಸ ಮೂಡಿಸುತ್ತೀರಲ್ಲಾ ಅದಕ್ಕೆ ಮತ್ತಷ್ಟು ನನ್ನಿ.
ಇನ್ನು ನಿಮ್ಮ ನಾಟಕದ ಖದರ್ ಹೇಗಿರುತ್ತೆ ಅಂತ ನೋಡುವ ಉತ್ಸಾಹವು ಸಾಕಷ್ಟಿದೆಯಾದರೂ ಆಸ್ಟ್ರೇಲಿಯಾಕ್ಕೆ ಬರಕ್ಕಾಗಲ್ವೇ
ಉ: ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುನಿಲ್,
ನಾನು ಎಲ್ಲಿ ಗುಟ್ಟು ಮಾಡಿದೆನಪ್ಪ? ಪ್ರೊಫೈಲ್ ನಲ್ಲಿ ಲಿಂಕ್ ಕೊಟ್ಟು, ಮೊದಲ ಬ್ಲೋಗ್‌ನಲ್ಲೇ ಹೇಳಿದೀನಲ್ಲ?
ನಾಡಿಗ್,
ಆ ಹೆದರಿಕೆ ಬೇಡ ಅನ್ಸತ್ತೆ. ವರ್ಷಕ್ಕೆ ಒಂದೋ ಎರಡೋ ನಾಟಕ ಎಲ್ಲಿ, ವಾರಕ್ಕೊಂದು ನಾಟಕ ಎಲ್ಲಿ? ಆದರೆ ಈ ವಿಷಯದಲ್ಲಿ ಕನ್ನಡ ಪತ್ರಿಕೆಗಳ ಸಮಾಚಾರ ನನಗೆ ಹೆಚ್ಚು ಗೊತ್ತಿಲ್ಲ.