October 27, 2008 - 9:30am
ದೀಪಾವಳಿ ಸಡಗರ, ಪಟಾಕಿ, ತಿಂಡಿ, ಬಟ್ಟೆ ಇವೆಲ್ಲ ಪಕ್ಕಕ್ಕೆ ಇಡೋಣ.. ಇದೆಲ್ಲ ನಂಗೂ ಇಶ್ಟ..
ಆದರೆ ದೀಪಾವಳಿಯ ಹಿಂದಿನ ಕತೆಗಳು ನನಗ್ಯಾಕೋ ಸರಿಕಾಣಲ್ಲ..
ನರಕ ಎಂಬ ಅಸುರನನ್ನು ಸಾಯಿಸಿದಕ್ಕೊಂದು ಹಬ್ಬ..
ಬಲಿ ಎಂಬ ಅಸುರನನ್ನು ಸಾಯಿಸಿದಕ್ಕೊಂದು ಹಬ್ಬ
ಇವರಿಬ್ಬರನ್ನು ಕಪಟ/ಮೋಸದಿಂದಲೇ ಕೊಂದಿರೋದು.. ಅದರಲ್ಲೂ.. ನಮ್ಮ ನಂಬಿಕೆಯಂತೆ ’ಬಲಿಪಾಡ್ಯಮಿ’ಯಂದು ಬಲಿ ಎಂಬ ನಮ್ಮ ಒಳ್ಳೇ ಅರಸ ನಮ್ಮನ್ನು ನೋಡಲು ಬರುತ್ತಾನೆ.. ಅದಕ್ಕೆ ಅವನಿಗಾಗಿ, ಅವನ ಬರುವಿಗಾಗಿ ದೀಪಗಳನ್ನು ಹಚ್ತೀವಿ...
ಯುಗಾದಿ, ಸಂಕ್ರಾಂತಿ, ಕಾಮನ ಹುಣ್ಣಿಮೆ, ಗಾಳಿಪಟದಬ್ಬ, ಇವೆಲ್ಲ ಸರಿ.. ಆದರೆ
’ಸುರ’ ಎಂಬ ಜನಾಂಗ, ಅಸುರ ಎಂಬ ಜನಾಂಗದ ಒಬ್ಬನನ್ನು ಕೊಂದುದಕ್ಕೆ ಈ ಹಬ್ಬ ಎಂಬುದು ಸರಿಕಾಣದು... ಬದಲಿಗೆ ಇದರ ಹಿಂದಣ ಪುರಾಣದ ಕತೆಯನ್ನು ಮರೆಸರಿಸಿ.. ದೀವಳಿಗೆಯನ್ನು ಬರೀ ’ದೀಪಗಳ ಹಬ್ಬ’ a festival of light ಎಂದು ನಡೆಸುವುದು ಚನ್ನು.
ದೀಪಾವಳಿಗೆ ಸಮನಾಗಿ ಇರಾನಿಗಳು, ಮತ್ತು ಯಹೂದ್ಯರೂ ಬೆಳಕಿನ ಹಬ್ಬವನ್ನು ಮಾಡುತ್ತಾರೆ.
ಗಮನಿಸಿದರೆ ಬಲಿಯಾಗಲಿ, ರಾವಣನಾಗಲಿ, ಮಿಕ್ಕಯಾವ ’ಅ’ಸುರನಾಗಲಿ ಅವನು ಯಾವಾಗಲೂ ದಕ್ಶಿಣದವನೇ...! ಯಾವ ಆರ್ಯಚಕ್ರವರ್ತಿಯೂ ದಕ್ಶಿಣದವನಲ್ಲ...! ಇನ್ನು ಇರಾನ್(ಆರ್ಯಾನಾಮ್ ಇಂದ) ಅಂದರೆ ಆರ್ಯಸ್ತಾನ, ಆರ್ಯರ ನೆಲ ಎಂದು ತಿಳಿವಂತೆ...
ಹಾಗೇ ’ಮಹಿಶ’ಅಸುರ ಇವನೂ ದಕ್ಶಿಣದವನೇ!
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ