ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › mahesha ರವರ ಬ್ಲಾಗ್

ಮೂಗೇಟು

May 27, 2007 - 12:22pm — mahesha

ನೆನ್ನೆ ಒಂದು ಕಾರು ಗುದ್ದಿ, ನಾನು ಮತ್ತು ನನ್ನ ಹಿಂಗುಳಿತವರು ಇಬ್ಬರೂ ಬಿದ್ದೆದು ಏಟು ತಿಂದೆವು. ನನ್ನ ಬಲಗಾಲು ನನ್ನ ಆಕ್ಟೀವಾದಡಿ ನರುಕಿಕೊಂಡಿತ್ತು ಮತ್ತು ಹೆಗಲು ರೋಡಿಗೆ ಉಚ್ಚಿತ್ತು. ಹಿಂದಿನವರಿಗೆ ಎಡಗಾಲಿಗೆ ಕಾರು ಹೊಡೆದಿತ್ತು.

ಸರಿ, ಆ ಸುತ್ತಲಿನವರು ಬಂದು ಎತ್ತಿದ ಮೇಲೆ, ನಾವು ಮನೆಗೆ ಬಂದೆವು. ನನ್ನ ಹಿಂಬದಿಯವನೂ ಕನ್ನಡವನೇ ಆದುದರಿಂದ, ನಾವು ಮನೆಗೆ ಬಂದು ನಮಗಾದ ಗಾಯಗಳ ಬಗ್ಗೆ ಮಾತಾಡುವಾಗ ಕೆಲವು ಒರೆಗಳು ಬಂದುವು. ನನಗೆ ಆ ಒರೆಗಳನ್ನು ಪಟ್ಟಿ ಮಾಡಬೇಕೆಂದು ಅನ್ನಿಸಿದೆ.

೧) ನರುಕು = to bruise,( ತೆಲುಗಿನ ನರುಕೇಸ್ತಾನುಗೆ ಹತ್ತಿರವಾದುದು )
೨) ಮೂಗೇಟು = ಈ ಏಟಿಂದ ಕೊಂಚ ಊತ ಕಾಣಿಸಿಕೊಂಡಿರುತ್ತದೆ. ಆದರೆ ಮೂಳೆ-ಕೀಲು ಮುರಿದಿರುವುದಿಲ್ಲ. ನೆತ್ತರು ಬಂದಿರುವುದಿಲ್ಲ.
೩) ಒಳಪೆಟ್ಟು = ಮೂಗೇಟಿಗೆ ಸಮಾನವಾದ ಏಟು. ಆದರೆ ಅಲ್ಲಿ ಊತವೂ ಇರುವುದಿಲ್ಲ, ಆದರೆ ನೋವಿರುತ್ತದೆ.
"ಪೆಟ್ಟು" ಒರೆಯ ಬಳಕೆ ನಮ್ಮ ಕಡೆ ಕಡಮೆ. ಅದಕ್ಕೆ http://dsal.uchicago.edu/cgi-bin/philologic/getobject.pl?c.1:1:1808.burrow ಇದು ಕಾರಣವಿರಬಹುದು. ನಮಗೆ ಏನಿದ್ದರೂ ಏಟಾಗುವುದು. Smiling
೪) ಹಿಮ್ಮಡಿ = heel
೫) ಪೊಕ್ಕೆ = ಬೆನ್ನು/ಹೊಟ್ಟೆಯ ಎಡ ಮತ್ತು ಬಲ ಮಗ್ಗಲುಗಳು
೬) ಗಣ್ಣೆ = joint ( ಕಬ್ಬಿನ ಗಣ್ಣೆ )
೭) ಮಂಡಿ = knee( ಬಾಳೆಹಣ್ಣ ಮಂಡಿ ಬೇರೆ Smiling )
೮) ಮೊಳಗಾಲು = ಹಿಮ್ಮಡಿಯಿಂದ ಮಂಡಿವರೆಗೆ ಇರುವ ಕಾಲು ( ಮೊಳಗೈ ಅಂತೆ )
೯) ಮಂಪರು = dizziness
೧೦) ವಾಕರಿಕೆ = vomiting sensation
೧೨) ಗುಳಿಗೆ/ಮಾತ್ರೆ = pill
೧೩) ತರುಚು(ಗಾಯ) = scratch

ಹೀಗೆ ಇನ್ನು ಹಲವು ಪದಗಳಿರಬೇಕು. ಇಂತವುಗಳನ್ನು ಬಲ್ಲವರು ಹೇಳಿರಿ.

~.~
  • mahesha ರವರ ಬ್ಲಾಗ್
  • Login or register to post comments
  • 508 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2007 - 1:05pm — ASHOKKUMAR

ಉ: ಮೂಗೇಟು

ASHOKKUMAR's picture

ವಾಹನ ಚಲಾಯಿಸುವಾಗ ನಾವೆಷ್ಟೇ ಎಚ್ಚರವಾಗಿದ್ದರೂ ಇತರರ ಅವಸರ, ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತವೆ. ಮಹೇಶ್, ಪರವಾಗಿಲ್ಲ ತಾನೇ? ಏಟು ಜೋರಾಗಿರಲಿಲ್ಲವಷ್ಟೆ? take care!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2007 - 7:29pm — mahesha

ಉ: ಮೂಗೇಟು

mahesha's picture

ಜಾಸ್ತಿ ಏನಾಗಿಲ್ಲ. ಬರೀ ಮೂಗೇಟು Smiling

ನನ್ನಿ ಅಶೋಕ್. !!

ಬೆಂಗಳೂರಲ್ಲಿ "ಕಾರ್‍ ಕಾರ್‍ ಎಲ್ನೋಡಿ ಕಾರ್‍" Smiling ಅದೂ ಹೊರ ರಿಂಗ್ ರೋಡಲ್ಲಿ ಬರೀ ಕಾರೇ ಕಾರು.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 12:10am — ವೈಭವ

ಉ: ಮೂಗೇಟು

ವೈಭವ's picture

ಕಾರುಗಳ ಹಾವಳಿ ಹೆಚ್ಚಾಗಿ 'ಕಾಲಿ'ಗೆ ಕೊನೆಗಾಲ ಬಂದಿದೆ. Sad

ಹುಸಾರಗಿರಪ್ಪೊ ಬೆಂಗ್ಳೂರ್ನಾಗ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 2:01am — hamsanandi

ಉ: ಮೂಗೇಟು

hamsanandi's picture

ಜೋಪಾನ ರೀ! ಬರೀ ಮೂಗುಗಾಯ ಆಗಿದೆ ಅಂದರೆ ಪರವಾಗಿಲ್ಲ.

Quote:
೨) ಮೂಗೇಟು = ಈ ಏಟಿಂದ ಕೊಂಚ ಊತ ಕಾಣಿಸಿಕೊಂಡಿರುತ್ತದೆ. ಆದರೆ ಮೂಳೆ-ಕೀಲು ಮುರಿದಿರುವುದಿಲ್ಲ. ನೆತ್ತರು ಬಂದಿರುವುದಿಲ್ಲ.

ನಾನು ಮೇಲೆ ಹೇಳಿದ ಹಾಗೆ ಮೂಗುಗಾಯ ಎನ್ನುವ ರೂಢಿಯೂ ಇದೆ.

Quote:

೩) ಒಳಪೆಟ್ಟು = ಮೂಗೇಟಿಗೆ ಸಮಾನವಾದ ಏಟು. ಆದರೆ ಅಲ್ಲಿ ಊತವೂ ಇರುವುದಿಲ್ಲ, ಆದರೆ ನೋವಿರುತ್ತದೆ.
"ಪೆಟ್ಟು" ಒರೆಯ ಬಳಕೆ ನಮ್ಮ ಕಡೆ ಕಡಮೆ. ಅದಕ್ಕೆ http://dsal.uchicago.edu/cgi-bin/philologic/getobject.pl?c.1:1:1808.burr... ಇದು ಕಾರಣವಿರಬಹುದು. ನಮಗೆ ಏನಿದ್ದರೂ ಏಟಾಗುವುದು.

ಒಳಪೆಟ್ಟು ಅನ್ನುವ ಪದದ ಬಳಕೆ ನಾನು ಕೇಳಿಲ್ಲ. ಆದರೆ ಪೆಟ್ಟು ಅನ್ನೋದು ಬಹಳ ಕೇಳಿದ್ದೇನೆ/ಉಪಯೋಗಿಸುತ್ತೇನೆ.

ಚಿಕಾಗೊ ವಿದ್ಯಾಲಯದ ನಿಘಂಟುವಿನಲ್ಲಿರು ಪೆಟ್ಟಿನ ಅರ್ಥವನ್ನು ನಾನು ಇಲ್ಲಿಯವರೆಗೆ ಕೇಳಿರಲಿಲ್ಲ. ನಾವು ಪೆಟ್ಟು ಎನ್ನುವುದನ್ನು ರಕ್ತ ಬಂದಿರದ ಗಾಯ ಎನ್ನುವ ಅರ್ಥದಲ್ಲೇ ಉಪಯೋಗಿಸ್ತೀವಿ. ಮತ್ತೆ ಅದರ ಬಳಕೆ ಬಹಳ ಇದೆ ಕೂಡ. "ಪೆಟ್ಟಾಯಿತಾ" ಅನ್ನುವುದನ್ನು "are you hurt?" ಅನ್ನುವ ಅರ್ಥದಲ್ಲೇ ಉಪಯೋಗಿಸುತ್ತೇವೆ.

ಈ ಸಾಮಾನ್ಯ ಅರ್ಥ ಪುರಂದರ ದಾಸರ ಕಾಲದಿಂದಲೂ ಇತ್ತು ಅನ್ನುವುದಂತೂ ಖಂಡಿತಾ. ದಾಸರು "ಪೆಟ್ಟು ಕೊಡುವೆ ನಿನಗೆ, ಸಿಟ್ಟು ಬಹಳ ಇದೆ, ಮುಟ್ಟಬೇಡೊ ಮಣ್ಣ, ಬೆಣ್ಣೆ ತರುವೆನಯ್ಯ" ಎಂದು, ಕಂದಾ ಬೇಡವೊ, ಮಣ್ಣಾಟ ಬೇಡವೊ ಎಂಬ ರಚನೆಯಲ್ಲಿ ಹೇಳುತ್ತಾರೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 2:04pm — mahesha

ಉ: ಮೂಗೇಟು

mahesha's picture

ಹಂಸಾನಂದಿ,

ನಮ್ಮ ಹಾಸನದ ಕಡೆ ಒಳಪೆಟ್ಟು ಬಳಕೆಯಲ್ಲಿ ಅಷ್ಟಿಲ್ಲ. ನಾನು ಈ ಮಾತನ್ನು ಮೊದಲ ಸರತಿ, ಸಂಗನರ ಬಾಯಲ್ಲೇ ಕೇಳಿದ್ದು.!

’ಬಾತುಕೊಂಡಿದೆ’, ’ಕೀವಿದೆ’, ’ಒಣಪೆಟ್ಟು’, ’ಹಸಿಗಾಯ’ ಇನ್ನು ಹಲವು ಒರೆಗಳ ನೆಪ್ಪಾದವು.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 10:32am — ಸಂಗನಗೌಡ

ಉ: ಮೂಗೇಟು

ಸಂಗನಗೌಡ's picture

ನೀವು ಕೊಟ್ಟಿರುವ ಕೊಂಡಿಯ ತಿಳಿವು ವಿಚಿತ್ರವಾಗಿದೆ. ಈ ಅರ್ಥ ಮೊದಲ ಸಲ ಕೇಳುತ್ತಿರುವದು. ಇದನ್ನವರು ಎಲ್ಲೋ ತಪ್ಪಾಗಿ ಕೊಟ್ಟಿರಲೂ ಬಹುದು. ಪೆಟ್ಟು ಮತ್ತು ಏಟುಗಳ ತಿಳಿವಿಗೆ ಹೆಚ್ಚಿನ ಬೇರೆತನವೇನೂ ಇಲ್ಲ. "ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು" ಎಂಬ ಗಾದೆನೇ ಇದೆ.
http://kannadakasturi.com/kasturiDictionary/start.asp ಈ ಕೊಂಡಿಯಲ್ಲಿ ಪೆಟ್ಟು(peTTu) ಒರೆಯನ್ನು ಹುಡುಕಿದಾಗ, 'ಮೂಕಪೆಟ್ಟು' ಎಂಬ ಒರೆ ಸಿಕ್ಕಿತು. ಮೂಕಪೆಟ್ಟು = ಮೂಕಏಟು. (ಅದು ಮೂಗುಏಟು ಅಲ್ಲ, ಮೂಕಏಟು, ಅಂದರೆ ಮೇಲು ನೋಟಕ್ಕೆ ಕಾಣದಿರುವ ಏಟು).
ನಮ್ಮ ಕಡೆ ಇಂತ ಪೆಟ್ಟುಗಳಿಗೆ ಒಳಪೆಟ್ಟು ಎಂದೇ ಕರೆಯುವುದು ರೂಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 2:00pm — mahesha

ಉ: ಮೂಗೇಟು

mahesha's picture

ಸಕ್ಕದದ ಮೂಕ ಕನ್ನಡದಲ್ಲಿ ಮೂಗ Smiling

ಮೂಗೇಟು:). ಅಂದರೆ

ಆ ಇನ್ನೊಂದು ಅರ್ತದ ’ಪೆಟ್ಟು’ ನನಗೆ ಗೊತ್ತು. ಅದರ ಬಳಕೆಯನ್ನು ಕೇಳಿದ್ದೇನೆ Smiling ಅದನ್ನು ಬಿಡಿಸಿ ಹೇಳಲು ಇಲ್ಲಿ ಹೇಳೆನು.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 11:01am — ಸಂಗನಗೌಡ

ಉ: ಮೂಗೇಟು

ಸಂಗನಗೌಡ's picture

ಏಟು, ಪೆಟ್ಟು ಇವುಗಳಲ್ಲಿ ಸಣ್ಣ ಬೇರೆತನ ಇದೆ, ಏಟು ಹಾಕೋದು, ಏಟು ಆಗೋದು ಹಿಂಗೆಲ್ಲಾ ಅಂತಾರೆ, ಆದ್ರೆ, ಏಟು ಮಾಡೋದು ಅನ್ನಲ್ಲಾ, ಪೆಟ್ಟು ಮಾಡೋದು ಅನಬಹುದು. "ನಾ ಕೊಟ್ಟ ಏಟಿನಿಂದ ಅವನಿಗೆ ಪೆಟ್ಟಾಯ್ತು" ಇಲ್ಲಿ ಏಟು-ಪೆಟ್ಟುಗಳ ನಡುವಿನ ದೂರವನ್ನು ಉಂಕಿಸಿ. ಬಡಗಣ(ಉತ್ತರ)ದ ಕಡೆ, ಏಟು ಅಂದರೆ ಹೊಡೆತ ಎಂಬ ತಿಳಿವಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 7:39pm — shivannakc

ಉ: ಮೂಗೇಟು

shivannakc's picture

ಅಯ್ಯೋ ಮಾಯ್ಸ...

ನಿನ್ನೆ ಇನ್ನು ಉಪ್ಪು ಸಾರಲ್ಲಿ ಮುದ್ದೆ ಉಂಡಿದ್ಯಲ್ಲೋ! ನಿನ್ ಮೂಗ್ ಆರಾಮಾಗೈತೇನು ಈಗ!

ಹುಸಾರು ಕಣ್ರೀ ಮಾಯ್ಸ... ನಿಮ್ ನೋವಲ್ಲಿ ನಮ್ಗೂ ಪಾಲಿದೆ... ಬೇಗ ಹುಸಾರಾಗಿ... ಕಲೆಗಳನ್ನ ವಾಸಿ ಮಾಡ್ಕಳಿ.

ಮೊದ್ಲ ಸಾಲು ತಮಾಸೆಗೆ... ಆದ್ರೆ... ಎರಡ್ನೇದು... ನಿಜವಾಗಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 8:55pm — mahesha

ಉ: ಮೂಗೇಟು

mahesha's picture

ಸಿವಣ್ಣ..

ನಿಮ್ ಪಿರೂತಿ ಕಂಡು ನನ್ ಕಣ್ಗೊಳ್ ತ್ವಾವ ಆದ್ವು, ನನ್ನಿ! Smiling.

ನಂಗೆ ಮುದ್ದೇ ಒಗ್ಗಕ್ಕಿಲ್ಲ. ಈ ಜಲುಮದಾಗೆ ಉಪ್ಪೆಸರು ತಿಂದೇ ಇಲ್ಲ Sad.

ಕಲೆ-ಗಿಲೆ ಏನು ಆಗ್ನಿಲ್ಲ. ಸುಮ್ಕೆ ಹಿಂಗೆ ಎಡುವುದಂಗೆ ಆಗೈತೆ ಆಟೇಯ, ನೀವ್ ಸ್ಯಾನೆ ತಲೆಗೆಡಿಸ್ಕೋಬ್ಯಾಡಿ ಕಣೇಳಿ Smiling!!

"ನಡೆಯೋನು ಬೀಳಲೇ ಬೇಕು" ಅಂತ ತಿಳಿದೋರು ಹೇಳವ್ರೆ! Smiling

ನನ್ನಿ!!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 11:31am — shivannakc

ಉ: ಮೂಗೇಟು

shivannakc's picture

ಉಸ್ಸಪ್ಪಾ...! ನಂಗೀಗ ವಸಿ ಸಮಾಧಾನ ಆಯ್ತು.

ಆಪಾಟಿ ಏಟಾಗ್ಲಿಲ್ಲಾ ಅಂತ್ ತಿಳಿದು ಮನಸ್ ಹಗುರಾಯ್ತು.

ಸರಿ ಮತ್ತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 12:09pm — shivannakc

ಉ: ಮೂಗೇಟು

shivannakc's picture

ಪ್ರೀತಿಯ.... ಮಾಯ್ಸ...!

"ನಿಮ್ ಪಿರೂತಿ ಕಂಡು ನನ್ ಕಣ್ಗೊಳ್ ತ್ವಾವ ಆದ್ವು" ಅಂದಿದ್ದೀರಿ... ಸಲ್ಪ ಸಮಾಧಾನ ತಂದ್ಕೊಳ್ಳಿ.

ಮುದ್ದೆ-ಸಾರಿನ ವಿಸ್ಯ ಬಂದಿದ್ದು... ದುಃಖ ತೋಡ್ಕೋಳ್ಳಕ್ಕೆ ವರ್ತು ನೀವ್ ಉಂಡಿದ್ದೀರಿ ಅಂತಲ್ಲ. ಒಗ್ಗದೇ ಇರೋದನ್ನ ಬಲವಂತವಾಗಿ ಮಾಡೋದು ಒಳ್ಳೆದಲ್ಲ.

"ನಡೆಯೋನು ಬೀಳಲೇ ಬೇಕು" ಅನ್ನೋ ನಾಣ್ಣುಡಿ ಸಮಂಜಸವಾಗಿದೆ.

ನಿಮ್ ಆರೋಗ್ಯ ನಮಗೆ ಮುಖ್ಯ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 12:14pm — mahesha

ಉ: ಮೂಗೇಟು

mahesha's picture

ನಲ್ಮೆಯ ಸಿವಣ್ಣ!

ನಾನ್ ಸಂದಾಕೆ ಅವ್ನಿ. ನನ್ ಕಾಲೂ ಸಂದಾಕೈತೆ. ಮುದ್ದೆ-ಸಾರು ಅಂದ್ರೆ ನಮ್ ಮನೇಲಿ ಎಲ್ರುಗೂ ಹಿಡಸ್ತೈತೆ, ನಂಗೇ ಆಗಕ್ಕಿಲ್ಲ ಆಟೇ.
ನನ್ ಮ್ಯಾಲೆ ಈಟೋ ಅಕ್ಕರೆ ತೋರಿಸ್ದಕ್ಕೆ ನನ್ನಿ!!

ಒಳ್ಳೇದಾಗಲಿ, ಸಂದಾಕಿರಿ.

"ಪಿರೂತಿ ಜಾಸ್ತಿಯಾದ್ರೆ, ಗುಮಾನಿ ಬತ್ತೈತೆ" ಅಂತ ದೊಡ್ಡೋರು ಹೇಳವ್ರೆ.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • firefox tab, keyboard tabಗಳಿಗೆ ಕನ್ನಡ ಪದಗಳು
  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • ಅಚ್ಚಕನ್ನಡದ ನೆಚ್ಚನ ಒರೆಗಳು
  • ಆ ಅಕೋ, ಅಗೋ, ಅದೋ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 594 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator