Avestan ವೇದ-ಭಾಷೆಯ ಮಾತೃಭಾಷೆ.
http://en.wikipedia.org/wiki/Avestan
ಸಂಸ್ಕೃತದ ತಾಯಿಯನ್ನು ಹುಡುಕಿಕೊಂಡು ಹೊರಟ ನಮಗೆ, ಕೊನೆಗೂ ಆ ಹೆತ್ತಾಯಿ ಸಿಕ್ಕಳು!
ಸಂಸ್ಕೃತದಲ್ಲಿ ಎರಡು ಬಗೆಗಳಿವೆ
http://en.wikipedia.org/wiki/Sanskrit
೧) ವೇದ-ಭಾಷೆ (ಇದನ್ನು ವೇದ-ಸಂಸ್ಕೃತವೆಂದು ಕೆಲವರು ಕರೆದರೂ ಅದು ಸರಿಯಿಲ್ಲವೆಂಬ ಮಾತೂ ಇದೆ.) ಇದು ಸಂಸ್ಕೃತದ ತಾಯಿಯಂತೆ. ಇದು ಎಂದು ಬಳಕೆಯಲ್ಲಿತ್ತು ಎಂದು ಹೇಳುವದುಕ್ಕೆ ಆಗದೇ, ದೊಡ್ಡ ಗೊಂದಲವಾಗಿದೆ.
೨) ಸಂಸ್ಕೃತ ಇಲ್ವೆ ಶಾಸ್ತ್ರೀಯ ಸಂಸ್ಕೃತ ಇಲ್ವೇ ಪಾಣಿನಿಯ ಸಂಸ್ಕೃತ. ( ಬರೀ ಇದನ್ನು ಸಂಸ್ಕೃತ ಎನ್ನಬೇಕು ಎಂಬ ವಾದವಿದೆ ). ಪಾಣಿನಿಯ ಕಾಲವನ್ನು 520–460 BC ಎಂದು ಹಲವರು ಊಹೆ ಮಾಡಿದ್ದಾರೆ. (ಇದರ ಬಗ್ಗೂ ಇನ್ನೂ ಗೊಂದಲ ಮುಗಿದಿಲ್ಲ ).
http://en.wikipedia.org/wiki/P%C4%81%E1%B9%87ini
ಈ ವೇದ-ಭಾಷೆಯ ತಾಯಿಯು, ಮತ್ತು ಹಳೆ-ಪಾರಸೀ/ಇರಾನೀ ಭಾಷೆಯ ತಾಯಿಯೂ ಒಂದೇ ಎಂದು ಪುರಾವೆಗಳು ಹೇಳುತ್ತವಂತೆ. ಆ ತಾಯಿಯ ಹೆಸರು "Avestan".
ಇದು Indo-Aryan, ನುಡಿಗುಂಪಿನಲ್ಲಿ ಬಲು ಹಳೆಯದಾವುಗಳಲ್ಲೊಂದು. ಇದು Kurd(ತುರ್ಕಿ, ಇರಾಕ್ ಅಲ್ಲಿ ಇರುವ ಒಂದು ಗುಂಪು) ನುಡಿಗೆ ಹತ್ತಿರವಾಗಿದೆಯಂತೆ.
ಇದನ್ನೇ proto-pesian-sanskrit, proto-iranian, proto-vedic language ಅಂತ ಕರೆಯುವರು, ಇಲ್ವೇ ಅದಕ್ಕೆ ಹತ್ತಿರವಾಗಿ ಬಳಸುವರು.
ನಮ್ಮ ಕನ್ನಡ ಮತ್ತು ತಮಿಳು ಇವಕ್ಕೆ ಒಂದೇ ತಾಯಿ. ಅದನ್ನು proto-kannada-tamil-south-dravidian ಎಂದು ಕರೆಯುವುರು.
http://ccat.sas.upenn.edu/~haroldfs/sars238/shortencybrit.html


- mahesha ರವರ ಬ್ಲಾಗ್
- Login or register to post comments
- 482 hits
- Email this blog





RSS:
ಪ್ರತಿಕ್ರಿಯೆಗಳು
ಉ: Avestan ವೇದ-ಭಾಷೆಯ ಮಾತೃಭಾಷೆ.
ಮಹೇಶರೇ,
ನೀವು ಬರೆದಿರುವುದು ಅರೆಸತ್ಯ ಮಾತ್ರ.
ವೇದ ಭಾಷೆಯ ತಾಯಿ, ಮತ್ತು ಅವೆಸ್ಟನ್ ತಾಯಿ ಎರಡೂ ಒಂದೇ ಎಂದು ಹೇಳಿದರೆ ನಿಜ ಸಂಗತಿಗೆ ಇನ್ನೂ ಹತ್ತಿರವಾಗುತ್ತದೆ. ಅವೆಸ್ಟನ್ ಮತ್ತು ವೇದಕಾಲದ ಸಂಸ್ಕೃತ ಒಂದೇ ಕಾಲದಲ್ಲಿ ಬೆಳೆದು ಬಂದವು. ಝಾರತುಷ್ಟ್ರ ಇದ್ದದ್ದು ಸುಮಾರು ಬುದ್ದನ ಕಾಲದಲ್ಲಿ, ಎಂದರೆ, ಆವೆಸ್ಟನ್ classical ಸಂಸ್ಕೃತದ ಕಾಲದಲ್ಲಿನ್ನೂ ಪ್ರಚಲಿತವಾದಿತ್ತು.
ಅವೆಸ್ಟನ್ ಮತ್ತು ಸಂಸ್ಕೃತ ಎರಡಕ್ಕೂ ಮೂಲ ಇನ್ನೂ ಮೊದಲಿನ pre-historic proto-indo-iranian ಇದ್ದಿರಬೇಕು. ನಿಮ್ಮ ಮಾತಿನ ಪ್ರಕಾರ ಒಂದರಿಂದ ಒಂದು ಹುಟ್ಟಿದಂತಾಗುತ್ತದೆ. ಅದು ಸರಿ ಅಲ್ಲ. ಇದಕ್ಕೆ ಇನ್ನೊಂದು parallel ಕೊಡಬೇಕಾದರೆ - ಕನ್ನಡ ತಮಿಳಿನಿಂದ ಬಂದಿತು ಎಂದು ಹೇಳಿದರೆ ಹೇಗಾಗುತ್ತದೋ, ಹಾಗೆ. ತಮಿಳಿದ್ದಷ್ಟು ಕಾಲವೂ ಕನ್ನಡವೂ ಇತ್ತು ಎನ್ನುವಾದ, ಒಂದರಿಂದ ಒಂದು ಬಂತು ಎಂಬುದನ್ನು ಬಿಟ್ಟು ಇವೆರಡಕ್ಕೂ ಮೂಲ ಇನ್ನೂ ಹಳೆಯ ಭಾಷೆಯೊಂದು ಎಂದು ಹೇಳದೇ ಬೇರೆ ದಾರಿಯಿಲ್ಲ. ಅವೆಸ್ಟನ್ ಮತ್ತು ವೇದ ಸಂಸ್ಕೃತಗಳದ್ದೂ ಇಂತೇ.
-ಹಂಸಾನಂದಿ
ಉ: Avestan ವೇದ-ಭಾಷೆಯ ಮಾತೃಭಾಷೆ.
ಸರಿ..
ಈ ಕುರಿತ ಲಿಂಕುಗಳನ್ನು ಈಯ್ಯಿರಿ. ಓದಿಕೊಳ್ಳುವೆನು.!!
"ಅವೆಸ್ಟನ್ ಮತ್ತು ಸಂಸ್ಕೃತ ಎರಡಕ್ಕೂ ಮೂಲ ಇನ್ನೂ ಮೊದಲಿನ pre-historic proto-indo-iranian ಇದ್ದಿರಬೇಕು." ನೋಡೋಣ! ಇದರ ಬಗ್ಗೆ ಹೆಚ್ಚು ಓದೋಣ.
ಆದರೆ ಒಂದು ನಿಕ್ಕುವ proto-indo-iranian ಇಂದ ವೇದ-ನುಡಿ, ವೇದ-ನುಡಿಯಿಂದ ಸಕ್ಕದ. ಸಕ್ಕದ ಬೇರು ಏನಿದ್ದರೂ ಅಪಗಾನಿಸ್ತಾನ ಮತ್ತು ಇರಾನ್ ಸುತ್ತ ಇದೆ. ಇಲ್ವೇ ಇನ್ನೂ ಪಡುವಣಕ್ಕೆ ಇರಾಕ್, ಕಡೆ ಹೋಗುವುದು.
ಮತ್ತು
ವೇದ-ನುಡಿ ಮತ್ತು ಅವೆಸ್ಟನ್ ನುಡುವೆ ಬಲು ಹತ್ತಿರದ ನಂಟಿರುವುದೂ ನಿಕ್ಕುವ!! ಈ ನೆಂಟು ಏಸು ಹತ್ತಿರವಿದೆ ಅಂತ ನೋಡೋಣ!!
ನನ್ನಿ!! ಒಳ್ಳೆಯ ಅರಿಕೆ!!
=========================================================
ಏಸು = http://dsal.uchicago.edu/cgi-bin/philologic/getobject.pl?c.1:1:2569.burr...
ಉ: Avestan ವೇದ-ಭಾಷೆಯ ಮಾತೃಭಾಷೆ.
ನಂತರ ಕೆಲವು ಕೊಂಡಿಗಳನ್ನುಕೊಡುವೆ. ವೇದದ ಭಾಷೆ ಈಗಿನ ರಾಜಾಸ್ತಾನ + ಪಂಜಾಬ್+ ಸಿಂದ್ ಗಳಲ್ಲಿಂದ (ಸಿಂಧೂ-ಸರಸ್ವತೀ-ಶತದ್ರು ನದಿ ಬಯಲು) ಬಂದಿತೆಂಬುದು ನನ್ನ ತಿಳುವಳಿಕೆ.
ಏಸು ಎಂಬುದಕ್ಕೆ ನೀವು ನಿಘಂಟುವನ್ನೆ ನೋಡಬೇಕಾಗಿಲ್ಲ
ಕೆಲವು ದಾಸರ ರಚನೆಗಳಲ್ಲಿ, ಕುಮಾರವ್ಯಾಸನಲ್ಲಿ ಇದು ಪ್ರಯೋಗವಾಗಿದೆ.
ಉದಾ: ಏಸು ದಿನಕೂ ನಿನ್ನ ಪಾದ ದಾಸನು ನಾನೇ ಎಂಬ ಸಾಲು ಪುರಂದರ ದಾಸರ ಇಂದು ನಿನ್ನ ಮೊರೆಯಹೊಕ್ಕೆ ವೆಂಕಟೇಶನೇ ಎನ್ನುವ ಪದದಲ್ಲಿದೆ
-ಹಂಸಾನಂದಿ
ಉ: Avestan ವೇದ-ಭಾಷೆಯ ಮಾತೃಭಾಷೆ.
ಹಂಸಾನಂದಿ ಅಯ್ಯ!
ನಿಮ್ಮ ಹಿಂದಿನ ಕಮೆಂಟಲ್ಲಿ "quote" ಸರಿಯಾಗಿ ಬಳಸದೇ, ಅದಕ್ಕೆ ಮರುನುಡಿಯಲು ಆಗುತ್ತಿಲ್ಲ.
ದಯವಿಟ್ಟು ಓದಲು, ಸರಕು ಕೊಡಿ, ಅವನ್ನು ಓದಿ ಹೇಳುವೆನು.
ಈಗಿನ ಓದಿನ ಮೇಲೆ, ವೇದ-ನುಡಿ ಸಿಂದು ಹೊಳೆ ಪಡುವಣದಿಂದಲೇ( ಇರಾನ್ ಅಪಗಾನ್ ) ಬಂದುದು, ವೇದದ ಮೊದಲು ಅಲ್ಲೇ ಆದುದು. ತರುವಾಯ ಆ ಮಂದಿಯ ವಲಸೆ ಗಂಗೆ, ಯಮುನೆಗಳ ಕಡೆ ಆಗಿದೆ.
========================
ಏಸು ಬಗ್ಗೆ
ನನ್ನಜ್ಜಿ ಒಂದು ಹಾಡು ಹೇಳುವರು ಅದರಲ್ಲಿ
"ಏಸು ಜನುಮ ಬಂದರೇನು, ದಾಸನಲ್ಲವೇನು ನಾನು..
...ನಾಶ ಮಾಡೋ ಆದಿ ಕೇಶವ" ( ಕನಕದಾಸರದು ಇರಬೇಕು ).
ಈ ಹಾಡು ನನಗೆ ಬಲು ನೆಜ್ಜಿನದು. ಈ ಪದವನ್ನು ಇಡಿಯಾಗಿ ತಟ್ಟನೆ ಸಿಕ್ಕರೆ ಹಾಕಿ ನನಗೆ ನೆರವಾಗುವುದು!!
ಉ: Avestan ವೇದ-ಭಾಷೆಯ ಮಾತೃಭಾಷೆ.
ನೆಜ್ಜಿನದು = ನೆಚ್ಚಿನದು ( ಇದು ತಮಿಳಲ್ಲ
), ಮನ್ನಿಸಿರಿ!!
ಉ: Avestan ವೇದ-ಭಾಷೆಯ ಮಾತೃಭಾಷೆ.
ಏಸು ಕಾಯಂಗಳ ಕಳೆದು ಎಂಬತ್ನಾಕು ಲಕ್ಷ
:ಗಪ್ ಚುಪ್:
ಜೀವರಾಶಿಯನ್ನು ದಾಟಿಬಂದ ಈ ಶರೀರ,
ತಾನಲ್ಲ ತನ್ನದಲ್ಲ, ಆಸೆ ಥರವಲ್ಲ, ಮುಂದೆ ಬಾಹೋದಲ್ಲ..
ದಾಸನಾಗು, ವಿಶೇಷನಾಗು..
............................
ಕಾಶಿ, ವಾರಣಾಸಿ, ಕಂಚಿ, ಕಾಳಹಸ್ತಿ, ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನು, ಅಲ್ಲಿ ಹೋದೇನು.
ದೋಷ ನಾಶ ಕೃಷ್ಣ ವೇಣಿ, ಗಂಗೆ ಗೋದಾವರಿ,
ಭವನಾಶಿ ತುಂಗಭದ್ರೆ ಯಮನೆವಾಸದಲ್ಲಿ, ಉಪವಾಸದಲ್ಲಿ,
ಮೀಸಲಾಗಿ ಮಿಂದು ಜಪತಪ ಹೋಮ ಹೇಮಗಳ
ಏಸು ಬಾರಿ ಮಾಡಿದರು ಫಲವೇನು, ಈ ಛಲವೇನು...
ದಾಸನಾಗು ವಿಶೇಷನಾಗು. ದಾಸನಾಗು ವಿಶೇಷನಾಗು.
ಉ: Avestan ವೇದ-ಭಾಷೆಯ ಮಾತೃಭಾಷೆ.
ಸುನಿಲ,
ಇದಲ್ಲ ನಾನು ಕೇಳಿದ ಕೀರ್ತನೆ.!
"ಅಚ್ಯತನೆ ನಿನ್ನ ಪಾದ..." ಹಿಂಗೆ ಏನೋ ಮೊದಲಾಗುವುದು!!
ಇರಲಿ, ಬಿಡು
ನನ್ನಿ!