23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!

July 27, 2007 - 9:54pm
mahesha
ಒಂದು ದರುಮದವರಲ್ಲಿ :) "ನಾನು ಹೀಗೊಂದು ತಪ್ಪು ಮಾಡಿಬಿಟ್ಟೆ" ಎಂದು ಹೋಗಿ ಅವರ ಗುರುಗಳ ಹತ್ರ ಹೇಳಿಕೊಳ್ಳೋ ಒಳ್ಳೇ ಆಚಾರ ಇದೆ. ಅವರಲ್ಲಿ ಇದಕ್ಕೆ ಒತ್ತೂ ಇದೆಯಂತೆ. ಕುವೆಂಪು ಅವರ ರಾಮಾಯಣ ದರ್ಶನಂ ಅಲ್ಲೂ "ಪಶ್ಚಾತಾಪವೇ ಪ್ರಾಯಶ್ಚಿತ್ತ" ಅಂತ ಬರುವುದಂತೆ, ಇದು ನಿಕ್ಕುವ ಗೊತ್ತಿಲ್ಲ. ಆದರೆ ನಮಗೆ ಈ ಗುಣದ ಕೊರತೆ ಇರುವುದಂತೂ ದಿಟ. ಇದು ನನಗೂ ಇದೆ! ನಮಗೆ ನೀನು ತಪ್ಪು ಅಂದರೆ, ನಮ್ಮ ಮೊದಲ ಪ್ರತಿಕ್ರಿಯೆ ಸಿಟ್ಟು, ಮುನಿಸು, ಇರುಸುಮುರುಸು, ಹೊರತು, ಹೇಳಿತ್ತಿರುವವರು ಏನು ಹೇಳುತ್ತಿದ್ದಾರೆ ಅನ್ನೋದು ಬಳಿಕವೇ ಎಣಿಸೋದು. ಹಲವು ಸರತಿ ನಮ್ಮ ತಪ್ಪು ನಮಗೆ ತಿಳಿಯುವುದೇ ಇಲ್ಲ, ಇಲ್ವೇ ತಿಳಿಯೋದು ಬಲು ತಡವಾಗಿ. ಇವೆಲ್ಲ ಯಾಕೆ, ಇದನ್ನು ಸರಿಪಡಿಸಲು ಹಲವು ಉಂಕುಗಳನ್ನು ನಡೆಸಿದ್ದೇನೆ. ನೋಡುಮ ಏಶ್ಟ ಜಸ ಸಿಗುವುದೆಂದು.!! ತಪ್ಪುಗಳು ಆಗುವುದಕ್ಕೆ ಓಸುಗರಗಳು ೧) ತಿಳಿವಳಿಕೆ ಇಲ್ಲದೇ ಕೆಲಸ ಮಾಡಿದ್ದರಿಂದ ೨) ಕೆಲಸ ಮಾಡುವಾಗ ಗಮನ ತಪ್ಪಿದ್ದರಿಂದ ಕೆಲಸ ಮಾಡುವಾಗ ಗಮನ ತಪ್ಪಿದ ತಪ್ಪು, ತಪ್ಪು ಅಂತ ಬೇಗನೇ ತಿಳಿದು ಹೋಗುವುದು. ಆದರೆ ತಿಳಿವಳಿಕೆ ಇಲ್ಲದೇ ಕೆಲಸ ಮಾಡಿದ್ದು ತಿಳಿಯುವುದು ತುಸು ಕಶ್ಟವೇ. ಯಾಕೆ ಅದು ಕಶ್ಟ ಅಂದರೆ, ನಮಗೆ ತಿಳಿವಳಿಕೆ ಇಲ್ಲ ಅಂತ ತಿಳಿಯೋದೇ ದೊಡ್ಡ ಸಂಗತಿ. ಈ ’ತಿಳಿವಳಿಕೆ’ ಅನ್ನೋದು ಇನ್ನೊಂದು ದೊಡ್ಡ ತರಲೆ. ತಿಳಿದಿದ್ದೇ ತಪ್ಪಾಗಿರಬಹುದಲ್ಲ. ನಾವು ಹಲವು ಸರತಿ ತಿಳಿಯೋದು ನಂಬಿಕೆಯ ಮೇಲೇ. ಯಾರನ್ನೋ ನಂಬಿಬಿಟ್ಟು, ಅವರು ಹೇಳಿದೆಲ್ಲಾ ’ತಿಳಿವು’ ಅಂತ ಮಾಡಿಕೊಂಡು, ತಪ್ಪು ತಪ್ಪ ತಿಳಿದುಕೊಂಡುಬಿಟ್ಟಿದ್ದರೆ. ಅಯ್ಯೋ ಶಿವನೇ!! ಇಂತಹ ತಪ್ಪು ’ತಿಳಿವು’ಗಳು ನಮ್ಮ ತಲೆಯಲ್ಲಿ ಎಶ್ಟು ತುಂಬಿದೆಯೋ, ಇದರಿಂದ ಮುಂದೆ ಎಶ್ಟು ತಪ್ಪುಗಳು ಆಗವುವೊ, ಅವೆಲ್ಲ ಹೇಗೆ ಸರಿಪಡಿಸೋದು? ಅವೆಲ್ಲ ಇವೆ ಅಂತ ಹೇಗೆ ಕಂಡು ಹಿಡಿಯೋದು. ಅಯ್ಯೋ!! ಹಾಗಂತ ಏನು ಮಾಡದೇ ಇರಲು ಆಗುತ್ತಾ? ಅದಕ್ಕೆ ತಪ್ಪಾಯ್ತು ಅಂತ ಒಪ್ಪಿಕೊಂಡರೇ, ಎಲ್ಲ ಮುಗಿಯಿತಲ್ಲ. ಒಂದು ದೊಡ್ಡಗುಣ ಗಳಿಸಿದಂತೂ ಆಯಿತಲ್ಲ!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by uniquesupri on
ನಿಮ್ಮ ಮಾತು ಒಪ್ಪತಕ್ಕದ್ದು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ಆದರೆ, ನೀವು ಉದಾಹರಿಸಿದಂತೆ ಕ್ರೈಸ್ತರ ತಪ್ಪೊಪ್ಪಿಗೆಗೂ ನಿಮ್ಮ ಬರಹದ ಆಶಯಕ್ಕೂ ಸಂಬಂಧವಿಲ್ಲ. ಅವರ ತಪ್ಪೊಪ್ಪಿಗೆಯ ’ಆಚರಣೆ’ ದೇವರಿಗೆ ನಿವೇದಿಸಿಕೊಳ್ಳುವಾಗಿನ ಪ್ರಕ್ರಿಯೆ. ನಿನ್ನದು ತಪ್ಪು ಎಂದು ಯಾರಾದರೂ ಹೇಳಿದರೆ ಅವರ ಪ್ರತಿಕ್ರಿಯೆಯೂ ಸಾಮಾನ್ಯರಂತೇ ಇರುತ್ತದೆ. ಇನ್ನೊಬ್ಬರು ನಮ್ಮ ತಪ್ಪನ್ನು ತೋರಿಸಿಕೊಟ್ಟಾಗ ಒಪ್ಪಿಕೊಳ್ಳುವ ಸೌಜನ್ಯ, ದೊಡ್ಡತನ ಅವರವರ ವ್ಯಕ್ತಿತ್ವವನ್ನು ಆಧರಿಸುತ್ತದೆ ಎಂಬುದು ನನ್ನ ಅಭಿಪ್ರಾಯ... _______________________ ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://uniquesupri.w...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಈಗ ಒಪ್ಪಿಗೆಯೋ? ನಾನು ತಪ್ಪು ತಿದ್ದಿಕೊಳ್ಳುದನ್ನು ಕಲಿಯುತ್ತಿದ್ದೇನೆ.!! :) ==================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
ನಮಗೆ ಗೊತ್ತಿಲ್ಲಾ ಅಂತ ಗೊತ್ತಾದರೆ ಅರ್ದ ಗೊತ್ತಾದಂಗೆ. ಮೇಲಿನದು ತಿಳಿಲಿಲ್ಲ ಅಂದರೆ, ಎನೂ ತೊಂದರೆ ಇಲ್ಲಾ, ಅದರ ಅರ್ದ ಆಗಲೇ ನಿಮಗೆ ತಿಳಿದಿದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.