ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › mahesha ರವರ ಬ್ಲಾಗ್

ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?

October 27, 2007 - 1:05pm — mahesha

ಮೊನ್ನೆ ಏನಾಯ್ತು ಗೊತ್ತಾ!? Smiling

ನಾವಯ್ವರು( ಯಾರೀ ಅಯ್ವರು.. ಅದು ಬೇಡ Smiling ) ಅಂಕಿತ ಹೊತ್ತಗೆಯಂಗಡಿಗೆ ಹೊಕ್ಕು, ಹಲಹೊತ್ತಗೆಗಳನ್ನು ಕೊಂಡೆವು. ಅದರಲ್ಲಿ ನಾ, ನನ್ನ ಮೆಚ್ಚುಬರಹಗಾರ ಶಂಕರ ಬಟ್ರ "ಕನ್ನಡ ನುಡಿ ನಡೆದು ಬಂದ ದಾರಿ" ಎಂಬ ಹೊತ್ತಗೆ ಕೊಂಡೆಂ. ಅದರ ಕೂಡೇ ಮತ್ತೊಂದು ಹೊತ್ತಗೆಯನ್ನೂ ಕೊಂಡೆನು...

ಆದ್ರೀಗಿಲ್ಲಿ "ಕನ್ನಡ ನುಡಿ ನಡೆದು ಬಂದ ದಾರಿ" ಈ ಹೊತ್ತಗೆ ಬಗ್ಗೆ ತುಸು ಹೇಳ್ತಿನಿ. ಅದನ್ನಿನೊದಿ ಮುಗಿಸಿಲ್ಲ. ಆದ್ರೆ ಮೊದಲೆರಡು ಅದ್ಯಾಯಗಳಲ್ಲೇ ಹಲ-ಹಲವು ಸೋಜಿಗದ ಸಂಗತಿಗಳ ಬಂದು ಹೋದವು.

ಅವಗಳಲ್ಲಿ

೧) ಮುಗಿತಾಯ ಅಂದ್ರೆ ಮುಗಿಯುವಿಕೆ.. ಇದೇ ಮುಕ್ತಾಯವಾಗಿದೆಯೇ ಎಂಬ ಹುಳ ನನ್ನ ತಲೆ ಹತ್ತಿದೆ.
ಹಾಗೇ ಮುಗಿ/ಮುಕಿ( ದ್ರಾವಿಡ ) ಬೇರಿನಿಂದಲೇ ಮುಕ್ತಿಯೂ ಬಂದಿದೆಯೇ ಅನ್ನಿಸುತ್ತಿದೆ.

ನೋಡಿ.. ಮುಗಿ ಅನ್ನೋ ಕನ್ನಡ ಬೇರು( ಇದ್ದು ಕನ್ನಡದ್ದೇ ಅನ್ನೋದಕ್ಕೆ ಯಾವ ಐಬಿಲ್ಲ ) ಬಲು ಮಾಮೂಲಿಯಾದುದು ನಮಗೆ. ಆದ್ರಿದು ಸಕ್ಕದದಕ್ಕೆ ಹೋಗೊಂದು ದೊಡ್ಡ ಅರಿತ ಪಡೆದಿದೆಯೆಂದು ನನ್ನ ಲೆಕ್ಕ.( ನೋಡಿ, ಹೀಗೇನೇನೇಯ ನಮ್ಮ ಕನ್ನಡದಲ್ಲೂ ಆಗವೆ. ಸಕ್ಕದದ 'ಆಂದೋಲನ'(ಬೀಸುವುದು, ತೂಗುವುದು), ನಮ್ಮ ಕನ್ನಡದಲ್ಲಿ ಬಲು ದೊಡ್ಡ ಅರಿತ ಪಡೆದಿದೆ )

೨) ಮಾಯ( ಮಾಸ್/ಮಾಯಿ )
ಕನ್ನಡದಲ್ಲಿ ಮಾಸು/ಮಾಯಿ ಅಂದ್ರೇನು? ಮಾಯವಾಗು, ಕಾಣೆಯಾಗು, ಇಲ್ಲದೇ ಹೋಗು....
( ಮಾಯ್ ದ್ರಾವಿಡ ಬೇರು?, ತಮಿಳಲ್ಲಿ ಉಯಿರು, ಕನ್ನಡದಲ್ಲಿ ಉಸಿರು; ತಮಿಳಲ್ಲಿ ವಯಿರು, ಕನ್ನಡದಲ್ಲಿ ಬಸಿರು Smiling ),

ಮಾದರಿ, ಗಾಯ-ಮಾಯಿ/ಮಾಸು ಅಂದ್ರೆ ಗಾಯವು ವಾಸಿಯಾಗಿ, ಅದರ ಕಲೆಹೋಗು.

ಮಾಯ್/ಮಾಸ್ ಸಕ್ಕದಕ್ಕೆ ಹೋಗಿ "ಮಾಯ" ಎಂಬ ದೊಡ್ಡ ಅರಿತ ಪಡೆದಿದೆ. ( ನೋಡಿ, "ಮಾಯ"ದ ಬಗ್ಗೆ ಸಿಕ್ಕಾಪಟ್ಟೆ ಬರೆದವರು ನಮ್ಮ ತೆಂಕಣ(ದ್ರಾವಿಡ ನುಡಿಯ) ಶಂಕರಾಚಾರ್ಯರು ಅನ್ನೋದು ಕಾಗೆಲೆಕ್ಕ(ಕಾಕತಾಳೀಯ) ಇರಬೋದು ).

ಅದೂ ಅಲ್ಲದೇ ನಮ್ಮ ತೆಂಕಣರು ಮಾಯಮಂತ್ರದಲ್ಲಿ ಎತ್ತಿದಗೈ. ( ಕನ್ನಡಿಗರನ್ನು ಬಲು ಮಾಯಮಂತ್ರದವರು, ಕನ್ನಡ ಅಂದ್ರೆ ಕಪ್ಪುನುಡಿ, ಮಾಯಮಂತ್ರ ಬಾಶೆ ಅಂತ ನಂಬಿಕೆ ಇದೆಯಂತೆ )

ದಯವಿಟ್ಟು ಗಮನಿಸಿ.. ( ಮುಕ್ತಿ, ಮಾಯ ಇವು ಸಕ್ಕದದ್ದು ಅಲ್ಲವೇ ಅಲ್ಲ.. ಎಂದು ಹೇಳ್ತಿಲ್ಲ.. ಕನ್ನಡ/ದ್ರಾವಿಡದಿಂದ ಹೋಗಿರಲಿಕ್ಕೂ ಸಾಕು )

೩) ಕನ್ನಡಲ್ಲಿ ಎರಡು 'ಅ'ಗಳಿವೆ, ಮೂರು 'ಎ'ಗಳಿವೆ.
ಏನಂಗಂದ್ರೆ?

ತುಸು ನೀವೇ ಓದಿ ನೋಡಿ..

ಗುಲಬರ್ಗದವರು ಕತ್ತಿ ಅಂದ್ರೆ
೧) ಕತ್ತಿ, ಬಾಳ್, ಚಾಕು
೨) ಕತ್ತೆ

ಎಂಬೆರಡೆರಡರಿತಗಳ ಬರುವುವಂತೆ. ಆದ್ರವರು ಇವೆರಡನ್ನು ಬೇರೆಬೇರಾಗುಲಿದು ಬೇರೆತನಗಳಂನು ತೋರುವರಂತೆ.

ಕತ್ತಿ(ಚಾಕು) ಅಂದಾಗ 'ಕ'ಅಲ್ಲಿರುವ 'ಅ' ಬೇರೆ, ಕತ್ತಿ(ಕತ್ತೆ) ಅಂದಾಗ 'ಕ' ಅಲ್ಲಿರುವ 'ಅ' ಬೇರೆ.

ಹಾಗೆ ಬಡಗಗನ್ನಡದಲ್ಲಿ ಮೂರು 'ಎ'ಗಳಿವೆಯಂತೆ. 'ಬೇ' ಎಂಬೊರೆಗೆ, ಅದರಲ್ಲಿ ಬರುವ ಯಾವ 'ಎ' ಎಂಬುದರ ಮೇಲೆ ಬೇರೆ ಬೇರೆ ಅರಿತಗಳಿವೆಯಂತೆ.

ಇನ್ನೋ ಸಕ್ಕತಾದ ಸಂಗತಿಗಳವೆ.. ಹುರುಪಿರೋರು ಓದ್ರಿ... ವಿಶೇಶಗಳನ್ನು ನಮಗೂ ಹೇಳ್ರಿ.

ಸರಿ.., ಮಿಕ್ಕಿದ್ದು, ಮುಂದೆ...

ನನ್ನಿ!

  • ಮಹೇಶ
~.~
  • mahesha ರವರ ಬ್ಲಾಗ್
  • Login or register to post comments
  • 426 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 27, 2007 - 6:10pm — savithru

ಉ: ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?

savithru's picture

ಮುಕ್ತಿ, ಸಮಾಧಿ,ಮೋಕ್ಷ,ನಿರ್ವಾಣ, ಬಯಲು, ಐಕ್ಯ,....
ಎಲ್ಲ ಒಂದೇ ಇರಬಹುದೇನೋ?! ಗೊತ್ತಿಲ್ಲ...

ಅದರೂ ಎಲ್ಲ ಪದಗಳು ಒಂದನ್ನೇ ಸೂಚಿಸುವ ಬೇರೆ ಬೇರೆ ಸಂಸ್ಕೃತಿ / ಮಾರ್ಗದ ಪದಗಳು.
ನಾನು ಇದುವರೆಗೂ ಮುಕ್ತಿ ಪದವು ಮೋಕ್ಷ ಪದದ ಕನ್ನಡ ಸಮಾನಾರ್ಥಕ ಪದ ಎಂದುಕೊಂಡಿದ್ದೆ. ( ಅಂದರೆ ಸಂಸ್ಕೃತದಲ್ಲಿ ಬಳಕೆಯಿಲ್ಲ, ಕನ್ನಡ ದಲ್ಲಿ ( ಅತ್ವ ದ್ರಾವಿಡ ನುಡಿಯಲ್ಲಿ ) ಮಾತ್ರ ಬಳಕೆಯಲ್ಲಿದೆ ಅಂದುಕೊಂಡಿದ್ದೆ. ಇದು ನಿಜವಿರಬಹುದು. ಅದು ನಮ್ಮ ನುಡಿಯ ಪದವೇ ಅಂತ ನನ್ನ ಅನಿಸಿಕೆ.

ಸಂಸ್ಕೃತದಲ್ಲಿ ಸಮಾಧಿ (ಪತಂಜಲಿ ಯೋಗ ಮಾರ್ಗ) ಮತ್ತು ಮೋಕ್ಷ ( ವೇದಾಂತ ಮಾರ್ಗ) ದ ಬಳಕೆಯೇ ಹೆಚ್ಚು. ಮುಕ್ತಿ ಬಳಕೆ ಇದೆ ಎನ್ನುವುದರ ಬಗ್ಗೆ ಸ್ವಲ್ಪ ಅನುಮಾನ!. ಇದ್ದರೂ ಅದು ಇಲ್ಲಿಂದ ಹೋದುದೆ!

ಮುಕ್ತಿಗೆ ಪಕ್ಕ ಕನ್ನಡ ದ ಪದ "ಬಯಲು".

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 1:26pm — shreekant.mishrikoti

ಉ: ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?

shreekant.mishrikoti's picture

ಮುಕ್ತಾಯ ಮುಗಿ , ಮುಗಿತಾಯ ದಿಂದ ಬಂದಿರಬಹುದು .
ಆದರೆ
ಮುಕ್ತಿಗೂ ... ಮುಗಿ ಶಬ್ದಕ್ಕೂ ಸಂಬಂಧವಿಲ್ಲ - ಅರ್ಥದಲ್ಲೂ ಕೂಡ
ಮುಕ್ತಿ - ಸಂಸ್ಕೃತದ ಮುಂಚ್ ಧಾತುವಿನಿಂದ ಬಂದದ್ದು . ಮುಂಚ್ - ಬಿಡು , ಮುಕ್ತಿ = ಬಿಡುಗಡೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 2:53pm — mahesha

ಉ: ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?

mahesha's picture

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 10:17am — kannadakanda

ಉ: ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?

kannadakanda's picture

ಶ್ರೀಕಾಂತ ಮಿಶ್ರಿಕೋಟಿಯವರು ಹೇೞುವಂತೆ ಕನ್ನಡ ಮುಕ್ತಾಯ/ಮುಗಿತಾಯದ ಮುಗಿ ಬೇಱೆ. ಮುಕ್ತಿಯ ಬೇರು ಬೇಱೆ. ಮುಕ್ತಿಯ ಬೇರು ಮುಚ್‍ ಧಾತುವಿನ ಕ್ತಿನ್ನಂತ. ಸಂಸ್ಕೃತದ ಮುಚ್=ಬಿಡು. ಕನ್ನಡದ ಮುಗಿ=ಮುಚ್ಚು, ಆವರಿಸು (ಮುಗಿಬೀೞು=ಮೈಯನ್ನೆಲ್ಲ ಮುಚ್ಚುವಂತೆ ಮುಗಿಬೀೞು) ಕೈಮುಗಿ=ಎರಡು ಕೈಗಳನ್ನು ಮುಚ್ಚು. ಮುಕ್ತಾಯ= ಪರದೆ ಮುಗಿಬೀೞುವುದಱಿಂದ ನಾಟಕ/ಸಿನಿಮಾದ ಕೊನೆಯಾಗಿದೆ ಎಂಬುದಾಗಿ ಸೂಚ್ಯಾರ್ಥವೇ ಹೊಱತು ಒಂದು ವಿಷಯದ ಕೊನೆ ಎಂದು ನೇರ ಅರ್ಥವಲ್ಲ. ಈ ಪದ ಬೞಕೆಯಾಗಿರುವ ಇತಿಹಾಸವನ್ನು ನೋಡಿ ನಿರ್ಧಾರಕ್ಕೆ ಬರುವುದು ಒಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
  • ಕನ್ನಡ ಎಲ್ಲಿದೆ... ?
  • ಕೊಳ್ ಮತ್ತು (ಉ)ತ್ತಾ ಏನು ಎಂತು
  • ಕನ್ನಡದ ಬಗ್ಗೆ ಹತ್ತು ಕಣಸುಗಳು
  • ಎಲರ್‍-ದ್ರಾವಿಡ Air-Dravida
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 101 ಅತಿಥಿಗಳು ಆನ್ಲೈನ್ ಇರುವರು.


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator