ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › mahesha ರವರ ಬ್ಲಾಗ್

ಗುಪ್ತಗಾಮಿನಿ ಶಾಲ್ಮಲಾ

May 30, 2008 - 9:16am — mahesha


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೇ ಮಾಡಿ
ಒಳಗೊಳಗೆ ಕೊರೆಯುವವಳು
ಸದಾ
ಗುಪ್ತಗಾಮಿನಿ ನನ್ನ ಶಾಲ್ಮಲಾ

ಮುಂದೆ .. ಬರೆಯಿರಿ..

  • ಭಾವಗೀತೆ
~.~
  • mahesha ರವರ ಬ್ಲಾಗ್
  • Login or register to post comments
  • 698 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2008 - 10:54am — pallavi.dharwad

ಉ: ಗುಪ್ತಗಾಮಿನಿ ಶಾಲ್ಮಲಾ

pallavi.dharwad's picture

’ಚಂಪಾ’ (ಚಂದ್ರಶೇಖರ ಪಾಟೀಲ) ಕವನ!

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:02am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

ಪಲ್ಲವೀ

ಇದು ಚಂಪಾ ಬರೆದಿದ್ದಾ?

ನುಡಿ ಬರೆಯಿರಿ.. ನನಗೆ ಅಶ್ವತ್ ಅವರ ಉಲಿಕೆ ಕೆಲವು ಕಡೆ ಅಱಿಯಕ್ಕೆ ಆಗ್ತಿಲ್ಲ...
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:21am — pallavi.dharwad

ಉ: ಗುಪ್ತಗಾಮಿನಿ ಶಾಲ್ಮಲಾ

pallavi.dharwad's picture

ಕೊಂಚ ಸಮಯ ಕೊಡಿ
!
- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:23am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

ಹರ್ಶ ಹಾಕಿದ್ದಾರೆ! ನೋಡಿ!

ರೀ ನಿಮ್ಮ ಶಾಲ್ಮಲೆಯ ಚಿತ್ರ ತೋರಿಸಿ.. ಬೆಳಗಿಂದ ಈ ಹಾಡು ಕೇಳೀ ಕೇಳೀ ಏನೋ ಕಲ್ಪನಾಚಿತ್ರಗಳು ನನ್ನ ತಲೆಯಲ್ಲಿ ತುಂಬಿಕೊಂಡಿದೆ. Smiling

ಹುಚ್ಚು ಹಿಡಿಸೋ ಹಾಡು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 1:55pm — harshab

ಉ: ಗುಪ್ತಗಾಮಿನಿ ಶಾಲ್ಮಲಾ

harshab's picture

ಮಹೇಶ್,
ನಾನು ಸುಮಾರು ೬ ವರ್ಷಗಳಿಂದ ಈ ಹಾಡನ್ನ ಕೇಳ್ತಾ ಇದೀನಿ. ನಿಜಕ್ಕೂ ಸಕ್ಕತ್ ಹಾಡು, 'ಶ್ಯಾಲ್ಮಲ' ಎಂತಹ unique ಹೆಸ್ರಲ್ವಾ..?. ಈ ಹಾಡು ಕೇಳಿನೆ, ನಾನು ಅಶ್ವಥ್ ಅವರ ಅಭಿಮಾನಿ ಆಗಿದ್ದು, ಅವ್ರೇ ಹಾಡಲಿ ಅಂತ ಬರ್ದಿದ್ದು ಅನ್ಸುತ್ತೆ. ಆದ್ರೆ, 'ಚಂಪಾ'ರವರು ಅಂತಹ ಹಾಡು ಇತ್ತೀಚಿಗೆ ಬರಿತಾ ಇಲ್ವಲ್ಲಾ(?) ಅಂತ ಬೇಜಾರಾಗ್ತಿದೆ.
ಕನ್ನಡದಲ್ಲಿ ಇನ್ನು ಸಖ-ಸಖತ್ ಭಾವಗೀತೆಗಳಿವೆ ಮಹೇಶ್......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 2:09pm — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

೧) ನನಗೆ ಸಾಲಿನ ನಡುವೆ/ಕೊನೆಯಲ್ಲಿ ಹೆಸರು ಕರೆಯೋರು ಹಿಡಿಸ್ತಾರೆ...
"ಬಾವಗೀತೆಗಳಿವೆ ಮಹೇಶ್.." ನನ್ನಿ ರೀ..

ನನಗೆ ಬಾವಹಾಡುಗಳ ಪರಿಚಯ ಮಾಡಿಸಿ.. ನಿಮ್ಮ ನೆಚ್ಚಿನವನ್ನು ಹಂಚಿಕೊಳ್ಳಿರಿ....

ಈ ಹಾಡು ಕೇಳಿ ನಾನು ಇವೊತ್ತು ಒಬ್ಬರ ಹತ್ತಿರ ವಾದ ಮಾಡಬಾರದು ಅಂತ ಆಣೆ ಮಾಡಿದ್ದೀನಿ, ಸವಿತೃ ಬಿಟ್ಟು Smiling!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 6:11pm — ಸಂಗನಗೌಡ

ಉ: ಗುಪ್ತಗಾಮಿನಿ ಶಾಲ್ಮಲಾ

ಸಂಗನಗೌಡ's picture

ಹರ್ಷ,
ನಾನ್ ಕೂಡ ಕೆಲ ಅಶ್ವತ್ ಹಾಡುಗಳನ್ನು ವರುಶಗಳಿಂದ ಕೇಳ್‍ತಿದೀನಿ..

"ಮೌನ ತಬ್ಬಿತು ನೆಲವ, ಚುಂಬಿಣಿ, ಪುಳಕಕೊಂಡಿತು ಧಾರಿಣಿ,
ನೋಡಿ ನಾಚಿತು ಬಾನು, ಸೇರಿತು ಕೆಂಪ ಸಂಜೆಯ ಕದಪಲ್ಲಿ(?),

ಹಕ್ಕಿಗೊರಳಿನ ಸುರತಗಾನಕೆ, ಬಿಗಿಯುನಸುವೇ ಸಡಿಲಿತು,
ಬೆಚ್ಚ ಬೆಚ್ಚನೆ ಉಸಿರಿನಂದದಿ, ಗಾಳಿ ಮೆಲ್ಲನೆ ತೆವಳಿತು.

ಮೌನ ತಬ್ಬಿತು ನೆಲವ, ಚುಂಬಿನಿ, ಪುಳಕೊಂಡಿತು ಧಾರಿಣಿ.

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು,
ನೆಲವು ತಣಿಯಿತು, ಬೆವರು ಹಣಿಯಿತು, ಭಾಷ್ಪ ನೆನೆಸಿತು ಹುಲ್ಲನು.

ಮೌನ ತಬ್ಬಿತು....

ಮೌನ ಉರುಳಿತು, ಹೊರಳಿತೆದ್ದಿತು, ಗಾಳಿ ಭೋರನೆ ಬೀಸಿತು,
ತೆಂಗು ಗರಿಗಳ ಚಾಮರಕೆ, ಹಾ!! ಎಂದು ಮೌನವು ಮಲಗಿತು."

ಮತ್ತು ಇನ್ನೊಂದು ಹಾಡು...

ಆಕಾಶದ ನೀಲಿಯಲ್ಲಿ, ಚಂದ್ರ, ತಾರೆ, ತೊಟ್ಟಿಲಲ್ಲಿ,
ಬೆಳಕನಿಟ್ಟು ತೂಗಿದಾಕೆ, ಬೆಳಕನಿಟ್ಟು ತೂಗಿದಾಕೆ.
ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಸ್ಟೇ ಸಾಕೆ?

---
---

ರತ್ನಮಾಲ ಪ್ರಕಾಶ್,.. ಹಲವು ಹಾಡುಗಾರರು.,, ಸಿಂಪ್ಲಿ ಸಕ್ಕತ್..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:12am — harshab

ಉ: ಗುಪ್ತಗಾಮಿನಿ ಶಾಲ್ಮಲಾ

harshab's picture

ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು,
ತುಟಿಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು,
ಸದಾ....... ತಪ್ತಕಾಮಿನಿ
ನನ್ನ ಶ್ಯಾಲ್ಮಲ

ಭೂಗರ್ಭದದ ಮೌನದಲ್ಲಿ
ಧುಂ ಎನುತ ಬಳಕುವವಳು
ಅರಿವಿಲ್ಲದೆ ಮೈಯ ತುಂಬಿ
ಕನಸಿನಲ್ಲಿ ತುಳುಕುವವಳು
ಸದಾ........ ಸುಪ್ತಮೋಹಿನಿ
ನನ್ನ ಶ್ಯಾಲ್ಮಲ

ನನ್ನ ಬದುಕ ಭುವನೇಶ್ವರಿ, ನನ್ನ ಶ್ಯಾಲ್ಮಲ ,
ನನ್ನ ಹೃದಯ ರಾಜೇಶ್ವರಿ, ನನ್ನ ಶ್ಯಾಲ್ಮಲ ,
ಸದಾ...... ಗುಪ್ತಗಾಮಿನಿ ನನ್ನ ಶ್ಯಾಲ್ಮಲ ,
ಸದಾ...... ತಪ್ತಕಾಮಿನಿ ನನ್ನ ಶ್ಯಾಲ್ಮಲ ,
ಸದಾ...... ಸುಪ್ತಮೋಹಿನಿ ನನ್ನ ಶ್ಯಾಲ್ಮಲ ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:15am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

ಗುಪ್ತಗಾಮಿನಿ, ತಪ್ತ ಕಾಮಿನಿ, ಸುಪ್ತಮೋಹಿನಿ .. ಯಾರು ರೀ ಇದು..

ಶಾಲ್ಮಲಾ ಅಂತಾ ಸೆಕ್ಸಿ ಹೊಳೆಯಾ?

ಸಕ್ಕತ್ ಬಣ್ಣನೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:23am — savithru

ಉ: ಗುಪ್ತಗಾಮಿನಿ ಶಾಲ್ಮಲಾ

savithru's picture

ಅಯ್ಯೋ ಮಹೇಶ..

ಈ ಕವಿಗಳೇ ಹಂಗೆ... ಎಲ್ಲಿ ಏನು ಕಾಣ್ತಾರೋ ಅವರಿಗೇ ಕೆಲವೊಮ್ಮೆ ಗೊತ್ತಿರಲ್ಲ.

ಎಲ್ಲೋ ಇರ್ತಾರೆ..ಮರು ಕ್ಷಣಕ್ಕೆ ಮತ್ತೆಲ್ಲಿಗೋ ಹಾರ್ತಾರೆ.
ಏನೋ ನೋಡ್ತಾ ಮತ್ತೆ ಯಾರ್ನೋ ನೆನೆಸಿಕೊಳ್ತಾರೆ.

ಶಾಲ್ಮಲೆಯನ್ನ ನೋಡ್ತಾ ನೋಡ್ತಾ ಅವ್ರ ಕನಸಿನ ಹುಡ್ಗಿ ನೆನಪಿಗೆ ಬಂದಿರಬೇಕು?!

ಅದಕ್ಕೆ ಹೇಳಿರಬೇಕು... ರವಿ ಕಾಣದ್ದನ್ನು ಕವಿ ಕಂಡ! ಅಂತ

ಸದ್ಯ ನಾನು ಕವಿ ಯಾಗಿ ಉಳಿದಿಲ್ಲ! Smiling

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:27am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

ಒದೇ ಬೇಕಾ? Smiling

.
.
ಜುಂ ಎನುತಾ ಬಳಕುವವಳು
ಅರಿವಿಲ್ಲದೇ ಮಯ್ಯ ತುಂಬಿ
ಕನಸಿನಲ್ಲಿ ತುಳುಕುವವಳು
.....
...
......

ಸದಾ
ಗುಪ್ತಗಾಮಿನಿ ನನ್ನ ಶಾಲ್ಮಲಾ,
ಸದಾ
ತಪ್ತಕಾಮಿನಿ ನನ್ನ ಶಾಲ್ಮಲಾ,
ಸದಾ
ಸುಪ್ತಮೋಹಿನಿ ನನ್ನ ಶಾಲ್ಲಲಾ..

ಇವೊತ್ತು ಇರಳು ನಿದ್ದೆ ಬರೋದು ಕಶ್ಟ!! Smiling ಈ ಶಾಲ್ಮಲಾ ಮೋಹಿನಿಯ ಕಾಟ!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:31am — savithru

ಉ: ಗುಪ್ತಗಾಮಿನಿ ಶಾಲ್ಮಲಾ

savithru's picture

>ಒದೇ ಬೇಕಾ?

ಬೇಡ Smiling..

ಅಲ್ಲೇ ಪಕ್ಕದಲ್ಲಿ ಯಾರನ್ನಾದರೂ ಕೇಳಿ! ಅವ್ರಿಗೆ ಬೇಕಾಗ್ಬಹುದು! Smiling

ಆದರೂ ನನ್ ಮಾತು ಸರೀನೆ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:34am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

ಅಯ್ಯೋ..........

ಈ ಹಾಡು ಕೇಳಿ ಪಕ್ಕದೋರಿಗೆ ಒದೇಕೊಟ್ಟರೇ, ನನ್ನ ಮಂದಿ ’ಸವಿತೃ’ ಅಂತ ಬಯ್ತಾರೆ... ಕೊಡಬೇಕಾದುದು ಬೇರೆ!! Smiling

ನಿಮ್ಮ ಮಾತು ಸರಿಯಿಲ್ಲ.. ನನಗೆ ಇವೊತ್ತು ವಾದ ಮಾಡಕ್ಕೆ ಮೂಡಿಲ್ಲ!! Smiling

ಶಾಲ್ಮಾಲೆಯ ಗುಪ್ತಗಮನ, ತಪ್ತಕಾಮನೆ, ಸುಪ್ತಮೋಹನದ ಮೇಲೆ ಇದೆ ಮನಸ್ಸು!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:41am — savithru

ಉ: ಗುಪ್ತಗಾಮಿನಿ ಶಾಲ್ಮಲಾ

savithru's picture

ಶಾಲ್ಮಲೆಯ ತಟದಲ್ಲಿ ನಿಂತು ವಾದ ಮಾಡಿದರೆ ಜನ ನನ್ನ ಮಹೇಶ Smiling ಅಂತ ಕರೀಲೂ ಬಹುದು..ನಾನು ಹುಶಾರದೆ.

ಶಾಲ್ಮಲೆ!!
ಸುಮ್ಮನೆ ನೋಡಬೇಕು.. ಅನುಭವಿಸಬೇಕು!

ಎಂಜಾಯ್ ಮಾಡಿ... ಹಾಗೆ ತಣ್ಣಗೆ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:44am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

^^^^^^^
ಇದು ನಿಮ್ಮ ಯಾವ ಕಡೆ ಮೆದುಳ ಕೆಲಸ?

ಇವೆಲ್ಲ ಹಾಳಾಗಿ ಹೋಗಲಿ...
.
.
.
ಶಾಲ್ಮಲೆಯ ಗುಪ್ತ, ತಪ್ತ, ಸುಪ್ತ... Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 1:12pm — hamsanandi

ಉ: ಗುಪ್ತಗಾಮಿನಿ ಶಾಲ್ಮಲಾ

hamsanandi's picture

ಶಾಲ್ಮಲೆ, ಧಾರವಾಡದಲ್ಲಿ ಸೋಮೇಶ್ವರನ ಗುಡಿ(?) ಯ ಹತ್ತಿರದಲ್ಲಿ ಹುಟ್ಟಿ, ನಂತರ ಗುಪ್ತಗಾಮಿನಿಯಾಗಿ ಹರಿಯುತ್ತಾಳಂತೆ. ಈ ಗುಡಿ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ ಹತ್ತಿರ ಇದೆ ಅಂತ ಎಲ್ಲೋ ಓದಿದ್ದೆ. ನನಗೆ ಧಾರವಾಡ ಚೂರೂ ಗೊತ್ತ್ತಿಲ್ಲ. ಅಲ್ಲಿಯವರು ತಿದ್ದಬಹುದು Smiling

ನಂತರ ಉತ್ತರಕನ್ನಡ ಜಿಲ್ಲೆಯಲ್ಲಿ ಸ್ವಲ್ಪ ಹರಿದು (ಸೋದೆ,ಸಹಸ್ರಲಿಂಗ ಇವೆಲ್ಲ ಶಾಲ್ಮಲಾ ನದೀ ತೀರದಲ್ಲೇ ಇವೆ), ಆಮೇಲೆ, ಯಾಕೋ ಬೇಡ್ತಿ ಅಂತ ಹೆಸರು ಬದ್ಲಾಯ್ಸಿಕೊಂಡು ಕೊನೆಗೆ ಸಮುದ್ರ ಸೇರುತ್ತಾಳೆ

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 5:04pm — pallavi.dharwad

ಉ: ಗುಪ್ತಗಾಮಿನಿ ಶಾಲ್ಮಲಾ

pallavi.dharwad's picture

ಸರಿಯಾಗಿಯೇ ಬರೆದಿದ್ದೀರಿ ಹಂಸಾನಂದಿಯವರೇ.

ಧಾರವಾಡದ ಬಗ್ಗೆ ಚೂರೂ ಗೊತ್ತಿಲ್ಲ ಅನ್ನುತ್ತೀರಿ. ಆದರೆ, ಚೂರೂ ಬಿಡದಂತೆ ಶಾಲ್ಮಲಾ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ.

ಥ್ಯಾಂಕ್ಸ್‌!

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 5:02pm — pallavi.dharwad

ಉ: ಗುಪ್ತಗಾಮಿನಿ ಶಾಲ್ಮಲಾ

pallavi.dharwad's picture

ಥ್ಯಾಂಕ್ಸ್‌ ಹರ್ಷ,

ಪುಸ್ತಕದ ಬೀರುಗಳನ್ನು ಹುಡುಕುವುದನ್ನು ತಪ್ಪಿಸಿದಿರಿ. ಬಾಯಲ್ಲೇ ಇದ್ದ ಕವನ ಕಳೆದು ಹೋದಂತಾಗಿ ಒಂದಿಷ್ಟು ಕಳವಳಪಟ್ಟಿದ್ದು ನಿಜ. ಆದರೆ, ನೀವು ಪೋಣಿಸಿದ ಪೂರ್ತಿ ಕವಿತೆ ನೋಡಿ ಮತ್ತೆ ಶಾಲ್ಮಲೆ ಉಕ್ಕಿ ಹರಿದಂತಾಯಿತು.

ಬಹುಶಃ ಮಹೇಶ್‌ಗೂ ಖುಷಿಯಾಗಿರಬಹುದು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 8:09am — mahesha

ಉ: ಗುಪ್ತಗಾಮಿನಿ ಶಾಲ್ಮಲಾ

mahesha's picture

ಪಲ್ಲವೀ

ನಂಗೇ ದಿಟವಾಗಲೂ ಸಕ್ಕತ್ ನಲಿವಾಗಿದೇ!!

ನಿಮ್ ದಾರವಾಡದ ಕವಿಗಳೇ ಕವಿಗಳು.. ನಮ್ಮ ಬಯಲು ಸೀಮೆಯವರ ಕಾದಂಬರಿಗಳು ಚನ್ನ, ಕವಿಗಳು ಕಡಮೆ. ಪುತಿನ ಬಿಟ್ಟು!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 6:11pm — harshab

ಉ: ಗುಪ್ತಗಾಮಿನಿ ಶಾಲ್ಮಲಾ

harshab's picture

ಪಲ್ಲವಿ,
ಬೀರುವಿನಲ್ಲಿ ಹುಡುಕಿದ್ದಾರೆ ಯಾವ ಪುಸ್ತಕಕ್ಕೆ ಕೈ ಹಾಕ್ತಿದ್ರಿ ಅಂತ ಹೇಳ್ತಿರಾ? ಅಂದ್ರೆ ಆ ಪುಸ್ತಕದ ಹೆಸ್ರು?
ಯಾಕಂದ್ರ ನಾ ಹಂಗ ಹಾಡ ಕೇಳ್ತಾ-ಕೇಳ್ತಾ ಇದನ್ನ ಬರ್ದಿದ್ದು... ಇಂತ ಹಾಡಗಳಿರೋ ಪುಸ್ತಾಕ ಸಿಕ್ರ ಭಾಳ ಚೊಲೋ ಆಕತಿ ನೋಡ್ರ್ಯಪ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಮುಕ್ತ' ಹಾಡಿನ ಹಿಂದೆ...
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಗಾಳಿಪಟ
  • ಏ ಆರ್‍ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.
  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:50pm
  • bvenkatraya
    ಉ: ಗೆದ್ದೆತ್ತಿನ ಬಾಲ
    October 16, 2008 - 12:39pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:38pm
  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:34pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:32pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:29pm
  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 119 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator