ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
July 30, 2007 - 12:55am — mahesha
http://enguru.blogspot.com/2007/07/blog-post_29.html
ಚನ್ನಾಗಿದೆ!!
ಆದರೆ ನನಗೂ ಏನ್‌ಗುರುಗೂ ಹೆಚ್ಚು ನಂಟಿಲ್ಲ!!
ಪಾಪಾ ಇವರಿಗೆ ಈಗ ಗೊತ್ತಾಗಿದೆ! ![]()

- mahesha ರವರ ಬ್ಲಾಗ್
- Login or register to post comments
- 760 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಸದಾ ನಿಮ್ಮವನೇ,
ಪ್ರಸಾದ
"ಹಿಂದ್-ಹಿಂದೆ ಹೋದಷ್ಟೂ ಕರ್ನಾಟಕದ ನುಡಿಯಲ್ಲಿ ಸಂಸ್ಕೃತದ ಪದಗಳೇ ಸಿಗೋದಿಲ್ಲ."
------ಅದಕ್ಕಿಂತಲೂ ಹಿಂದೆ ಹೋದ್ರ ಕನ್ನಡ ಭಾಷಾನೇ ಸಿಗಂಗಿಲ್ರೀ!!!!
(ಪ್ರಾಯಶ: ಮುಂದೆನೂ ಸಿಗ್ಲಿಕ್ಕಿಲ್ಲ)
"ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಮೂಲದಿಂದ ಬೆಳೆದು ಬಂದಿದೆ; "
------ ಅವರು ಚಿಕ್ಕಮಕ್ಕಳಿಗೆ ಹೇಳ್ತಿರಬಹುದು!!
"ಆದಿದ್ರಾವಿಡ ಅನ್ನೋ ಒಂದು ಭಾಷೆ ಅಂತ ನಿಜವಾದ ಭಾಷಾವಿಜ್ಞಾನಿಗಳ ಅನಿಸಿಕೆ. ಆ ಆದಿದ್ರಾವಿಡಭಾಷೆಗೆ ಒಂದು ನಿಘಂಟ್ನ ಬರೋ ಮತ್ತು ಎಮೆನೋ ಅನ್ನೋ ಇಬ್ರು ಬರೆದು ಅಂತರ್ಜಾಲದಲ್ಲಿ ಇಟ್ಟಿದಾರೆ, ಭೇಟಿಕೊಟ್ಟು ನೋಡಿ"
------ಯಾರೋ ಬೇರೆ ದೇಶದವರು ಏನೂ ಆಧಾರವಿಲ್ಲದೇ ಬರೆದಿರುವುದನ್ನು ನಮ್ಮ ಜನ ಅತ್ಯಂತ ಸರಳವಾಗಿ ಸ್ವೀಕರಿಸುತ್ತಾರೆಂಬುದು ಗೊತ್ತಿಲ್ಲವೆ? ಇಲ್ಲಿಯ ಸಾಹಿತಿಗಳೂ - ಇತಿಹಾಸಕಾರರೂ ಅದನ್ನೇ ವೇದವೆಂಬಂತೆ ನಂಬುತ್ತಿರುವುದು ಮೂರ್ಖತನದ ಪರಮಾವಧಿ!!
ನಮ್ಮ ದೇಶದಲ್ಲಿ ಪ್ರತೀ ಸುಮಾರು ೬೦ ಕಿ.ಮೀ.ಗಳಿಗೆ ಭಾಷೆ, ಮತ್ತು ಅದರ ಉಚ್ಹಾರಣೆ ಬದಲಾಗುತ್ತದೆ. ಹಾಗಾದರೆ, ಯಾವುದು ನಿಜವಾದ ಕನ್ನಡ ಎಂಬ ನಿರ್ಧಾರ ಮಾಡುತ್ತೀರಿ?
ನಮ್ಮ ಸಾಹಿತಿಗಳು ಇತಿಹಾಸಕಾರರು ಸತ್ಯವನ್ನು ಬರೆದರೆ ಸುಳ್ಳೆಂದು prove ಮಾಡ್ಲಿಕ್ಕೆ ಒಂಟಿ ಕಾಲ ಮೇಲೆ ನಿಲ್ಲುತ್ತಾರೆ ಈ ಎಲ್ಲಾ ಬುದ್ಧಿಜೀವಿಗಳು!!!
" ಸ್ವದೇಶಿ ನೆಲದಲ್ಲಿ ವಿದೇಶಿ ಬುದ್ಧಿ !"
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನಿಮ್ಮಂತವರ ಸಕ್ಕದ ಬಗ್ಗೆ ಕುರುಡು ನಂಬಿಕೆ ಇಟ್ಕಂಡಿರೋರು ನಿಜ ಹೇಳಿದರೆ ಒಪ್ಪಲ್ಲ.
"....------ಅದಕ್ಕಿಂತಲೂ ಹಿಂದೆ ಹೋದ್ರ ಕನ್ನಡ ಭಾಷಾನೇ ಸಿಗಂಗಿಲ್ರೀ!!!!...."
ಅದು ಹೇಗೆ ? ನಿಮ್ಗೆ ಕನಸು ಬಿದ್ದಿತ್ತೆ? ಪುರಾವೆಯಿಲ್ಲದ ಮಾತು
"------ ಅವರು ಚಿಕ್ಕಮಕ್ಕಳಿಗೆ ಹೇಳ್ತಿರಬಹುದು!!"
ನೀವು ಚಿಕ್ಕ ಮಕ್ಕಳ? ನಿಮಗೆ ತಲೆಗಿಳಿಯಲ್ವ ..ಅಲ್ಲಿ ಪುರಾವೆ ಕೊಟ್ಟಿದ್ದಾರೆ. ಮೊದಲು ಓದಿ, ಗೊತ್ತಾಗ್ಲಿಲ್ಲ ಅಂದ್ರ ಶಂಕರಬಟ್ಟರ ಹೊತ್ತಿಗೆ ಓದಿದ್ರೆ ಗೊತ್ತಾಗುತ್ತೆ.
"------ಯಾರೋ ಬೇರೆ ದೇಶದವರು ಏನೂ ಆಧಾರವಿಲ್ಲದೇ ಬರೆದಿರುವುದನ್ನು ನಮ್ಮ ಜನ ಅತ್ಯಂತ ಸರಳವಾಗಿ ಸ್ವೀಕರಿಸುತ್ತಾರೆಂಬುದು ಗೊತ್ತಿಲ್ಲವೆ? ಇಲ್ಲಿಯ ಸಾಹಿತಿಗಳೂ - ಇತಿಹಾಸಕಾರರೂ ಅದನ್ನೇ ವೇದವೆಂಬಂತೆ ನಂಬುತ್ತಿರುವುದು ಮೂರ್ಖತನದ ಪರಮಾವಧಿ!!....."
ಮತ್ತೆ ಪುರಾವೆಯಿಲ್ಲದ ಕೊಂಕು ಮಾತು. ಎಮನೊ, ಬರೊ ಬರೆದಿರೋದು ನಿಜ ಅಲ್ಲ ಅನ್ನಕ್ಕೆ ಪುರಾವೆ ಕೊಡಿ ಆಗ ನೀವು ಹೇಳಿದ್ದನ್ನು ನಂಬ್ತೀವಿ. ಬೇರೆ ದೇಸದವರಾದರೆ ನಂಬ ಬ್ಯಾಡ ಅಂತ ಎಲ್ಲಿ ಹೇಳಿದೆ.
"....ನಮ್ಮ ಸಾಹಿತಿಗಳು ಇತಿಹಾಸಕಾರರು ಸತ್ಯವನ್ನು ಬರೆದರೆ ಸುಳ್ಳೆಂದು prove ಮಾಡ್ಲಿಕ್ಕೆ ಒಂಟಿ ಕಾಲ ಮೇಲೆ ನಿಲ್ಲುತ್ತಾರೆ ಈ ಎಲ್ಲಾ ಬುದ್ಧಿಜೀವಿಗಳು!!!...."
ಮಾತು ಎಲ್ಲ್ಲೆಲ್ಲಿಗೋ ಹೋಗಿದೆ. ಈ ಎಳೆಯ ತಲೆಬರಹವನ್ನು ಮತ್ತೆ ಓದಿ.
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಸದಾ ನಿಮ್ಮವನೇ,
ಪ್ರಸಾದ
ಅವರೇ ನಿಜ ಬರ್ದಿದ್ದಾರೆ ಅನ್ನೋದಕ್ಕೇನಾದ್ರು ನಿಮ್ಹತ್ರ ಪುರಾವೆ ಇದ್ರೆ ಕೊಡಿ ಸ್ವಾಮಿ!!
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
http://ccat.sas.upenn.edu/~haroldfs/sars238/shortencybrit.html
ಅದು ಕನ್ನಡ ಸಂಸ್ಕೃತದಿಂದ ಬಂದಿಲ್ಲ ಅಂತ ಹೇಳುವುದು. ಅದಕ್ಕೆ ಪುರಾವೆ.
...
ಮೇಲಿದನ್ನು ಓದಿ ಅದು ಸುಳ್ಳೆಂದು ನೀವು ಈಗ ತೋರಿಸಬೇಕು!!
ನಡುವೆ ಓಡಿ ಕಿತ್ರೆ
ಮೊದಲು ಆ ಲಿಂಕನ್ನು ಓದಿರಿ, ಅದರಲ್ಲಿ ಏನೇನು ತಪ್ಪಿದೆ ಅಂತ ನೀವು ತೋರಿಸಿರಿ.
)
http://en.wikipedia.org/wiki/Sanskrit ( ಇವರಿಗೆ ಹೋಗಿ ಸಂಸ್ಕೃತ indo-iranian ಅಲ್ಲ ತೋರಿಸಿಕೊಡಿ
ಸಂಸ್ಕೃತದಿಂದ ಕನ್ನಡ ಬಂದಿದೆ ಅನ್ನಕ್ಕೆ ಪುರಾವೆಯೆಲ್ಲ?
===========================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನನ್ನಿ ಮಾಯ್ಸ. ನಿನಗೆ ಒಳ್ಳೆಯದಾಗಲಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಅದಕ್ಕೆ ಹೇಳಿದ್ದು ಕನ್ನಡದಲ್ಲೇ ಇರುವ ಶಂಕರಬಟ್ಟರ ಈ ಹೊತ್ತಿಗೆಗಳನ್ನು ಓದಿ ನೋಡಿ. ಆಮೇಲೆ ನಿಮಗೆ ನಿಕ್ಕುವ /ನಿಶ್ಚಿತ ಅಗದಿದ್ದರೆ ಇಲ್ಲಿ ಒಂದು ಎಳೆ ಹುಟ್ಟು ಹಾಕಿ. ನಾವು ಇನ್ನು ಪುರಾವೆ ಕೊಡ್ತೀವಿ.
೧) ಕನ್ನಡಕ್ಕೆ ಬೇಕು ಕನ್ನಡದ್ಡೆ ವ್ಯಾಕರಣ - ಇಲ್ಲಿ ಕನ್ನಡ, ಸಕ್ಕದಕ್ಕಿರುವ ಬೇಕರಣ/ವ್ಯಾಕರಣ ಕಟ್ಟಳೆ/ನಿಯಮ ಗಳನ್ನು ಚೆನ್ನಾಗಿ ಹೇಳಿಕೊಡಲಾಗಿದೆ ಮತ್ತು ಅವುಗಳಲ್ಲಿರುವ ಬೇರೆತನ್ನ ಎತ್ತಿ ತೋರಿಸಿಲಾಗಿದೆ.
)
ಮಾದರಿ : ತರಂಗ + ಅಂತರಂಗ = ತರಂಗಾಂತರಂಗ ( ಇದು ಸಕ್ಕದದ ಸವರ್ಣದೀರ್ಗ ಸೇರಿಕೆ/ಸಂದಿ)
ಅ +ಅ = ಆ
ಕಾಲು+ಉಂಗುರ = ಕಾಲುಂಗುರ ( ಇದು ಸೊರ ಬಿದ್ದುಹೋಗುವ/ಲೋಪ ಸೇರಿಕೆ/ಸಂದಿ ಕನ್ನಡದ್ದು - ಇದನ್ನ ಸವರ್ಣ ದೀರ್ಗ ಸೇರಿಕೆ ಅಂದ್ರೆ ವ್ಯಾಕರಣಿಕರು ನಗ್ತಾರೆ
ಉ + ಉ =ಉ .....(ಕಾಲೂಂಗುರ ಅಲ್ಲ) ಸಕ್ಕದದ ತರ ಎರಡು ಸೊರ ಸೇರಿದಾಗ ದೀರ್ಗ ಆಗಲ್ಲ, ಕನ್ನಡದಲ್ಲಿ ಒಂದು ಸೊರ/ಸ್ವರ ಬಿದ್ದು ಹೋಗುತ್ತೆ.
ಹೀಗೆ ಕನ್ನಡದ ಬೇಕರಣ ಮತ್ತು ಸಕ್ಕದದ ವ್ಯಾಕರಣಕ್ಕೆ ಹಲವು ಬೇರೆತನಗಳಿವೆ. ಇವು ನಿಮಗೆ ಗೊತ್ತಿವಿಯೆ? ಇನ್ನು ಪುರಾವೆ ಬೇಕೆ????
೨) ಕನ್ನಡ ಬರಹ ಸರಿಪಡಿಸೋಣ - ಇಲ್ಲಿ ಕನ್ನಡದ ಬರಹದಲ್ಲಿ ಸಕ್ಕದ ಸೇರಿಕೊಂಡು ಹೇಗೆ ಕನ್ನಡದ ಸೊಗಡನ್ನ ಹಾಳು ಮಾಡುತ್ತಿದೆ ಎಂದು ಬಿಡಿ ಬಿಡಿಯಾಗಿ ತೋರಿಸಲಾಗಿದೆ.
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಅಯ್ಯೋ ನೀವು ಸಂಧಿಸಮಾಸಕ್ಕೆ ಹೋದ್ರಿ.
ಕನ್ನಡದಲ್ಲಿ "ಅವನು ಹೋಗ್ತಾನೆ" ಎಂಬ ಮಾಮೂಲಿ ಸಾಲು ಅನೋದಕ್ಕೆ ಸಂಸ್ಕೃತದಲ್ಲಿ ಒಂದೇ ಒಂದು ನಿಕ್ಕುವ ಸಾಲಿಲ್ಲ ಇಲ್ಲ!!
ಅವನು ಹೋಗ್ತಾನೆ = ಸಃ ಗಚ್ಛತಿ, ಸಾ ಗಚ್ಚತಿ, ತತ್ ಗಚ್ಛತಿ ಈ ಮೂರೂ ಆಗಬೋದು.
ಇವನ್ನ ಏಸು ಸರತಿ ಬರೆಯೋದು!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ವಿನಾಯಕ ಮುತಾಲಿಕ ದೇಸಾಯಿ
ಸಃ ಗಚ್ಛತಿ = ಅವನು ಹೋಗುತ್ತಾನೆ.
ಸಾ ಗಚ್ಚತಿ = ಅವಳು ಹೋಗುತ್ತಾಳೆ.
ತತ್ ಗಚ್ಛತಿ = ಅದು ಹೋಗುತ್ತದೆ.
ಪೂರ್ತಿ ತಿಳಿದು ಉತ್ತರಿಸಿದರೆ ಉತ್ತಮ!!
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಕನ್ನಡದಲ್ಲಿ ’ಇಸು’ ಬಳಕೆಯ ಬಗ್ಗೆ ಇಲ್ಲಿ ನೋಡಿ.
ನಿಮ್ಮ ಸಂಸ್ಕ್ರುತದ ಒಲ್ಮೆಗೆ ಬೇಡಾ ಅನ್ನಲ್ಲಾ, ಆದರೆ ಅದನ್ನು ಕನ್ನಡದಲ್ಲಿ ಬೆರಸಲೇಬೇಕು ಅಂತ, ಕನ್ನಡದ ಹದವನ್ನು ಕೆಡಿಸಬೇಡಿ, ಅದನ್ನೇ ನಾನು ಸಕ್ಕದ ಪ್ರೇಮಿಗಳಲ್ಲಿ ಕೇಳಿಕೊಳ್ಳುವದು.
ಸಂಸ್ಕ್ರುತಕ್ಕೆ ಕರ್ನಾಟಕ ಬಿಟ್ರೆ, ಇಂಡಿಯಾ ತುಂಬಾ ದೊಡ್ಡದಾಗಿದೆ, ಹಿಂದಿ ನಾಡುಗಳಲ್ಲಿ ಅದಕ್ಕೆ ಜಾಗ ಕೊಡ್ಲಿ, ನಮ್ಮ ಕನ್ನಡಾನೇ ಬೇಕಾ ನಿಮಗೆ, ಬಿಟ್ ಬಿಡಿ, ನಿಮಗೆ ಕೈ ಜೋಡಿಸ್ತೀವಿ.
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಸದಾ ನಿಮ್ಮವನೇ,
ಪ್ರಸಾದ
ಧನ್ಯವಾದ ವಿನಾಯಕ ಅವರೆ,
ತಿಳಿದಷ್ಟು ತಿಳಿಯಾಗುವುದು ತಿಳಿವು ! ಅಲ್ಲವೇ?
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಸಃ ಗಚ್ಛತಿ, ಅಂದರೆ ಅದು ಹೋಗುವುದು, ಅವಳು ಹೋಗುವಳು, ಅವನು ಹೋಗುವನು ಇಷ್ಟು ಅರ್ಥಗಳು ಬರಬಹುದು.
ಸಾ ದೋಷವಾಣೀ| ಇದನ್ನು "ಅವಳು ತಪ್ಪುಮಾತು" ಅಂತ ಕನ್ನಡಕ್ಕೆ ತರ್ತಾರಾ?
ಅದನ್ನು ಅದು ತಪ್ಪುಮಾತು ಅಂತ ಅಲ್ವಾ ಕನ್ನಡದಲ್ಲಿ ಹೇಳೋದು !!
phmd ನೀವು ಸಂಸ್ಕೃತವನ್ನು ದಿಟವಾಗಲೂ ಓದಿದ್ದೀರೋ? ಸಂಸ್ಕೃತಂ ಜ್ಞಾತಂ ವಾ?
ಪುರಾವೆ ತೋರಿಸಿ, ಪುರಾವೆ ಪ್ರಿಯರೇ!!
ಈಗ ಓಡಿ, ಮತ್ತೇ ಯಾರಾದರು ಬರೆದರೆ ಬನ್ನಿ!!
ಅದಲ್ಲೆ ಸರಿ...
ತಿರುಳಿಗೆ ಬರೋಣ. ನಾನು ಪುರಾವೆಗಳನ್ನು ಕೊಟ್ಟಾಯಿತು!
ಏಲ್ಲಿ ಕನ್ನಡ ಸಂಸ್ಕೃತದಿಂದ ಬಂದಿದೆ ಅನ್ನೋದಕ್ಕೆ ಪುರಾವೆ? ಮತ್ತೆ ಓಟವಾ?
======================================
ತಿಳಿದಷ್ಟು ತಿಳಿಯಾಗುವುದು ತಿಳಿವು ! ಹೌದು!!
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಸಃ => ಪುಲ್ಲಿಂಗ => सः तौ ते, तम् तौ तान् ...... [ವಿಭಕ್ತಿ ವಚನಗಳು]
ಸಾ => ಸ್ತ್ರೀಲಿಂಗ => सा ते ताः .........
ತತ್ => ನಪುಂಸಕಲಿಂಗ => तत् ते तानि ........
"ತಿಳಿದಷ್ಟು ತಿಳಿಯಾಗುವುದು ತಿಳಿವು ......." ಇದಕ್ಕಿಂತಲೂ ಹೆಚ್ಚಿನ ಪುರಾವೆ ಬೇಕಿದ್ದಲ್ಲಿ ಯಾವುದಾದರೂ ಸಂಸ್ಕೃತ ವ್ಯಾಕರಣ ಪುಸ್ತಕ ಓದಿರಿ.....
ವಿನಾಯಕ ಮುತಾಲಿಕ ದೇಸಾಯಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ರೀ ಹಂಸಾನಂದಿ ಈ ವಯ್ಯ ತುಸ ಹೇಳ್ರೀ!!
ಸಂಸ್ಕೃತದಲ್ಲಿ ಪುಲ್ಲಿಂಗ ಗೊತ್ತು ಮಾಡೋದು ಕನ್ನಡದಂತಲ್ಲ ತಮ್ಮ!!
ಸಂಸ್ಕೃತದಲ್ಲಿ ಗಜಃ( ಆನೆ ), ದಾರಃ( ಹೆಂಡತಿ), ತುರುಃ( ಮರ ) ..... ಇವೆಲ್ಲ ಪುಲ್ಲಿಂಗ.
ರಸನಾ( ನಾಲಗೆ ), ಕೀರ್ತಿ( ಹಿರಮೆ ), ಕಮಲಾ( ತಾವರೆ) .............. ಇವೆಲ್ಲ ಸ್ತೀಲಿಂಗ
ಮಿತ್ರಂ( ಗೆಳೆಯ ) ಇದು ನಪುಂಸಕಲಿಂಗ.
ಆದರಿಂದ ಸಃ ಇದು ಆನೆ, ಹೆಂಡತಿ, ಮರ ಇಷ್ಟನ್ನು ಹೇಳಬಹುದು. ಹಾಗೆ ಸಾ ನಾಲಗೆ,ಕೀರ್ತಿ,ತಾವರೆ, ತತ್ ಗೆಳೆನನ್ನು ಹೇಳಬಹುದು.
ಅಣ್ಣ, ಎಲ್ಲಿ ಕಲಿತೆ ಸಂಸ್ಕೃತ? ತಮಗೆ ಸಂಸ್ಕೃತದ ಲಿಂಗನಿರ್ಧರಣೆಯೇ ಬರದು!!
ಸರಿ, ಹಿಂಗಾದ್ರೆ ಸಂಸ್ಕೃತ ಉದ್ದಾರ!!
ಈಗ ವ್ಯಾಕರಣದ ಹೊತ್ತಗೆ ನೀವು ನೋಡಬೇಕು!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಸಂಸ್ಕೃತದಲ್ಲಿ ಅಷ್ಟೇ ಅಲ್ಲ ಹಿಂದಿ ಹಾಗೂ ಇತರ ಸಾಮ್ಯ ಭಾಷೆಗಳಲ್ಲಿ ಲಿಂಗಗಳನ್ನು ಭಾವನಾತ್ಮಕ ರೀತಿಯಲ್ಲಿ ಗುರುತಿಸುತ್ತಾರೆ, ಉದಾ : ಜಲಂ ಇದು ನಪುಂಸಕಲಿಂಗ ಆದರೆ ನದೀ ಇದು ಸ್ತೀಲಿಂಗ ಬಹುಷಃ ತಾವು ಸಂಸ್ಕೃತದ ಅಳಲೇಕಾಯಿ ಪಂಡಿತರೆಂದು ತೋರುತ್ತದೆ. ಸಃ ಇದು ಪುಲ್ಲಿಂಗ ವಾಚಕ ಶಬ್ದ ಇದನ್ನು ತಾವು ಯಾವ ಸಂಸ್ಕೃತ ಪಂಡಿತರಿಂದ ಬೇಕಾದರೂ ಪರೀಕ್ಷಿಸಿ ತಿಳಿದುಕೊಳ್ಳಬಹುದು [ನನಗೆ ಸಂಸ್ಕೃತ ಗೊತ್ತಿಲ್ಲ ಅಂದಿರಲ್ಲಾ ಅದಕ್ಕೆ ಹೇಳಿದ್ದು.... ಪರೀಕ್ಷೆ ಮಾಡಿ...]. ಸುಮ್ಮನೇ ವಾದ ಮಾಡಬೇಡಿ..... ಬೇಕಾದರೆ ಈ link ಪರೀಕ್ಷಿಸಿ : http://www.spokensanskrit.de/index.php?script=HK&tinput=he&country_ID=&d...
ಒಳ್ಳೆಯದಾಗಲಿ :
ವಿನಾಯಕ ಮುತಾಲಿಕ ದೇಸಾಯಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಯಪ್ಪ!!
ಈ ವಯ್ಯ ಹೇಗಪ್ಪ ಅರ್ಥ ಮಾಡಿಸೋದು, ಹಿಂದೆಯೂ ಹಿಂಗೆ !!
ಸಂಸ್ಕೃತದಂತೆ ಹಿಂದಿ ಇದೆ ಸರಿ, ಹಾಗೆ ಕನ್ನಡ ಇಲ್ಲ ಅಂತವೇ ಹೇಳ್ತಾ ಇರೋದು
ಸ್ವಾಮಿ!!
"ಸಃ ಇದು ಪುಲ್ಲಿಂಗ ವಾಚಕ ಶಬ್ದ" ಹೌದು, ಅದು "ಪುಲ್ಲಿಂಗ ಸರ್ವನಾಮ ಏಕವಚನ". ಆದರೆ ಸಂಸ್ಕೃತದ ಪುಲ್ಲಿಂಗಬೇರೆ, ಕನ್ನಡದ ಪುಲ್ಲಿಂಗಬೇರೆ. ಸಂಸ್ಕೃತ "ದಾರಃ" ಅನ್ನೋ ಪುಲ್ಲಿಂಗ ಪದದ ಅರ್ಥ ಹೆಂಡತಿ.
ಕನ್ನಡದಲ್ಲಿ ಲಿಂಗ ಇರುವುದು ಸರಕು/ವಸ್ತುವಿಗೆ. ಅಂದ್ರೆ ಕನ್ನಡದಲ್ಲಿ ವೃಕ್ಷ, ಮರ, ತರು, ಟ್ರೀ ಏನೇ ಹೇಳಿದರು ಅದು ನಪುಂಸಕಲಿಂಗವೇ!!
ಆದರೆ
ಸಂಸ್ಕೃತದಲ್ಲಿ ಲಿಂಗ ಇರುವುದು ನಾಮಪದಕ್ಕೆ ಹೊರತು ಅದು ಹೆಸರಿಸುವ ವಸ್ತುವಿಗಲ್ಲ. ಅಂದ್ರೆ ಸಂಸ್ಕೃತದಲ್ಲಿ ಮರಕ್ಕೆ ಇರುವ ಪದಗಳಿಗೆ ಬೇರ ಬೇರೆ ಲಿಂಗ ವೃಕ್ಷಂ ( ನಪುಂಸಕ ), ತರು( ಪುಲ್ಲಿಂಗ ), ಶಾಲ್ಮಲೀ( ಇದೊಂದ ಮರ ಆದರೆ ಸ್ತೀಲಿಂಗ )
ಈಗಲಾದ್ರು ತಲೆಗೆ ಇಳಿತೋ ಇಲ್ವಾ? ನೀವು ಮತ್ತೆ ನಿಮಗೆ ಏನು ಮಾತಾಡುತ್ತಿದ್ದೀವಿ ಅಂತ ತಿಳಿಯೋದಕ್ಕೆ ಆಗ್ತಿಲ್ಲ!!
ನಿಮಗೆ ಸಂಸ್ಕೃತ ಗೊತ್ತಿದೆ, ಆದರೆ ಸರಿಯಾಗಿ ಅದರ ಲಿಂಗ ನಿರ್ಧರಣೆಯಂತೂ ಗೊತ್ತಿಲ್ಲ, ಕನ್ನಡ ಮತ್ತು ಸಂಸ್ಕೃತದ ನಡುವೆ ಈ ವ್ಯತ್ಯಾಸ ನಿಮಗೆ ಅರ್ಥ ಆಗ್ತಾನೇ ಇಲ್ಲ.
ಅದೆಲ್ಲ ಇರಲಿ.. ಇವನ್ನೆಲ್ಲ ಒಂದೆಡೆ ಇಡೋಣ.
ಈಗ ತಿರುಳಿಗೆ ಬನ್ನಿ! ಹಿಂದೆಯೂ ನೀವು ಸಂಸ್ಕೃತದಿಂದ ಕನ್ನಡ ಬಂದಿದೆ ಎಂದು ಹೇಳಲಾಗದೇ ಓಡಿ ಹೋದಿರಿ.
ಈಗಲಾದರೂ ಹೇಳಿ, ಪುರಾವೆ ಕೊಡಿ "ಹೇಗೆ ಸಂಸ್ಕೃತದಿಂದ ಕನ್ನಡ ಬಂದಿದೆ ಇದು ಸುಳ್ಳು" ಅನ್ನೋದು ತಪ್ಪು ಅಂತ ತೋರಿಸ್ರಿ. ಸುಮ್ಮೆ ಏನೇನೋ ಮಾತುಕತೆ ಆಯ್ತು!!
ಇದನ್ನಾದರು ಓದಿ, ಅರ್ಥ ಮಾಡಿಕೊಂಡು ಬರೀಯಪ್ಪ!! ಮೂಲ ಬರಹವಂತೂ ಓದಿದಂತೆ ಕಾಣ್ತಿಲ್ಲ. ಓದಿದ್ದರೂ ಅದರ ತಿರುಳಂತೂ ಹಿಡಿದಂತು ಕಾಣ್ತಿಲ್ಲ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಮಹೇಶಾ,
ನೀನು ತಾನೆ ಹೇಳಿದ್ದು ಸಃ = ಅವನು ಅವಳು ಹಾಗು ಅದು ಅಂತಾ? ಅದಕ್ಕೆ ಪುರಾವೆ ಕೊಟ್ಟರೆ ವಿಷಯವನ್ನು ಎಲ್ಲಿಗೋ ತೆಗೆದುಕೊಂಡು ಹೋಗಬೇಡಾ? ನಾನು ಇಲ್ಲಿ ವಾದಮಾಡುತ್ತಿರುವುದು ಸಃ = ಅವನು ಎಂದಷ್ತೇ....
ನೀವು ಸಃ ಎಂಬುದನ್ನು ಕನ್ನಡಕ್ಕೆ ಭಾಷಾಂತರ ಮಾಡಿದರೂ ಅದು ಅವನು ಎಂಬ ಅರ್ಥವನ್ನೇ ಕೊಡುತ್ತದೆ ವಿನಃ ಅವಳು ಎಂದು ಎಲ್ಲಿಯೂ ಅರ್ಥವಾಗದು..... ಭಾಷಾಂತರ ಮಾಡುವಾಗ ಹಲವಾರು ನಿಯಮಗಳಿರುತ್ತವೆ.... As it is translation ಮಾಡಿದರೆ ಎಂದಿಗೂ ಅರ್ಥ ಬಾರದು... ಕನ್ನಡದಿಂದ ಸಂಸ್ಕ್ರುತಕ್ಕೆ ಭಾಷಾಂತರ ಮಾಡುವಾಗಲೂ ಇದೇ ನಿಯಮ......
ಕನ್ನಡದಲ್ಲಿ "ನದಿ ಹರಿಯುತ್ತದೆ" => "नदी प्रवहति" [ನದಿ ಹರಿಯುತ್ತಾಳೆ]
"अग्निः दहति" => ಅಗ್ನಿಯು ಸುಡುತ್ತಾನೆ ಎಂದು ಕನ್ನಡದಲ್ಲಿ ಬರೆದರೆ ಮೂರ್ಖತನ. ಅಗ್ನಿಯು ಸುಡುತ್ತದೆ ಎಂದೇ ಬರೆಯಬೇಕು.
ಔರಂಗಜೇಬನ ಕಾಲದಲ್ಲಿ ಶಿವಾಜಿಯ ಆಟ ನಡೆಯಲಿಲ್ಲ : ಇದನ್ನು ಇಂಗ್ಲೀಷಗೆ ಭಾಷಾಂತರಿಸಿದರೆ In Shivaaji's Legs Aurangajeba's play did not walk ಎಂದು ಭಾಷಂತರಿಸುವಿರಾ? ಈ ಇಂಗ್ಲಿಷ ಭಾಷಾಂತ ಸರಿ ಎಂದಾದರೆ ನೀವು ಹೇಳುವುದು ಸರಿ ಸಃ = ಪುಲ್ಲಿಂಗ ಸ್ತ್ರೀಲಿಂಗ etc etc..... ಸ್ವಲ್ಪ ಯೋಚನೆ ಬೇಕು ಬರೆಯುವ ಮುಂಚೆ.
ವಿಷಯ ಮತ್ತೆ ಎತ್ತಿರುವಿ ಎಂದು ಹೇಳುತ್ತಿರುವೆ... ಮೊದಲ ಚರ್ಚೆಯಲ್ಲಿಯೂ ನಾನು ಹೇಳಿದ್ದು ನೀರು ಎಂಬುದು ಕನ್ನಡ ಪದವಲ್ಲ ಅದು ಸಂಸ್ಕೃತ ಪದ ಎಂದು, ಆಗ ತಮ್ಮಲ್ಲಿ ಯಾರೋ ಒಬ್ಬರು [ಕನ್ನಡದ ಬಗ್ಗೆ ಮಾತನಾಡುತ್ತಿದ್ದವರು] ನೀರು ಕನ್ನಡಪದವೆಂದೇ ವಾದಿಸಿದರು, ಯಾವಾಗ ಅದನ್ನು ಸಂಸ್ಕ್ರುತ ಗ್ರಂಥದಲ್ಲಿ ತೋರಿಸಿದೆವೋ ಆವಗ ಅದು ಬಹುಶಃ ಕನ್ನಡದಿಂದ ಸಂಸ್ಕೃತಕ್ಕೆ ಹೋಗಿರಬಹುದು ಎಂಬ ತಲೆಬುಡವಿಲ್ಲದ ಮಾತನ್ನು ಆಡಿದರು...
ವಿನಾಯಕ ಮುತಾಲಿಕ ದೇಸಾಯಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಅಯ್ಯೋ ಮಾರಾಯ!! ಅರ್ಥ ಮಾಡಿಕೊಳ್ಳೋ ಅಣ್ಣ!!
ಏಕೋ ಗಜಃ | ಸಃ ತತ್ರ ಅಸ್ತಿ|
ಅಂದರೆ ಒಂದು ಆನೆ. ಅದು ಅಲ್ಲಿದೆ. ಇಲ್ಲಿ "ಅವನು ಅಲ್ಲಿದ್ದಾನೆ" ಅನಕ್ಕೆ ಬರಲ್ಲಕೋಣೋ.!!
ಸಃ ಮಮ ದಾರಃ| ಅಂದರೆ ಅವಳು ನನ್ನ ಹೆಂಡತಿ. "ಅವನು ನನ್ನ ಹೆಂಡತಿ" ಅನ್ನಕ್ಕೆ ಆಗಲ್ಲ
ಸಃ ವಿನಾಯಕಃ | ಅಂದರೆ "ಅವನು ವಿನಾಯಕ" ಈಗ ಸಃ ಕ್ಕೆ ಅವನು ಸಮ..!!
ನಿನ್ನ ಹಿಂದಿ ನಿನ್ನ ಹತ್ರ ಮಡಿಕ್ಕ!! ಇಲ್ಲಿ ವಿಸಯ ಅದಲ್ಲ. ನೀನು ಹಿಂದಿಯೋ ಮಾರಾಟಿಯೋ, ನನಗೆ ಅದು ಬೇಕಿಲ್ಲ.
ಮಾರಾಯ ನೀರಿನ ಸುದ್ದಿ ಅಲ್ಲೇ ತೀರಿಸಿದ್ದೀನಿ. ನೀರು ಕನ್ನಡದ್ದು ಅಂತ ನಾನೊಬ್ಬ ಅಲ್ಲ, ಹಂಸಾನಂದಿ, ವೈಭವ, ಸಂಗನ ಎಲ್ರೂ ಹೇಳಿದ್ರು, ಅಲ್ಲಿ ನೀರು ಕನ್ನಡದ್ದು ಅನ್ನೋ ಮಾತು ಸರಿ.. ನಿನಗೆ ಯಾರ ಮಾತಲ್ಲು ನೆಚ್ಚುಗೆ ಇಲ್ಲ. ಅದಕ್ಕೆ ನಾವೇನು ಮಾಡೋಣು.
""अग्निः दहति" => ಅಗ್ನಿಯು ಸುಡುತ್ತಾನೆ ಎಂದು ಕನ್ನಡದಲ್ಲಿ ಬರೆದರೆ ಮೂರ್ಖತನ. ಅಗ್ನಿಯು ಸುಡುತ್ತದೆ ಎಂದೇ ಬರೆಯಬೇಕು." ಇದನ್ನೇ ಸಾವಿರ ಸರತಿ ಹೇಳಿ, ಇದೇ ಕನ್ನಡಕ್ಕೂ ಸಂಸ್ಕೃತಕ್ಕೂ ಇರುವ ವ್ಯತ್ಯಾಸ ಅಂತ ಹೇಳ್ತಿರೋದು..
ನೀನೇ ಹೇಳಿದ್ಯಲ್ಲಪ್ಪ.. "ಅಗ್ನಿ ಸಂಸ್ಕೃತದಲ್ಲಿ ಪುಲ್ಲಿಂಗ, ಕನ್ನಡದಲ್ಲಿ ಮಾನಿಸವಲ್ಲದ ಲಿಂಗ" ಅಂತ ಈಗ. ಇದನ್ನೇ ನಾವೆಲ್ಲ ಆಗಿಂದ ಹೇಳಿದ್ದು.
ಯಪ್ಪ!! ಇವರಿಗೆ ದಿಟವಾಗಲು ನಾವು ಏನು ಮಾತಾಡ್ತಾ ಇದ್ದೀವಿ ಎಂಬ ಅರಿವೇ ಇಲ್ಲ.
ಸಃ ಅವನು ಅಂತ ಅದರೂ ಅದು "ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು " ಅನ್ನೋದನ್ನು ಸುಳ್ಲೂ ಅಂತ ಹೇಳಲ್ಲ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನಿನ್ನ ಹತ್ತಿರ ಮಾತಾಡಿ ನನಗೂ ಒಂದು ಅರ್ಥ ಆಗಿದೆ....
ಗಾಳಿ ಜೊತೆ ಗುದ್ದಾಡಿದರೆ ವ್ಯರ್ಥ.....
congrats... carry on with ur fight......
ವಿನಾಯಕ ಮುತಾಲಿಕ ದೇಸಾಯಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಟಾಟಾ!! ಎರಡನೇ ಸರತಿ!!
etymology ಅಂದ್ರೇನು ಅಂತ ತಿಳಿದುಕೊಳ್ಳಪ್ಪ, ಬೇಕಾಗುತ್ತೆ!!
"ಗಾಳಿ ಜೊತೆ ಗುದ್ದಾಡಿದರೆ ವ್ಯರ್ಥ.....
congrats... carry on with ur fight......"
ಹೀಗೆಲ್ಲ ಬರೆದು ಸೆಟೆದು ಓಡುವುದು ಏನು ಸಂಪ್ರದಾಯವಾ? ನಮಗೆ ಕನ್ನಡ ಬರುತ್ತೆ.
"ನಿನ್ನ ಹತ್ತಿರ ಮಾತಾಡಿ ನನಗೂ ಒಂದು ಅರ್ಥ ಆಗಿದೆ"
ಸರಿಯಾಗಿ ಅರ್ಥ ಆಗಿದೆಯಾ?
ಕೊನೆಗೂ ಕನ್ನಡ ಸಂಸ್ಕೃತದಿಂದ ಅನ್ನೋದಕ್ಕೆ ಪುರಾವೆಯೇ ಇಲ್ಲ!! ಪಾಪಾ !!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಟಾಟಾ!! ಎರಡನೇ ಸರತಿ!!
etymology ಅಂದ್ರೇನು ಅಂತ ತಿಳಿದುಕೊಳ್ಳಪ್ಪ, ಬೇಕಾಗುತ್ತೆ!!
"ಗಾಳಿ ಜೊತೆ ಗುದ್ದಾಡಿದರೆ ವ್ಯರ್ಥ.....
congrats... carry on with ur fight......"
ಹೀಗೆಲ್ಲ ಬರೆದು ಸೆಟೆದು ಓಡುವುದು ಏನು ಸಂಪ್ರದಾಯವಾ? ನಮಗೆ ಕನ್ನಡ ಬರುತ್ತೆ.
"ನಿನ್ನ ಹತ್ತಿರ ಮಾತಾಡಿ ನನಗೂ ಒಂದು ಅರ್ಥ ಆಗಿದೆ"
ಸರಿಯಾಗಿ ಅರ್ಥ ಆಗಿದೆಯಾ?
ಕೊನೆಗೂ ಸಂಸ್ಕೃತದಿಂದ ಕನ್ನಡ ಅನ್ನೋದಕ್ಕೆ ಪುರಾವೆಯೇ ಇಲ್ಲ!! ಪಾಪಾ !!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಒಂದು ಸಾಲಿಗೇ ಒಂದೇ ಅಕ್ಕರ ಬಂದೀತೆಂಬ ಆಸೆಯಿಂದ ಇದನ್ನ ಬರೀತಾ ಇದೀನಿ.
ಓ ಹಿಂಗೋ!! ನಾನೊಬ್ಬ ಮರುಳಾ, ಕನ್ನಡಾ ಮಾತಾಡೋರೆಲ್ಲಾ ಕನ್ನಡಾ ಬಗ್ಗೆ ನಲುಮೆ ಇರೋರು ಅಂದುಕೊಂಡ್ ಬಿಡ್ತೀನಿ. ಈ ಹಿಂದಿ ಮರಾಟಿಯವರಿಗೆ ಕನ್ನಡದಲ್ಲಿ ಸಕ್ಕದ ಒರೆಗಳು ಇರಲಿ ಅಂತಾ ಆಸೆ , ಸರಿ ಹಂಗಾದ್ರೆ ನಾವೂ ಹಟಕ್ಕೆ ಬೀಳೋಣು, ಇಂಗಲೀಸಾದ್ರೂ ಬಳಸೇವು, ಹಿಂದಿಯವರ ಸಕ್ಕದ ಸೇರಿಸೆವು, ಏನಂತಿರಾ ಗೆಳೆಯರೇ
RSS ಗೆ ಸೋಲಾಗಲಿ, ಹಿಂದಿಗೆ ದಿಕ್ಕಾರ, ಕನ್ನಡಕ್ಕೆ ಗೆಲುವಾಗಲಿ , ಜೈ ಕರ್ನಾಟಕ ಮಾತೆ, ಟಿಪ್ಪು ಸುಲ್ತಾನ್ (ದುನಿಯಾದ ರಂಗಾಯಣ ರಘು ಡೈಲಾಗ್). ಹೋಗ್ಲಿ ಬಿಡ್ರಪಾ, ಲೈಟಾಗಿ ತುಗೋಳಿ, ಹಿಂದಿಯೋ, ಇಂಗ್ಳೀಸೋ, ಸಕ್ಕದಾನೋ,ಮರಾಟಿನೋ, ನಿಮ್ಮ ಪಾಡಿಗೆ ನೀವಿರಿ, ಏನಾದ್ರೂ ಸೇರಿಸ್ಕೊಳ್ಳಿ, ಕೇಳೋರ್ ಯಾರು? ನಮ್ಮ ಜೋಡಿ ಚಲೋತಂಗಿ ಕನ್ನಡಾ ಮಾತಾಡ್ರಿ ಸಾಕು....
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ವಿನಾಯಕ,
ಬನ್ನಿ, ಈಗ ಸಿಕ್ಕಿ ಹಾಕಿ ಕೊಂಡಿರಿ.
ನೀರು ಸಕ್ಕದದ್ದು ಅಂತ ನೀವೇ ಹೇಳಿದ್ದು ಅಲ್ವ. ನಾವು ಆಗ ಬರೊ,ಎಮನೊ ದ್ರಾವಿಡ ಒರೆಗಂಟು(ಬರೀ ದ್ರಾವಿಡ ಒರೆಗಳು) ತೋರಿದೆವು( ಇದೇ ತಲೆಬುಡ ಗೊತ್ತಾಯ್ತ
)
http://dsal.uchicago.edu/cgi-bin/philologic/getobject.pl?c.1:1:1106.burr...
Ka. nīr, nīru water
ನಿಮಗೆ ಗುಂಡಿಗೆ ಇದ್ದರೆ ಈ ಚಿಕಾಗೊ ಯೂನಿವರ್ಸಿಟಿಯವರಿಗೆ ತೋರಿಸಿ, ನೀರು ದ್ರಾವಿಡ ಒರೆ/ಪದ ಅಲ್ಲ ಅಂತ. ಅದು ನಿಮ್ಮ ಕೈಲಿ ಆಗುವುದೇ ??
ನೀವ್ಯಾವ ಸಕ್ಕದ ನಿಗಂಟು ತೋರಿದಿರಿ, ನೀರು ಸಕ್ಕದದ ಒರೆ/ಪದ ಅಂತ ತೋರ್ಸೋಕೆ???
ನೀವು ಪುರಾವೆ ಕೊಡಿ.ಆಗ ನಿಮ್ಮನ್ನೇ ನಂಬ್ತೀವಿ. 'ನೀರಜ' ಅಂತ ಪದ ತೋರಿದೊಡನೆ ಅದು ಸಕ್ಕದ ಆಗಲ್ಲ.
ಇನ್ನು, 'ನೀರು' ಮತ್ತು 'ಎಸರು' ಇವೆರಡರ ಅರ್ತನೇ ಸರಿಯಾಗಿ ನಿಮಗೆ ಗೊತ್ತಿಲ್ಲ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ದಯವಿಟ್ಟು ಈ ಪದಗಳನ್ನು ಈ link ನಲ್ಲಿ ಹುಡುಕಿ
Sanskrit has also exhibited reciprocal influences with the Dravidian languages,
http://www.bhashaindia.com/Patrons/LanguageTech/Sanskrit.aspx
ನೀರು ಸಂಸ್ಕೃತ ಪದ ಎಂದು ನಾನು ಹೇಳಿದ್ದು... ಅದು ಕನ್ನಡಪದ ಅಲ್ಲ...
ಸಂಸ್ಕೃತದ ಪದ ಕನ್ನಡಕ್ಕೆ ಬಂದಿದೆ ಎಂದು ಹೇಳಿದ್ದೆ....
ವಿನಾಯಕ ಮುತಾಲಿಕ ದೇಸಾಯಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಅಯ್ಯೋ ಮಾರಾಯ್ರೆ.
Etymology ನಿಘಂಟು ತೋರಿಸಣ್ಣ practical ಅಲ್ಲ!!!! ಸಂಸ್ಕೃತಕ್ಕೂ ಬೇಕಾದಷ್ಟು ಕಡೆಯಿಂದ ಪದಗಳ ಬಂದಿವೆ. ಅದರಲ್ಲಿ ಕನ್ನಡವೂ ಒಂದು.
ಅದಕ್ಕೆ ಹೇಳಿದ್ದು "etymology", "etymological dictionary" ಅಂದ್ರೇನು ಅಂತ ತಿಳಿದುಕೋಬೇಕು.
=======================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
http://www.thevedicfoundation.org/valuable_resources/Sanskrit-The_Mother...
** Indian languages: Hindi, Bengali, Gujarati, Marathi and South Indian languages are the descendants of Sanskrit language. Sindhi and Punjabi are the derivatives of Hindi and Urdu languages. [ http://www.encyclopediaofauthentichinduism.org/articles/29_the_eternal_p... ]
This is Britannica encyclopedia
http://concise.britannica.com/ebc/article-9363084/Dravidian
ವಿನಾಯಕ ಮುತಾಲಿಕ ದೇಸಾಯಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನೋಡಣ್ಣ
ಈ vedic-foundation, ಇವರನ್ನು ನಂಬಕ್ಕೆ ಬರಲ್ಲ.! ಹಾಗೆ ಎರಡನೆಯದು. ( ಯಾಕೆ ಅಂದ್ರೆ, ಅದೊಂದು religious ಸೈಟು, ಅದರ ಗುರಿಯೇ propaganda ). ಇನ್ನು ನಿಮ್ಮ vedic foundation, encyclopediaofauthentichinduism ಇಂತಹ religious progand ಸೈಟಗಳನ್ನೇ ನಂಬ್ತೀನಿ, ಮಿಕ್ಕಿದೆಲ್ಲ ಸುಳ್ಳು ಅಂದರೆ ಅದನ್ನು fanatism ಅಂತಾರೆ. ಅದನ್ನ ತುಸು ಮೆತ್ತೆಗೆ ಮೊಂಡುತನ ಅಂದ್ದೀವಿ.
ಈ ಸಂಪದದ ಬಳಗದಲ್ಲಿ ಎಲ್ಲರಿಗೂ ಗೊತ್ತಿದೆ ನನಗೆ ವೇದದ ಬಗ್ಗೆ ಎಷ್ಟು ಗೌರವವಿದೆ ಅಂತ!! ನನ್ನನ್ನು ’ವೇದನಿಂದಕ’, "ಅವೈದಿಕ" ಅಂದ್ರೆ ಸುಮ್ನೆ ಬಿಡಲ್ಲ!!
ಈಗ ಮೂರನೇ ಕೊಂಡಿ http://concise.britannica.com/ebc/article-9363084/Dravidian ಅದನ್ನು ನೀವು ನೋಡಿಲ್ಲ ಅಂತ ಕಾಣ್ಸುತ್ತೆ.
ಅದು ಹೀಗೆ ಹೇಳುವುದು.
The four major Dravidian languages of southern India—Telugu, Tamil, Kannada, and Malayalam—have independent scripts and long documented histories. They account for the overwhelming majority of all Dravidian-speakers, and they form the basis of the linguistic states of Andhra Pradesh, Tamil Nadu, Karnataka, and Kerala. All have borrowed liberally from Sanskrit. The only Dravidian language spoken entirely outside of India is Brahui, with fewer than two million speakers mainly in Pakistan and Afghanistan. Of the Dravidian languages, Tamil has the greatest geographical extension and the richest and most ancient literature, which is paralleled in India only by that of Sanskrit. The Dravidian family, with no demonstrated relationship to other language families, is assumed to have covered a much more extensive area of South Asia before the spread of Indo-Aryan and was the source of loanwords into early Indo-Aryan dialects.
"All have borrowed liberally from Sanskrit" ಹಂಗಂದರೆ ಅವು ಸಂಸ್ಕೃತದಿಂದ ಧಾರಳವಾಗಿ ಪದಗಳನ್ನು ಎರವಲು ಪಡೆದಿದೆ ಎಂದು. ಹಾಗಂದರೇ, ಇವು ಸಂಸ್ಕೃತದಿಂದ ಹುಟ್ಟಿ ಬಂದಿಲ್ಲ, ಆದರೆ ಸಂಸ್ಕೃತದಿಂದ ಇಂಗಲೀಸು, ಉರ್ದು, ಪೋರ್ಚುಗೀಸು ತರಹ ಪದಗಳನ್ನು ಪಡೆದಿವೆ. ಅರ್ಥ ಆಯ್ತ?
Dravidian languages - family of 23 languages spoken by more than 165,000,000 people in South Asia. In terms of population figures the major languages of the family may be listed in the following order: Telugu, 52,986,000; Tamil, 44,400,000; Kannada (Kannada), also called Kanarese, 27,900,000; Malayalam (Malayalam), 27,500,000; Gondi, 2,460,100; Tulu (Tulu), 1,427,000; and Kurukh (Kurukh), 1,358,000. The Dravidian ...
ಅಂದ್ರೆ ಇವು ಸಂಸ್ಕೃತದಿಂದ ಬಂದಿಲ್ಲ.
ಈಗ ನೀವು ಪುರಾವೆ ಸಮೇತ, "ಕನ್ನಡ ಸಂಸ್ಕೃತದಿಂದ ಬಂದಿಲ್ಲ" ಅಂತ ಹೇಳಿ ಮಾತು ಮುಗಿಸಿದಿರಿ, ನನ್ನಿ!! ಇದನ್ನೇ ನಾವು ಮೊದಲಿಂದ ಹೇಳಿದ್ದು!!
ಇದೇ britannicaದ ಇನ್ನೊಂದು ಸೈಟು ನೋಡಿರಿ.
http://ccat.sas.upenn.edu/~haroldfs/sars238/shortencybrit.html
ಇದು ಹೀಗೆ ಹೇಳುವುದು
"
Although in modern times speakers of the various Dravidian languages have mainly occupied the southern portion of India, while those of the Indo-Aryan (Indic) tongues have predominated in northern India, nothing definite is known about the ancient domain of the Dravidian parent speech. It is, however, a well-established and well-supported hypothesis that Dravidian speakers must have been widespread throughout India, including the northwest region. This is clear because a number of features of the Dravidian languages appear in the Rigveda, the earliest known Indo-Aryan literary work, thus showing that the Dravidian languages must have been present in the area of the Indo-Aryan ones. The Indo-Aryan languages were not, however, originally native to India; they were introduced by Aryan invaders from the north. Several scholars have demonstrated that pre-Indo-Aryan and pre-Dravidian bilingualism in India provided conditions for the far-reaching influence of Dravidian on the Indo-Aryan tongues in the spheres of phonology (e.g., the retroflex consonants, made with the tongue curled upward toward the palate), syntax (e.g., the frequent use of gerunds, which are nonfinite verb forms of nominal character, as in “by the falling of the rain”), and vocabulary (a number of Dravidian loanwords apparently appearing in the Rigveda itself).
"
"A tendency toward structural and systemic balance and stability is characteristic of the Dravidian group. Nevertheless, there is no doubt about the influence of the other languages of India. Dravidian languages show extensive lexical (vocabulary) borrowing, but only a few traits of structural (either phonological or grammatical) borrowing, from the Indo-Aryan tongues. On the other hand, Indo-Aryan shows rather large-scale structural borrowing from Dravidian, but relatively few loanwords. There is indeed a possibility of Dravidian and Indo-Aryan drawing even closer together in the future; but it is highly doubtful that a new family of languages will develop in such a way that the bases of the contributing groups (i.e., Dravidian and Indo-Aryan) will be completely eliminated through the phenomena of borrowing. "
ಇವು clear cut ಆಗಿ ಕನ್ನಡವು ಸಂಸ್ಕೃತದಿಂದ ಬಂದಿಲ್ಲ ಎಂದು ಹೇಳುವುದು. ಕನ್ನಡ dravidian familyಗೆ ಸೇರಿದ್ದು, ಸಂಸ್ಕೃತ indo-iranian/indo-aryan/indo-europeanಗೆ!!
ಇದನ್ನೇ ನಾವು ಸಾವಿರ ಸಾವಿರ ಸರತಿ ಹೇಳಿದ್ದು!!!
ಅರ್ಥ ಆಯ್ತಾ ಮಾನ್ಯರೇ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಅಣ್ಣಾವರೇ, ನೀವು ಕೊಟ್ಟಿರುವ ಮೊದಲ ಎರಡು ಕೊಂಡಿಗಳಲ್ಲಿ , kannada ಆಗಲಿ tamil ಆಗಲಿ, telugu ಆಗಲಿ, ದುರ್ಬೀನ್ ಹಾಕಿ ಹುಡುಕಿದರೂ ಸಿಗಲ್ಲಾ, ... ಇನ್ನು ಮೂರನೆಯ ಕೊಂಡಿಯಲ್ಲಿ ಕೊಟ್ಟಿರೋದು
borrowing ಅಂದರೆ ಕಡ ತರೋದು, ಈಗಿನ ಮಟ್ಟಿಗೆ ಕನ್ನಡದಲ್ಲಿ ಇಂಗಲೀಸಿನಿಂದ ಹೆಚ್ಚು ಒರೆಗಳು ಬರುತ್ತಿವೆ, ಅದಕ್ಕೆ ನಮ್ಮ ಮಂದಿಯ ಮರುಳತನ ಓಸುಗರ(ಕಾರಣ)ವಾಗಿದೆ, ಹಂಗಂತೇಳಿ ನಾಳೆ ಕನ್ನಡ ಇಂಗಳೀಸಿನಿಂದ ಹುಟ್ಟಿದ್ದು ಅಂತಾ ಹೇಳೋರು ಬಂದಾರು...
ಪುರಾವೆ ತರ್ತೀನಿ ಅಂತ ಏನೋನೋ ತಂದಿಟ್ಟಿದ್ದೀಯಲ್ಲಣ್ಣಾ ....
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನಿಮ್ಮ ಮೊದಲನೆ ತಾಣ ಒರೆಗಂಟಿನದಲ್ಲ ( not a dictionary) ಮತ್ತು ಅಲ್ಲಿ ನೀವು ಹೇಳುವುದಕ್ಕೆ ಯಾವ 'ಸಮರ್ಥನೆ'ಯೂ ಇಲ್ಲ
ಇನ್ನು ಇದು
http://concise.britannica.com/ebc/article-9363084/Dravidianhttp://concis...
ಇದ್ರಲ್ಲಿ ಹೀಗೆ ಕೊಟ್ಟಿದೆ.
The Dravidian family, with no demonstrated relationship to other language families, is assumed to have covered a much more extensive area of South Asia before the spread of Indo-Aryan and was the source of loanwords into early Indo-Aryan dialects
ಈಗಲಾದರೂ ಗೊತ್ತಾಯ್ತ.. ಮೊಂಡಾಟ ಸಾಕು ದೇಸಾಯಿಗಳೇ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ಮಹೇಶರೆ,
ನಿಮಗೆ ಕನ್ನಡ ಮತ್ತೆ ಸಂಸ್ಕೃತ ಎರಡೂ ಗೊತ್ತು ಅನ್ನೋದು ನನಗೆ ಗೊತ್ತು
ಅದು ಗೊತ್ತಿಲ್ಲದವರಿಗೆ ತಪ್ಪು ಉದಾಹರಣೆ ಕೊಟ್ಟು ದಾರಿ ತಪ್ಪಿಸಬೇಡಿ!
ಕನ್ನಡದಲ್ಲಿ "ಅವನು ಹೋಗ್ತಾನೆ" ಎಂಬ ಮಾಮೂಲಿ ಸಾಲು ಅನೋದಕ್ಕೆ ಸಂಸ್ಕೃತದಲ್ಲಿ ಒಂದೇ ಒಂದು ನಿಕ್ಕುವ ಸಾಲಿಲ್ಲ ಇಲ್ಲ!!
ಅವನು ಹೋಗ್ತಾನೆ = ಸಃ ಗಚ್ಛತಿ, ಸಾ ಗಚ್ಚತಿ, ತತ್ ಗಚ್ಛತಿ ಈ ಮೂರೂ ಆಗಬೋದು.
ಅವನು ಹೋಗ್ತಾನೆ ಅನ್ನೋದಕ್ಕೆ ಸಃ ಗಚ್ಚತಿ ಅಂತಲೇ ಆಗಬೇಕು ಅನ್ನೋದು ನಿಮಗೂ ನನಗೂ ಇಬ್ಬರಿಗೂ ಗೊತ್ತು. ಆದರೆ ಸಂಸ್ಕೃತ ತಿಳಿಯದವರು ನಿಮ್ಮ ಉದಾಹರಣೆಯಿಂದ ತಪ್ಪು ದಾರಿ ಹಿಡಿಯಬಹುದು.
ಹಾಗಂತ ಸಂಸ್ಕೃತದಲ್ಲಿ ಈ ರೀತಿಯ ಹುಚ್ಚಾಟಗಳು ಇಲ್ಲ ಅಂತ ನಾನು ಹೇಳಲ್ಲ - ಆದರೆ, ನಿಮ್ಮ ಮಾತಿಗೆ ನಿಮ್ಮ ಉದಾಹರಣೆ ಪೂರಕವಾಗಿಲ್ಲ ಅಷ್ಟೆ.
-ಹಂಸಾನಂದಿ
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನಾನು ಓಟಗಾರರಿಗ ಹೆಚ್ಚು ಹೇಳಲ್ಲ.
ಹಂಸಾನಂದಿ,
ನೀವು ನನ್ನ ತಪ್ಪು ತೋರುವಲ್ಲಿ ಎಡುವಿದ್ದೀರಿ.
ಇವನ್ನು ಕನ್ನಡಕ್ಕೆ ತನ್ನಿರಿ.

ಏಕೋ ಗಜೋsಸ್ತಿ| ಸ ಗಚ್ಛತಿ ಮಂದಗತ್ಯಾ |
ಮಮ ಮಿತ್ರಂ ಆಗಚ್ಚತಿ ಇದಾನೀಂ | ತತ್ ಅತ್ರ ಭೋಜನಾರ್ಥಂ ಆಗಚ್ಛತಿ|
ಮಮ ರಸನಾ | ಸಾ ಲುಭತೇ ಭಕ್ಷಮ್ | ( ಲುಭತೆ ತಪ್ಪಿರಬಹುದು )
ನಾನು ಹೇಳಿದ್ದು ಹೀಗೆ. "ಅವನು ಹೋಗ್ತಾನೆ" ಅನ್ನೋದಕ್ಕೆ "ಸಃ ಗಚ್ಛತಿ" ಸಮವಲ್ಲ!! ಅದು ತಪ್ಪು ತಿಳಿವು.!!!
"ಕನ್ನಡ ಸರ್ವನಾಮಗಳು" ಈ ಹೊತ್ತಗೆ ಓದಿ!!
( ಇಲ್ಲಿ ಸಃ ಬರಬೇಕು ಅಂತ ನೀವು ಅಂದುಕೊಂಡಿದ್ರೆ ಅದು ತಪ್ಪು )
ಮಮ ಮಿತ್ರಂ ಹಂಸಾನಂದೀ| ತತ್ ಮಿತ್ರಂ "ನಾಸದೀಯ ಸೂಕ್ತಂ" ಇತಿ ಪ್ರಬಂಧಂ ಅಲಿಖತ್|
ನಾನು ಕೊಟ್ಟ ಮಾದರಿಯನ್ನು ತಪ್ಪು ಎಂದು ತೋರುವಲ್ಲಿ ತಪ್ಪಿದ್ದೀರಿ! ಅದಕ್ಕೆ ನಿಮ್ಮ ಮಾತಿಗೆ ಒಪ್ಪಿಗೆ ಇಲ್ಲ!!
============================================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
(ಪ್ರಾಯಶ: ಮುಂದೆನೂ ಸಿಗ್ಲಿಕ್ಕಿಲ್ಲ)
ನಮಸ್ಕಾರಾ ಸಾರ್, ಎಲ್ಲಿದ್ರಿ ಇಷ್ಟು ದಿವಸ? ಕನ್ನಡ ಸಂಸ್ಕ್ರುತದಿಂದ ಬಂದಿಲ್ಲ ಅನ್ನೋಕೆ ಯಾರೂ ಪುರಾವೆ ಕೊಡಬೇಕಾದ್ದಿಲ್ಲಾ ಸಾರ್, ದಿನಬಳಕೆಯ ತಿಳುವಳಿಕೆ (common sense) ಬಳಕೆ ಮಾಡಿದ್ರೆ ಸಾಕು ತಿಳಿಯುತ್ತೆ.
ತಮ್ಮಂತವರಿಗೆ ಕನ್ನಡ ಒಂದು ಬಳಕೆಯ ಸರಕು ಅಸ್ಟೇ, ಅದರ ಅಳಿವು-ಉಳಿವು ಕಟ್ಕೊಂಡೇನಾಕ್ಬೇಕು ನಿಮಗೆ? ಹೌದಾ??
ಕನ್ನಡ ಸಂಸ್ಕ್ರುತದಿಂದ ಬಂದಿದೆಯೋ ಬಿಟ್ಟಿದೆಯೋ ಅದನ್ನು ಬದಿಗಿಡಿ, ಒಂದು ಸಂಸ್ರುತದಿಂದ ಬಂದ ಪದಕ್ಕೆ ಕನ್ನಡದಲ್ಲಿಯೇ ಅದೇ ಅರಿವು ನೀಡುವ ’ಒರೆ’ ಇರಬೇಕಾದರೆ, ಯಾಕೇ ಒತ್ತಾಯವಾಗಿ ಸಂಸ್ಕ್ರುತ ಪದವನ್ನೇ ತುರುಕಿ ಮಾತಾಡೋದು? ನೀವೇ ಹೇಳಿ?
ಸಂಸ್ಕ್ರುತ ತಿಳಿದವರನ್ನು ಕೇಳಿ, ಅವರೇ ಹೇಳುತ್ತಾರೆ, ಕನ್ನಡ-ಸಂಸ್ಕ್ರುತ ಗ್ರಾಮರ್ನಲ್ಲಿ ತುಂಬಾ ಬೇರೆ ಬೇರೆ.
ನಮ್ಮ ದೇಶದವರಲ್ಲದವರು ಹೇಳಿದ್ದೆಲ್ಲಾನೂ ನಾವು ಅಲ್ಲಗಳೆದರೆ ಬಾವಿ ಕಪ್ಪೆಗಳಾಗಿ ಹೋಗ್ತಿವಿ. ಬೇಡ, ನಮ್ಮವರೇ ಹೇಳಲಿ, ಹೊರಗಿನವರೇ ಹೇಳಲಿ, ಅದನ್ನು ಒರೆಗೆ ಹಚ್ಚಿ ನೋಡಬೇಕು, ಅದು ಯಾಕೆ ಹಾಗೆ ಅಂತ ಕೇಳಬೇಕು, ಸರಿ ಅನ್ನಿಸಿದರೆ ಒಪ್ಪಬೇಕು.
ಸರಿ, ಈಗ ಈ ಸಂಗತಿಯನ್ನೇ ಒರೆಗೆ ಹಚ್ಚಿ, ಕನ್ನಡದಲ್ಲಿ ಸಂಸ್ಕ್ರುತ ಒರೆಗಳು ಸೇರಿಕೊಂಡಿದ್ದೋ ಇಲ್ಲಾ ಹುಟ್ಟಿಕೊಂಡಿದ್ದೋ? .... ನಿಮಗೇ ತಿಳಿಯುತ್ತೆ.
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ವೈಬವ
ಮೊತ್ತೊಂದು ಯಾವ ಪುರಾವೆಯೂ ಕೊಡದೇ, ಪುರಾವೆ ಕೇಳೋ ಕಮೆಂಟು ಅವರದು..
ನಿನ್ನ ಮಾತಿಗೆ ನನ್ನ ದನಿ ಕೂಡಿದೆ.
ನಾವು ಕೊಡುವ ಪುರಾವೆಯೆಲ್ಲ ಕೊಟ್ಟಾಯ್ತು. ಓದಬೇಕು ಅಂತ ಇದ್ರೆ ಓದಿಕೊಳ್ಳಿಲಿ.
Cadwell ಪುರಾವೆಗಳನ್ನು ಕೇಂದ್ರ ಸರಕಾರವೇ ಒಪ್ಪಿ, ತಮಿಳಿಗೆ classical ಪಟ್ಟ ಕೊಡುವಾಗ ಅದನ್ನು ದ್ರಾವಿಡ ನುಡಿ ಎಂದು ಹೇಳೇ ಕೊಟ್ಟಿರುವುದು. ಹಾಗೆ ಕೇಂದ್ರ ಸರಕಾರ ದ್ರಾವಿಡ ನುಡಿಗಳಿಗೆ ಕಪ್ಪಂ, ಆಂದ್ರದಲ್ಲಿ universityಯನ್ನು ಕೊಟ್ಟಿದ್ದೆ.
ಹೀಗೆ ಪುರಾವೆ ಇಲ್ಲದೇ ಅಲ್ವಾ ಸಂಸ್ಕೃತದಿಂದಲೇ ಕನ್ನಡ, ತಮಿಳು, ಎಲ್ಲ ಹುಟ್ಟಿದ್ದು ಅಂತ ಬೊಗಳೆ ಬಿಟ್ಟುಕೊಂಡಿದುದು. ಈಗ ಅವರ ಪೊಳ್ಳು ಬಯಲಾಯ್ತು ಅದಕ್ಕೆ ಮತ್ತೊಂದಿಷ್ಟು ಪುರಾವೆ ಇಲ್ಲದ ಮಾಹಿತಿಗಳು
ವೇದಗಳು ಇರುವ ನುಡಿಯೇ ಬೇರೆ, ಪಾಣಿನಿಯ ಸಂಸ್ಕೃತವೇ ಬೇರೆ.. ಇದು ಇವರಿಗೆ ಸಾಮಾನ್ಯ ಗೊತ್ತಿರಲ್ಲ.
ಇದರ ಬಗ್ಗೆ ಆದ ಹಲವು ಎಳೆಗಳು ಇಲ್ಲೇ ಇವೆ. ಹೇಗೆ ಮಂದಿ ಸರಿಯಾಗಿ ಉತ್ತರ ಕೊಡದೇ ಓಡಿ ಹೋಗಿದ್ದಾರೆ ನೋಡಿಕೊಳ್ಳಲಿ!!
ಹಾಗಾದರೆ 'ಕನ್ನಡ ದ್ರಾವಿಡನುಡಿಯಲ್ಲ' ಅಂದ ಒಂದು thesis ಬರೆದು, ಯಾವುದಾರು univerisityಗೆ ಕೊಡಲಿ, ನೋಡೋಣ ಅದರ ಗತಿ ಏನಾಗುತ್ತದೆ ಅಂತ!
ಈ phmd ಅವರೇ ಅಲ್ಲವಾ ನಮಗೆ ನಮ್ಮ ದೇಶದ ಹೆಸರು "ಭಾರತ, ಇಂಡಿಯ ಅಲ್ಲ"
ಅಂದ ಉಪದೇಶ ಮಾಡಿದ್ದು
, ಅದಕ್ಕೆ ನಾವು ಸಂವಿಧಾನ ತೋರಿಸಿ, ತಣ್ಣಗೆ ಮಾಡಿದ್ದು!! ಇವರ ಹಳೆ ಕಮೆಂಟುಗಳು ನೋಡಣ್ಣ. ಒಂದು ಎರಡು ಮಾತು ಹೇಳಿ, ಓಟ!
phmd ಅವರೇ ಬೇಸರ ತಂದುಕೊಳ್ಳಬೇಡಿ, ಆದರೆ ಹಿಂಗೆ ಅಲ್ಲಿ ಇಲ್ಲಿ ಎರಡು ಮಾತು ಹೇಳಿ ಓಟ ಕಿತ್ರೆ, ನಿಮಗೇ ಸರಿಯಾಗಿ ಗೊತ್ತಿಲ್ಲದೇ ಮಾತಾಡ್ತ ಇದ್ದೀರಿ ಅಂತ ಅನ್ಸುತ್ದೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು - ಏನ್‌ಗುರು!
ನೀವು ವಿ.ಕ.ದಲ್ಲಿ ಪ್ರಕಟವಾದ ಲೇಖನದ ಅರ್ಥವನ್ನು ಗ್ರಹಿಸಿದಂತಿಲ್ಲ. " ಒಂದು ಕಾಲದಲ್ಲಿ ಇದು ಸರ್ವಸಾಮಾನ್ಯರ ಭಾಷೆಯಾಗಿತ್ತು" ಎಂದರೂ ಅವರ ಲೇಖನವಿರುವುದು ಶಿಕ್ಷಕರ ನಿಯುಕ್ತಿಯ ಬಗ್ಗೆ, ಮತ್ತು ಇದರ ಬಗ್ಗೆ ಸರ್ಕಾರದ ಕಡೆಯಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆ.
_________________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು