ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

August 30, 2007 - 9:34pm — mahesha

ನಂಗೆ ಹಲವು ತೆಲುಗು ತಮಿಳು ಹಾಡುಗಳು ಕೇಳೋದಕ್ಕೆ ಮೆಚ್ಚು. ಚನ್ನಾಗಿ ನಮ್ಮ ತೆಂಕಣ ಬಗೆಯಲ್ಲಿ ಇರ್ತಾವೆ.

ಅದರಲ್ಲೂ ’ಅಲೈ ಪಾಯುದೈ’ ಎಂಬ ಸಿನಿಮದ ಎಲ್ಲಾ ಹಾಡುಗಳು ನಂಗೆ ಇನಿ.
ಆದ್ರೆ ಎಡರು ಏನಪ್ಪ ಅಂದ್ರೆ ಈ ಹಾಡುಗಳು ಸಲೀಸಾಗಿ ತಿಳಿಯಕ್ಕಿಲ್ಲ.

ಹಾಗೂ ಹೀಗು ತುಸು ತಲೆಯೋಡಿಸಿ, ಈ ಸಾಲುಗಳನ್ನು ಅರಿತುಕೊಂಡೆಂ( ಸರಿಯೇ? )

ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ
ಚಿನ್ನಚ್ಚಿನ್ನದಾಯ್ ಕೋರಿಕ್ಕೈಗಳ್ ಸೆವಿಕೊಡು ಸ್ನೇಗಿದನೇ

ಇದನ್ನು ಕನ್ನಡದಲ್ಲಿ

ಸ್ನೇಹಿತನೇ ಸ್ನೇಹಿತನೇ ರಹಸ್ಯ ಸ್ನೇಹಿತನೇ
ಸಣ್ಣಸಣ್ಣದಾದ ಕೋರಿಕೆಗಳು ಕಿವಿಕೊಡು ಸ್ನೇಹಿತನೇ

ಆದ್ರೆ ಈ ಸ್ನೇಹಿತ ಅನ್ನೋ ಒರೆಯನ್ನು ತಮಿಳಲ್ಲಿ ’ಸ್ನೇಗಿದ’ ಮಾಡಿರೋದು ಬಲು ಇನಿಯಾಗಿದೆ. ಅದೂ ಅಲ್ದೇ ಹಾಡು ತುಂಬ ಚನ್ನಾಗಿದೆ. ಪದನುಡುವೆ ’ಹ’ ಹೇಳೋದು ತುಸು ಕಷ್ಟವೇ!

ಸೆವಿ(ಸಿವಿ) = ಕಿವಿ

ಸಿವಿಗೆ ಸಿವಿಯಾದ ಸಂಗೀದ Smiling

http://www.musicindiaonline.com/music/tamil/s/movie_name.4128/

~.~
  • mahesha ರವರ ಬ್ಲಾಗ್
  • Login or register to post comments
  • 685 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 30, 2007 - 10:30pm — hamsanandi

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

hamsanandi's picture

ಅದು ಹೇಗ್ರೀ?

ಸ್ನೇಹಿತ ಕಷ್ಟ - ಸ್ನೇಗಿದ ಸುಲಭ ಅನ್ನೋದನ್ನ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಅಂತೇ ಸಂಗೀದ,ಮಗಾರಾಸ, ಮಗೇಸ, ಚಿಟ್ರ,ನಹರ ಅನ್ನೋ ತರಹದನ್ನ ಕೂಡಾ!

ಸ್ನೇಗಿದ ಎನ್ನೋದರಲ್ಲಿ ಹೆಚ್ಚಾದ ಇಂಪು ಎಲ್ಲಿಂದ ಬಂತು? ತಮಿಳಲ್ಲಿ ಮಾಡಿದ್ದನ್ನೆ ಕನ್ನಡದಲ್ಲೂ ಮಾಡಬೇಕೇಕೆ?
-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2007 - 11:27pm — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

ತಪ್ಪಾಯ್ತು..!!

ನಾನು ತಮಿಳಲ್ಲಿ ಚಂದ ಅನ್ನಬೇಕಿತ್ತು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 8:58am — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ಹಂಸಾನಂದಿ ನೀವು ಕೇಳೋದು ಸರಿ. ನಂಗೂ ಸ್ನೇಗಿದ ಹೆಂಗೆ ಸಲೀಸು ಅಂತ ತಿಳಿಯಲಿಲ್ಲ.

ಅದರ ಬದಲು ಅದನ್ನ ನೇಹಿಗನೇ(ಅಚ್ಚಗನ್ನಡದಲ್ಲಿ) ನೇಹಿಗನೇ ಅಂತ ಮಾಡಿದರೆ ಸಲೀಸಾಗುತ್ತಿತ್ತು ಅನ್ಸುತ್ತೆ.

ಪಾಪ Smiling , ಈಗೀಗೆ ಈ ಮಾಯ್ಸನಿಗೆ ಬೇರೆನುಡಿಗಳ ಬಗ್ಗೆ ಹೆಚ್ಚು ಒಲವು ಮೂಡ್ತ ಇದ್ದೆ ಅನ್ಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 10:19am — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

"ಆದ್ರೆ ಈ ಸ್ನೇಹಿತ ಅನ್ನೋ ಒರೆಯನ್ನು ತಮಿಳಲ್ಲಿ ’ಸ್ನೇಗಿದ’ ಮಾಡಿರೋದು ಬಲು ಇನಿಯಾಗಿದೆ. ಅದೂ ಅಲ್ದೇ ಹಾಡು ತುಂಬ ಚನ್ನಾಗಿದೆ. ಪದನುಡುವೆ ’ಹ’ ಹೇಳೋದು ತುಸು ಕಷ್ಟವೇ!"

ಒರೆ ನಡುವೆ ಹೇಳೋದು ಕನ್ನಡದೊರಿಗೆ ಎಡರೇ;ಅದ್ರಲ್ಲೂ ತಮಿಳುನಾಡಿನ ಗಡಿಯವರು ಹ ಹೇಳೊದೇ ಇಲ್ಲ;
;ಮಹಾಬಾರತ = ಮಾಬಾರತ, ಮಹಾಕಾವ್ಯ=ಮಾಕಬ್ಬ, ಮಹಾನವಮಿ=ಮಾನವಮಿ, ಸಿಂಹ=ಸಿಂಗ

"ಈಗೀಗೆ ಈ ಮಾಯ್ಸನಿಗೆ ಬೇರೆನುಡಿಗಳ ಬಗ್ಗೆ ಹೆಚ್ಚು ಒಲವು ಮೂಡ್ತ ಇದ್ದೆ ಅನ್ಸುತ್ತೆ. "
Smiling ಅನ್ನಿಸಲಿ. ನಿಮಗೆ ಅನ್ನಿಸಿಕೊಳ್ಳುವ full freedom ಇದೆ.

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 12:20pm — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ನನಗೆ "ನೇಹಿಗ" ( ಅತ್ವ ನೇಯಿಗ, ಹ ಆಗಲ್ಲ ಅಂದ್ರೆ) "ಸ್ನೇಗಿದ" ಕ್ಕಿಂತ ಚೆನ್ನಾಗಿದೆ. ಯಾಕೆಂದರೆ ಸ್ನೇಗಿದನಲ್ಲಿ "ಸ್ನೆ" ಎಂಬ ಕರ್ಕಶ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 2:26pm — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

ಹಾಗೇ ಆಗಲಿ...

ಸ್ನೇಗಿದನೇ ಸ್ನೇಗಿದೇ ರಗಸಿಯ ಸ್ನೇಗಿದನೇ
ಚಿನ್ನಚ್ಚಿನ್ನದಾಯ್ ಕೊರಿಕ್ಕೈಗಳ್ ಸೆವಿಕೊಡು ಸ್ನೇಗಿದನೇ

ಆದ್ರೆ ನೇಹ => ನೇಹಿಗ ಚನ್ನಾಗಿರ್ತದೆ.

ನೇಹಿಗನೇ ನೇಹಿಗನೇ ರಹಸಿಯ ನೇಹಿಗನೇ
ಸಣ್ಣಸಣ್ಣದಾ ಕೋರಿಕೆಗಳ್ ಕಿವಿಕೊಡು ನೇಹಿಗನೇ

ಇದು ಬೇಡ ಅಂದ್ರೆ

ನೇಯಿಗನೇ ನೇಯಿಗನೇ ರಯಿಸಿಯ ನೇಯಿಗನೇ
ಸಣ್ಣಸಣ್ಣದಾ ಕೋರಿಕೆಗಳ್ ಕಿವಿಕೊಡು ನೇಯಿಗನೇ
Smiling!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 2:30pm — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ಈಗ ಸಂದಾಗೈತೆ ಕಣಣ್ಣೋ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 10:36am — kannadakanda

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

kannadakanda's picture

ಸ್ನೇಯಿತ ಹೇಗೆ? ಹೇಗೆ ಸಂದೇಹಕ್ಕೆ ಸಂದೆಯವೆನ್ನುತ್ತೇವೋ ಹಾಗೆ. ತೆನ್ನುಡಿಗರಿಗೆ ಉಸಿರು ದಬ್ಬು ಅಕ್ಷರ ಹೇೞುವುದು ಕಷ್ಟ. ಆದ್ದಱಿಂದ ನಿಜವಾದ ತಮಿೞಿನಲ್ಲಿ ಶ್, ಷ್, ಸ್, ಹ್ ಗಳಿಲ್ಲ. ತಮಿೞರು ಪ್ರಾರಂಭದ ಹಕಾರ ಬಿಡುತ್ತಾರೆ. ಮಧ್ಯದ ’ಹ’ಕಾರ ’ಗ’ಕಾರವಾಗುತ್ತದೆ. ಸಣ್ಣ ಮಕ್ಕಳು (ಕನ್ನಡಿಗರು) ಜೈಹಿಂದ್‍ಗೆ ಜೈಗಿಂದ್‍ ಎಂದು ಹೇೞುವುದನ್ನು ಕೇಳಿದ್ದೇನೆ. ನನ್ನ ಮಗಳು ಎರಡು ವರ್ಷದವಳಿದ್ದಾಗ ಹೋಮ್‍ವರ್ಕ್‍ಗೆ ಕೋಮಕ್ ಎನ್ನುತ್ತಿದ್ದಳು. ತಮಿೞರಿಗೆ ಉಸಿರು ದಬ್ಬಿ (puff) ಹೇೞುವುದಕ್ಕಿಂತ ಉಸಿರು ತಡೆದು ಹೇೞುವುದೇ ಸರಾಗ. ಇಲ್ಲವೇ ಸರಾಗವಾಗಿ ಹೇೞುವುದೇ ಸರಾಗ. ಹಾಗಾಗಿ ಮೊದಲಿನ ’ಹ’ ನುಂಗಿಬಿಡುತ್ತಾರೆ. ಅದಕ್ಕೆ ಹೊಸೂರ್=ಒ(ಚೂ)ಸೂರ್, ಹೈದರಾಬಾದ್‍=ಐದರಾಬಾದ್, ಮಹಾತ್ಮ=ಮಗಾತ್ಮ, ಮಹಾನದಿ=ಮಗಾನದಿ. ಹಾಗಾಗಿ ಕೂಡ ತಮಿೞಿನಲ್ಲಿ ಮಹಾಪ್ರಾಣಗಳೇ ಇಲ್ಲ. ’ಹ’ ಸ್ಪರ್ಷ ’ಗ’ ಆದಾಗ ಅವರಿಗೆ ಎನನ್ನೋ ಸರಿಯಾಗಿ ಉಚ್ಚರಿಸಿದಹಾಗೆ. ಇಲ್ಲದೆ ಹೋದರೆ ಏನೋ ಹೊಗೆ ಬಿಟ್ಟ ಹಾಗೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 1:53am — betala

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

betala's picture

ರಹಸ್ಯ ಸ್ನೇಹಿತ ಅಂದ್ರೆ ಏನು ? Eye-wink

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 6, 2007 - 6:56pm — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

ರಹಸ್ಯ = ಗುಟ್ಟಾದ, ಒಗಟಾದ, ಅರಿಯಲಾಗದ, ಅರಿಯಲಾರದ, complicated, unknown,

ರಹಸ್ಯ ಸ್ನೇಹಿತ ಅಂದ್ರೆ 'ಒಗಟಾದ ಗೆಳೆಯ' ಅಂದ ಅರಿತ ಮಾಡಬೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 8:55am — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ಮಾಯ್ಸ,

ಪ್ರೋಟೊ ದ್ರಾವಿಡ - ಕೆವಿ
ಕನ್ನಡ - ಕಿವಿ
ತಮಿಳು - ಚೆವಿ
ತೆಲುಗು - ಚವಿ

ಸೆವಿ ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 9:48am — kpbolumbu

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

kpbolumbu's picture

ತಮಿಳಿನಲ್ಲಿ ಚೆವಿ, ಸೆವಿ ಎರಡೂ ಸರಿಯೇ.ಸಂದರ್ಭಕ್ಕೆ ತಕ್ಕಂತೆ ಚ,ಸ ಬದಲಾಗುತ್ತವೆ.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 10:04am — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ಒಹ್ ಹೌದಾ
ನಾನು ಶಂಕರಬಟ್ಟರ ಹೊತ್ತಗೆಯಲ್ಲಿ ಓದಿದ್ದು 'ಚೆವಿ' . ಇರಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 10:39pm — hamsanandi

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

hamsanandi's picture

ತಮಿಳಿನಲ್ಲಿ ಸಾಧಾರಣವಾಗಿ, ಪದದ ಮೊದಲ ಚ ಕಾರಗಳು, ಸಕಾರ ವಾಗಿ (ಕೆಲವೊಮ್ಮೆ ಶ ಕಾರವಾಗಿ) ಬದಲಾಗಿರುತ್ತವೆ.

ಉದಾಗರಣೆಗೆ ಚೆನ್ನೈ -> ಸೆನ್ನೈ, ಚೆಯ್ದು -> ಸೆಯ್ದು. ಶೆಯ್ದು , ಚೆವಿ -> ಸೆವಿ - ಇದು ತಮಿಳಿನ ಸ ಕಾರ. ಇದನ್ನು ಯಾವಾಗಲೂ ಚ ಅಕ್ಷರದಿಂದಲೇ ಗುರುತಿಸಲಾಗುತ್ತೆ.

ಪದಮಧ್ಯದಲ್ಲಿ ಈ ಅಕ್ಷರ ಬಂದರೆ, ಅದು ಜ ಕಾರವಾಗಿ ಉಚ್ಚ್ಹಾರವಾಗುತ್ತೆ ( ಉದಾ: ಪಂಚು -> ಪಂಜು)
ಇದು ಚ ಕಾರವಾಗೇ ಕೇಳಬೇಕಾದರೆ, ಅದು ಒತ್ತಕ್ಷರವಾಗಿ ಚ್ಚ ಎಂದು ಬರಬೇಕಾಗುತ್ತೆ (ಉದಾ: ಪಚ್ಚೈ, ಅಚ್ಚಮ್)

ಕೆಲವು ಸಂಸ್ಕ್ಕೃತಮೂಲವಾದ ಪದಗಳಲ್ಲ್ಲಿ ಬರುವ ಸ ಕಾರವನ್ನು, ಬೇರೊಂದು ಅಕ್ಷರದಿಂದ ಸೂಚಿಸಲಾಗುತ್ತೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2007 - 6:22pm — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ನನಗೆ ಕನ್ನಡದಲ್ಲಿ ತದ್ಭವ ಮಾಡುವ ಬಗೆ/ಕ್ರಮ (ಸಕ್ಕದ ಒರೆಗಳಿಗೆ) ತಮಿಳಿಗಿಂತ ಚೆನ್ನಾಗಿದೆ ಎಂದು ನನ್ನ ಅನಿಸಿಕೆ
ಮಾದರಿ
ಸಕ್ಕದ ಕನ್ನಡ ತಮಿಳು
ಸ್ನೇಹಿತ - ನೇಹಿಗ - ಸ್ನೇಗಿದ

ಈ 'ನೇಹಿಗ' ಒರೆಯನ್ನು ಚಾಮರಸನು(http://www.sampada.net/blog/27/02/2007/3290) ಕೂಡ ಬಳಸಿದ್ದಾನೆ.

ಕನ್ನಡದಲ್ಲಿ ಸ್ನೇ ಎಂಬ ಕಕ್ಕಸ(ಕರ್ಕಶ)ವನ್ನು ತೆಗೆಯಲಾಗಿದೆ.

ತಮಿಳಿನಲ್ಲಿ ತದ್ಭವ ಮಾಡುವಾಗ 'ಇ' 'ಐ' ಸೇರಿಸುತ್ತಾರಂತೆ ಮತ್ತು ಮೇಲಿನಂತೆ 'ಕರ್ಕಶ'ವನ್ನು ತೆಗೆಯುವುದಿಲ್ಲ. ಇದರಿಂದ ತಮಿಳು ತದ್ಬವಗಳು ಉಲಿಯಲು ಎಡರು ಮತ್ತು ಕೇಳಲು ಅಶ್ಟು ಹಿತವೆನಿಸುವುದಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2007 - 2:11pm — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

"ಸಕ್ಕದ ಕನ್ನಡ ತಮಿಳು
ಸ್ನೇಹಿತ - ನೇಹಿಗ - ಸ್ನೇಗಿದ"

ಸ್ನೇಹಿತದ ತದುಬವ ನೇಹಿಗ ಅಲ್ಲ.

ಸ್ನೇಹ = ನೇಹ
ಕನ್ನಡದೊನು = ಕನ್ನಡಿಗ
ನೇಹದೊನು = ನೇಹಿಗ!

ಸ್ನೇಹಿತದ ತದುಬವ 'ನೇಹಿದ' ಅಂತ ಆಗಬೋದು! ಕನ್ನಡದಾಗೂ ತಮಿಳಂತೆ ತದುಬವಗಳಲ್ಲಿ ತ => ದ ಆಯ್ತವೆ.

ಮಾದ್ರಿ(ಮಾದರಿ Smiling ) :
ಪತಿವ್ರತೆ = ಹದಿಬದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2007 - 2:39pm — ವೈಭವ

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

ವೈಭವ's picture

ಆದ್ರೆ ಚಾಮರಸ 'ನೇಹಿಗ' ಬಳಸಿದ್ದಾನಲ್ಲ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2007 - 9:30pm — hamsanandi

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

hamsanandi's picture

ತಪ್ಪಿಲ್ಲ - ಹಾವಾಡಿಸುವವನು ಹಾವಾಡಿಗ, ಹೂ ಮಾರುವವನು ಹೂವಾಡಿಗ ಆಗ ಹಾಗೆ, ನೇಹವುಳ್ಳವನು ನೇಹಿಗ!
-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 10:23am — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

ಬೊಳುಂಬು

ದ್ರಾವಿಡ ನುಡಿಗಳಲ್ಲಿ ಚ/ಸ/ಶ/ಷ ಇವುಗಳ ನಡುವೆ ಬೇರೆತನವಿಲ್ಲ. ಆದ್ರೆ ತೆಲುಗು/ಕನ್ನಡದಲ್ಲಿ ಕೊಂಚ ಇದೆ.

ಕಿವಿ => ಚಿವಿ => ಚೆವಿ/ಸೆವಿ
ಕೈ =>ಚೈ(ತೆಲುಗು )

ಕನ್ನದಲ್ಲೂ ಇದು ಇದೆ.

ಇನ್ + ಸರ = ಇಂಚರ
ತಣ್ + ಸೊಡರು = ತಂಜೊಡರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2007 - 9:13pm — kpbolumbu

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

kpbolumbu's picture

ಹೌದು, 'ರಹಸ್ಯ ಸ್ನೇಹಿತ' ಎಂದರೇನು?

______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2007 - 11:07am — kpbolumbu

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

kpbolumbu's picture

ಮಹೇಶ,
ನೀವು ಕೊಟ್ಟ ಉದಾಹರಣೆ ಈ ವೈಶಿಷ್ಟ್ಯ ಕನ್ನಡದಲ್ಲೂ ಇದೆಯೆಂಬುದನ್ನು ಸೂಚಿಸುವುದಿಲ್ಲ.

Quote:
ಇನ್ + ಸರ = ಇಂಚರ
ತಣ್ + ಸೊಡರು = ತಂಜೊಡರು

ಹೀಗೆಯೇ ಒ೦ದು ಉದಾಹರಣೆ,
ತಣ್+ನೀರು=ತಣ್ಣೀರು
ಇಲ್ಲಿ ನಕಾರಕ್ಕೆ ಪರ್ಯಾಯವಾಗಿ ಣಕಾರವಿದೆಯೆನ್ನಲಾಗುವವುದೇ?ಅಂದರೆ ಅದು ಸಂಧಿ(ಒರೆಕೂಡಿಕೆ)ಯಾಗುವಲ್ಲಿ ಆಗಮವಾಗುವ ವ್ಯಂಜನ, ಅಷ್ಟೇ.
ಇನ್ನೊಂದು,
ಹಿನ್+ತಿರುಗು=ಹಿಂದಿರುಗು.....ಇಲ್ಲೂ ಒರೆಕೂಡಿಕೆಯಾಗಿದೆಯಷ್ಟೇ.

Quote:
ಸ್ನೇಹಿತ ಅನ್ನೋ ಒರೆಯನ್ನು ತಮಿಳಲ್ಲಿ ’ಸ್ನೇಗಿದ’ ಮಾಡಿರೋದು

ಇದು ಏನೆ೦ದು ನನಗೆ ತಿಳಿವಾಗಲಿಲ್ಲ. ಗ/ಹ ತಮಿಳಿನಲ್ಲಿ ಒಂದೇ ಉಚ್ಚಾರಕ್ರಮವನ್ನು ಹೊ೦ದಿವೆ. ತಮಿಳಿನಲ್ಲಿ ತ /ದ ಬೇರೆಯಲ್ಲ. ಕನ್ನಡದಂತೆ ಸ್ನೇಹಿತವೆ೦ದು ಉಚ್ಚರಿಸಬೇಕಾದರೆ 'ಸ್ನೇಹಿತ್ತ'ವೆ೦ದು ಬರೆಯಬೇಕಾಗುವುದು.

ச்னேஹித்தன் - ಕನ್ನಡದಂತೆ 'ಸ್ನೇಹಿತನ್'
ச்னேகிதன் - ಕನ್ನಡದಲ್ಲಿ ಇದನ್ನು 'ಸ್ನೇಗಿತನ್' ಎಂದೂ ಓದಬಹುದು, 'ಸ್ನೇಹಿತನ್' ಎಂದೂ ಓದಬಹುದು, 'ಸ್ನೇಗಿದನ್' ಎಂದೂ ಓದಬಹುದು. ಇಲ್ಲಿ 'ಸ್ನೇಕಿತ' ಎಂದು ಬರೆಯಲಾಗಿದೆ.

ನಿಜವಾಗಿ ಹೇಳಿದರೆ ಮೇಲಿನ ಹಾಡು ಬಹಳ ಚೆನ್ನಾಗಿದೆ. ಇತರ ಭಾಷೆಗಳ ಹಾಡುಗಳನ್ನು ನಾನೂ ಕೇಳುತ್ತೇನೆ. ಮಲೆಯಾಳದಲ್ಲಿ ನನಗೆ ವಿದ್ಯಾಸಾಗರ್ ಸಂಯೋಜನೆಯ ಹಾಡುಗಳು ಮೆಚ್ಚುಗೆಯಾಗುತ್ತವೆ.

______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2007 - 9:39pm — hamsanandi

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

hamsanandi's picture

ಬಹುಶಃ ಸ್ನೇಹಿತ ಪದವನ್ನು

சினேகிதன் - ಸಿನೇಕಿತನ್ ಎಂದು ಬರೆಯುವುದು ಸರಿ

ಪದ ಪ್ರಾರಂಭದ ಒತ್ತಕ್ಷರವು, ಇ ಉ ಸ್ವರಸೇರಿದಂತೆ ಮಾಡುವುದು ರೂಢಿ

ಉದಾ: ಪ್ರಸಾದ -> ಪಿರಚಾತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 1:18pm — roopablrao

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

roopablrao's picture

ಏನೆ ಆಗಲಿ ಹಾಡಂತೂ ಸೂಪರ್
ಈ ಹಾಡು ಬಂದಾಗ ಇವರನ್ನು ಮೆಚ್ಚಿಸಲು ತಮಿಳು ಗೆಳತಿಯೊಬ್ಬಳಿಂದ ಹಾಡು ಕಲಿತು ಹಾಡಿದ್ದೇ ಹಾಡಿದ್ದು (ಆಗ ಇನ್ನೂ ಮದುವೆಯಾಗಿರಲಿಲ್ಲ Smiling)
ಈಗಲೂ ಆ ಹಾಡು
ಮತ್ತೆ ವಸೀಗರ ಅನ್ನೊ ಹಾಡು ತುಂಬಾ ಇಷ್ಟಾ.

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 1:30pm — mahesha

ಉ: ಸ್ನೇಗಿದನೇ ಸ್ನೇಗಿದನೇ ರಗಸಿಯ ಸ್ನೇಗಿದನೇ

mahesha's picture

ಸಾದನ ಸರಗಂ ಹಾಡುಗಾರಿಕೆ ಸಕ್ಕತ್..

ನನಗೆ ತಮಿಳಲ್ಲಿ ಬಲುಮೆಚ್ಚಾದ ಹಾಡುಗಳಲ್ಲಿ ’ವಸೀಗರ’ವೂ ಒಂದು...

ಆದರೂ ’ಎವರನೋ ಒರುವನ್ ವಾಸಕ್ಕಿರಾನ್’ಗೆ ಮೊದಲ ಪಟ್ಟ.!! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಯಿಪಾಡು
  • ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
  • ಚಿಂಟು: ನಂಗೇನಿಷ್ಟ ಅಂದ್ರೆ...
  • ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator