Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

August 30, 2007 - 9:54pm — mahesha

ನಾನೂ ಒಬ್ಬ Software ಕೆಲಸಗಾರನೇ. ಅದ್ರಲ್ಲೂ ಒಂದು ದೊಡ್ಡ ಹೆಸರುವಾಸಿಯಾದ ಅಮೆರಿಕದ ಸಂಚಾರಿ ದೂರವಾಣಿ ಉಪಕರಣ Smiling ಕಂಪೆನಿಯಲ್ಲೇ ಕೆಲಸ.

ಆದ್ರೆ ಈ ’ಮಾತಾಡ್ ಮಾತಾಡು ಮಲ್ಲಿಗೆ’ ಸಿನಿಮದ ಪರಿಣಾಮ ಇರಬೇಕು. ನನ್ನ ತಂತ್ರಾಂಶೇತರ ಮಿತ್ರರು, ಯಾಕೋ ನನ್ನ ಕೆಲಸದ ಮೇಲೆ, ನನ್ನ ಕಂಪೆನಿ ಮೇಲೆ ಕಡುಗೋಪದ ಸುಡುವುರಿಯನ್ನು ಬೀರಹತ್ತಿದ್ದಾರೆ. ನನಗಂತೂ ಇವರ ಮಾತು ಕೇಳಿ ಮರುಮಾತು ಹೇಳಕ್ಕೆ ಅಂಜಿಕೆ ಆಗಿ ಹೋಗಿದೆ.

ಕೆಲವು ಅವರ ಸಾಮಾನ್ಯವಾದ ಅಂತಹ ಸಂಭಾಷಾಣಾವಾಕ್ಯಾಂಶಗಳ ಮುಖ್ಯಾಂಶಗಳು.

೧) ಮುಖ್ಯವಾಗಿ ಈ ತಂತ್ರಾಂಶೋದ್ಯೋಗಿಗಳ ಕಾರಣದಿಂದೇ ನಮ್ಮ ದೇಶಕ್ಕೆ ಈ ಅಮೆರಿಕಾಕಂಪೆನಿಗಳು ವಕ್ಕರಿಸಿಕೊಂಡಿವೆ. ಈ ಪರದೇಶಿ ಪರಂಗಿಗಳ ಗುಲಾಮರಿಂದೇ ನಮ್ಮ ಕೃಷಿಕರ ಪವಿತ್ರೋತ್ತಮಭೂ ಅತಿವಿಶೇಷಾರ್ಥಿಕವಲಯಸುಸ್ಥಾಪನೆಗೆ ಈಡಾಗಿ ಹಾಳಾಗಿ, ನಮ್ಮ ರೈತರು ವೀಥೀನಾಥರಾಗುತ್ತಿದ್ದಾರೆ Smiling.

೨) ಈ ತಂತ್ರಾಂಶೋದ್ಯೋಗಿಗಳು ಮಾಡುವ ಯಾವ ಉತ್ಪತ್ತಿಯೂ ನಮ್ಮ ದೇಶದ ಸಾಮಾನ್ಯಸಾಮಾನ್ಯ ಜನಕ್ಕೆ ಯಾವ ಪ್ರಯೋಜನೋಪಯೋಗಕ್ಕೆ ಇಲ್ಲ. ಅದು ಬರೀ ಅಮೆರಿಕೆಯಂತ ಶ್ರೀಮಂತ ಧನಿಕ ದೇಶಗಳ ಮೋಜಿಗೆ ಇರುವ ಕ್ರೀಡಾಸಾಮಗ್ರಿ.

೩) ಇವರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಧನದುರಾಶೆ ಇವರಿಗೆ. ಅದಕ್ಕೆ ಅಷ್ಟೊಂದು ಸಂಬಳ ತಗೆದುಕೊಂಡು ಸಮಾಜಕ್ಕೆ ಏನು ಮಾಡಲ್ಲ. ಇವರ ಕಂಪೆನಿಗಳಿಗೆ ನಮ್ಮ ಸರಕಾರ ಕರವಿನಾಯಿತಿ ಬೇರೆ ಕೊಟ್ಟು ಕೊಬ್ಬಿಸಿದೆ.

೪) ಇವರು ಇಲ್ಲಿ ಓದಿ ಕಲಿತು, ಅಮೆರಿಕಕ್ಕೆ ಪಲಾಯನ ಮಾಡಿದ/ವ ದೇಶದ್ರೋಹಿಗಳು

೫) ಇವರಿಂದೇ ನಮ್ಮ ಸ್ವಚ್ಛವಾದ ಅಚ್ಚ-ಕನ್ನಡದಲ್ಲಿ ತುಚ್ಛವಾದ ಆಂಗ್ಲಪದಗಳು ಭರಿತವಾಗಿ ಬರ್ಬರವಾಗಿ ನಮ್ಮ ಮಾತೃಭಾಷೆಯ ಕೊಲೆಯಾಗುತ್ತಿದೆ. ಇವರ ಆಂಗ್ಲೀಯ ವ್ಯಾಮೋಹಕ್ಕೆ ನಮ್ಮ ಭಾಷೆ, ಸಂಸ್ಕೃತಿ, ನಮ್ಮ ಭೂಜಲಾನಿಲಪ್ರಾಣಿಪಕ್ಷಿಜನಮಾನಸದ ಎಲ್ಲದವೂ ಅವನತಿಯ ದುಷ್ಪಥದಲ್ಲಿ ಸಾಗಿದೆ.

೬) ಇವರಿಂದ, ಇವರಿಗಾಗಿ ಬೃಹದ್ವೃಹತ್ ವಾಣಿಜ್ಯಸಂಕೀರ್ಣಗಳು ಬಂದು, ನಮ್ಮ ರಸ್ತೆಪಾರ್ಶ್ವದ ವ್ಯಾಪಾರಿಗಳಿಗೆ ನಷ್ಟವಾಗಿ, ಅವರ ಜೀವನೋಪಾಯಕ್ಕೆ ಸಂಕಷ್ಟವಾಗಿದೆ.

೭) ಇವರ ಯಂತ್ರರಥಗಳಿಂದ ಬಂದ ಕಡುಕೃಷ್ಣಧೂಮ್ರಾನಿಲದಿಂದ ನಮ್ಮ ನೈರ್ಗಿಕ ವಾತಾವರಣವು ಕಲುಷಿತವಾಗಿ ಮಾಲಿನ್ಯವಾಗುತ್ತಿದೆ.

೮) ಇವರ ದೆಸೆಯಿಂದ ವಿದ್ಯುದುಪಯೋಗ ಅತ್ಯತಿಯಾಗಿ, ವಿದ್ಯುದುತ್ಪಾದನಾಗಾರಕ್ಕೆಂದು ಅಣುಸ್ಥಾವರಗಳು, ಉಷ್ಣೋತ್ಪಾದಿತವಿದ್ಯುದಾಗರದಿಂದ ನಮ್ಮ ಇಡೀ ಭೂಖಂಡವೇ ಪ್ರಳಯಮುಖವಾಗಿದೆ.

.
.
.
.
.

ಇನ್ನು ಹಲವು ಆಪಾದನೋಪೇತತಂತ್ರಾಂಶಿಗಳ ಭಜನಾವಳಿ ಇದೆ, ಅವೆಲ್ಲ ಬೇಡ ಸಾಕು.
.
.
.
.
.
.
.
.

ಹೀಗೆಲ್ಲ ಅಂದ್ರು ನನ್ನ, ನನ್ನ ಕೆಲವನ್ನ Sad :( !! ಎಷ್ಟು ಬೇಜಾರಾಯ್ತು ಗೊತ್ತು ಮನಸ್ಸಿಗೆ, ಇಷ್ಟೊಂದು ಅನ್ನಿಸಿಕೊಂಡೂ ಈ ದೇಶದಲ್ಲಿ ಇರಬಾರದು Smiling Smiling

ಏನಾರ ಹೇಳೋರು ಹೇಳಿ! Smiling

Ornamental seperator
  • mahesha ರವರ ಬ್ಲಾಗ್
  • Login or register to post comments
  • 428 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 31, 2007 - 12:29am — betala

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

betala's picture

೧. ಎಸ್.ಬಿ.ಐ ತನ್ನ ಎಟಿಎಂ ಭಾರತದಲ್ಲಿ ಯಾವ ಜಾಗದಲ್ಲಿಯಾದ್ರು ಲಭ್ಯವಿದೆ... ಇದಕ್ಕೆ ಕಾರಣ ಏನು ? ತತ್ರಾಂಶಗಳು ಅಲ್ಲವೆ ?? ಇದ್ದನ್ನು ಸ್ರಿಷ್ತಿಮಾಡಲು ಎಸ್ಭಿಐ ಅಮೇರಿಕಾಕೆ ಹೋಗಲಿಲ್ಲ !!!

೨. ಅಮೇರಿಕಾ ತನ್ನ ಟೆಕ್ನಾಲಜಿನ ರೈತರಿಗೆ ಉಪಯುಕ್ತ ರೀತಿಯಲ್ಲಿ ಬಳಸುತ್ತಿದೆ, ನಾವು ಯಾಕೆ ಮಾಡುತ್ತಿಲ್ಲ ???!!!

೩. ಒಂದು ಕಾಲದಲ್ಲಿ manufacturing industry boom ನಲ್ಲಿ ಇತ್ತು, ಆಗ ಚೈನಾ ದೇಶಗಳು ಅವ್ವುಗಳನ್ನು ಉಅಪಯೋಗಿಸಿಕೊಂಡು , ತಮ್ಮ infrastructure ಉದ್ದರಿಸಿಕೊಂಡರು. ಅದೆ software industry boom ನಲ್ಲಿ ಇದೆ, ದುಡ್ಡು ಬರ್ತಯಿದೆ ... infrastructure ಬೆಳಿತ್ತಿಲ್ಲ ನಮ್ಮಲ್ಲಿ !!!

೪. software ನಲ್ಲಿ ನಾವೇ ಸಾರ್ವಭೌಮರು ಅಂತ ಮಾತಾಡ್ತೈದ್ದಿ.... china, korea ಇವೆರಲ್ಲ competation ನಲ್ಲಿ ಇದ್ದರೆ ಅನ್ನೊಡು ನಾವು ಮರೆಯಬಾರದು.

ಉದಾಹರಣೆ :
ಜೋಡೆತ್ತಿನ ಗಾಡಿ ಹೋಗ್ತಾಯಿರುತ್ತೆ, ಒಂದು ಎತ್ತು ತುಂಬ ವೇಗವಾಗಿ ಹೋಗ್ತಯಿರುತ್ತೆ, ಇನ್ನೊಂದು ನಿಧಾನಕ್ಕೆ !!!... ಈಗ ಏನು ಮಾಡಬೇಕು... ವೇಗವಾಗಿ ಹೋಗುತ್ತಿರುವುದನ್ನು ಹಿಂದೆ ಎಳೆಯುವುದು ಬುದ್ದಿವಂತರ ಲಕ್ಷಣವಲ್ಲ !!!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 2:36pm — mahesha

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

mahesha's picture

ಬೇತಾಳಯ್ಯ

"ಅಮೇರಿಕಾ ತನ್ನ ಟೆಕ್ನಾಲಜಿನ ರೈತರಿಗೆ ಉಪಯುಕ್ತ ರೀತಿಯಲ್ಲಿ ಬಳಸುತ್ತಿದೆ, ನಾವು ಯಾಕೆ ಮಾಡುತ್ತಿಲ್ಲ ???!!!"
ಇದಕ್ಕೆ ಅಂತಹ ಮಹಾನುಭವ ಸಿದ್ಧೋತ್ತರ ಹೀಗಿರ್ತದೆ.

"ಯಾಕೆ ಅಂದ್ರೆ ನಾವು ಅಮೇರಿಕರು ಅಲ್ಲ, ನಾವು ಭಾರತೀಯರು! ನಮ್ಮ ಸಂಸ್ಕೃತಿಗೂ ಅವರ ಸಂಸ್ಕೃತಿಗೂ, ಚಿಕ್ಕಜ-ಹೆಗ್ಗಜಾಂತರ ವ್ಯತ್ಯಾಸಗಳಿವೆ. ನಾವು ನಮ್ಮ ಸಂಸ್ಕೃತಿಯನ್ನು ಸಂಪ್ರದಾಯವನ್ನು ಬಿಟ್ಟು ದರಿದ್ರ, ಮೌಲ್ಯಹೀನ, ಆರ್ತರ ರಕ್ತ ಹೀರೋ ಬಂಡವಾಳಶಾಹಿ ಸಂಸ್ಕೃತಿಯನ್ನು ನಮಗೆ ಉದಾಹರಣೆಯಾಗಿ ಕೊಡಲು ನಾಚಿಕೆಯಾಗಬೇಕು. ನಮ್ಮ ಸಂಸ್ಕೃತಿಯ ಬೇರು ಇರುವುದೇ ನಮ್ಮ ಕೃಷಿಕರಲ್ಲಿ. ನಮ್ಮ ದೇಶ ಉದ್ದಾರ ಆಗೋದು ಯಾವಾಗ ಅಂದ್ರೆ ನಮ್ಮ ದೇಶದ ಕೃಷಿಕವರ್ಗದ ಮಹೊನ್ನತಿಯಾದಾಗ ಮಾತ್ರ"

ಇದನ್ನೂ ನಾನು ನನ್ನ ಕಿವಿಯಾರೆ ಕೇಳಿಸಿಕೊಂಡೆನು, ಪ್ರತಿಪ್ರತಿಕ್ರಿಯಾಹೀನಾನಾಗಿ ಮೌನಾವಲಂಬೀಯಾದೆನು! Sad

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 3:22pm — mananthprabhu

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

mananthprabhu's picture

"ನಮ್ಮ ದೇಶ ಉದ್ದಾರ ಆಗೋದು ಯಾವಾಗ ಅಂದ್ರೆ ನಮ್ಮ ದೇಶದ ಕೃಷಿಕವರ್ಗದ ಮಹೊನ್ನತಿಯಾದಾಗ ಮಾತ್ರ"
ಇದನ್ನು ತು೦ಬಾ ಜನರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಕೃಷಿಕವರ್ಗದ ಮಹೊನ್ನತಿ ಹೇಗೆ ಸಾಧ್ಯ ಎ೦ದು ಯಾರೂ ಹೇಳುವುದಿಲ್ಲ.

ಅನ೦ತ

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 9:01am — ವೈಭವ

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

ವೈಭವ's picture

ಕೆಲವು ಒರೆಗಳು ಅರ್ತ ಆಗಲಿಲ್ಲ.

ಕೃಷ್ಣಧೂಮ್ರಾನಿಲದಿಂದ
ವೀಥೀನಾಥರಾಗುತ್ತಿದ್ದಾರೆ
ಪವಿತ್ರೋತ್ತಮಭೂ ಅತಿವಿಶೇಷಾರ್ಥಿಕವಲಯಸುಸ್ಥಾಪನೆಗೆ
ಭೂಜಲಾನಿಲಪ್ರಾಣಿಪಕ್ಷಿಜನಮಾನಸದ

ಒಸಿ ಬಿಡಿಸಿ ಹೇಳಿ

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 10:25am — mahesha

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

mahesha's picture

ಕಪ್ಪುಹೊಗೆಗಾಳಿ
ಬೀದಿಯೊಡೆಯರು
ಮಡಿಯ ಮೇಲ್ಮಟ್ಟದ ನೆಲವು ಬಲು ನಿಬ್ಬರದ ಹಣದ ವಲಯವನ್ನು ನೆಲೆಸುದಕ್ಕೆ
ನೆಲನೀರುಗಾಳಿಉಸಿರುಗಳುಹಕ್ಕಿಮಂದಿಗಳ

Smiling

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 2:26pm — roshan_netla

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

roshan_netla's picture

ಇದರಲ್ಲಿ ಸತ್ಯನೂ ಇದೆ. ಆದರೆ ಸಮಸ್ಯೆ ಪರಿಹರಿಸಲು ಯಾರು ಮುಂದೆ ಬಂದಿದ್ದಾರೆ. ಚುನವಣೆ ಯಲ್ಲಿ ಯೆಸ್ಟು ಜನ ಮತ ಚಲಯಿಸುತ್ತಾರೆ?. ಆಮೆರಿಕದಲ್ಲಿ ಇದವನು ಇಲ್ಲಿ ಬಂದು ಮತದಾನ ಮಾಡಿದ್ದು ಇದಿಯ?. ಇಲ್ಲಿ ಇದ್ರೆ ಕಟಾಚಾರಕೆ ಕೆಲವರು ಹೊದ್ರೆ ಹೊದ್ರು. ನಮ್ಮ ದೇಶದ ರಾಜಕಿಯ ವ್ಯವಸ್ಥೆ ನೆಟ್ಟಗೆ ಆಗ್ಬೆಕಾದ್ರೆ ಕಲ್ತವ್ರು ಸ್ವಲ್ಪ ಹಣಮಾಡೊದ್ರೊಂದಿಗೆ ರ್‍ಆಜಕೀಯ ದ ಬಗ್ಗೆ ಕೂಡ ತಲೆ ಕೆಡಿಸ್ಕೊಳ್ಳಬೇಕು. ವ್ಯವಸ್ಥೆ ಸರಿ ಇಲ್ಲ ಅಂತ ಬೊಬೆ ಹೊಡಿಯೊಕ್ಕೆ ಯೆಲ್ಲರೀಗು ಬರುತ್ತೆ. ಆದರೆ ಮತದಾನ ದಂದು ಈ ಸಾಫ಼್ಟವೇರ್ ಕಂಪೆನಿಗಳು ರಜೆ ಕೊಡೊದಿಲ್ಲ ಅಂತ ಕೋಡ ಆರೊಪ ಇದೆ. ರ್‍ಐತ ರು ಹೇಳೊದು ಸರಿಯಾಗಿಯೆ ಇದೆ. ಗಾಂಧಿ ಕನಸಿನ ಬೆಳವಣಿಗೆ ಇದು ಅಲ್ಲವೇ ಅಲ್ಲ. ಅಮೇರಿಕ ಕಂಪನಿಗಳಿಂದ ರೈತರ ಬುಡಕ್ಕೆ ಕೊಡಲಿ ಏಟು ಬಿದ್ದಿರುವುದು ೧೦೦% ಸರಿ.
ಮತ್ತೆ SBI ATMಬಗ್ಗೆ ಹೆಳೊದು ಬೇಡ. This ATM is temporarily out of service ಅನ್ನೊದೆ ಅದರ ಮುಖ್ಯ ತಲೆ ಬರಹ ಅಗಿರುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 3:05pm — betala

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

betala's picture

ಗಾಂಧಿ ಕನಸಿನ ಬೆಳವಣಿಗೆ ಅಂದ್ರೇನು ? ನಿಮಗೆ ಗೊತ್ತೆ ? ನನಗಂತು ಗೊತ್ತಿಲ್ಲ !!! Sad

ರೈತರ ಬೆಳವಣಿಗೆ ಮಾರಕಹಾಗುತ್ತ ಇರೋದು ಬಯೊಟೆಕ್ನಾಲಜಿಯಿಂದ !!!. ಯಾಕೆ ಪ್ರಕೃತಿವಿರುದ್ದವಾದ ಬೀಜಗಳನ್ನು ಕಂಡುಹಿಡಿದರು ?? ಇದು ರೈತನಿಗೆ ಮಾರಕ ಎಂದು ಗೊತ್ತಿರಲಿಲ್ಲವೆ ?? ಈ ತರದ ಸಂಶೋದನೆಗಳು ಭಾರತದಲ್ಲು ನಡಿತಿವೆ !!!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 3:15pm — mahesha

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

mahesha's picture

"ಪ್ರಕೃತಿವಿರುದ್ದವಾದ ಬೀಜಗಳನ್ನು "

ಹೀಗಂದ್ರೇನು? ಕಾಳಿದಾಸ ಅಭಿಜ್ಞಾನ ಶಾಕುಂತಲಂನ ನಾಂದಿಯಲ್ಲಿ, ಈ ಧರಿತ್ರಿ "ಸರ್ವಬೀಜ ಪ್ರಕೃತಿ/ಯೋನಿಃ" ಅಂತ ಹೇಳಿದ್ದಾನಲ್ಲ.

ಪ್ರಕೃತಿಗೆ ವಿರುದ್ಧವಾದ ಬೀಜಗಳು ಅಂದ್ರೆ? ಇಲ್ಲಿ ಪ್ರಕೃತಿ ಅಂದ್ರೇನು?
ನಾವು ಬಿತ್ತಗಳನ್ನು ಬಿತ್ತಲು ಹೊಲಗದ್ದೆಗಳಿಗಾಗಿ ಕಾಡುಕಡಿಯಲಿಲ್ಲವೇ? ನಾವು ಅಣೆಕಟ್ಟಲು ಕಾನುಮುಳುಗಿಸಲಿಲ್ಲವೇ? ಇನ್ನು ಏನೇನಕ್ಕೂ ಅರಣ್ಯಧ್ವಂಸವಾಯ್ತಲ್ಲ.

ಪ್ರಕೃತಿಗೂ softwareಗೂ ಏನು ಸಸಂಬಂಧ? ನನಗೆ ಹೇಳ್ರಿ ಬೇತಾಳಯ್ಯ!

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 6:51pm — betala

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

betala's picture

ಮಾಯ್ಸಣ್ಣ ,

ಈ ಬಯೊಟೆಕ್ನಲಜಿಲಿ ಸಂಶೋದನೆ ಹೀಗಿದೆ ...

ಪ್ರಕೃತಿಯ ಸಹಜ ಗುಣ, ನೀವು ಗಿಡ/ಮರದಿಂದ ಬಂದಂತ ಬೀಜಗಳನ್ನು ಮತ್ತೆ ಭೂಮಿಲಿ ನೆಟ್ಟರೆ, ಮತ್ತೊಂದು ಗಿಡ... ಮರವಾಗಿ ಬೆಳೆಯುತ್ತೆ .. ಅಲ್ಲವೆ !!

ಬಯೊಟೆಕ್ನಲಜಿ ಬೀಜಗಳು - ಅದನ್ನು ನೆಟ್ಟರ ಹಣ್ಣುಗಳನ್ನು ಬಿಡುತ್ತವೆ, ಆದರೆ ಅದರಲ್ಲೆ ಬಂದಂತ ಬೀಜಗಳನ್ನು ನೆಟ್ಟರೆ ಅದು ಗೊಡ್ಡುಮರಗಳಾಗಿ ಬೆಳೆಯುತ್ತವೆ, ಫಲಗಳನ್ನು ಕೊಡುವುದಿಲ್ಲ Sad ... ನಿಮಗೆ ಇನ್ನುಷ್ಟು ಮರಗಳು ಬೇಕಾದಲ್ಲಿ ಆ ಕಂಪನಿಗಳಿಂದ ತೆಗೆದುಕೋಳ್ಳಬೇಕು. ಇದು ವಂತರ ಬಿಸಿನೆಸ್... ಬಯೊಟೆಕ್ನಲಜಿ ಬೀಜಗಳ ಬೀಜಗಳ ಮೇಲೆ ಕಂಪನಿಗಳ ಪೇಟೆಂಟ್ ಇರುತ್ತದೆ !!!

ಸುದ್ದಿ : ಜಗತ್ತಿನಿ ಅವನತಿ ಹೊಂದುತ್ತಿರುವ ಹಣ್ಣುಗಳಲ್ಲಿ "ಬಾಳೆಹಣ್ಣು" ಗಳಿಗೆ ೪ ನೇ ಸ್ಥಾನವಿದೆ.... ಇನ್ನು ಸ್ವಲ್ಪ ವರ್ಷಗಳಬಳಿಕ ನಾವು "b for banana" ಅಂತ ಹೇಳೊಕು ಆಗೊಲ್ಲ !!! Sad

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 7:20pm — mahesha

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

mahesha's picture

ಓ ಇದು ಸಾಪ್ಟವೇರ್ಗೆ ಹೇಗೆ ನಂಟಪ್ಪ ಅಂದ್ರೆ ಈ ಬಯೋ ಮಂದಿ, ತಮ್ಮ ಕೆಲಸದಾಗೆ ಕಂಪ್ಯೂಟರ್‍ ಬಳಸ್ತಾರೆ ಅಲ್ವಾ, ಅದಕ್ಕೆ!! Smiling

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 8:06pm — betala

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

betala's picture

ಹೌದು ಮಾಯ್ಸಣ್ಣ,

ಅವರ ಕೆಲವು ಕಂತ್ರಿ ಐಡಿಯಾಗಳನ್ನು ಸಿಮುಲೇಟ್ (simulate) ಮಾಡಿ ತೊರಿಸೋದು ತತ್ರಂಶ Smiling

ಇದರಿಂದ ಎಲ್ಲ ಕಂತ್ರಿ ಐಡಿಯಾಗಳು ಅಂತ ಹೇಳೊಕೆ ಆಗೊಲ್ಲ .... ಇದರಿಂದ ಒಳ್ಳೇ ಕೆಲಸಗಳನ್ನು ಮಾಡಬಹುದು.... Smiling ಬ್ರಹ್ಮಾಸ್ತ್ರ ನ ಗುಬ್ಬಿಮೇಲು ಬಿಡಬಹುದು, ವೈರಿಗಳ ಮೇಲು ಬಿಡಬಹುದು !!!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 10:04pm — muralihr

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

muralihr's picture

ಇನ್ನೂ ಕೆಲವು ಕ೦ಪೇನಿಯಲ್ಲಿ Bio-tech ಉಪಯೋಗಿಸಿ ಮಾಡುತ್ತಿರುವ ಕೆಲ್ಸಾ ಏನು ಅ೦ದರೆ ??
ಮಗು ಹುಟ್ಟಿದ ನ೦ತರ ಆತನಿಗೆ ಬರುವ ರೋಗದ ಪಟ್ಟಿಯನ್ನು ತಯಾರಿಸಿ ಅವು ಬಾರದ೦ತೆ
ಔಷದಿಯನ್ನು ಕೊಡುತ್ತಾರೆ.ಇದಕ್ಕೆ HealthCare ಎ೦ದು ಕರೆಯುತ್ತಾರೆ.
ಇದರಿ೦ದ ಔಷದಿಯನ್ನು ತಯಾರಿಸುವ ಕ೦ಪನಿಗಳಿಗೂ ಲಾಭ.
ಈ ಚಿಕಿತ್ಸೆಯನ್ನು ಮತ್ತು ರೋಗವನ್ನು ಹುಡುಕುವ Diagnostics ಕ೦ಪನಿಗಳಿಗೂ ಲಾಭ.
ಮಿಕ್ಕವರಿಗೆ ಜೀವನ ಲಭೋ!ಲಭೋ!ಲಭೋ.

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 5:09pm — roshan_netla

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

roshan_netla's picture

ನಿಮಗೆ ಗೊತಿಲ್ಲದಿದ್ರೆ ನಾನೇನು ಮಾಡಲಿ ತಿಳಿದುಕೊಳ್ಳಲು ಪ್ರಯತ್ನಿಸಿ!! ಅವರ ಬಗ್ಗೆ ಓದಿ ಗೊತ್ತಾಗ ಬಹುದು. ಅದು ಬರಿ 4 ಗೆರೆ ಯಲ್ಲಿ ಬರೆದು ತಿಳಿಸಲಾಗದ ವಿಷ್ಯ.

  • Login or register to post comments
  • link
  • Email this ಪ್ರತಿಕ್ರಿಯೆ
August 31, 2007 - 6:37pm — betala

ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು

betala's picture

ಕೋಪ ಮಾಡ್ಕೊಬೇಡಿ ಸರ್ Smiling ,

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಮಾಗ್ನಿಯಲ್ಲಿ ಎರಡು ಜೀವಾಗ್ನಿ ನಂದಿಸಿ, ರಾಮನ ಹೆಸರ ಮೆರೆಸಿದವ್ರು
  • ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
  • Inventions - ನಮ್ಮ ದೇಶಕ್ಕೆ ?
  • ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
  • ನಮ್ಮ ಕನ್ನಡವನ್ನು develop ಮಾಡಿ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 3 ಅತಿಥಿಗಳು ಆನ್ಲೈನ್ ಇರುವರು.

ಗುಣಕ್ಕೆ ಮಚ್ಚರಮುಂಟೇ?

— ರನ್ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator