ಶ್ಯಾಮಲ ದಂಡಕ
ಮಾಣಿಕ್ಯವೀಣಾಮುಪಲಾಳಯನ್ತೀಂ
ಮದಾಲಸಾಂ ಮಂಜುಳವಾಗ್ವಿಲಾಸಾಂ |
ಮಾಹೇಂದ್ರನೀಲದ್ಯುತಿಕೊಮಳಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮಿ || 1||
ಚತುರ್ಭುಜೇ ಚಂದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೊಣೇ |
ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣ\-
ಹಸ್ತೇ ನಮಸ್ತೇ ಜಗದೆಕಮಾತಃ || 2||
ಮಾತಾ ಮರತಕಶ್ಯಾಮಾ ಮಾತಂಗೀ ಮದಶಾಲಿನೀ |
ಕುರ್ಯಾತ್ ಕಟಾಕ್ಷಂ ಕಲ್ಯಾಣೀ ಕದಂಬವನವಾಸಿನೀ ||
ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ |
ಜಯ ಸಂಗೀತರಸಿಕೇ ಜಯ ಲೀಲಾಶುಕಪ್ರಿಯೇ || 4||
http://sanskritdocuments.org/all_pdf/shyaamala.pdf
ಇದಕ್ಕೆ ಅರಿತ ಬೇಕಂತೆ.. ಒಬ್ರಿಗೆ.

- mahesha ರವರ ಬ್ಲಾಗ್
- Login or register to post comments
- 696 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಶ್ಮಾಮಲ ದಂಡಕ
ಇದನ್ನು 'ಕವಿರತ್ನ ಕಾಳಿದಾಸ' ದಲ್ಲಿ ಕೇಳಿದ ಹಾಗಿದೆಯಲ್ಲ. ಅದೇನಾ ? ಅಣ್ಣಾವ್ರು ಹಾಡಿರದು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶ್ಮಾಮಲ ದಂಡಕ
ವೈಭವ್,
ಸಂಶಯವೇ ಬೇಡ, ಕವಿರತ್ನ ಕಾಳಿದಾಸದಲ್ಲಿ ರಾಜ್ ಹಾಡಿದ್ದು ಇದನ್ನೇ. ಅತ್ಯಂತ ಸ್ಪಷ್ಟ ಉಚ್ಛಾರ, ಆ ಶಾರೀರ ಇನ್ಯಾರಿಗೆ ತಾನೆ ಬರಲು ಸಾಧ್ಯ?
ಕೇಶವ Visit my blog:
http://kannada-nudi.blogspot.com
ಉ: ಶ್ಮಾಮಲ ದಂಡಕ
ಶ್ಯಾಮಲಾದಂಡಕದ ಈ ಶ್ಲೋಕಗಳಿಗೆ ಚಿಕ್ಕದಾಗಿ ಅರ್ಥ ಹೇಳಿದರೆ, ಹೀಗಾಗುತ್ತದೆ:
೧.ಮಾಣಿಕ್ಯವೀಣೆಯನ್ನಾತು ಮದದಮಲಿನಲ್ಲಿರುವಂತಿರುವ ಇಂಪಾದದನಿಯವಳಾದ ಮಾಹೇಂದ್ರನೀಲವೆಂಬ ರತ್ನದ ಕಡುಕಾಂತಿಯುಳ್ಳ ಕೋಮಲದೇಹವುಳ್ಳ ಆನೆಕುಲದ ಬೇಡರಹೆಣ್ಣನ್ನು ಮನಸ್ಸಿನಲ್ಲಿ ನೆನೆಯುತ್ತೇನೆ.
೨. ನಾಲ್ಕು ಕೈಯವಳೇ, ಚಂದ್ರನ ಒಂದು ಕಲೆಯನ್ನೇ ಆಭರಣವಾಗಿ ಧರಿಸಿರುವವಳೇ, ಎತ್ತರವಾದ ಸ್ತನಗಳುಳ್ಳವಳೇ, ಕುಂಕುಮದಂತೆ ಕೆಂಪಾದವಳೇ, ಕೆಂಪುಕಬ್ಬಿನಜಲ್ಲೆ-ಪಾಶ-ಅಂಕುಶ-ಹೂಬಾಣಗಳನ್ನು ಹಿಡಿದವಳೇ, ಜಗತ್ತಿಗೆಲ್ಲ ಒಬ್ಬಳೇ ತಾಯಾಗಿರುವ ನಿನಗೆ ನಮನ.
೩.ತಾಯಾಗಿರುವ ಪಚ್ಚೆಹಸುರಿನಂತಿರುವ ಆನೆಕುಲದವಳಾದ ಮಧುವಿನಲ್ಲಿ ಆಸಕ್ತಿಯಿರುವ ಶುಭಕರಳಾದ ಈಚಲುಗಾಡಿನಲ್ಲಿ ವಾಸಿಸುವಳು ಓರೆಗಣ್ಣಿನಿಂದಾದರೂ (ನಮ್ಮನ್ನು)ನೋಡಲಿ.
೪.ಆನೆಕುಲದಳೇ ಗೆಲ್ಗೆ! ನೀಲಿತಾವರೆಯ ಕಾಂತಿ ಯವಳೇ ಗೆಲ್ಗೆ! ಸಂಗೀತರಸಿಕಳೇ ಗೆಲ್ಗೆ! ಲೀಲೆಯೆಂಬ ಗಿಳಿಯೊಳಕ್ಕರೆಯುಳ್ಳವಳೇ ಗೆಲ್ಗೆ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಶ್ಮಾಮಲ ದಂಡಕ
ಬೆನಕರೇ ನನ್ನಿ...
ಆದ್ರೆ ಪುಂಡ್ರ
pundra (p. 164) [ pundra ] m. pl. N. of the people of the modern Bengal and Behar; n. sectarian mark; -ka, m. pl. id.; -vardhana, n. N. of a town; -½ikshu, m. sugar-cane.
ಪುಂಡ್ರೇಕ್ಷು ಅಂದ್ರೆ ಈಗಿನ ಬಿಹಾರ-ಬಂಗಾಳದ ಕಬ್ಬು... ಅಂತ ನಾನು ಅಂದುಕೊಂಡೆನು..
ಪುಂಡ್ರ ಅಂದ್ರೆ ಕೆಂಪು ಅಂತ ಗೊತ್ತಿರಲಿಲ್ಲ....( ಪಂಡರಿ ಅಂದ್ರೆ ಬಿಳಿಯಾ? )
ಪಾಶ = ಹಗ್ಗ, ಚಾವಟಿ
ಅಂಕುಶ = ತಿವಿ, ತಿಮಿ
ಉ: ಶ್ಮಾಮಲ ದಂಡಕ
ಚನ್ನಾಗಿ ಕನ್ನಡಯಿಸಿದಿಯ ಮಾಯ್ಸ.
ಕಾಳಿದಾಸ/ಮಾರಿತೊತ್ತಿಗನ 'ಕಬ್ಬಿಗತನ'ಕ್ಕೆ ಸರಿಸಾಟಿಯುಂಟೆ ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶ್ಮಾಮಲ ದಂಡಕ
ಬೆನಕರೆ,
ಚೆನ್ನಾಗಿ ಬಂದಿದೆ - ಒಂದೆರಡು ಅನುಮಾನ
ಕದಂಬ ಮರ ಈಚಲು ಮರವೇ? ಅದು ಬೇರೆಯ ಮರವೆಂದು ಓದಿರುವ ನೆನಪು.
ಮಾತಂಗ ಕನ್ಯಾಂ, ಮಾತಂಗೀ, ಇವೆಲ್ಲ ಮೀನಾಕ್ಷಿಯ ಅನ್ವರ್ಥಗಳೇ ಅಲ್ಲವೆ? ಈ ಮೀನಾಕ್ಷಿಯು ಬೇಡರ ಕುಲದವಳೆಂಬ ಕಥೆ ಇದೆಯೇ? ಮುತ್ತುಸ್ವಾಮಿ ದೀಕ್ಷಿತರ ರಚನೆಗಳಲ್ಲಿ ಮದುರೆ ಮೀನಾಕ್ಷಿಯನ್ನು ರಾಜ ಮಾತಂಗಿ ಎಂದು ಕರೆದಿರುವುದನ್ನು ನೋಡಬಹುದು. ಹಾಗೇ, ಕಬ್ಬಿನಜಲ್ಲೆಯನ್ನು ಹಿಡಿದವಳೂ ಅವಳೇ. ಕದಂಬವನವಾಸಿನಿಯೂ ಅವಳೇ.
ಕೆಲವು ಕೃತಿಗಳಲ್ಲಿ ರಾಜರಾಜೇಶ್ವರಿ ರೂಪವನ್ನೂ ಮಾತಂಗೀ ಎಂದು ಕರೆದಿದ್ದರೂ, ಅವಳು ಇಕ್ಷುದಂಡಪಾಣಿಯೋ ಅಲ್ಲವೋ ನನಗೆ ತಿಳಿಯದು.
-ಹಂಸಾನಂದಿ
ಉ: ಶ್ಮಾಮಲ ದಂಡಕ
ಮತ್ತೊಂದು ಪ್ರಶ್ನೆ:
ಮಾತಂಗಿ ಏಕೆ ಮತ್ತಿನಲ್ಲಿರುತ್ತಾಳೆ? ಮದಾಲಸಾಂ ಎಂದರೆ, ಮತ್ತಿನಿಂದ ಉಂಟಾದ ಆಲಸ್ಯವಿರುವವಳು ಎಂದು ತಾನೇ?
-ಹಂಸಾನಂದಿ
ಉ: ಶ್ಮಾಮಲ ದಂಡಕ
"ಮಾತಾ ಮರತಕಶ್ಯಾಮಾ ಮಾತಂಗೀ ಮದಶಾಲಿನೀ |
ಕುರ್ಯಾತ್ ಕಟಾಕ್ಷಂ ಕಲ್ಯಾಣೀ ಕದಂಬವನವಾಸಿನೀ |"
ಹಂಸಾನಂದಿಗಳೇ...
ನನಗೂ ಕೆಲವ ಸಂಗತಿಗಳು ಮನದಲ್ಲಿತ್ತು.. ಆದ್ರೆ ಕೇಳಿದ್ರೆ ದ್ರಾವಿಡಗಣ್ಣು ಇಲ್ಲವೇ ತಮಿಳಗಣ್ಣು ಅಂದುಕೊಂಡಾರು ಅಂತ ಕೇಳಿಲ್ಲ...
ಯಾರು ತಪ್ಪುತಿಳಿಯಬೇಡಿ..
ಇದರಲ್ಲಿ ಒಂದು ಕಪ್ಪಿಗಿ ಹೆಂಗಸನ್ನು ಬಣ್ಣಿಸಿದ್ದಾರೆ.. ಜೊತೆ ಕದಂಬ, ಮಾತಂಗ( ಆನೆಗಳು ನಮ್ಮ ತೆಂಕಣದಲ್ಲೇ ಹೆಚ್ಚು.. ಪುಲಿಕೇಶಿಯು ಆನೆ ಪಡೆಯಿಂದಲೇ ಹರ್ಶವರ್ದನನ್ನು ಹಿಮ್ಮೆಟ್ಟಿಸಿದ್ದು.. ), ಬೇಡರ ಹೆಣ್ಣು( ಆರ್ಯರಲ್ಲಿ ಬೇಡರಿಗೆ, ಕಾಳಿದಾಸ ಹೊತ್ತಲ್ಲಿ ಅಂತ ಮೇಲ್ಮೆ ಇದ್ದುದಿಲ್ಲ. ಅಂತ ನನ್ನ ತಿಳಿವು )...
ಇದೆಲ್ಲ ನೋಡಿದ್ರೆ, ನಮ್ಮ ಕನ್ನಡದ ಇಲ್ವೇ ತೆಂಕಣದ ಹೆಣ್ಣಿನ ಬಣ್ಣನೆ ಇದೆ...( ಆ ಹೆಣ್ಣು ಒಬ್ಬ ಅರಸಿಯೂ ಆಗಿಬೋದು )...
ಅದೂ ಅಲ್ಲದೇ ಇದಕ್ಕೆ "ಶ್ಯಾಮಲ ದಂಡಕ" ಅಂತ ಯಾಕೆ ಹೆಸ್ರು?
ಉ: ಶ್ಮಾಮಲ ದಂಡಕ
ಮಹೇಶರೆ,
೧.ಅದ್ವೈತಾಶ್ರಮದಿಂದ ಪ್ರಕಟಿತ ಶ್ಯಾಮಲಾದಂಡಕದಲ್ಲಿ ಮಾತಂಗೀ ಎಂಬ ದೇವಿಯ ಹೆಸರಿಗೆ ಅರ್ಥ ನೋಡಿದಾಗ ವಿವಿಧ ಭಾಷ್ಯಕಾರರು ಮತಂಗಮುನಿಯ ಮಗಳು ಎಂದೇ ಹೇಳಿದ್ದಾರೆ. ಆದ್ದರಿಂದ ಇಲ್ಲಿ ಈ ಅರ್ಥಕ್ಕೇ ಪ್ರಾಧಾನ್ಯ ಕೊಡಬೇಕೆನಿಸುತ್ತದೆ.
೨.ಆದರೆ, ನೀವು ಹೇಳಿದ ತೆಂಕಣದ ಬೆಡಗಿಯ ವರ್ಣನೆ ಇದಾಗಿರಲೂಬಹುದು ಎಂಬುದು ಮಧುರೆ ಮೀನಾಕ್ಷಿಯ ಕಥೆಯಿಂದ ಗಟ್ಟಿಯಾಗುತ್ತದೆ. ಆಕೆ ಅರಸುಕುವರಿಯೂ ಹೌದು! ಆಕೆಯೇ ದೇವಿ-ಶ್ಯಾಮಲೆ-ರಾಜರಾಜೇಶ್ವರೀ-ಲಲಿತೆ-ತ್ರಿಪುರಸುಂದರಿ ಎಲ್ಲವೂ! (ಹಂಸಾನಂದಿ-> ರಾಜರಾಜೇಶ್ವರಿ ಎಂದರೆ ಇಕ್ಷುದಂಡ, ಗಿಳಿ ಇರಲೇಬೇಕೆಂದು ತಂತ್ರಗಳು ಹೇಳುತ್ತವೆ. ರಾಜಮಾತಂಗೀ, ಚಂಡಾಲ/ಉಚ್ಛಿಷ್ಟಮಾತಂಗೀ ಎಲ್ಲವೂ ತಂತ್ರಗಳ ಪ್ರಕಾರ ಬೇರೆ ಬೇರೆ ಹೆಸರಾದರೂ ಒಂದೇ ದೇವಿಯೆಂದು ತೋರುತ್ತದೆ.) ತೆಂಕಣದ ಮಧುರೆಯಲ್ಲಿಯೇ ಶಂಕರಾಚಾರ್ಯರು ಶ್ರೀಚಕ್ರದ ಕ್ರೂರ ಬೀಜಗಳನ್ನು ಅಳಿಸಿ, ಸಾತ್ವಿಕ ಬೀಜಾಕ್ಷರಗಳನ್ನು ಸ್ಥಾಪಿಸಿದ್ದು. ಕಾಳೀ-ಕಪ್ಪಗಿರುವ ದೇವೀ-ಶ್ಯಾಮಲೆಯ ಉಲ್ಲೇಖ ಬಂದಾಗಲೆಲ್ಲ "ದಕ್ಷಿಣ" ಎಂಬ ಪದವೂ ಪಕ್ಕದಲ್ಲೆಲ್ಲೋ ಇರುವುದು ಕಾಣುತ್ತದೆ. ಕೋಲ್ಕೋತಾದ ಕಾಳೀ ಮಂದಿರದಪುರಕ್ಕೆ ದಕ್ಷಿಣೇಶ್ವರ ಎನ್ನುವುದಕ್ಕೂ ಇದಕ್ಕೂ ತಳಕುಹಾಕಬಹುದೇ?! ಅಲ್ಲಿನ ದೇವಿಗೆ "ದಕ್ಷಿಣಕಾಳಿಕೆ" ಎಂದು ತಂತ್ರಸಾಧಕರು ಕರೆಯುವುದಕ್ಕೂ ಇದಕ್ಕೂ ನಂಟಿದೆಯೇ!? ಸರಿಯಾಗಿ ತಿಳಿಯದು!
೩.ಶ್ಯಾಮಲಾ ಎಂಬುದು ಲಲಿತೆಯ(ಒಂದು ರೂಪವೇ ಆದ) ಮಂತ್ರಿಣೀದೇವಿಯ ಹೆಸರು. ಇದು ಆಕೆಯ ಸ್ತುತಿ.ಇನ್ನೂ ಹೆಚ್ಚಿನ ವಿವರಗಳಿಗೆ ದೇವೀಭಾಗವತ(ಲಲಿತೋಪಾಖ್ಯಾನ)ವನ್ನೊಮ್ಮೆ ಓದಿನೋಡುವುದು ಉಪಯುಕ್ತವೆನಿಸುತ್ತದೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಶ್ಮಾಮಲ ದಂಡಕ
ನನ್ನಿ
ಉ: ಶ್ಮಾಮಲ ದಂಡಕ
ಪ್ರಿಯ ಹಂಸಾನಂದಿ,
ಮಾತಂಗೀ ದೇವಿಯನ್ನು ಮದದಿಂದ ಆಲಸಿಯಾಗಿರುವ "ಮದಾಲಸಾ" ಎಂದು ಬೇಕೆಂದೇ ಚಿತ್ರಿಸಲಾಗಿದೆ. ಇನ್ನೊಂದರ್ಥದಲ್ಲಿ, ಅವಳ ಮನೋವೇಗದಲ್ಲೇ ಸೃಷ್ಟಿ-ಸ್ಥಿತಿ-ಲಯಗಳೇ ಆಗಿಹೋಗುವಾಗ ಅವಳು ಆಲಸಿಯಲ್ಲದೇ ಮತ್ತೇನು ಎಂಬಂಥ ವರ್ಣನೆ ನೀಡಲೆಂದೇ ಹೀಗೆ ಮಾಡಿರುವ ಸಾಧ್ಯತೆಗಳಿವೆ. ಆ ಮದಕ್ಕೆ ಇಂಬಾಗಿ, ಯಾವಾಗಲೂ ಮದ್ಯವನ್ನು ಸೇವಿಸುವಳಂತೆ, ಈಚಲುಮರದಲ್ಲಿ ಅಕ್ಕರೆಯುಳ್ಳವಳಂತೆ ಬಿಂಬಿಸಲಾಗಿದೆ. ಆದ್ದರಿಂದ ಅವಳು "ಕಾದಂಬಕಾಂತಾರವಾಸಪ್ರಿಯೇ...". ಇದೇ ಅರ್ಥದ ವಾಕ್ಯ ಕನ್ನಡದಲ್ಲೂ ಇದೆ - "ಲಕುಮಿ ಕಳ್ಳೊಡವುಟ್ಟಿದಳ್..."(ಬಹುಶಃ ಲಕ್ಷ್ಮೀಶ ಇರಬೇಕು).
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಶ್ಮಾಮಲ ದಂಡಕ
ಕದಂಬ ವೃಕ್ಷವು ದಕ್ಷಿಣ ಭಾರತದಲ್ಲಿ ಬೆಳೆಯುವ ಸಾಮಾನ್ಯ ವೃಕ್ಷ. ಸುಮಾರು ೩೦-೫೦ ಅಡಿ ಬೆಳೆಯಬಲ್ಲುದು. ಇದರ ಹೂವು ‘ಬಾಲ್ ಬ್ಯಾಡ್ಮಿಂಟನ್ ಚೆಂಡಿನ‘ ಹಾಗೆ ಹಳದಿ ಬಣ್ಣಕ್ಕೆ, ಸುಮಾರು ಅದೇ ಚೆಂಡಿನ ಗಾತ್ರಕ್ಕೆ ಇರುತ್ತದೆ. ಕರ್ನಾಟಕದ ಮೊದಲ ಅರಸುಕುಲ ಕದಂಬರ ಕುಲ ಲಾಂಛನವಾಗಿತ್ತೆಂದು ಓದಿದ್ದು ನೆನಪು. ಪ್ರಾಚೀನ ಕಾಲದಲ್ಲಿ ಕದಂಬ ಹೂವುಗಳಿಂದ ಮಧ್ಯವನ್ನು ತಯಾರಿಸುತ್ತಿದ್ದರು ಎಂದು ಶ್ರೀ ಬಿ.ಜಿ.ಎಲ್.ಸ್ವಾಮಿ ಅವರು ತಮ್ಮ ಹಸುರುಹೊನ್ನು ಕೃತಿಯಲ್ಲಿ ಬರೆದಿದ್ದಾರೆ. ಈ ವೃಕ್ಷಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ.
- ನಾಸೋ
ಉ: ಶ್ಮಾಮಲ ದಂಡಕ
ಮಹೇಶರೆ,
ಪುಂಡ್ರ ಎಂದರೆ ಕೆಂಪು,"ಗೆರೆ" ಎಂಬರ್ಥವೂ ಇದ್ದು, ಪುಂಡ್ರೇಕ್ಷು ಎಂದರೆ ಗೆರೆಗಳುಳ್ಳ/ಗೆಣ್ಣುಗಳುಳ್ಳ ಕಬ್ಬು ಎಂದೂ ಆಗಬಹುದು!
ತ್ರಿಪುಂಡ್ರ = ಮೂರುಗೆರೆಗಳ ವಿಭೂತಿ ಪಟ್ಟೆ; ಊರ್ಧ್ವಪುಂಡ್ರ = ಲಲಾಮ, ಉದ್ದುದ್ದ ಎಳೆಯುವ ನಾಮ ಎಂದರ್ಥ.
ಆದರೆ ದೇವಿಯನ್ನು ಕೆಂಪುಕಾಂತಿಯುಳ್ಳವಳು, ಕೆಂಪನ್ನು ಮೆಚ್ಚುವವಳೆಂದು ಹಿಂದಿನವರು ಬಹಳವಾಗಿ ಹೊಗಳಿರುವುದರಿಂದ ಇಲ್ಲಿ
ಪುಂಡ್ರವೆಂದರೆ ಕೆಂಪು ಎಂಬರ್ಥ ಸೂಕ್ತವೆನಿಸುತ್ತದೆ:
ಲಾಕ್ಷಾರಸಸವರ್ಣಾಭಾ.....ಅರಗಿನ ರಸದಂತೆ ಕೆಂಪಗಿರುವವಳು(ಲಲಿತಾ ತ್ರಿಶತೀ)
ಜಪಾಕುಸುಮಭಾಸುರಾಂ....ಕೆಂದಾಸವಾಳದ ಹೂವಿನಂತೆ ಕೆಂಪಗಿರುವವಳು(ಲಲಿತಾಸಹಸ್ರನಾಮ)
ಈ ಶ್ಲೋಕವು ದೇವಿಯ ವಿವಿಧ ರೂಪಗಳನ್ನು ತೋರಿದರೂ, ಮುಖ್ಯವಾಗಿ ಮಹಾತ್ರಿಪುರಸುಂದರಿಯ ಮಂತ್ರಿಣೀರೂಪವೆಂದೇ
ವಿಖ್ಯಾತವಾದ ಶುಕಶ್ಯಾಮಲಾದೇವಿಯ ಸ್ತುತಿಯೆಂದೇ ಬಹುಜನರ ಮತ.
ಪಾಂಡು, ಪಾಂಡರವೆಂದರೆ -> ಹಳದಿ ಮಿಶ್ರಿತ ಬಿಳಿ, ಬಿಳಚಿಕೊಂಡಂಥ(ಪಾಂಡುರೋಗದ)ಬಿಳಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಶ್ಮಾಮಲ ದಂಡಕ
ಪುಂಡ್ರ ಸಂಗತಿ ಯಾಕೆ ಕೇಳಿದ ಅಂದ್ರ..
ಕಾಳಿದಾಸ ಸಾಮನ್ಯ ಪ್ರಾಂತ್ಯದ ಹೂಗಳು, ಹಣ್ಣುಗಳನ್ನು ಹೇಳೋದುಂಟಲ್ಲ.. ಅದಕ್ಕೆ..
ನನ್ ಗಲಿಬಿಲಿ ಆ ಒರೆಗಂಟು ನೋಡಿ ಇನ್ನೋ ಹೆಚ್ಚಾಯ್ತು...
ಬಿಡಿಸಿದಕ್ಕೆ ನನ್ನಿ!
ದೇವಿ ಯಾಕೆ ಮಾತಂಗ ಕನ್ಯಾ?( ಆನೆ ಹುಡುಗಿ )? ಹಿನ್ನೆಲೆ ನನಗೆ ತಿಳಿದಿಲ್ಲ.
ಉ: ಶ್ಮಾಮಲ ದಂಡಕ
ಮತಂಗ ಶಬ್ದದಿಂದ ಮಾತಂಗಿ ಶಬ್ದದ ವ್ಯುತ್ಪತ್ತಿಬಗ್ಗೆ ವಿವಿಧವಾಗಿ ಹೇಳಬಹುದು:
೧.ಮತಂಗ = ಆನೆ
------------
೧)ಮತಂಗ ಅಥವಾ ಆನೆಯ(ಗಜಾಸುರನ) ಚರ್ಮವನ್ನು ಹೊದ್ದವನು ಮಾತಂಗ - ಶಿವ; ಅವನ ಸತಿ - ಮಾತಂಗೀ
೨)ಮತಂಗಗಳನ್ನು ಬೇಟೆಯಾಡುವ (ಹಿಮಾಲಯದ)ಬೇಡರ ಕನ್ಯೆ - ಮಾತಂಗೀ
ಪಾರ್ವತಿಯು ಮಾತಂಗಿಯಾಗಿ ವೇಷಧರಿಸಿ ಶಿವನಿಗೆ ಮೋಡಿ ಹಾಕಿದ ಕಥೆ ಪ್ರಾಣತೋಷಿನಿ ಇತ್ಯಾದಿ ತಂತ್ರಗಳಲ್ಲಿದೆ. ಅಲ್ಲದೆ ಇಲ್ಲಿ ರಾಜಮಾತಂಗೀ, ಉಚ್ಛಿಷ್ಟಮಾತಂಗೀ, ಚಂಡಾಲಮಾತಂಗೀ ಎಂದೂ ಹೆಸರಿದೆ.
೩)ಮತಂಗಗಳೇ ತುಂಬಿರುವ(ದಕ್ಷಿಣಾಪಥದಲ್ಲಿನ) ನಾಡಿನೊಡತಿ -ಮಾತಂಗೀ
ಇದು ಮಧುರೆ ಮೀನಾಕ್ಷಿಯ ಕಥೆಯೆಂದು ಪ್ರಚಲಿತವಾಗಿದೆ.
ಇಲ್ಲಿಯೂ ಚಂಡಾಲಕನ್ಯಾ ಎಂದು ಕಾಣುತ್ತದೆ.
೨.ಮತಂಗ = ಮುನಿಯ ಹೆಸರು
---------------------
೧) ಹಿಮವಂತನ ಸ್ನೇಹಿತನಾದ ಮತಂಗ ಮುನಿ, ತನಗೂ ಅವನಂತೆ ದೇವಿಯೇ ಪುತ್ರಿಯಾಗಬೇಕೆಂದು ಬಯಸಿ ಬೇಡಿದಾಗ ಹುಟ್ಟಿದ ಲಘುಶ್ಯಾಮಲಾದೇವಿ - ಮತಂಗನ ಮಗಳು - ಮಾತಂಗೀ
ಅವಳ ಪರಿಚಾರಿಕೆಯರೂ ಮಾತಂಗಕನ್ಯೆಯರೆಂದೇ ಪ್ರಸಿದ್ಧ! ಇದೇ ಶ್ಯಾಮಲಾದಂಡಕದ ಕೊನೆಯಲ್ಲಿ ಹೀಗಿರುವುದನ್ನು ಗಮನಿಸಿ:
"ಮತ್ತಮಾತಂಗಕನ್ಯಾಸಮೂಹಾನ್ವಿತೇ..."
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಶ್ಮಾಮಲ ದಂಡಕ
"ಮತಂಗ ಅಥವಾ ಆನೆಯ(ಗಜಾಸುರನ) ಚರ್ಮವ್ನು ಹೊದ್ದವನು ಮಾತಂಗ - ಶಿವ; ಅವನ ಸತಿ - ಮಾತಂಗೀ"
ಇದನ್ನು ನಾನು ಒಪ್ಪಿಗೆ ಆಗಲಿಲ್ಲ.
ಯಾಕೆಂದ್ರೆ 'ಮಾತಂಗಕನ್ಯಾ' ಅಂದ್ರೆ ಮಾತಂಗನ ಹೆಂಡತಿ ಅನ್ನೋದು.. ಸರಿ ಕಾಣಲ್ಲ...
ಎರಡೆನಯದು.. ಮಾತಂಗರ( ಆನೆ ಹಿಡಿಯುವವರ ) ಹುಡುಗಿ.. ಇದು ಸರಿಯಾಯ್ತು.
ನನ್ನಿ, ಬಲು ನೆರವಾಯ್ತು.
ಉ: ಶ್ಮಾಮಲ ದಂಡಕ
ಮಾತಂಗಿ= ಮಹಾ + ತಂಗಿ = ಪಾರ್ವತಿ!
ಯಾರ ತಂಗಿ ಅಂತ ಗೊತ್ತಿಲ್ಲ.
ನಾನು ಊಹಿಸೋ ಪ್ರಕಾರ ವಿಷ್ಣುವಿನ ತಂಗಿ.
ಸವಿತೃ
ಉ: ಶ್ಮಾಮಲ ದಂಡಕ
ಸವಿತೃ
ಮಾ + ತಂಗಿ ಈ ಬಿಡಿಸಿಕೆ ನನಗೆ ಬಲು ಸೋಜಿಗ ತಂತು.
ಮಹಾ ಮಾ ಅಗುವುದು ಕನ್ನಡದಲ್ಲಿ!!
ನಮ್ಮ ದ್ರಾವಿಡ ಪಂಡಿತ್ರು ಈ ಕಡೆ ಗಮನವಿರಿಸಬೇಕು....
ಉ: ಶ್ಮಾಮಲ ದಂಡಕ
ಮಹೇಶ್ ಅವರೇ,
ಸಂಸ್ಕೃತದಲ್ಲಿ ಳ ಇಲ್ಲ, ಲ ಇದೆ.
ಕೇಶವ
Visit my blog:
http://kannada-nudi.blogspot.com
ಉ: ಶ್ಮಾಮಲ ದಂಡಕ
"ಮಹೇಶ್ ಅವರೇ,
ಸಂಸ್ಕೃತದಲ್ಲಿ ಳ ಇಲ್ಲ, ಲ ಇದೆ.
ಕೇಶವ"
ದಯವಿಟ್ಟು ಈ ಗೊಂದಲವನ್ನು ನೀವ ಬಗೆಹರಿಸಿಕೊಳ್ಳಿರಿ..
ಕುಳ, ಕ್ಷಳದ ಬಗ್ಗೆ!!!
ಉ: ಶ್ಯಾಮಲ ದಂಡಕ
ಈ ಕೊಂಡಿಯಲ್ಲಿ ಒಳ್ಳೊಳ್ಳೆಯ ವಿಚಾರ ವಿನಿಮಯವಾಗಿದೆ. ನನಗೆ ಒಂದು ವಿಚಾರ ಮಾತ್ರ ಇನ್ನೂ ತಲೆಗೆ ಇಳೀತಾ ಇಲ್ಲ. ಅದು "ಮದಾಲಸಾಂ" ಪದಪ್ರಯೋಗ. ಇಲ್ಲಿ ಚರ್ಚೆಯಾಗಿರುವ ಎರಡು ವಿವರಣೆ ಹೀಗಿದೆ. ೧. ಬೆನಕ - ಮದದಮಲಿನಲ್ಲಿರುವಂತಿರುವ ೨. ಹಂಸಾನಂದಿ - ಮದಾಲಸಾಂ ಎಂದರೆ, ಮತ್ತಿನಿಂದ ಉಂಟಾದ ಆಲಸ್ಯವಿರುವವಳು ಎಂದು ತಾನೇ ?
ಈಗ, "ಮದಾಲಸಾಂ" ಮುಂದಿನ ಪದ ನೋಡಿ, "ಮಂಜುಳ ವಾಗ್ವಿಲಾಸಾಂ" - ಇಲ್ಲಿ ಮಾತಂಗಕನ್ಯೆಯು ಆಲಸಿಯಾಗಿದ್ದರೆ ಅದು ಹೇಗೆ ಒಳ್ಳೆಯ ಮಾತುಗಳನ್ನಾಡುತ್ತಾಳೆ ಅದೂ ಮಾಣಿಕ್ಯದ ವೀಣೆಯನ್ನು ಇಟ್ಟುಕೊಂಡಿರುವಾಗ ?
ಆದ್ದರಿಂದ, ಮದಾಲಸಾಂ = "ಮತ್ತಿನ ಆಲಸ್ಯದಿಂದಿರುವವಳನ್ನು" ಅಂತಷ್ಟೇ ಅಲ್ಲದೆ, "ಮದಕ್ಕೆ (= ಮತ್ತಿಗೆ, ಅಹಂಕಾರಕ್ಕೆ, ಪಿತ್ತನೆತ್ತಿಗೇರುವ ಸ್ಥಿತಿಗೆ) ಹೊರತಾಗಿರುವವಳನ್ನು ಅಂತಲೂ ವ್ಯಾಖ್ಯಾನಿಸಬಹುದಲ್ಲವೇ" ? ಇವಳಲ್ಲಿ "ಮತ್ತಿನ ಆಲಸ್ಯವಲ್ಲ, ಮದಕ್ಕೆ ಆಲಸ್ಯವಿದೆ".