ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

July 31, 2007 - 1:25pm — mahesha

ಸಂಸ್ಕೃತದಲ್ಲಿ ಮೂರು ಲಿಂಗಗಳಿವೆ. ಇದರ ಜೊತೆ ತ್ರಿಲಿಂಗ ಶಬ್ದಗಳೂ ಇವೆ.

ಸಂಸ್ಕೃತದಲ್ಲಿ ಲಿಂಗ ಇರುವುದು ನಾಮಪದ/ಸರ್ವನಾಮಗಳಿಗೆ. ನಾಮಪದ/ಸರ್ವನಾಮ ಇವು ಒಂದು ಸರಕಿನ/ವಸ್ತುವಿನ ಹೆಸರು(ಎಂದು ಹೇಳಬಹುದು). ಸಂಸ್ಕೃತದಲ್ಲಿ ಲಿಂಗ ಇರುವುದು ಈ ಹೆಸರಿಗೆ ಹೊರತು, ಈ ಹೆಸರು ತೋರಿಸುವ, ಸೂಚಿಸು, ಹೆಸರಿಸುವ ವಸ್ತು/ಸರಕಿಗಲ್ಲ.

ಅದಕ್ಕೆ ಸಂಸ್ಕೃತದಲ್ಲಿ ಒಂದೇ ಅರ್ಥ ಕೊಡುವ ಒರೆಗಳು ಬೇರೆ ಬೇರೆ ಲಿಂಗಗಳಲ್ಲಿ ಸಿಗುವುದು.

"ವೃಕ್ಷೋ ಮಹೀರುಹಶ್ಶಾಖೀ ವಿಟಪೀ ಪಾದಪಸ್ತರುಃ " ಎನ್ನುತ್ತದೆ ನಾಮಲಿಂಗಾನುಶಾಸನ. ( ಬೆನಕರಿಗೆ ನನ್ನಿ )
ಮರ = ವೃಕ್ಷಃ( ಪುಲ್ಲಿಂಗ ), ತರುಃ (ಪುಲ್ಲಿಂಗ), ಪಾದಪಃ( ಪುಲ್ಲಿಂಗ ), ಪತ್ರಕೇಶಿನೀ( ಸ್ತ್ರೀಲಿಂಗ ), ಮಹೀರುಹಃ( ಪುಲ್ಲಿಂಗ ). ಆದರೆ ಕನ್ನಡದಲ್ಲಿ ಮರವೆಂದೂ ಮಾನಿಸವಲ್ಲದ ನಪುಂಸಕಲಿಂಗ!

ಹೀಗೆ ಸಂಸ್ಕೃತದಲ್ಲಿ ಲಿಂಗ ಅನ್ನೋ concept ಇರೋದು. ಲಿಂಗ ಇರೋದು ಹೆಸರಿಗೆ, ಹೊರತು ಅದು ಸೂಚಿಸು ವಸ್ತು/ಸರಕಿಗಲ್ಲ.

==============================================================

ಕನ್ನಡದಲ್ಲಿ ನಾಲ್ಕು ಲಿಂಗಗಳಿವೆ. ( ಹಾ! Smiling )

೧) ಮಾನಿಸ ಲಿಂಗ -> ಮನುಷ್ಯರನ್ನು ಸೂಚಿಸುವ/ಹೇಳುವ.
ಮಾದರಿ : ಅವರು, ಮಂದಿ, ಹೈಕಳು, ಮಕ್ಕಳು, ಬಂದರು, ಇರುವರು, ಆಳು

೨) ಮಾನಿಸ ಗಂಡು ಲಿಂಗ -> ಮನುಷ್ಯರಲ್ಲಿ ಗಂಡುಗಳನ್ನು ಸೂಚಿಸುವ. ( English ನುಡಿಯಂತೆ ). ಗಂಡು ಅಂದರೆ 'ಗಂಡುತನ' ಇರುವ ಮಾನಿಸರು Smiling
ಮಾದರಿ: ಹುಡುಗ, ಅವನು, ಬಂದನು, ಹುಡುಗರು, ಗಂಡು, ಸುರೇಶ, ಗುಂಡ,

೩) ಮಾನಿಸ ಹೆಣ್ಣು ಲಿಂಗ -> ಮನುಷ್ಯರಲ್ಲಿ ಹೆಣ್ಣುಗಳನ್ನು ಸೂಚಿಸುವ. ( English ನುಡಿಯಂತೆ ). ಹೆಣ್ಣು ಅಂದರೆ 'ಹೆಣ್ಣುತನ' ಇರುವ ಮಾನಿಸರು Smiling
ಮಾದರಿ : ಹುಡುಗಿ, ಅವಳು, ಬಂದಳು, ಹುಡುಗಿಯರು, ಹೆಂಗಸು, ಸುರೇಶ್ವರಿ, ಗುಂಡಮ್ಮ.

೪) ಮಾನಿಸರಲ್ಲದ ಲಿಂಗ -> ಮನುಷ್ಯರಲ್ಲ ಸರಕುಗಳನ್ನು ಸೂಚಿಸುವ
ಮಾದರಿ: ಅದು, ಅವು, ಹಂದಿ, ನಾಯಿ, ಕುರಿ, ಗಿಡ, ಬಳ್ಳಿ, ಬಂದಿತು, ಹೋಯಿತು, ಬಂದವು, ಹೋದವು


ಹೀಗೆ ಕನ್ನಡದಲ್ಲಿ ಲಿಂಗ ಅನ್ನೋ concept ಇರೋದು. ಲಿಂಗ ಇರೋದು ಹೆಸರಿಗಲ್ಲ, ಅದು ಸೂಚಿಸು ವಸ್ತು/ಸರಕಿಗೆ( ಇಂಗ್ಲೀಸಂತೆ ).

ಕನ್ನಡದಲ್ಲಿ gender system ಇಂಗ್ಲೀಸಿನ gender systemಗೆ ಬಲು ಹತ್ತಿರವಾಗಿದೆ., ಸಂಸ್ಕೃತ, ಹಿಂದಿ, ಪ್ರೆಂಚು, ಇವುಗಳಂತಿಲ್ಲ!!!

ಗಮನ:
ಎತ್ತು, ಇದು ಪುಲ್ಲಿಂಗವಾದರೂ, ಕನ್ನಡದಲ್ಲಿ ಅದು ಮಾನಿಸರಲ್ಲದ ಲಿಂಗ. "ಎತ್ತು ಬಂದಿತು" ಹೊರತು "ಎತ್ತು ಬಂದನು" ಅಲ್ಲ!!!

==================================================
ಹೊತ್ತಗೆ -> ಶಂಕರಭಟ್ಟರದು ( ನನಗೆ ಇವರ ಹೆಸರು ಜಪವಾಗಿ ಬಿಟ್ಟಿದೆ Smiling )

೧- ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ
೨- ಕನ್ನಡ ಬರಹವನ್ನು ಸರಿಪಡಿಸೋಣ

ಇದನ್ನು ಓದ್ರಪ್ಪ, ಓದ್ರಪ್ಪ, ಎಲ್ಲ ಅರ್ಥ ಆಗ್ತದೆ.!!

~.~
  • mahesha ರವರ ಬ್ಲಾಗ್
  • Login or register to post comments
  • 582 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2007 - 2:03pm — benaka

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

benaka's picture

ಮಹೇಶರೇ,

ತಮ್ಮ ಕನ್ನಡ ಕಾಳಜಿಗೆ ಬಹಳ ಸಂತಸವಾಗುತ್ತದೆ. ಆದರೆ ಕನ್ನಡಾಭಿಮಾನದ ಭರದಲ್ಲಿ ಸಂಸ್ಕೃತಪದಗಳ ಕೊಲೆ ಮಾಡಬೇಡಿರಪ್ಪಾ...

ಮರಕ್ಕೆ ಸಕ್ಕದಪದಗಳನ್ನು ಬರೆಯುವಾಗ ಲಿಂಗವನ್ನು ಬದಲಿಸಿಬಿಟ್ಟಿದ್ದೀರಿ!!

Quote:

ಅದಕ್ಕೆ ಸಂಸ್ಕೃತದಲ್ಲಿ ಒಂದೇ ಅರ್ಥ ಕೊಡುವ ಒರೆಗಳು ಬೇರೆ ಬೇರೆ ಲಿಂಗಗಳಲ್ಲಿ ಸಿಗುವುದು.

ಮರ = ವೃಕ್ಷಂ( ನಪುಂಸಕ), ತುರುಃ (ಪುಲ್ಲಿಂಗ), ಪಾದಪಂ( ನಪುಂಸಕ), ಪತ್ರಕೇಶಿನೀ( ಸ್ತ್ರೀಲಿಂಗ )

ಹೀಗೆ ಸಂಸ್ಕೃತದಲ್ಲಿ ಲಿಂಗ ಅನ್ನೋ concept ಇರೋದು. ಲಿಂಗ ಇರೋದು ಹೆಸರಿಗೆ, ಹೊರತು ಅದು ಸೂಚಿಸು ವಸ್ತು/ಸರಕಿಗಲ್ಲ.

ವೃಕ್ಷ -> ನಪುಂಸಕವಲ್ಲ ಪುಲ್ಲಿಂಗ
ತರು (’ತುರು’ವಲ್ಲ) -> ಸರಿಯಾಗಿದೆ - ಪುಲ್ಲಿಂಗವೇ
ಪಾದಪ -> ನಪುಂಸಕವಲ್ಲ ಪುಲ್ಲಿಂಗ

"ವೃಕ್ಷೋ ಮಹೀರುಹಶ್ಶಾಖೀ ವಿಟಪೀ ಪಾದಪಸ್ತರುಃ " ಎನ್ನುತ್ತದೆ ನಾಮಲಿಂಗಾನುಶಾಸನ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 2:55pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ನನ್ನಿ! ಬೆನಕರೇ..

ನಾನು ಹೇಳುತ್ತಿರುವ ಸಂಗತಿ ಸರಿಯಿದೆಯಲ್ಲ.!!

ತುರು/ತರು ನಾನೇ ಕಂಡು ಹಿಡಿದು ಸರಿಪಡಿಸಿದೆ. ಪಾದಪಃ ವೃಕ್ಷಃ ಇವೆರಡು ಪುಲ್ಲಿಂಗ ಎಂದು ತಿಳಿಸಿದ್ದಕ್ಕೆ ನನ್ನಿ!! ಇದೊಂದು ಸಕ್ಕದ ಗೊಂದಲ 'ಅಮರ' ಮರೆತರೇ ಗೋವಿಂದಾ ಗೋವಿಂದಾ!! Smiling.

ಆದರೆ ಈ ಪಜೀತಿ ಕನ್ನಡದಲ್ಲಿ ಇಲ್ಲ, ಈ ವ್ಯತ್ಯಾಸವನ್ನೇ ನಾನು ಹೇಳಿರುವುದು.

ಆದರೆ ಕನ್ನಡಾಭಿಮಾನದ ಭರದಲ್ಲಿ ಸಂಸ್ಕೃತಪದಗಳ ಕೊಲೆ ಮಾಡಬೇಡಿರಪ್ಪಾ...

ಈ ಸಾಲಿನಿಂದ ನನಗೆ ಬಲು ಬೇಸರವಾಯ್ತು. ನಾವು ಸಂಸ್ಕೃತದ ಕೊಲೆತ್ನದಲ್ಲಿದ್ದೀವಿ ಎಂದ ಅವವಾದ ಹೊರಬೇಕಾಯ್ತು! ನಾನು ಎಂದು ಸಕ್ಕದ ಬೇಡ ಅಂದಿಲ್ಲ, ಇನ್ನೂ ಊರ ನಮ್ಮ ಮನೆಯಲ್ಲಿ ನಡೆಯುವ ಸಕ್ಕದ ಪಾಠಕ್ಕೆ ಅಲ್ಲಿಗೆ ಹೋದಾಗ ಮಕ್ಕಳಿ "ಚಟಕ ಚಟಕ ಚೌ ಚಟಕಾ" ಹಾಡು ಹೇಳಿಕೊಟ್ಟು ಬರುತ್ತೀನಿ.

ಸಕ್ಕದವನ್ನು ಓದಿ, ಓದಿಸಿ ಆದರೆ, ಅರೆಬರೆ ಸಕ್ಕದ ಕಲಿತು, ಸಕ್ಕದಲ್ಲಿ ಇಲ್ಲದನ್ನೆಲ್ಲ ಇದೇ ಎಂದು ಅದರ ಬಗ್ಗೆ ಪೊಳ್ಳು ಪ್ರಚಾರ ಮಾಡೋದು ತಪ್ಪು! ಈಗ ಸಕ್ಕದದಿಂದ ಕನ್ನಡ, ತಮಿಳು ಬಂದವೆ ಅನ್ನೋದು ಒಂದು ದೊಡ್ಡ ಸುಳ್ಳು, ಇದನ್ನಾ ಸಾರ್ತಾನೇ ಇದ್ದಾರೆ!!

ಇವೆಲ್ಲ ಇರಲಿ!!

ನಾನು ಹೇಳಿದ ವಿಷಯ ಸರಿಯಲ್ವಾ? ಮಾದರಿ ಸರಿಪಡಿಸುವೆನು!!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 3:47pm — ವೈಭವ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ವೈಭವ's picture

ಬೆನಕರೆ,
ಹೀಗೆ ನೀವು ಕನ್ನಡದ ಬಗ್ಗೆ ತಪ್ಪು ತಪ್ಪಾಗಿ ಯಾರಾದರೂ ಬರೆದಾಗ ಹೀಗೆ ಬರೆದರೆ ನಲಿವಾಗುತ್ತದೆ. ನಿಮ್ಮ ಹುರುಪು ಕನ್ನಡದ ಕಡೆಗೂ ಒಸಿ ಇರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 2:06pm — ವೈಭವ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ವೈಭವ's picture

ಸಂಪದದಲ್ಲಿ ದೊಡ್ಡದಾಗಿ ಒಂದು ದೊಡ್ಡ ಹಲಗೆ (ಬ್ಯಾನರ್) ಹಾಕಬೇಕು. Smiling ಹೀಗೆ

ಶಂಕರಬಟ್ಟರ ಈ ಹೊತ್ತಗೆಗಳನ್ನು ಓದಿ
"೧- ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ
೨- ಕನ್ನಡ ಬರಹವನ್ನು ಸರಿಪಡಿಸೋಣ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 4:43pm — ಸಂಗನಗೌಡ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ಸಂಗನಗೌಡ's picture

ಹಿಂದಿಯಲ್ಲಿ ಲಿಂಗ ತುಂಬಾ ಗೊಂದಲ, ಗೊಂದಲ. ’ಕುತ್ತಾ’ ಅಂದರೆ ಗಂಡು ನಾಯಿ, ’ಕುತಿಯಾ’ ಅಂದರೆ ಹೆಣ್ಣು ನಾಯಿ ಅಂತೆ. ನಾಯಿನಾ ನೋಡಿ ಯಾವಾಗಲೂ, ಅದು ಗಂಡಾ ಹೆಣ್ಣಾ ಅಂತಾ ನೋಡಿ ಮಾತಾಡೋಕಾಗುತ್ತಾ? ! Smiling

ನೀವು ಹೇಳಿದಂತೆ ಲಿಂಗಗಳ ಬಗೆಯಲ್ಲಿ ಕನ್ನಡ ಮತ್ತು ಇಂಗ್ಲಿಸ್ ನಡುವೆ ಹೊಂದಿಕೆ ಇದೆ.
ಅವನು ನನ್ನ ತಂದೆ - he is my father
ಅವಳು ನನ್ನ ತಂಗಿ - she is my mother

ಅದೇ ಹಿಂದಿಯಲ್ಲಿ,

ವೋ ಮೇರಾ ಬಾಪ್ ಹೈ , ವೋ ಮೇರಿ ಮಾ ಹೈ ಅನ್ನಬೇಕು. "ಕುತ್ತಾ ಆತಾ ಹೈ" ಅನ್ನಬೇಕು, ಇಲ್ಲಾ "ಕುತಿಯಾ ಆತಿ ಹೈ ಅನ್ನಬೇಕು" neutral gender ಮಾಡಿ ಅನ್ನೋಕಾಗಲ್ಲಾ.

ಲಿಂಗವಿಲ್ಲದ ಸರಕಿಗೂ ಲಿಂಗ ಹಚ್ಚೇ ಮಾತಾಡಬೇಕು. "ಜಹಾಜ ಆತಾ ಹೈ" ಅನಬೇಕೋ "ಆತಿ ಹೈ" ಅನಬೇಕೋ? ಹಿಂದಿ ತಾಯ್ನುಡಿಯಾಗಿರೋರಿಗೆನೋ ತಿಳಿದಿದ್ದೀತು, ಅಲ್ಲದವರಿಗೇ ಕಲಿಯುವಾಗ ಇದು ಬಲು ತೊಡಕು.

ಕನ್ನಡದಲ್ಲಿ ಹಂಗಲ್ಲಾ, "ನಾಯಿ ಬರುತ್ತೆ" ಅಂದರೆ ಆಯಿತು. Smiling
ಸುಲಿದ ಬಾಳೆಹಣ್ಣು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 4:43pm — ಸಂಗನಗೌಡ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ಸಂಗನಗೌಡ's picture

ಹಿಂದಿಯಲ್ಲಿ ಲಿಂಗ ತುಂಬಾ ಗೊಂದಲ, ಗೊಂದಲ. ’ಕುತ್ತಾ’ ಅಂದರೆ ಗಂಡು ನಾಯಿ, ’ಕುತಿಯಾ’ ಅಂದರೆ ಹೆಣ್ಣು ನಾಯಿ ಅಂತೆ. ನಾಯಿನಾ ಯಾವಾಗಲೂ, ಅದು ಗಂಡಾ ಹೆಣ್ಣಾ ಅಂತಾ ನೋಡಿ ಮಾತಾಡೋಕಾಗುತ್ತಾ? ! Smiling

ನೀವು ಹೇಳಿದಂತೆ ಲಿಂಗಗಳ ಬಗೆಯಲ್ಲಿ ಕನ್ನಡ ಮತ್ತು ಇಂಗ್ಲಿಸ್ ನಡುವೆ ಹೊಂದಿಕೆ ಇದೆ.
ಅವನು ನನ್ನ ತಂದೆ - he is my father
ಅವಳು ನನ್ನ ತಂಗಿ - she is my mother

ಅದೇ ಹಿಂದಿಯಲ್ಲಿ,

ವೋ ಮೇರಾ ಬಾಪ್ ಹೈ , ವೋ ಮೇರಿ ಮಾ ಹೈ ಅನ್ನಬೇಕು. "ಕುತ್ತಾ ಆತಾ ಹೈ" ಅನ್ನಬೇಕು, ಇಲ್ಲಾ "ಕುತಿಯಾ ಆತಿ ಹೈ ಅನ್ನಬೇಕು" neutral gender ಮಾಡಿ ಅನ್ನೋಕಾಗಲ್ಲಾ.

ಲಿಂಗವಿಲ್ಲದ ಸರಕಿಗೂ ಲಿಂಗ ಹಚ್ಚೇ ಮಾತಾಡಬೇಕು. "ಜಹಾಜ ಆತಾ ಹೈ" ಅನಬೇಕೋ "ಆತಿ ಹೈ" ಅನಬೇಕೋ? ಹಿಂದಿ ತಾಯ್ನುಡಿಯಾಗಿರೋರಿಗೆನೋ ತಿಳಿದಿದ್ದೀತು, ಅಲ್ಲದವರಿಗೇ ಕಲಿಯುವಾಗ ಇದು ಬಲು ತೊಡಕು.

ಕನ್ನಡದಲ್ಲಿ ಹಂಗಲ್ಲಾ, "ನಾಯಿ ಬರುತ್ತೆ" ಅಂದರೆ ಆಯಿತು. Smiling
ಸುಲಿದ ಬಾಳೆಹಣ್ಣು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 5:28pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

^^ ನನ್ನಿ!!

ನಿಮ್ಮ ಹತ್ರ ಹಿಂದಿ ನಾಯಿ/ಹೆಣ್ಣಾಯಿಗಳ ಬಗ್ಗೆ ಮಾಹಿತಿ ಚನ್ನಾಗಿದೆ!! Smiling

"ವೋ ಮೇರಿ ಮಾ ಹೈ " ಇದನ್ನು "ಅವಳು ಮೇರಿ ಅಮ್ಮ" ಅಂದುಕೊಂಡೆನು. Smiling

ಹಿಂದಿಯಲ್ಲಿ ಇದನ್ನು ಹೇಗೆ ಹೇಳೋದು "ನನ್ನ ಅಪ್ಪ, ಅಮ್ಮ ಬಂದ್ರು"? Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 10:08pm — ಸಂಗನಗೌಡ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ಸಂಗನಗೌಡ's picture

ನನ್ನ ಅಪ್ಪ, ಅಮ್ಮ ಬಂದ್ರು = ಮೇರೆ ಮಾ,ಬಾಪ್ ಆ ಗಯೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 10:19pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ಯಪ್ಪ...

ನನ್ನ = ಮೇರ, ಮೇರಿ, ಮೇರೆ ಮೂರು ಒರೆಗಳು!!

ನಾನು "ನನ್ನ ಅಪ್ಪ, ಅಮ್ಮ ಬಂದ್ರು" = ಮೇರ ಅಪ್ಪ, ಮೇರಿ ಅಮ್ಮ, ಆಗಮನ್ ಕಿಯೇ" ಅಂತ ಮನಸ್ಸಿ ಒಂದು ಸಾಲು ಮಾಡಿಕೊಂಡಿದ್ದೆ. Smiling
ನೋಡಿ ಈ ಹಿಂದಿಯಲ್ಲೂ ಲಿಂಗ ಸಂಸ್ಕೃತದಿಂದ ತೆರ ಇದೆ, ಆದಕ್ಕೆ ಗೋಜಲು.

ಆಹಾ ನಮ್ಮ ಕನ್ನಡ ಸಿರಿಗನ್ನಡ, ಸವಿಗನ್ನಡ, ಸುಲಬಗನ್ನಡ!!( ಬೇರೆ ನುಡಿಯೋದು ಹುಗೂರವಾಗಿ ತಗೊಳ್ಳಿ )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 6:03pm — ಶ್ರೀನಿವಾಸ ವೀ. ಬ೦ಗೋಡಿ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ಶ್ರೀನಿವಾಸ ವೀ. ಬ೦ಗೋಡಿ's picture

ಸಂಗನಗೌಡ wrote:
ಅವಳು ನನ್ನ ತಂಗಿ - she is my mother
!
ಹಿಂದಿಯಲ್ಲಿ ಮೂಂಚ್(moonch) ಇದು ಸ್ತ್ರೀ ಲಿಂಗ!
(ಒಂದಷ್ಟು ಹೆಂಗಸರು ತಮ್ಮ ಗಂಡಂದಿರನ್ನು ದಬಾಯಿಸುವದನ್ನು ನೋಡಿದರೆ, ಅವರಿಗೆ ಮೀಸೆ ಇದ್ದರೆ ಚೆನ್ನ ಅನಿಸುತ್ತದೆ! Eye-wink )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 7:42pm — ಸಂಗನಗೌಡ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ಸಂಗನಗೌಡ's picture

ಗಡಿಬಿಡಿಯಲ್ಲಾದ ಎಡವಟ್ಟು ಸಾರ್ Smiling

Quote:

ಅವಳು ನನ್ನ ತಂಗಿ = she is my mother

ಇದನ್ನು, ಅವಳು ನನ್ನ ತಾಯಿ = she is my mother ಅಂತ ಓದಿಕೊಳ್ಳಿ

ಹೊಟ್ಟ್ಯಾಗ್ ಹಾಕೋರಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 7:59pm — ಸಂಗನಗೌಡ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ಸಂಗನಗೌಡ's picture

Quote:
ಹಿಂದಿಯಲ್ಲಿ ಮೂಂಚ್(moonch) ಇದು ಸ್ತ್ರೀ ಲಿಂಗ!

ಮೇರಿ ಮೂಂಚ್ ಮೋಟಿ ಹೈ.....

ಮೂಂಚ್ ಅಂದರೆ ಮೀಸೆ ಅಂತ ಗೊತ್ತಿಲ್ಲದಿರೋರು, ಇವರ ಹೆಂಡತಿ ದಪ್ಪ ಇರಬೇಕು ಅನ್ಕೋತಾರೆ. Smiling ಅದ್ ಸರಿ, ಹಿಂದೀಲಿ ಒಂದು ನೇಮ ಅಂತಾ ಇಲ್ಲವಾ ಇದಕ್ಕೆ? ಸರಕು/ವಸ್ತು ಗಳ ಲಿಂಗ ಹ್ಯಾಗೆ ಗೊತ್ತು ಮಾಡೋದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 5:44pm — benaka

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

benaka's picture

ಛೆ ಛೆ ನಿಮಗೆ ಬೇಸರ ತರಿಸಲು ಹೇಳಲಿಲ್ಲ ಮಹೇಶರೆ; ಹಗುರವಾಗಿ ತೆಗೆದುಕೊಳ್ಳಿ!

ವೈಭವರೆ, ನಿಮ್ಮಂತೆ ನಾನೂ ಕನ್ನಡಿಗ ಸ್ವಾಮೀ! ಕನ್ನಡದಲ್ಲಿ ತಪ್ಪಾದರೂ ತಿದ್ದುವ/ತಿದ್ದಿಕೊಳ್ಳುವ ಕೆಲಸವನ್ನೂ ಮಾಡುತ್ತೇನೆ.

ಅಂದಹಾಗೆ, ಸಕ್ಕದದಿಂದ ಕನ್ನಡ ಹುಟ್ಟಿತೋ ಇಲ್ಲವೋ ಎಂದು ವಾದಿಸುವಾಗ ಎಲ್ಲರೂ ತಮ್ಮ ತಮ್ಮ "ಅಭಿಪ್ರಾಯ", "ಅನಿಸಿಕೆ" ಗಳನ್ನು ತಿಳಿಸಬಹುದೇ ಹೊರತು ಸತ್ಯವನ್ನಲ್ಲ! ಏಕೆಂದರೆ ಸತ್ಯ ಏನೆಂದು ಯಾರಿಗೂ ತಿಳಿದಿಲ್ಲ; ತಮ್ಮದೇ ಸರಿ, ದಿಟವಾದದ್ದು ಎನ್ನಲು ಯಾವ ಸಾಕ್ಷಿಯೂ ಇಲ್ಲ. ಇದು ನಿಮಗೂ ಗೊತ್ತು. ಕ್ಷಮಿಸಿ, ಐರೋಪ್ಯ ಸಂಶೋಧಕರ ಪೂರ್ವಾಗ್ರಹಪೀಡಿತ ವಾದವನ್ನು ಒಪ್ಪಲು ನಾನಂತೂ ಸಿದ್ಧನಿಲ್ಲ. ಈಗೀಗ ಅವರ ವಾದಗಳು ಭಾರತೀಯ ಸಂಶೋಧಕರಿಂದ ಮುರಿಯಲ್ಪಡುತ್ತಿರುವುದೇ ಅದಕ್ಕೆ ಸಾಕ್ಷಿ. (ಹೀಗಾದಾಗ ರಾಜಕೀಯ ಕಾರಣಗಳಿಂದ ಅದಕ್ಕೆ ಕೇಸರಿ ಬಣ್ಣ ಬಂದರೆ ಅದು ಯಾರ ತಪ್ಪು?) ಯಾವುದೋ (ಅಶಾಸ್ತ್ರೀಯ) ಹೊತ್ತಗೆಯಲ್ಲಿನ ಐರೋಪ್ಯ ವಾಕ್ಯಗಳನ್ನು ಉದುರಿಸಿದ ಮಾತ್ರಕ್ಕೆ ಸಾಕ್ಷಿಯಾಗಿಬಿಡುವುದಿಲ್ಲ. ಪಾಶ್ಚಾತ್ಯ ಸಂಶೋಧಕರ ಬಗ್ಗೆ ನನಗೆ ಅಪಾರ ಗೌರವವಿದೆ ಆದರೆ ಅವರು ಹೇಳಿದ್ದೆಲ್ಲ ದಿಟವೆನ್ನಲು ಸಾಧ್ಯವಿಲ್ಲ.

ಇದು ದೇವರಿದ್ದಾನೋ ಇಲ್ಲವೋ ಎಂಬಂತಹ ವಾದ! ಇದ್ದವರಿಗಿದ್ದಾನೆ, ಇಲ್ಲದವರಿಗಿಲ್ಲ! ದಿಟವೇನೆಂದು ಆ ದೇವನೇ ಬಲ್ಲ!
ನಾವೆಲ್ಲರೂ ವಿವಿಧ ವಾದ ಮಂಡಿಸಿದರೂ ನಮಗಿರುವ ಕನ್ನಡ ಕಾಳಜಿ ನಮ್ಮನ್ನು ಒಗ್ಗೂಡಿಸಲೆಂದೇ ನನ್ನ ಆಶಯ!
ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 6:15pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ಬೆನಕರೇ

ನಿಮ್ಮದು ನುಣುಚಿಕೊಳ್ಳುವ ಡೈಲಾಗಾಯ್ತು.

ಕನ್ನಡ ಸಂಸ್ಕೃತದಲ್ಲಿ ಹುಟ್ಟಿಲ್ಲ ಅನ್ನೋದಕ್ಕೆ ಯಾವ ಇಂಗ್ಲೀಸೋನು ಬೇಡ, ನಾವೇ ಎರಡು ನುಡಿಗಳ ವ್ಯಾಕರಣವನ್ನು ಹೋಲಿಕೆ ಮಾಡಿದರೆ ತಿಳಿದುಹೋಗುವುದು.

ಇನ್ನು

"ಐರೋಪ್ಯ ಸಂಶೋಧಕರ ಪೂರ್ವಾಗ್ರಹಪೀಡಿತ ವಾದವನ್ನು ಒಪ್ಪಲು ನಾನಂತೂ ಸಿದ್ಧನಿಲ್ಲ"

ದ್ರಾವಿಡ ನುಡಿಬಗ್ಗೆ ಅವರ ಆರಯ್ಯುಗಳು ದಿಟವೇ. ದ್ರಾವಿಡ ನುಡಿಕೂಟ, ಇಂಡೋ-ಆರ್ಯ ನುಡಿಕೂಟ ಬೇರೆ ಬೇರೆ. ನೀವು ಒಪ್ಪಲು ಸಿದ್ದವಿರದಿದ್ದರೆ ಅದು ಮೊಂಡತನ( ಬಳ್ಳಿಯಲ್ಲೂ ಹೀಗೆ ಮಾಡಿದ್ದಿರಿ, ನಾನು etymological dictionary ತೋರಿದರೂ, ಹಲವರು ಸುನಿಲ, ಅನಿವಾಸಿ ಬಂದು ಬಳ್ಳಿ ದ್ರಾವಿಡ ಎಂದು ಹೇಳಿದರೂ, ನೀವೊಬ್ಬರು ಒಂದು ಸಕ್ಕದ etymological dictionary ತೋರಿಸದೇ, ಬಳ್ಳಿ ಸಕ್ಕದದ್ದೇ ಎಂದು ಪಟ್ಟು ಹಿಡಿದಿರಿ, ಕೊನೆಗೆ ಸೆಟೆದುಕೊಂಡು ಮಾಯವಾದಿರಿ ).

ಇಲ್ಲಿ ಪೂರ್ವಗ್ರಹಪೀಡೆ ಇರುವುದು ಮೊಂಡರಿಗೆ! ಏನು ತೋರಿಸಿದರೂ, ಏನು ಹೇಳಿದರೂ, ಏಸು ಪುರಾವೆ ಸುರಿದರೂ, ತರ್ಕದ ಉತ್ರಗಳನ್ನು ಹೇಳಿದರೂ ಸುಮ್ನೆ "ಪೂರ್ವಗ್ರಹಪೀಡಿತ, ನಾನು ಒಪ್ಪಲು ಸಿದ್ಧನಿಲ್ಲ" ಅಂತ ಅಂದ್ರೆ. ನಾವು "ಇವ ಒಪ್ಪಿದ್ರೇನು, ದಿಟ ದಿಟೇ" ಅಂತ ಅಂದುಕೋಬೇಕಾಗುವುದು. ನೀವು ಕೆಲಸಕ್ಕೆ ಬಳಸುವ ಕಂಪ್ಯೂಟರ್‍ ಅದು ಯುರೋಪೋರೇ ಮಾಡಿದ್ದು, ಅದನ್ನು ನಂಬಲು ಸಿದ್ಧರಿರಬೇಡಿ.

ಯುರೋಪ್ ಮಂದಿ ಬಿಡಿ, ನಮ್ಮ ದೇಸದವರೇ ಆದ ಕೃಷ್ಣಮೂರ್ತಿ, ಮಹಾದೇವ, ಕನ್ನಡದ ಹಿರೇಮಠ, ಚಿಮೂ, ಈಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವ ಶೇಷಗಿರಿರಾಯರು( ಇವರಿಗೊಮ್ಮೆ ನಾನೊಂದು ಪೊನ್-ಇನ್ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆ ಕೇಳಿದ್ದೆ) ಇವರೂ ಇದನ್ನೇ ಹೇಳೋದು, ಇವರಿಗೂ ಯುರೊಪ್ ಪೂರ್ವಗ್ರಹಪೀಡೆ ಎಂದು ಜರಿದು "ನಾನು ನಂಬಲು ಸಿದ್ಧನಿಲ್ಲ" ಅಂದು ರಚ್ಚೆಹಿಡಿಯಬಹುದು, ನಿಮ್ಮ ಇಷ್ಟ.

ಕನ್ನಡಕ್ಕೆ ಶಾಸ್ತ್ತೀಯ ಭಾಷಾಸ್ಥಾನಮಾನವನ್ನು ಕೇಳಿ ಸಲ್ಲಿಸಿರುವ ಕಡತದಲ್ಲೂ "ಕನ್ನಡ ದ್ರಾವಿಡ ನುಡಿ" ಎಂದು ಕನ್ನಡ ವಿದ್ವಾಂಸರೇ ಹೇಳಿದ್ದಾರಂತೆ. ಅವರಿಗೂ ಪೂರ್ವಗ್ರಹಪೀಡೆಯೇ?
[ ಕೆಲವು ಸಂಸ್ಕೃತದೋರಿಗೆ ತಮಿಳಿಗೆ ಶಾಸ್ತ್ತೀಯ ಪಟ್ಟ ಬಂದುದನ್ನು ಕಂಡು ಎಷ್ಟು ಹೊಟ್ಟೆ ಉರಿದೆ ಅಂದರೆ, ತಮಿಳು ಅಯೋಗ್ಯಭಾಷೆ, ವಡ್ಡರ ಭಾಷೆ, ಸಂಸ್ಕೃತವೊಂದೇ ಶಾಸ್ತ್ತೀಯ ಅಂತ ಭಾಷಣಗಳಲ್ಲಿ, ಹೇಳಿಕೆ ಕೊಟ್ಟಿದ್ದಾರಂತೆ; ಪೇಪರ್‍ಗಳಲ್ಲೇ ಸಂಸ್ಕೃತಕ್ಕೆ ಸರಿ, ತಮಿಳು, ಕನ್ನಡಕ್ಕೆ ಯಾಕೆ ಬೇಕು ಅಂತ ಕನ್ನಡದ ದೊಡ್ಡದೊಡ್ಡ ಮಂದಿ ಹೇಳಿಕೆ ಕೊಟ್ಟಿದ್ದಾರೆ]

ನೀವು ಒಪ್ಪಿ, ಬಿಡಿ, ದ್ರಾವಿಡ ನುಡಿಕೂಟಕ್ಕೆ ಸೇರಿದ್ದು ಕನ್ನಡ, ಇದಕ್ಕೂ ಸಂಸ್ಕೃತಕ್ಕೂ ಯಾವ ನಂಟಿಲ್ಲ, ಎರವಲು ಒರೆಗಳ ಹೊರತು, ಇದು ದಿಟ! ಇದಕ್ಕೆ ಸಾಕಷ್ಟು, ಬೇಕಾದಷ್ಟು, ಪುರಾವೆಗಳು, ಆರಯ್ಯು ಹೊತ್ತಗೆಗಳು ಇವೆ.

ಆದರೆ ಸಂಸ್ಕೃತದಿಂದ ಕನ್ನಡ ಬಂದಿದೆ ಎನ್ನುವಕ್ಕೆ ಎಲ್ಲಿದೆ ಪುರಾವೆ, ಆರಯ್ಯು ಹೊತ್ತಗೆಗಳು(research)? ಒಬ್ಬ ಸರಿಯಾದ ವಿದ್ವಾಂಸನ ಕೆಲಸ ತೋರಿಸಿ?

ಇಲ್ಲಿ ನೀವು ನಾನು "ಸಂಸ್ಕೃತ ತಪ್ಪು ಬರೆದುಬಿಟ್ಟೆ" ಎಂದು ತೋರಲು ಬಾಯಿಹಾಕಿದ್ದೇ ಹೊರತು, ನಿಮಗೆ ನಿಕ್ಕುವ ಕನ್ನಡವನ್ನು ಸರಿಪಡಿಸಬೇಕೆಂಬ ಗುರಿ ಇರಲಿಲ್ಲ, ಅಂತ ನಮ್ಮ ಅನಿಸು ಸರಿಯೆನಿಸುತ್ತಿದೆ.

ನಾನು ನೇರವಾಗಿ ಹೇಳಿದ್ದೀನಿ, ನಿಮ್ಮ ಮೇಲೆ ಹಗೆಯಿಲ್ಲ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 7:39pm — benaka

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

benaka's picture

ಹೌದು ಸ್ವಾಮೀ, ವಿತಂಡವಾದಕ್ಕೆ ಮೊಂಡುತನವೇ ಮದ್ದು!
ನನ್ನ ಬಗ್ಗೆ ನಿಮಗೇನನಿಸಿದರೂ ನನಗೆ ಯಾವ ಲಾಭ/ನಷ್ಟವೂ ಇಲ್ಲ.
ನಿಮ್ಮ ಅನಿಸಿಕೆಗೆ ನನ್ನ ಸಹಮತವಿಲ್ಲ. ಈ ಹಿಂದೆ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿ ನನ್ನ ನಿಲುವನ್ನು ನಾನು ಸಮರ್ಥಿಸಿಕೊಂಡು, ಎಟಿಮೊಲಜಿಗಳನ್ನು ತಪ್ಪೇ ಇಲ್ಲದ ದೈವಪ್ರಸಾದವೆಂಬಂತೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ತೋರಿಸಿದ್ದೇನೆ. ಇದರ ಮೇಲೆ ನಿಮ್ಮಿಷ್ಟ!!
ದ್ರಾವಿಡಭಾಷೆಗಳಲ್ಲಿ ಒಂದಾದ ಬ್ರಾಹೂಯೀ, ದೂರದಲ್ಲಿ - ಅಂದರೆ ನೀವು ಹೇಳುವ ಸಕ್ಕದ ಭಾಷೆಯ ತೊಟ್ಟಿಲಾದ -ಸಿಂಧ್ ಪ್ರದೇಶದಲ್ಲಿ ಹೇಗೆ ಸೇರಿಕೊಂಡುಬಿಟ್ಟಿತೆಂದು ತಲೆಬಿಸಿಯಾಗತೊಡಗಿ, ದ್ರಾವಿಡಮೂಲಗಳು ಸಕ್ಕದದ ಪಕ್ಕಕೇ ಬರುವುದನ್ನು ನೋಡಿ ಜಾರಿಕೊಂಡ ಪಂಡಿತರಿಗೇ ಗೊತ್ತು ನಾನೇನು ಹೇಳುತ್ತಿರುವೆನೆಂದು!

ನನಗೇಕೋ, ಹೆಗಲಮೇಲೆ ಆಡನ್ನು ಹೊತ್ತವನನ್ನು ವಂಚಿಸಲು ಅದು ನಾಯಿ ಎಂದು ಬೊಬ್ಬೆ ಹಾಕಿದವರ ಕಥೆಯ ನೆನಪಾಯಿತು. ಹೋಗಲಿ ಬಿಡಿ; ನಿಮ್ಮದೇ ಸರಿಯಿರಲಿ!! ನಾನು ನುಣುಚಿಕೊಂಡವನೇ ಎಂದುಕೊಳ್ಳಿ!! ವೃಥಾ ವಾದದಿಂದ ಯಾರಿಗೇನು ಲಾಭ!?

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 8:41pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ಹೌದು ಸ್ವಾಮೀ, ವಿತಂಡವಾದಕ್ಕೆ ಮೊಂಡುತನವೇ ಮದ್ದು!
ನನ್ನ ಬಗ್ಗೆ ನಿಮಗೇನನಿಸಿದರೂ ನನಗೆ ಯಾವ ಲಾಭ/ನಷ್ಟವೂ ಇಲ್ಲ.

ಯಥಾ ಪ್ರಕಾರೇಣ!! ಕೊನೆಗೆ ಸೆಟೆದು "ವಿತಂಡವಾದ" ಅನ್ನೋದು ನೀವು ಮಾಮೂಲಿ, ಬಿಡಿ, ಇದನ್ನೆ ಮೊಂಡತನ, ಅಂತ ನಾವು ಕನ್ನಡದಲ್ಲಿ ಹೇಳಿದ್ದು. ನೀವು ಒಂದಾದರೂ ಸಕ್ಕದದ etymological ನಿಘಂಟು ತೋರಿಸಿದ್ರ?
ಹೀಗೆ ಪುರಾವೆ ಹೇಳದೇ ಇರುವುದಕ್ಕೆ "ವಿತಂಡವಾದ" ಅನ್ನಲೇ ಬೇಕು.

ಇನ್ನು ಲಾಭ/ನಷ್ಟದ ಮಾತು. ಕನ್ನಡಕ್ಕೆ ಲಾಭನಷ್ಟ ಕಟ್ಟಿಕೊಂಡು ನಿಮಗೇನಾಗಬೇಕಿಲ್ಲ ಗೊತ್ತು. ಆದ್ರೆ ಸಂಸ್ಕೃತದ ಬಗ್ಗೆ ಮಾತು ಬಂದ್ರೆ ಬಾಯಿ ಹಾಕ್ತೀರ.

ದ್ರಾವಿಡಭಾಷೆಗಳಲ್ಲಿ ಒಂದಾದ ಬ್ರಾಹೂಯೀ, ದೂರದಲ್ಲಿ - ಅಂದರೆ ನೀವು ಹೇಳುವ ಸಕ್ಕದ ಭಾಷೆಯ ತೊಟ್ಟಿಲಾದ -ಸಿಂಧ್ ಪ್ರದೇಶದಲ್ಲಿ ಹೇಗೆ ಸೇರಿಕೊಂಡುಬಿಟ್ಟಿತೆಂದು ತಲೆಬಿಸಿಯಾಗತೊಡಗಿ, ದ್ರಾವಿಡಮೂಲಗಳು ಸಕ್ಕದದ ಪಕ್ಕಕೇ ಬರುವುದನ್ನು ನೋಡಿ ಜಾರಿಕೊಂಡ ಪಂಡಿತರಿಗೇ ಗೊತ್ತು ನಾನೇನು ಹೇಳುತ್ತಿರುವೆನೆಂದು

ಪುರಾವೆ ಎಲ್ಲಿ? ನೀವು ಸುಳ್ಳು ಹೇಳುತ್ತಿದ್ದೀರ.

ಬ್ರಾಹೂಯೀ ಇಂಡೋ-ಯುರೋಪಿಯನ್ ನುಡಿಗಳು ದ್ರಾವಿಡ ನುಡಿಗಳನ್ನು ತೆಂಕಣಕ್ಕೆ ಒತ್ತರಿಸಿಕೊಂಡು ಬಂದಿರುವಕ್ಕೆ ಒಂದು ದೊಡ್ಡ ಪುರಾವೆ. ಇದನ್ನೇ ಹೆಚ್ಚು ಮಂದಿ ಹೇಳೋದು. ಆದರೆ "ನೀವು ಅದನ್ನೆಲ್ಲ ನಂಬಲು ಸಿದ್ಧರಿಲ್ಲ" ( ಪೂರ್ವಗ್ರಹದ ಹೇತು ).

ನನಗೇಕೋ, ಹೆಗಲಮೇಲೆ ಆಡನ್ನು ಹೊತ್ತವನನ್ನು ವಂಚಿಸಲು ಅದು ನಾಯಿ ಎಂದು ಬೊಬ್ಬೆ ಹಾಕಿದವರ ಕಥೆಯ ನೆನಪಾಯಿತು. ಹೋಗಲಿ ಬಿಡಿ; ನಿಮ್ಮದೇ ಸರಿಯಿರಲಿ!! ನಾನು ನುಣುಚಿಕೊಂಡವನೇ ಎಂದುಕೊಳ್ಳಿ!! ವೃಥಾ ವಾದದಿಂದ ಯಾರಿಗೇನು ಲಾಭ!?

ವಿತಂಡವಾದ ಮತ್ತೊಂದು ಮಾದರಿ.

ಇದೊಂದು "ಬಳ್ಳಿ" ಕತೆಯಾಗುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ. ನೋಡೋಣ, ಪುರಾವೆ ಕೊಡದೆ ಏನೇನೆಲ್ಲ ಬರೆಯುತ್ತಿರಂತ.

ಒಟ್ಟಿನಲ್ಲಿ ಶ್ರೀಮಾನ್ ಬೆನಕು ತಮಗೆ ಒಪ್ಪಿಗೆ ಆಗದವರನ್ನು ಯಥಾ ಪ್ರಕಾರೇಣ ಸಂಪ್ರದಾಯದಂತೆ
"ಸಂಸ್ಕೃತದ ಕೊಲೆಗೆ ನಿಂತಿರುವವರು, ನಾಯಿಯೆಂದು ಆಡು ಮಾರುವವರು, ವಿತಂಡವಾದಿ" ಎಂದು ಮೊಂಡುಹಿಡಿಯುವರು.

ಇವೆಲ್ಲ ಬಿಟ್ಟು. ಸಂಸ್ಕೃತದ ಲಿಂಗಗಳು ಮತ್ತು ಕನ್ನಡದ ಲಿಂಗಗಳ ಬಗ್ಗೆ ಬರೆದ ವಿಷಯದ ಬಗ್ಗೆ ಏನಾದರೂ ಮಾತಾಡಿದರಾ? ಇಲ್ಲ. ಏಕೆಂದರೆ ಆ ದಿಟವನ್ನು ಒಪ್ಪಲು "ಇವರು ಸಿದ್ಧರಿಲ್ಲ"! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 7:51pm — ವೈಭವ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ವೈಭವ's picture

ಬೆನಕ,

ಅಬ್ಬ.. ಇದನ್ನ ಹೇಳಿ ಹೇಳಿ ನಾಲಿಗೆ ಬಿದ್ದು ಹೋಗಿದೆ. Sad

ನೀವು ಶಂಕರಬಟ್ಟರ ಹೊತ್ತಗೆಯನ್ನ ಓದಿದ್ದೀರ....???

ನಿಮಗೆ ಪುಣಿಯ ಬರಲಿ, ಅದ್ಯಾವ ದೊಡ್ಡ ಮಾನಿಸ ತೋರ್ಸಿದಾನೆ ಕನ್ನಡ ಸಕ್ಕದದಿಂದ ಬಂದಿದೆ ಅಂತ ಹೇಳಿ, ಅವನ ವಾದ ಸರಿಯಾಗಿದ್ದರೆ ಅದನ್ನೆ ನಂಬ್ತೀವಿ. ಇಲ್ಲದಿದ್ದರೆ ಈಗಾಗಲೆ ತೋರಿಸಿರುವ ಹಾಗೆ ಕನ್ನಡ ದ್ರಾವಿಡ, ಸಕ್ಕದ ಇಂಡೋ-ಯೂರೋಪಿಯನ್ ಅಂತ ಒಪ್ಕೊಳ್ಳಿ. ಒಪ್ಪದಿದ್ದರೆ ಇದು ನಿಮ್ಮ ಮೊಂಡುತನವಶ್ಟೇ...

ನಿಮಗೆ ಅಶ್ಟ್ರು ನಂಬಿಕೆ ಇದ್ದರೆ ಈ ವಿಕಿಪಿಡಿಯಾದವರಿಗೆ ಹೇಳುತ್ತೀರ ? ಕನ್ನಡ ಸಕ್ಕದಿಂದ ಬಂದಿಲ್ಲ ಅಂತ.

http://en.wikipedia.org/wiki/Kannada

Kannada is one of the oldest Dravidian languages with an antiquity of at least 2000 years.[6][7][8][9][10] The spoken language is said to have separated from its proto-Dravidian source earlier than Tamil and about the same time as Tulu.[11]
--------------------------------------

ಅಬ್ಬಬ್ಬ, ಈ ಒಸಿ ಕನ್ನಡಿಗರಿಗ್ಯಾಕೆ ಸಕ್ಕದದ ಸಕತ್ ಒಲವು ?? ನನಗೆ ಈ ಐಬು ಕಾಡುತ್ತಿದೆ 'ಒಸಿ' ಕನ್ನಡಿಗರು ಸಕ್ಕದದ 'ಗುತ್ತಿಗೆ' ತಕೊಂಡಿದರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 7:53pm — ವೈಭವ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ವೈಭವ's picture

ಅಚ್ಚು ತಪ್ಪು
ನಿಮಗೆ ಆಟೋಂದು ನಂಬಿಕೆ ಇದ್ದರೆ ಈ ವಿಕಿಪಿಡಿಯಾದವರಿಗೆ ಹೇಳುತ್ತೀರ ? ಕನ್ನಡ ಸಕ್ಕದಿಂದ ಬಂದಿದೆ ಅಂತ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 8:54pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ಅಯ್ಯಾ

ಅವರನ್ನೆಲ್ಲ ಇವರು ಒಂದೇ ಮಾತಲ್ಲಿ

೧) ಪೂರ್ವಗ್ರಹಪೀಡಿತರು
೨) ವಿತಂಡವಾದಿಗಳು
೩) ನಾಯಿ ತೋರಿಸಿ, ಆಡೆಂದು ಮಾರೋರು.
೪),....

ಇನ್ನು ಹಲವು ನಾಮಾವಳಿಗಳ ಸಂಪದ್ರಾಯ ಮಾಡಿ, ತಮ್ಮದ್ದೇ ಸರಿಯೆಂದು ತೋರಿಸಿಬಿಟ್ಟರಲ್ಲ!! Smiling

http://www.ijdl.org/
ಇದನ್ನ ಒಸಿ ನೋಡು. ನಮ್ಮ ದೇಶದೋರೇ ಎಲ್ಲ. ಮೊನ್ನೆ ಮೈಸೂರಲ್ಲೇ "national level dravidian conference" ಆಗಯ್ತೆ. ಅಲ್ಲಿದ್ದ ದ್ರಾವಿಡಿಯನ್ linguistಗಳು ( ಯಾರು ಯಾರು ಕನ್ನಡ-ತಮಿಳು ಸಂಸ್ಕೃತದಿಂದ ಬಂದಿಲ್ಲ, ಅವೆಲ್ಲ ದ್ರಾವಿಡ ನುಡಿ ಅಂತಾರೋ ) ಅವರೆಲ್ಲ ಆ ನಾಮಾವಳಿಗಳಿಂದ ಕರೆಸಿಕೊಳ್ಳೋರು.

ಕಾಯ್ತಿರಣ್ಣ, ಹೀಗೆ ದೊಡ್ಡ ದೊಡ್ಡ ಸಂಸ್ಕೃತದ ಪದಗಳ ಸುರಿಮಳೆ ಕಾದಿದೆ... ಆದರೆ ಒಂದಕ್ಕೂ ಪುರಾವೆ ಗಿರಾವೆ ಕೊಡಲ್ಲ, ಅವರು ಹೇಳದ ಮೇಲೆ ಆಗಿ ಹೋಯ್ತು, ಬ್ರಹ್ಮವಾಕ್ಯ, ಸುಗ್ರೀವಾಜ್ಞೆ!

ವಿಷಯ ನೆಗೆದು ಬಿದ್ದು ಹೋಯ್ತು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 9:33pm — hamsanandi

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

hamsanandi's picture

Quote:

ನಿಮಗೆ ಪುಣಿಯ ಬರಲಿ, ಅದ್ಯಾವ ದೊಡ್ಡ ಮಾನಿಸ ತೋರ್ಸಿದಾನೆ ಕನ್ನಡ ಸಕ್ಕದದಿಂದ ಬಂದಿದೆ ಅಂತ ಹೇಳಿ

ವೈಭವರೆ,

ಈ ಉತ್ತರಕ್ಕೂ, ಈ ಎಳೆಯಲ್ಲಿ ಇರುವ ಕನ್ನಡದಲ್ಲಿ/ಸಂಸ್ಕೃತದಲ್ಲಿ ಲಿಂಗ ಎಂಬ ವಿಷಯಕ್ಕೂ ಸಂಬಂಧ ಇಲ್ಲ. ಆದರೆ, ನಿಮಗೆ ಇದು ಗೊತ್ತಿಲ್ಲದಿದ್ದರೆ ತಿಳಿಸೋಣ ಅಂತ ಬರೆದೆ.

ಕನ್ನಡದ ಹಳೆಯ ವೈಯಾಕರಣಿಗಳು (ಕೇಶಿರಾಜನನ್ನೂ ಸೇರಿಸಿ ಅಂತ ನನ್ನ ನೆನಪು), ಕನ್ನಡ ಸಂಸ್ಕೃತದಿಂದ ಬಂದಿದ್ದು ಅನ್ನುವ ತಪ್ಪು ಕಲ್ಪನೆಯಲ್ಲಿದ್ದರು, ಹಾಗೇ ಅವರ ಪುಸ್ತಕಗಳಲ್ಲಿಯೂ ಬರೆದಿದ್ದ್ದಾರೆ. ಬಹುಶಃ ಅವರಿಗೆ ಇತರ ದ್ರಾವಿಡ ಭಾಷೆಯಳ ಪರಿಚಯ ಇರಲಿಲ್ಲವೋ (ಇದು ತೀರಾ ಅನುಮಾನ), ಅಥವಾ ಒಪ್ಪಿಕೊಳ್ಳದ ಮೊಂಡತನವೋ ನಾನರಿಯೆ.

ಹಲವರು ಈ ಕಲ್ಪನೆಯಲ್ಲೇ ಈಗಲೂ ಇರುವುದಕ್ಕೆ ಇದೂ ಒಂದು ಕಾರಣ ಇರಬಹುದು/

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 10:13pm — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ಕನ್ನಡದ ಹಳೆಯ ವೈಯಾಕರಣಿಗಳು (ಕೇಶಿರಾಜನನ್ನೂ ಸೇರಿಸಿ ಅಂತ ನನ್ನ ನೆನಪು), ಕನ್ನಡ ಸಂಸ್ಕೃತದಿಂದ ಬಂದಿದ್ದು ಅನ್ನುವ ತಪ್ಪು ಕಲ್ಪನೆಯಲ್ಲಿದ್ದರು, ಹಾಗೇ ಅವರ ಪುಸ್ತಕಗಳಲ್ಲಿಯೂ ಬರೆದಿದ್ದ್ದಾರೆ. ಬಹುಶಃ ಅವರಿಗೆ ಇತರ ದ್ರಾವಿಡ ಭಾಷೆಯಳ ಪರಿಚಯ ಇರಲಿಲ್ಲವೋ (ಇದು ತೀರಾ ಅನುಮಾನ), ಅಥವಾ ಒಪ್ಪಿಕೊಳ್ಳದ ಮೊಂಡತನವೋ ನಾನರಿಯೆ.

ಹಲವರು ಈ ಕಲ್ಪನೆಯಲ್ಲೇ ಈಗಲೂ ಇರುವುದಕ್ಕೆ ಇದೂ ಒಂದು ಕಾರಣ ಇರಬಹುದು/

ಹಂಸಾನಂದಿಯವರಿಗೆ ನನ್ನಿ. ಒಪ್ಪವಾದ ಮಾತು. ಈ ಅರೆಯಮಿಕೆ/ignorance/ಮೊಂಡುತನಕ್ಕೆ ಏನು ಹೇಳೋಣ!

ವೈಬವ ಹೇಳಿದುದರ ಭಾವ "ಯಾರೊಬ್ಬರಿಂದಲೂ ಕನ್ನಡ ಸಕ್ಕದದಿಂದ ಬಂದಿದೆ ಅಂತ ತೋರಿಸಕ್ಕೆ ಆಗಲ್ಲ ಅಂತ". ಅದಕ್ಕೆ ಅದು ಸರಿ. ( ತುಸು ಸಿಟ್ಟಿನಿಂದ ಬರೆದಿರಬೇಕು Smiling )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 1, 2007 - 8:10am — ವೈಭವ

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

ವೈಭವ's picture

ಹಂಸಾನಂದಿ,
ನನ್ನಿ ನಿಮ್ಮ ಮಾತುಗಳಿಗೆ. ಮಹೇಶರು ಈ ತಲೆಬರಹ "ಸಂಸ್ಕ್ರುತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಹೇಗೆ ಬೇರೆ ಬೇರೆ" ಬರೆದುದು ಕನ್ನಡ ಸಕ್ಕದ ಬೇರೆ ಬೇರೆ ನುಡಿಗಳು ಮತ್ತು ನುಡಿಕೂಟಗಳಿಗೆ ಸೇರಿವೆ ಎಂದು ತೋರಿಸಲು. ಆದ್ದರಿಂದ ನಾನು ಬರೆದಿರುವುದು ಈ ತಲೆಬರಹಕ್ಕೆ ಹೊಂದುವುದು. ಏನಪ್ಪ ಮಾಯ್ಸ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 5:23pm — kannadakanda

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

kannadakanda's picture

ಸಂಸ್ಕೃತದಲ್ಲಿ ಲಿಂಗನಿರ್ಣಯ ಒಂದು ಶಬ್ದಕ್ಕೆ ಸೇರುವ ಪ್ರತ್ಯಯವನ್ನವಲಂಬಿಸಿದೆ. ಇದು ನಮಗೆ ವಿಚಿತ್ರವಾಗಿ ತೋಱಿದರೂ ಅದು ಆ ಭಾಷೆಗೆ ಅಷ್ಟೆ ಸಹಜ. ಅದನ್ನು ಲೇವಡಿ ಮಾಡಲಾಗದು. ಆ ತೆಱನಾದ ವೈಚಿತ್ರ್ಯಗಳು ಕನ್ನಡದಲ್ಲೂ ಉಂಟು. ಇತರ ಭಾಷೆಗಳಲ್ಲೂ ಉಂಟು. ಹೆಚ್ಚಿನ ಮಾಹಿತಿಗೆ kannadakanda@gmail.com ಗೆ ಪತ್ರ ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 30, 2008 - 6:17am — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ನಾನು ನಿಮ್ಮ ಲೇವಡಿ, ಸಹಜ ಇದಕ್ಕೆ ಏನು ಹೇಳಲ್ಲ ಈಗ.. Smiling

ಕನ್ನಡದಲ್ಲಿ ಅದೇನು ವಿಚಿತ್ರ ಇದೆ ಹೇಳಿ.. ಸಂಪದದಲ್ಲೇ!!

ದ್ರಾವಿಡ ನುಡಿಗಳಶ್ಟು Structurally Stable ಯಾವುದೂ ಇಲ್ಲ, ಸಂಸ್ಕೃತ ಕೂಡ.. ಅದರಲ್ಲು ತೆಂಕು ದ್ರಾವಿಡ ನುಡಿ ಕನ್ನಡ-ತಮಿಳು ಇನ್ನೂ ಹೆಚ್ಚು stable.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 30, 2008 - 8:44am — hamsanandi

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

hamsanandi's picture

ಹೌದು - ಕನ್ನಡ ತಮಿಳುಗಳಲ್ಲಿರುವ ಅವನು-ಅವಳು-ಅದು ವ್ಯತ್ಯಾಸ ತೆಲುಗಿನಲ್ಲಿ ಇಲ್ಲ ( ಅವಳು, ಹಾಗೂ ಅದು ಎನ್ನುವುದಕ್ಕೆ ಒಂದೇ ಪದ ಬಳಕೆಯಾಗತ್ತೆ)

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 30, 2008 - 8:51am — mahesha

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

mahesha's picture

ಹಂಸಾನಂದಿಗಳು ಬಲ್ಲರು..

ನಾನು ತಂಕು ದ್ರಾವಿಡನುಡಿಗಳು ಇನ್ನೂ stable ಎಂದು ಬರೆದ ಸಾಲಿನ ಚೂರನ್ನ ಸರಿಯಾಗಿ ಅರಿತರು.!

ನಮ್ಮ ಕೆಲಸದೊರೆ/ಕ್ರಿಯಾಪದಗಳಿಗೆ ಸಮನಾದ ಬಳಕೆಗಳುಂಟೇ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 4:26pm — kannadakanda

ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!

kannadakanda's picture

ಲಿಂಗನಿರ್ಣಯ ವಿಷಯವಾಗಲ್ಲದಿದ್ದರೂ. ಭೂತಕಾಲದ ಪ್ರತ್ಯಯಗಳಲ್ಲಿ ಬೇಱೆಯ ಜನಗಳಿಗೆ ಕಷ್ಟ್ವವಾಗುವಷ್ಟು ಅನಿಯಮಿತ (ನಿಯಮವನ್ನು ಮಾಡಲಾಗದ) ರೂಪಗಳಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಮರನಾಥದ ಕಪಟ-ಲಿಂಗ
  • ಪ್ರಭು ಲಿಂಗ ಲೀಲೆ - DLI ಹೊತ್ತಗೆಸಿರಿ
  • how much, hom many ಕನ್ನಡದಲ್ಲಿ....
  • ಕನ್ನಡ ಕಲಿಯುವದು ಕಷ್ಟವೇ?
  • ಅವನಿವನುವನ್
Syndicate content

ಲೇಖಕರು

mahesha's picture

ಪೂರ್ಣ ಹೆಸರು
-------------------------

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator