20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡಿಗರಿಲ್ಲದ ಭಾರತ ಕ್ರಿಕೆಟ್ ಪಡೆ

November 7, 2008 - 12:40pm
makrumanju
ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಕನ್ನಡಿಗರಿಗೆ ಒಂದು ಸ್ಥಾನವನ್ನು ನೀಡದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡವೆಂದರೆ ಕನ್ನಡಿಗರಿಂದಲೇ ತುಂಬಿ ಹೋಗಿತ್ತು. ಭಾರತ ಕ್ರಿಕೆಟ್ ತಂಡವೆಂದರೆ ಕರ್ನಾಟಕ ತಂಡವೆನ್ನುವಂತ್ತಿತ್ತು. ಈಗಿನ ಪರಿಸ್ಥಿತಿಯಲ್ಲಿ ರಾಜಕೀಯದ ಪ್ರಭಾವದಿಂದ ಅಥವ ಬೇರೆ ಕಾರಣಗಳಿಂದ ಕನ್ನಡಿಗ ಅಯ್ಕೆಗಾರರ ಮನ ಸೆಳೆಯುವಲ್ಲಿ ವಿಪಲನಾಗುತ್ತಿರುವುದು ಯಾಕೇ ಎಂಬುದನ್ನು ವಿಮರ್ಶಿಸಬೇಕಿದೆ. ಕ್ರಿಕೆಟ್ ಆಡಳಿತ ಮಂಡಳಿಯು ಇಂತಹ ಭೇದ ಭಾವ ನೀತಿ ತೊರುತ್ತಿರುವುದಾದರೂ ಏಕೆ. ಕನ್ನಡಿಗನಿಲ್ಲದ ತಂಡವನ್ನು ಕನ್ನಡಿಗರು ಯಾವ ರೀತಿ ಸ್ವೀಕರಿಸುತ್ತಾರೋ ನೀವೇ ಹೇಳಿ. ಮುಂದಾದರೂ ಕನ್ನಡಿಗನಿಗೆ ಸ್ಥಾನ ದೊರೆಯಲಿ ಎಂಬುದೇ ನನ್ನ ಹಾರೈಕೆ. ಮೊದಲಿನಂತೆ ಕ್ರಿಕೆಟ್ ತಂಡದಲ್ಲಿ ಕನ್ನಡಿಗರೇ ತುಂಬಿ ಕಂಗೊಳಿಸಲಿ....
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sagar_gv on
ಎಲ್ಲಾರಿಗೂ ಗೊತ್ತಿರುವ ಹಾಗೆ ಕ್ರಿಕೆಟ್ ತ೦ಡದ ಆಯ್ಕೆ ಯಾವಾಗಲೂ ಆಯ್ಕೆ ಮ೦ಡಳಿ ಮೇಲೆ ನಿರ್ಧಾರವಾಗಿರುತ್ತದೆ. ಮತ್ತು ಆಯ್ಕೆ ಮ೦ಡಳಿ ಅಧ್ಯಕ್ಷನ ಇನ್ನೂ ಹೆಚ್ಚು. ಸ್ವಾಭಾವಿಕವಾಗಿ ಅವರು ತಮ್ಮ ರಾಜ್ಯದ/ಪ್ರದೇಶದ ಪಟುಗಳನ್ನೇ ಆಯ್ಕೆ ಮಾಡುವುದು. ಜಿ.ಆರ್.ವಿಶ್ವನಾಥ್ ಇದ್ದಾಗ ೭ ಜನ ಕರ್ನಾಟಕದವರು ಇದ್ದರು. ಕಿರ್ಮಾನಿ ಇದ್ದಾಗ ಕೂಡ ಹೆಚ್ಚು ಕನ್ನಡಿಗರಿದ್ದರು. ಈಗ ಶ್ರೀಕಾ೦ತ್ ಇದ್ದಾರೆ. ಇನ್ನು ಬದ್ರಿನಾಥ್, ವಿಜಯ್, ಅನಿರುದ್ಧ್ ಶ್ರೀಕಾ೦ತ್, ವಿದ್ಯುತ್ ಶಿವರಾಮಕ್ರಿಷ್ಣನ್ ಇವರೆಲ್ಲಾ ಆಯ್ಕೆಯಾಗುತ್ತಾರೆ ಅಷ್ಟೆ. ಈ ಟೆಸ್ಟ್ ನಲ್ಲಿ ವಿಜಯ್ ಬದಲು ಆಕಾಶ್ ಚೊಪ್ರ ಆಡಬಹುದಾಗಿತ್ತು. ಮತ್ತು ಮು೦ದಿನ ಇ೦ಗ್ಲೆ೦ಡ್ ವಿರುದ್ಧದ ಸರಣಿಗೆ ಉತ್ತಪ್ಪ ಆಯ್ಕೆಯಾಗಬೇಕಿತ್ತು. ಇವೆಲ್ಲಾ ಇದ್ದದ್ದೆ. ಏನೂ ಮಾಡೊಕಾಗಲ್ಲ ಸಾಗರ ಜೀವಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on
ಇಂತವುಗಳಲ್ಲಿ ಮೀಸಲಾತಿ ಇರಬಾರದು ಕಣ್ರಿ, ಒಟ್ಟಾರೆ ಒಳ್ಳೆಯ ತಂಡ ಇರ್ಬೇಕು ಅಸ್ಟೇ.. ಕನ್ನಡಿಗರಿಲ್ಲದ ತಂಡವನ್ನು ಕನ್ನಡಿಗರು ಹೇಗೆ ಸ್ವೀಕರಿಸುತ್ತಾರೆ ಅಂದ್ರೆ ಯೇನ್ರಿ ಅರ್ಥ? ಉತ್ತಪ್ಪ ಬಿಟ್ರೆ ಯಾವನೂ ಹೇಳಿಕೊಳ್ಳುವಂತಹ ಸಾದನೆ ಮಾಡಿಲ್ಲ. ಉತ್ತಪ್ಪ ಬೇರೆ ಕೊಟ್ಟ ಅವಕಾಶಗಳನ್ನು ಚೆನ್ನಾಗಿ ಉಪಯೊಗಿಸಿಕೊಳ್ಳಲಿಲ್ಲ. ಇನ್ನು ಸುನಿಲ್ ಜೊಷಿ ವಯಸಾದ್ರು ರಣಜಿ ಆಡ್ತಾ ಇದ್ದಾರೆ ಯಾಕೆ?... ಅದೂ ಅಲ್ದೆ ಕನ್ನಡದ ೭ ಜನ ಆಟಗಾರರು ಇದ್ದ ದಿನ ಒಂದು ಇತ್ತು.ಮುಂದೆ ಇಂತದೇ ದಿನಗಳು ಬರಲಿ ಅಂತ ಆಶಿಶೊಣ.ಇದಕ್ಕೆಲಾ ಯಾಕ್ರಿ ಬೇಸರ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.