ಕನ್ನಡದ ಕೊಲೆ
ನಾನು ದಿನ ಮನೆಯಿಂದ ಬರುವಾಗ ಕೃಷ್ಣರಾಜಪುರದ ತೂಗು ಸೇತುವೆಯ ಮೇಲೆ ಬರುತ್ತೇನೆ. ಅಲ್ಲಿರುವ ಫಲಕಗಳಲ್ಲಿ ಕರ್ನಾಟಕದ ಬಗ್ಗೆ ವಿವರಗಳನ್ನು ಕೊಟ್ಟಿದ್ದಾರೆ. ಅದು ತುಂಬ ಒಳ್ಳೆಯ ವಿಷಯ. ಆದರೆ ಅಲ್ಲಿ ಕನ್ನಡದ ಕೊಲೆಯಾಗಿದೆ. ಕನ್ನಡದಲ್ಲಿ ಬರೆಯುವಾಗ ರಾಜಗ್ರಹ, ಆದ್ಯತ್ಮ ಎಂದು ಬರೆದಿದ್ದಾರೆ. ರಾ ಜ ಗೃ ಹ ಎಂದು ಬರೆಯಲು ಬರದಿದ್ದರೆ ಅಚ್ಚ ಕನ್ನಡದಲ್ಲಿ ಅರಮನೆ ಎಂದು ಬರೆಯಬಹುದಲ್ಲ.

- malu ರವರ ಬ್ಲಾಗ್
- Login or register to post comments
- 882 hits
- Email this blog




RSS:
ಪ್ರತಿಕ್ರಿಯೆಗಳು
ಬೆಂಗಳೂರಿನ ಬಸ್ ನಿಲುಗಡೆಗಳ ಆಭಾಸ
ಬೆಂಗಳೂರಿನಲ್ಲಿಯೇ ಅನೇಕ ಬಸ್ ನಿಲುಗಡೆಗಳ ಮೇಲೆ ತಪ್ಪಾಗಿ ಬರೆದಿದ್ದನ್ನು ನೋಡಿದ್ದೇನೆ. ಉದಾಹರಣೆಗೆ 'ಕೋರಮಂಗಲ ವಟರ್ ಟ್ಯಾಂಕ್'. 'ವಾಟರ್' ಹೋಗಿ 'ವಟರ್' ಆಗಿದೆ. ಹಳ್ಳಿಯಿಂದ ಬಂದ ನನ್ನ ಚಿಕ್ಕ ತಮ್ಮ (ನಾಲ್ಕನೆಯ ತರಗತಿಯಲ್ಲಿದ್ದಾನೆ) ಅದನ್ನು ಓದಿ 'ಇಲ್ಲಿ ಕಪ್ಪೆಗಳಿವೆಯಾ?' ಎಂದು ಕೇಳಿದ್ದ.
-----
ಶಶಿಧರ
ಉ: ಕನ್ನಡದ ಕೊಲೆ
ರಾಜಗೃಹಕ್ಕೆ ಇರೋ ಮೇಲು, ಅರಮನೆ ಅಂದ್ರೆ ಕೀಳು ಅಂತೇ
ಸುನಿಲನ ಮೆಚ್ಚಿನ "ಶೌಚಾಲಯ vs ಕಕ್ಕಸು" ತೆರ
ಮೊನ್ನೆ ಒಬ್ಬರು ಮಕ್ಕಳ ಮಾಸ್ತರ ಹತ್ರ ಮಾತಾಡ್ತಾ "ಮಕ್ಕಳಿಗೆ ಅವರ ಆಡು ಮಾತಲ್ಲೇ ಎಲ್ಲ ವಿಸಯ ಕಲಿಸದ್ರೆ, ಅವು ಸಲೀಸಾಗಿ ಕಲಿತಾವೆ ಅಲ್ವಾ?" ಅಂತ ಅಂದೆ.
ಅದಕ್ಕೆ ಅವರು -"ಆಡುವಾಗ ಹೆಂಗ ಬೇಕಾದರೂ ಮಾತಾಡಬೋದು, ಆದರೆ ಬರೆಯುವಾಗ ಅದಕ್ಕೇ ಒಂದು ಮರ್ಯಾದೆ ಇರುತ್ತೆ. ಅದಕ್ಕೆ ನಾವು ತೂಕದ ಪದಗಳನ್ನ ಹಾಕಿ ಬರೇಬೇಕು" ಅಂದ್ರು.
ನಾನು - "ಅದು ಸರಿ.. ನಿಮ್ಮ ತೂಕ ಪದಗೊಳು, ನಮ್ಮ ಹೈಕಳಿಗೆ ಸರಿಯಾಗಿ ಅರ್ತ ಆಗಕ್ಕಿಲ್ಲ. ಅವು ಏನೇನು ತಪ್ಪು ತಪ್ಪು ತಿಳಿಕೋತಾವೆ, ಇಲ್ಲ ತಿಳಿಕೋಳಾದೇ ಇಲ್ಲ. ನಮ್ಗೆ ಬಾಸೆಯಲ್ಲಿ ತೂಕ ಮುಕ್ಯವೋ, ಅವರಿಗೆ ಅರ್ತ ಆಗೋದು ಮುಕ್ಯವೋ. ಅವರು ಸರಿಯಾಗಿ ತಿಳಿಕಳ್ದೇ ವೋದ್ರೆ, ನಿಮ್ಮ ತೂಕದ ಬರೆವಣಿಕೆಯಿಂದ ಏನು ಬಂತು ಬಾಗ್ಯ. ಹಿಂಗೇ ನಮ್ಮ ಬಾಸೇನ ತೂಕ ಮಾಡಿ ಮಾಡಿ, ಅದು ಹೆಚ್ಚಿನೋರಿಗೆ ತಿಳಿದೇ ಹೋಗೋ ಹಂಗೆ ಮಾಡಿವ್ರೆ. ಹಿಂಗೇ ಆಯ್ತಾ ವೋದ್ರೆ, ಮುಂದೇ ಯಾರು ಕನ್ನಡದಾಗೆ ಏನೂ ಕಲಿಕ್ಕಿಲ್ಲ" ಅಂದೆ.
ಅವರು - "ಇರ್ಲಿ ಬಿಡಪ್ಪ. ನಮಗೆ ಯಾಕೆ" ಅಂದು ಹೋದರು.
======================================