mamatha ರವರ ಬ್ಲಾಗ್
ನೀ ನನ್ನವನಲ್ಲ
January 17, 2008 - 5:58pm — mamatha ನಿನ್ನ ಬಿಂಬ ನನ್ನ ಕಣ್ಣಲ್ಲಿ ಎಲ್ಲರೂ ಕಂಡಿರಬಹುದು
ನಿನ್ನ ಹೆಸರು ಸದಾ ನನ್ನ ತುಟಿಯಮೇಲೆ ನಲಿಯುತಿರಬಹುದು
ನೀನು ನನ್ನನ್ನು ನಾನು ನಿನ್ನನ್ನು ಮರೆಯದಿರಬಹುದು
ಆದರೆ, ಎಂದಿಗೂ ನೀನು ನನ್ನವನಲ್ಲ
ನಿನ್ನಜೊತೆ ದಿಗಂತದ ಸುಖ 'ನಾ' ಕಂಡಿರಬಹುದು
ನಿನ್ನೊಡನೆ ಅದೆಷ್ಟೋ ಬೆಟ್ಟ-ಕಣಿವೆ ಹತ್ತಿ-ಇಳಿದಿರಬಹುದು
ನಿನ್ನ ಕೈ ಹಿಡಿದೇ ಹೊಳೆ ಹಳ್ಳ ದಾಟಿರದಹುದು ಮುಂದೆ ಓದಿ »

ಬಯಕೆ
January 17, 2008 - 5:55pm — mamathaಬಯಕೆ ಏನೋ ಇತ್ತು ನಿಂದು, ಬೇಡಲಿಲ್ಲ ಎಂದೂ
ಬೇಡದೇನೇ ಸಿಕ್ಕೆಯಲ್ಲ ನನಗೆ ನೀನು ಇಂದು
ಕನಸಿನಲ್ಲಿ ಬರುತ್ತಿದ್ದೆ, ನೆನೆಪಿನಲ್ಲಿ ಕಾಡುತ್ತಿದ್ದೆ
ಗೇಲಿ ಏನೋ ಮಾಡಿ ನೋಡಿ ನನ್ನ ನಗುತ್ತಿದ್ದೆ
ಅಣುಕು ತುಣುಕು ಮಾತಿನಲಿ ಬಲೆಯ ಹೆಣೆಯುತ್ತಿರುತ್ತಿದ್ದೆ
ಮುಟ್ಟಬೇಕೆಂದು ಚಾಚಿದರೆ ಕೈಗೆ ಸಿಗದೇ ಎಲ್ಲೋ ಓಡುತ್ತಿದ್ದೆ. ಮುಂದೆ ಓದಿ »

- Login or register to post comments
- 222 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: