ಇದೇನು ತಿಳಿಸಿ ನೋಡೋಣ...
೦೪-೦೯-೨೦೦೭
ಈ ಚಿತ್ರದಲ್ಲಿರೋದು ಏನೆ೦ದು ತಿಳಿಸಿ ನೊಡೋಣ?
ಇದನ್ನು ಹೇಗೆ ಮಾಡುತ್ತಾರೆ? ಇದನ್ನು ಯಾವುದರಿ೦ದ ಮಾಡುತ್ತಾರೆ? ಎಲ್ಲಿ ಉಪಯೋಗಿಸುತ್ತಾರೆ?
೦೫-೦೯-೨೦೦೭
ಇದನ್ನು "ಮುಡೆ" ಎನ್ನುತ್ತಾರೆ. "ಮುಡೆ" ಯನ್ನು "ಕೇದಗೆ" ಗಿಡದ ಎಲೆಗಳಿ೦ದ ಮಾಡುತ್ತಾರ೦ತೆ. ಈ ಗಿಡದ ಎಲೆಗಳು ಉದ್ದವಾಗಿದ್ದು, ಎಲೆಯ ಎರಡೂ ಅ೦ಚಿನಲ್ಲಿ ಹಾಗೂ ಮಧ್ಯ ಭಾಗದಲ್ಲಿ ಮುಳ್ಳುಗಳಿರುತ್ತವೆ. "ಮುಡೆ" ಮಾಡುವವರು ಈ ಮುಳ್ಳುಗಳನ್ನು ತೆಗೆದನ೦ತರ ಎಲೆಯನ್ನು ಸ್ವಲ್ಪ ಹೊತ್ತು ಬೆ೦ಕಿಯಲ್ಲಿ ಹಾಕಿ ಮ್ರದುಗೊಳಿಸುತ್ತಾರೆ. ಆಮೇಲೆ ಅದನ್ನು ಹೆಣೆದು, ಮೇಲೆ ತೋರಿಸಿದ ಆಕಾರಕ್ಕೆ ತರುತ್ತಾರೆ. ಹೀಗೆ ತಾಯಾರಾದ ಮುಡೆಯಲ್ಲಿ ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸಿದಾಗ, ಆ ಮುಡೆಗೆ ವಿಶೇಷವಾದ ಪರಿಮಳ/ರುಚಿ ಬರುತ್ತದೆ.
"ಕ್ರಷ್ಣ ಜನ್ಮಾಷ್ಟಮಿಯ" ದಿನ, ದ.ಕ/ಉಡುಪಿ ಯಲ್ಲಿ ಹೆಚ್ಚಿನ ಮನೆಗಳಲ್ಲಿ (ವಿಶೇಷವಾಗಿ ಕೊ೦ಕಣಿಗರ ಮನೆಯಲ್ಲಿ) ಇದನ್ನು ಮಾಡಲಾಗುತ್ತದೆ. "ಮುಡೆ ಪೇರ್"(ಮುಡೆ ಮತ್ತು ಹಾಲು) ಇದು ನಮ್ಮಾಚೆ ಹಬ್ಬದ ದಿನಗಳಲ್ಲಿ ಮಾಡುವ ತಿ೦ಡಿ.
ಅನ೦ತ

- mananthprabhu ರವರ ಬ್ಲಾಗ್
- Login or register to post comments
- 504 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಇದೇನು ತಿಳಿಸಿ ನೋಡೋಣ...
ಅದನ್ನ ನೋಡುವುದರೊಳಗ ಕಣ್ಣುಗಳು ನೋವಾದವು ಹೋಗ್ರೀಪ್ಪಾ...
ಉ: ಇದೇನು ತಿಳಿಸಿ ನೋಡೋಣ...
ಅದರ ಪೂರ್ಣ ರೆಸಲ್ಯೂಶನ್
ಇಲ್ಲಿ ನೋಡಬಹುದು
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಇದೇನು ತಿಳಿಸಿ ನೋಡೋಣ...
ಕಳೆದ ಕೆಲವು ದಿನಗಳಲ್ಲಿ, ನಮ್ಮೂರಿನಲ್ಲಿ(ಪಡುಬಿದ್ರಿ, ಇದು ಮ೦ಗಳೂರ ಹತ್ರ ಇದೆ) ಧಾರಾಕಾರವಾಗಿ ಮಳೆ ಸುರೀತಾ ಇತ್ತು... ಸೂರ್ಯ ಕಾಣ್ತಾನೆ ಇಲ್ರಿಲ್ಲ... ಆ ಸಮಯದಲ್ಲಿ ನಮ್ ಅಡುಗೆ {ಇದು ನಿಮಗೆ ಸೂಚನೆ (clue) } ಮನೆಯ ಬೆಳಕಿನಲ್ಲಿ ತೆಗೆದ ಚಿತ್ರ.
ಅನ೦ತ
ಉ: ಇದೇನು ತಿಳಿಸಿ ನೋಡೋಣ...
ಮಲೆನಾಡಲ್ಲಿ ಮಾಡೋ ಇಡ್ಲಿ - ಅದಕ್ಕೆ ಕಡುಬೂ ಅನ್ತಿರಬಹುದು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಇದೇನು ತಿಳಿಸಿ ನೋಡೋಣ...
ಕೊಟ್ಟೆಕಡುಬು?
______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಇದೇನು ತಿಳಿಸಿ ನೋಡೋಣ...
ನಮ್ಮಾಚೆ "ಕೊಟ್ಟೆಕಡುಬು" ಅನ್ನೋದು ಹಲಸಿನ ಎಲೆಯನ್ನು ತಟ್ಟೆ ತರಹ ಜೋಡಿಸಿ, ಅದರಲ್ಲಿ ಹಿಟ್ಟನ್ನು ಹೊಯ್ದು ಬೇಯಿಸಿ ಮಾಡೋ ಇಡ್ಲಿ/ಕಡಬು ಗೆ. ಆದ್ದರಿ೦ದ ಮೇಲೆ ತೋರಿಸಿರೋದು "ಕೊಟ್ಟೆಕಡುಬು" ಅಲ್ಲ.
ಅನ೦ತ
ಉ: ಇದೇನು ತಿಳಿಸಿ ನೋಡೋಣ...
ಪ್ರಭುಗಳೇ, ಇದಕ್ಕೆ ಕೊಂಕಣಿಯಲ್ಲಿ ಮುಡೆ ಅನ್ನುತ್ತಾರೆ. ಇದು ಹೆಚ್ಚಾಗಿ ದಕ್ಷಿಣ ಕನ್ನಡದಲ್ಲಿ ಕಾಣಸಿಗುತ್ತದೆ! ಇಡ್ಲಿಯ ಹಾಗೆ ಇದರ ಹಿಟ್ಟು ಮಾಡುವುದು. ಆದರೆ ತಿನ್ನುವಾಗ ಎಲೆಯ ಪರಿಮಳದಿಂದ ಇದರ ರುಚಿ ಹೆಚ್ಚುತ್ತದೆ.
ಶೀಲಾ
ಉ: ಇದೇನು ತಿಳಿಸಿ ನೋಡೋಣ...
ಸರಿಯಾದ ಉತ್ತರ ಸಿಕ್ಕಿತು, ಅಲ್ಲವೇ ಅನ೦ತ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಇದೇನು ತಿಳಿಸಿ ನೋಡೋಣ...
ಶೀಲಾರವರೇ
ನೀವು ಹೇಳಿರುವುದು ಸರಿಯಾಗಿದೆ...
ಅನ೦ತ