"ಮನುಜನ ಆಸೆ ಮರೀಚಿಕೆಯಂತೆ. ದೂರದಲ್ಲೆಲ್ಲೋ ಇದ್ದಂತೆ ಕಾಣುವುದು,ಕೈಗೆಟಕುವಂತೇ ಅನಿಸುವುದು, ಹತ್ತಿರ ಹೋದಾಗ ಮಾತ್ರ ಮರೆಯಾಗುವುದು." - ನನ್ನ ನೆಚ್ಚಿನ ಸಾಲುಗಳು, ಆದರೆ ನಾ ಬರೆದಿದ್ದಲ್ಲ , ಯಾರದೋ ಬ್ಲಾಗ್ ಅಲ್ಲಿ ನೋಡಿ ಮೆಚ್ಚಿದೆ . ನಾ ಬಯಸಿದ್ದೆಲ್ಲ ಆಗದೆ ಇದ್ದಾಗ ಈ ಸಾಲುಗಳನ್ನು ನೆನೆಯುತ್ತೇನೆ. ಅಷ್ಟೇ ಅಲ್ಲ "ಬಯಸಿದ್ದೆಲ್ಲ ಸಿಗದು ಬಾಳಲಿ ", "ಏನೇ ಬಂದರು ಏನೇ ಆದರು, ಎಂದಿಗೂ ನೀನು ನಗುತಿರು" ಎಂದು ಕೊಂಡು ಮುಗುಳ್ನಗುತ್ತೀನಿ. ಬಾಳಲ್ಲಿ ಅಂದುಕೊಂಡಿದ್ದು ಇದುವರೆಗೆ ಯಾವುದು ನೆರವೇರಿಲ್ಲ , ಅದಕ್ಕೆ ಬಹುಶಃ ಅದರ ಅನುಭವ ನನಗಿಲ್ಲ. ಆದರೆ ಕಂಡಂಥ ಕನಸು ನನಸಾದಾಗ ಎಷ್ಟು ಖುಷಿಯಾಗುತ್ತದೆ ಎಂದು ಜನವರಿ ೨೬ರಂದು ಅನಿಸಿತು.ನನ್ನ ಬಹು ದಿನಗಳ ಆಸೆ ಅಂದು ನೆರೆವೇರಿತು .
"ಮೈಸೂರು ಮಲ್ಲಿಗೆ" ಚಲನಚಿತ್ರ ಕಡೆಗೆ ತುಂಬಾ ಒಲವಿದೆ. ಟಿವಿಯಲ್ಲಿ ಯಾವಾಗ ಮೂಡಿ ಬಂದರು ಪೂರ್ತಿ ನೋಡುತ್ತೀನಿ. ಅದರ ಸಿ ಡಿ ಸಹ ಖರಿದಿಸಿದ್ದೀನಿ. ಕೆ.ಎಸ್ ನರಸಿಂಹಸ್ವಾಮಿಯವರ ಕವನಗಳ ಪರಿಚಯವಿದೆ. ಅವರ ಜನ್ಮದಿನದಂದು ಪ್ರಸಾರವಾಗುವ "ಮೈಸೂರು ಮಲ್ಲಿಗೆ " ಸಿನಿಮಾವನ್ನು ನಾನು ಪ್ರತಿಬಾರಿ ನೋಡುತ್ತೇನೆ. ಆದರೆ ಈ ಬಾರಿ ಸ್ವಲ್ಪ ವಿಶೇಷವಾಗಿತ್ತು ಜನವರಿ ೨೬. ನಾನು ಜೀವನದ ಮೊದಲ ನಾಟಕವನ್ನು ರಂಗಶಂಕರದಲ್ಲಿ ಮೈಸೂರು ಮಲ್ಲಿಗೆ ನೋಡುವ ಮುಖಾಂತರ ಪ್ರಾರಂಭಿಸಬೇಕು ಅಂದುಕೊಂಡಿದ್ದೆ. ಆದರೆ ಅದು ಕಾರಣಗಳಿಂದ ನೆರವೆರಿರಲ್ಲಿಲ ಆದರೆ ಈ ಬಾರಿ ಜನವರಿ ೨೬ರಂದು ರಂಗಶಂಕರದಲ್ಲಿ ಕಲಾಗಂಗೋತ್ರಿಯಿಂದ "ಮೈಸೂರು ಮಲ್ಲಿಗೆ" ನೂರನೇ ಪ್ರದರ್ಶನವಿತ್ತು. ಅಂತಹ ವಿಶೇಷ ಪ್ರದರ್ಶನ ಅದುವೆ ಕೆ.ಎಸ್ ನರಸಿಂಹಸ್ವಾಮಿಯವರ ಜನ್ಮದಿನದಂದು ರಂಗಶಂಕರದಲ್ಲ್ಲಿ ಅಂದರೆ ತುಂಬಾ ವಿಶೇಷ ಅನಿಸಿತು. ಆ ಸುವರ್ಣ ಅವಕಾಶಕ್ಕಾಗಿ ಕ್ಷಣಗಣನೆ ಮಾಡಿದೆ. ಅದಕ್ಕಾಗಿ ನನ್ನ ಬೇರೆಲ್ಲ ಯೋಜನೆಗಳನ್ನೂ ಕೈ ಬಿಟ್ಟಿದ್ದೆ. ಬೆಂಗಳೂರಿನ ಟ್ರಾಫಿಕ್ ಇಂದ ರಂಗಶಂಕರ ತಲಪುವುದು ಸ್ವಲ್ಪ ತಡವಾಯಿತು, ಆದರೆ ಮುಂಚಿತವಾಗಿ ಟಿಕೆಟ್ ಕಾದರಿಸಿದ್ದರಿಂದ ಏನು ತೊಂದರೆ ಆಗಲಿಲ್ಲ.ಅಂದು ೫-೧೦ ನಿಮಿಷ ಸ್ವಲ್ಪ ತಡವಾಗಿ ಪ್ರದರ್ಶನ ಶುರುವಾಯಿತು. ಆ ಸಂದರ್ಭದಲ್ಲಿ ನನಗಂತೂ ತಾಳ್ಮೆ ಮೀರುತ್ತಿತ್ತು . ಯಾಕೆ ತಡಾವಗುತ್ತಿದ್ದೆ ಎಂದು ಚಡಪಡಾಯಿಸುತ್ತಿದ್ದೆ
.
"ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದವನೇ " ಎಂಬ ಹಾಡಿನಿಂದ ಪ್ರಾರಂಭವಾದ ಮೈಸೂರು ಮಲ್ಲಿಗೆಯ ಕಂಪು ಅಮೋಘವಾಗಿತ್ತು. ಪ್ರತಿಯೊಂದು ಹಾಡಿಗೂ ಮನಸ್ಸು ನಲಿಯುತಿತ್ತು , ಸಾಲುಗಳು ರಾಗದೊಂದಿಗೆ ಹೊರಹೊಮ್ಮುತಿತ್ತು. ಸಮಯ ಹೋಗಿದ್ದೆ ತಿಳಿಯಲಿಲ್ಲ . ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿಯವರ ಚರಿತ್ರೆ ನಿರೂಪಿಸಿದ ಆ ಪ್ರದರ್ಶನ ಸೊಗಸಾಗಿ ಮೂಡಿ ಬಂತು. ಅವರ ಕವನಗಳ ಮೆಲಕು ಬೇರೊಂದು ಲೋಕಕ್ಕೆ ಕರೆದೊಯಿತ್ತು . ೧೦೦ ಪ್ರದರ್ಶನ ಪ್ರಯುಕ್ತ ಕಲಾಗಂಗೋತ್ರಿಯವರು ೧೦೦ ಮಲ್ಲಿಗೆ ಸಸಿಗಳನ್ನು ಪ್ರೇಕ್ಷಕರಲ್ಲಿ ವಿತರಿಸಿದರು. ಅದೃಷ್ಟವಶಾತ್ ನನಗೊಂದು ಸಸಿ ಸಿಕ್ಕಿತು. ಮರೆಯಲಾಗದ ಆ ಸಮಯ ತನ್ನದೇ ಆದ ನೆನಪಿನ ಕಂಪನ್ನು ಚಾಪಿಸಿದೆ. ಜೀವನದಲ್ಲಿ ಕಂಡಂಥ ಕನಸುಗಳಲ್ಲಿ ಒಂದಾದರು ನನಸಾಯಿತು ಎಂದು ಸಂತೋಷ ಪಡುತಿದ್ದೇನೆ. ನನ್ನ ಕನಸನ್ನು ಕೈಗೊಡಿಸಲು ಸಾಥ್ ನೀಡಿದ ನನ್ನ ಗೆಳತಿಯರಾದ ಸೌಮ್ಯ ಮತ್ತು ಶ್ರುತಿಗೆ ವಂದನೆಗಳು :-)










ಪ್ರತಿಕ್ರಿಯೆಗಳು
ಉ: ಕನಸು ನನಸಾದಾಗ....
ಹೌದು. ಮೈಸೂರು ಮಲ್ಲಿಗೆ ಎಷ್ಟು ಬಾರಿ ನೋಡಿದರೂ ಬೇಸರವಾಗುವುದಿಲ್ಲ. ನನಗಂತೂ, ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ, ಆಕಾಶಕ್ಕೆದ್ದುನಿಂತ ಪರ್ವತ ಹಿಮ ಮೌನದಲ್ಲಿ, ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು, ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ - ಈ ಎಲ್ಲಾ ಹಾಡುಗಲು ಇಷ್ಟ.
ನೆನಪಿಸಿದಕ್ಕಾಗಿ ವಂದನೆಗಳು.
ಉ: ಕನಸು ನನಸಾದಾಗ....
ಮೈಸೂರು ಮಲ್ಲಿಗೆಯಲ್ಲಿ ಬರುವ ದಂಪತಿಗಳು ಹುಟ್ಟು ಸಾವಿಲ್ಲದ ಗಂಧರ್ವರು , ಒಮ್ಮಮ್ಮೆ ಅನ್ನಿಸುವುದೇನೆಂದರೆ ಇಷ್ಟು ನವಿರಾದ ಪ್ರೇಮ ಕಾವ್ಯವನ್ನು ಸೃಷ್ಟಿಸಿದ ಕವಿ ಇನ್ನೆಷ್ಟು ಪ್ರೆಮಮಯಿಯಾಗಿರಬೇಕು.
" ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ"
" ಬಂಗಾರವಿಲ್ಲದ ಬೆರಳು"
" ನಿನ್ನ ಪ್ರೇಮದ ಪರಿಯ"
ಈ ಕವಿತೆಗಳು ಉಂಟು ಮಾಡುವ ಪುಳಕ ಅಧ್ಬುತ.
ಉ: ಕನಸು ನನಸಾದಾಗ....
ಮಾನಸ
ಕಾವ್ಯಕ್ಕಿರುವ ಶಕ್ತಿಯೇ ಅದು , ಅದರಲ್ಲೂ ನಮ್ಮೆಚ್ಚಿನ ಕೆ ಎಸ ನ ಅವ್ರ ಪ್ರೆಮದಲ್ಲಿಯೇ ಅದ್ದಿ ತೆಗೆದಂತ ಅರ್ಥಪೂರ್ಣ ಸಾಲುಗಳು ಮನದಲ್ಲಿ ಸಂತೋಷವನ್ನು ಪ್ರೆಮೊತ್ಕರ್ಷವನ್ನು ಎಬ್ಬಿಸದೆ ಬಿಡುವುದಿಲ್ಲ.
ನನ್ನ ಮೆಚ್ಚಿನ ಸಿನೆಮಾಗಳಲ್ಲಿ, ಕವನ ಸಂಕಲನಗಳಲ್ಲಿ ಕವಿಗಳಲ್ಲಿ ಇವರೂ ,ಇವರ ಕವನ ಸಂಕಲನವೂ ಒಂದು.
ಅದರಲ್ಲೂ
"ನಿನ್ನ ಹೆಸರು"
" ಬಂಗಾರವಿಲ್ಲದ ಬೆರಳು"
" ನಿನ್ನ ಪ್ರೇಮದ ಪರಿಯ"
ಕೇಳಿದಾಗ ನಾ ಎಲ್ಲೋ ಕಳೆದು ಹೋಗಿದ್ದು, ಈಗಲೂ ಕಳೆದು ಹೋಗೋದು ನಿಜ...
ದಿನಾಲೂ ಮುಂಜಾನೆ ರಾತ್ರಿ ಈ ಮೂರು ಹಾಡುಗಳನ್ನು ಕೇಳದೆ ಇರಲು ಆಗುವುದೇ ಇಲ್ಲ. ಆ ಅತ್ತುತ್ಕ್ರುಸ್ತ ಕವಿತೆಗಳಿಗೆ ಅಸ್ಟೇ ಭಾವ ತುಂಬಿ ಹಾಡಿದ ಸಿ ಅಶ್ವಥ್ ,ಸುಬ್ಬಣ್ಣ, ಅಂತವರನ್ನು ಮರೆಯಲು ಸಾಧ್ಯವೇ?
ಕಲಾವಿದರಿಗೆ ನಮನ...