May 20, 2010 - 5:26pm
ಪ್ರೇಮವೆಂದರೆ ಅಲ್ಲ ಆಕರ್ಷಣೆ ,
ಅದುವೇ ಮನಸ್ಸುಗಳ ಸಮರ್ಪಣೆ ...
ಪ್ರೀತಿ ಎಂದರೆ ಅಲ್ಲ ಸ್ವಾರ್ಥ,
ಅದುವೇ ಸಾರ್ಥ...
ಪ್ರೇಮವೆಂದರೆ ಅಲ್ಲ ಸೆರೆ,
ಅದುವೇ ಬದುಕಿನ ಆಸರೆ...
ಪ್ರೀತಿ ಎಂದರೆ ಅಲ್ಲ ನೋವು,
ಅದುವೇ ಬಾಳಿನ ನಲಿವು...
ಪ್ರೇಮವೆಂದರೆ ಒಲವಿನ ಬಂಧನ,
ಪ್ರೀತಿ ಎಂದರೆ ಅಮೃತ ಸಿಂಚನ...
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಪ್ರೀತಿ-ಪ್ರೇಮ
>>ಪ್ರೇಮವೆಂದರೆ ಅಲ್ಲ ಆಕರ್ಷಣೆ ,
ಅದುವೇ ಮನಸ್ಸುಗಳ ಸಮರ್ಪಣೆ ...
ಪ್ರೀತಿ ಎಂದರೆ ಅಲ್ಲ ಸ್ವಾರ್ಥ,
ಅದುವೇ ಸಾರ್ಥ...
ಪ್ರೇಮವೆಂದರೆ ಅಲ್ಲ ಸೆರೆ,<<
ಮಾನಸ ಲೇಖನ ಚೆನ್ನಾಗಿದೆ. "ಅಲ್ಲ" ಎನ್ನುವುದು ಕಡೆಯಲ್ಲಿ ಬರಬೇಕು ಅನ್ನಿಸುತ್ತೆ. ನನ್ನ ಅಭಿಪ್ರಾಯ.
ಉ: ಪ್ರೀತಿ-ಪ್ರೇಮ
ಸುರೇಶ್ ರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ..
"ಅಲ್ಲ" ಎನ್ನುವುದು ಕಡೆಯಲ್ಲಿ ಬಂದರೆ ಒಂಥರಾ ಚೆನ್ನಾಗಿರುತ್ತೆ.. ಆದರೆ ನಾನು ಪ್ರಾಸಕ್ಕೆ ಸ್ವಲ್ಪ ಹೆಚ್ಚು ಪ್ರಾಮುಖ್ಯತೆ ಕೊಡ್ತೇನೆ ಆಗಾಗಿ ಹೀಗೆ ಬರದೆ :)
ಉ: ಪ್ರೀತಿ-ಪ್ರೇಮ
ಮಾನಸ ನಿಮ್ಮೀ ಒಂದೊಂದು ಮಾತೂ ಸತ್ಯ
ಬಾಳಿನಲಿ ಪ್ರೀತಿಯೇ ಮಂತ್ರವಾಗಬೇಕು ನಿತ್ಯ
- ಆಸು ಹೆಗ್ಡೆ
ಉ: ಪ್ರೀತಿ-ಪ್ರೇಮ
ಮಾನಸಾ, ಪ್ರೀತಿ ನೋವನ್ನೂ ಕೊಡುತ್ತದೆ. ಅದರೆ ಆ ನೋವಿನಲ್ಲೂ ನಲಿವಿರುತ್ತದೆ.
ಉ: ಪ್ರೀತಿ-ಪ್ರೇಮ
ಮಾನಸರವರೇ
ಕೊನೆಯ ಸಾಲು ಎಲ್ಲದಕ್ಕೆ ಮೆರುಗು ಕೊಟ್ಟಿದ್ದು
ಕವನ ತುಂಬಾಚೆನ್ನಾಗಿದೆ
ಧನ್ಯವಾದಗಳು