24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

September 28, 2010 - 6:22pm
manju787

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿ
ಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ
 ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವು
ಪರಪುಟ್ಟಗಳಲ್ಲ ತಮ್ಮದೇ ಲೋಕ ತಮ್ಮದೇ
ಹಾಡು ತಮ್ಮದೇ ಹಾರಾಟ ತಮ್ಮದೇ ಹೋರಾಟ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಆದರೆ ಉಳಿದಿಹುದು ಮಡದಿ ಹಕ್ಕಿ ಹಾಗೆಯೇ
ಕಾಯುತಿಹುದದಿಲ್ಲಿ ತನ್ನಿನಿಯನ ಬರುವಿಕೆಗಾಗಿ
ಅದೇ ಪ್ರೀತಿ ಪ್ರಣಯ ಅದೇ ಕಕ್ಕುಲಾತಿಯೊಡನೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!!!!

ಸರಣಿ: 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vijay on

’ಸಮಯ’ ಹೇಗೆ ಅರಿವಿಲ್ಲದಂತೆ ಕಳೆದು ಹೋಗುತ್ತದೆಯೋ ತಿಳಿದುಕೊಳ್ಳುವಷ್ಟರಲ್ಲಿ...ಕಾಲ ಬದಲಾಗಿರುತ್ತದೆ. ಕಾಲ ಬದಲಾದರೂ ಬದಲಾಗದ ಕೆಲವು ಸಂಭಂದಗಳು..ಕಾಲ ಕಳೆದುಹೋಗಿಲ್ಲ ಎಂಬಂತೆ ಭಾಸ ಮೂಡಿಸುತ್ತವೆ...

ಚೆನ್ನಾದ ಕವನ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಹೌದು ವಿಜಿ,
ಕಳೆದು ಹೋಗುವುದು ಈ ಕಾಲ,
ಸವೆದು ಹೋಗುವುದು ಈ ಜೀವ,
ಬದಲಾಗದು ಇನಿಯಳ ಈ ಭಾವ,
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ತುಂಬಾ ಸಂತೋಷ
ಚೆನ್ನಾದ ಕವನ
ಸಂತಸವಿರುವುದೇ ತನ್ನವರೊಂದಿಗೆ ಕಾಲ ಕಳೆಯುವಾಗ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಪ್ರತಿಕ್ರಿಯೆಗೆ ತು೦ಬಾ ಸ೦ತೋಷ ರಾಯರೆ, ನಿಮ್ಮ ಭಾವನೆಯೇ ನನ್ನೆದೆಯಲ್ಲೂ ತು೦ಬಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಈ ಕಾಯುವಿಕೆಗೆ ಮದ್ದಿಲ್ಲವೇ ಗುರುಗಳೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಇನ್ನೆಲ್ಲಿಯ ಕಾಯುವಿಕೆ ನಾವಡರೆ, ಇನ್ನೇನಿದ್ದರೂ ಎಲ್ಲವೂ ಸುಮಧುರ ಸಮ್ಮಿಲನ! -:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by komal kumar1231 on

ಸ್ವಾಗತ ಸುಸ್ವಾಗತ ಕರುನಾಡಿಗೆ,
ಆದರೆ ಈ ಹಕ್ಕಿ ವರ್ಸದಾಗೆ ಏಟು ಕಿತಾ ಬತ್ತದೆ ಅಂತ ಮಾತ್ರ ತೀಲಿಯಕ್ಕಿಲ್ಲ. ಬ್ಲಾಕ್ ಲೇಬಲ್ ಇದ್ದರೆ ಕಂಪೆನಿಗೆ ನಾವು ಸದಾ ಸಿದ್ದ. ನಿಮ್ಮ ಸೇವೆಗೆ. ಸ್ವಾಮಿ ಕಾರ್ಯ ಸ್ವ ಕಾರ್ಯ
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಅಲೆಲೆ, ಬಾರಪ್ಪಾ ಕೋಮಲ್ಲೂ, ಇನ್ ಮ್ಯಾಕೆ ನಾವು ಇಲ್ಲೆ ಇರ್ತೀವಿ, ಬ್ಲ್ಯಾಕೋ ವೈಟೋ ಯಾವ್ದಾನ ಒ೦ದು ಲೇಬಲ್ ಗ್ಯಾರ೦ಟಿ ಹಾಕುಸ್ತೀನಿ ಬಾ ಗುರುವೆ! ನೀ ಬರೋದ್ ಎಚ್ಚಾ, ನಾ ಹಾಕ್ಸೋದ್ ಎಚ್ಚಾ?? -:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಒಳ್ಳೆಯ ಸುದ್ದಿ, ಮಂಜು! ಶುಭವಾಗಲಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ವ೦ದನೆಗಳು ಕವಿ ನಾಗರಾಜರೆ, ಕೆಳದಿಯ ದರ್ಶನ ಮಾಡುವಾಸೆ ನಿಮ್ಮೊಡನೆ! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

<<... ಉಳಿದಿಹುದು ಮಡದಿ ಹಕ್ಕಿ ಹಾಗೆಯೇ>>
ಉಳಿದಿಹುದೇ ಮರಳಿದ ಹಕ್ಕಿಯೂ ನಿಜದಿ ಹಾಗೆಯೇ?
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

<<ಉಳಿದಿಹುದೇ ಮರಳಿದ ಹಕ್ಕಿಯೂ ನಿಜದಿ ಹಾಗೆಯೇ?>>ಖ೦ಡಿತ, ಏಕೀ ಅನುಮಾನ?? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghusp on

<ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ>

ಬದಲಾಗಿವೆ ನಿರೀಕ್ಷೆಗಳು

ಬದಲಾಗಿವೆ ಅವರ ಆಕರ್ಷಣೆಗಳು

ಎಲ್ಲವನ್ನು ಮೀರಿ ನಿಲ್ಲುವುದು

ತಂದೆಯ ಪ್ರೀತಿ , ಯಾಕೆಂದರೆ ಅದು ಏಕ ರೀತಿ

ಬರಲಿವೆ ಮರಿಗಳು ಗೂಡಿಗೆ, ಕೊಕ್ಕಿನ ತಿಂಡಿಯ ನೆನೆದು

ಕೊಕ್ಕಿನ ತಿಂಡಿಗೆ ಬೇರಾವುದು ಸಮನಲ್ಲ.

ಗೂಡಿಗೆ ಮರಳಿದ ಹಕ್ಕಿಗೆ ಶುಭವಾಗಲಿ.

ನಮ್ಮ ತಮ್ಮವರೊಂದಿಗೆ ಬೆರೆತು ಕಳೆದು ಹೋದ ಕ್ಷಣಗಳನ್ನು ಮರೆಲಿ ಪಡೆಯಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

:):)
<ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!!!!>
ತುಂಬಾ ಸಂತೋಷದ ವಿಷಯ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ದುಬೈನಲ್ಲಿ ಆ ಬ್ರಹ್ಮಚಾರಿ ಬದುಕಿನ "ನಳಪಾಕ" ತಿ೦ದು ತಿ೦ದು ಜನ್ಮ ಸಾಕಾಯ್ತು ಗೋಪಾಲ್! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಸ್ವಾಗತ.. ಸುಸ್ವಾಗತ..ತಾಯ್ನಾಡಿಗೆ...
:-):):).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಎರಡು ದಿನದ ಹಿಂದೆಯೇ ಓದಿದ್ದರೂ ವಿಷಯ ಹಿಂಗೆ ಅಂತ ಗೊತ್ತೇ ಆಗ್ಲಿಲ್ಲ ನೋಡಿ, ಸಂತೋಷದ ಸಂಗತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಪ್ರಸನ್ನ, ಕೆಲವು ವಿಚಾರಗಳು ನಿಧಾನವಾಗಿ ಅರ್ಥವಾಗುತ್ತವೆ, ಚಿರಕಾಲ ನೆನಪಿನಲ್ಲುಳಿಯುತ್ತವೆ, ಬೇಗನೆ ಅರ್ಥವಾದವುಗಳು ಫಕ್ಕನೆ ಮರೆಯಾಗುತ್ತವೆ. ಯಾವುದು ಒಳ್ಳೆಯದು ನೀವೇ ಹೇಳಿ! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಮೊದಲನೆಯದೇ ಒಳ್ಳೆಯದು. ಹೈಸ್ಕೂಲಲ್ಲಿ ಓದುವಾಗ ಇದೇ ರೀತಿ ಸ್ನೇಹದ ಬಗೆಗೆ ಒಂದು ಸಂಸ್ಕೃತ ಸುಭಾಷಿತ ಇತ್ತು. (ಈಗ ಹಾಗೆಯೇ ಬರೆದಿದ್ದೇನೆ. ಮತ್ತೊಮ್ಮೆ ಅನುವಾದಿಸಿ ಹಾಕುವೆ.)

आरम्भगुर्वी क्षयिणी क्रमेण
लघ्वी पुरा वृध्धिमती च पश्चात् |
दिनस्य पूर्वार्धपरार्धभिन्ना
छायेव मैत्री खलसज्जनानाम् ||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

[ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ...]

ಬೆಚ್ಚನಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು ...:-)

ತಾಯ್ನಾಡಿಗೆ ಸುಸ್ವಾಗತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಇಚ್ಚೆಯರಿತು ನಡೆವ ಸತಿಯೂ ಜೊತೆಗಿರಲು...............! ವ೦ದನೆಗಳು ಕಣ್ರೀ ಶಿ.ಶಾ.! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sriprasad82 on

ಗೂಡಿನಲ್ಲಿ ಹಕ್ಕಿಯೊ೦ದು ಕಾಯುತಿಹುದು ನಮಗಾಗಿ ಅನ್ನೋ ಅನಿಸಿಕೆಯೇ ದೂರದಲ್ಲಿರೋ ಹಕ್ಕಿಗೆ ಜೀವನಾದಾರ ಅಲ್ಲವೇ? ತಾಯ್ನಾಡಿಗೆ ಸುಸ್ವಾಗತ. ಗೂಡಿನಲ್ಲಿ ಸುಖ ಶಾ೦ತಿ ಎ೦ದಿಗೂ ನೆಲೆಸಿರಲಿ .....
ಶ್ರೀ...:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.