21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನೀನು..

May 3, 2010 - 4:42pm
manjunath s reddy

ಮನಸಿನ ಮೌನದ ಹಾದಿಗೆ

ಮಾತಿನ ಜೊತೆಯಾದೆ ನೀನು..

ಪದವರಿಯದ ಅಕ್ಷರಗಳಿಗೆ 

ವಾಕ್ಯವಾದೆ ನೀನು..

ನನ್ನೊಳಗೆ ನಾನರಿಯದ ಪ್ರೀತಿಯ

ಕನ್ನಡಿಯೊಳಗೆ

ಪ್ರತಿಫಲಿಸಿದೆ ನೀನು..

ನಾ ಕೂಗದ ದನಿಗೆ

ಪ್ರತಿಧ್ವನಿಯಾದೆ ನೀನು..

ನಿನಗಾಗಿ ಬರೆಯದ 

ಕವನಗಳಿಗೆ ಕ್ಲೀಷೆಯಾದೆ ನೀನು..

ನಾ ಬಯಸದ ಸನಿಹಕೆ

ಬಿಸಿಯಪ್ಪುಗೆಯ

ಸವಿ ನೀಡಿದ್ದು ನೀನು..

ಈಗ

ನಾ ಬಯಸಿದರೂ 

ನನ್ನ ಬಿಟ್ಟು ನಿನ್ನ ಪಯಣಕೆ 

ಹೊರಟು ನಿಂತಿರುವೆ ನೀನು....

 

ಮಂಸೋರೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by modmani on

@ಮಂಸೋರೆ..
//ನಿನಗಾಗಿ ಬರೆಯದ
//ಕವನಗಳಿಗೆ ಕ್ಲೀಷೆಯಾದೆ ನೀನು..

ಈ ಸಾಲು ಉದ್ದೇಶಪೂರ್ವಕವಾಗಿ ಸೇರಿಸಿದ್ದಾ..? ಕವನದ ಒಟ್ಟಾರೆ ಆಶಯಕ್ಕೆ ಈ ಸಾಲು ಹೊಂದುವುದಿಲ್ಲ ಅಂತ ನನ್ನನಿಸಿಕೆ.

ಮೊದ್ಮಣಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by P.Ashwini on

ಜೋತೆಯಿದ್ದಾಗ ಅದನ್ನು ಅರಿಯದೆ ಹೋದ್ರಿ,
ಹೋದ ಮೇಲೆ ಚಿಂತಿಸೀ ಫಲವಿಲ್ಲ ಅಲ್ವೇನ್ರೀ, ಅದಕ್ಕೆ ಅನ್ಸುತ್ತೆ ಹೇಳೋದು ಪ್ರತಿಕ್ಷಣ ಹೊಸದನ್ನ ಕಲಿಸೋದೆ ಜೀವನ ಅಂತ ಅಲ್ವೇನ್ರೀ??
-ಅಶ್ವಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

"ನನ್ನೆದೆಯ ಸುಟ್ಟ ನಿಟ್ಟುಸಿರಾದೆ ನೀನು" ಅಂತ ಮುಗಿಸಿದ್ದರೆ ಚೆನ್ನಾಗಿರ್ತಿತ್ತು ಮಂಜು. ಇಂದು ಬೆಳಗ್ಗೆಯಿಂದ ಶುರುವಾದ ವಿಷಾದ ಯಾತ್ರೆ ನಿಮ್ಮ ಕವನದೊಂದಿಗೆ ಮುಗಿಯುತ್ತಿದೆ. ಮನಸ್ಸಿಗೆ ತುಂಬಾ ಕಷ್ಟ ಕಣ್ರೀ ಹೀಗಾದ್ರೆ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.