19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ಅಂತರ...

March 4, 2010 - 10:50pm
manjunath s reddy

 

ನಿನ್ನ ಮಾತಿನ ಮಾದುರ್ಯದ ಸವಿ 
ಸವಿಯುವ ಮೊದಲೇ
ಸಜ್ಜಾಗಿ ನಿಂತಿರುವೆ 
ನನ್ನಗಲಿ ದೂರವಾಗಲು...
ನಿನ್ನ ಸ್ಪರ್ಶದ ಹಿತ
ಮನದೊಳಗೆ 
ಮಾಗುವ ಮೊದಲೇ
ಹೊರಟು ನಿಂತಿರುವೆ 
ನನ್ನ ತೊರೆಯಲು..
ಗೊತ್ತು 
ಅಲ್ಲಲ್ಲ
ನಂಬಿದ್ದೀನಿ... 
ಮತ್ತೆ ನೀನು ವಾಪಸ್ಸಾಗುತ್ತೀಯ ಎಂದು
ಈಗ ಉಂಟಾಗಲಿರುವ ಅಂತರ
ತುಂಬಾ ದಿನ ಅಲ್ಲವೆಂದು...
ಆದರೂ ಹಿಂದಿನ ಅನುಭವ 
ಮನದೊಳಗೆ ಕಟ್ಟುತ್ತಿದೆ
ಭಯದ ಬಂಗಲೆಯ..
ನನ್ನನ್ನು ದೂಡಲು ಯತ್ನಿಸುತ್ತಿದೆ 
ಹಳೆಯ ನೋವಿನ ಒಡಲಿಗೆ
ಆದರು 
ಅದನ್ನೆದುರಿಸಿ ನಿಂತಿರುವೆ 
ನಿನ್ನ ಬರುವಿಕೆಗಾಗಿ...
ಖಂಡಿತ ಬರುವೆಯಲ್ಲಾ...

 

ನಿನ್ನ ಮಾತಿನ ಮಾದುರ್ಯದ ಸವಿ 

ಸವಿಯುವ ಮೊದಲೇ

ಸಜ್ಜಾಗಿ ನಿಂತಿರುವೆ 

ನನ್ನಗಲಿ ದೂರವಾಗಲು...

ನಿನ್ನ ಸ್ಪರ್ಶದ

ಹಿತ ಮನದೊಳಗೆ 

ಮಾಗುವ ಮೊದಲೇ

ನನ್ನ ತೊರೆದು

ಹೊರಟು ನಿಂತಿರುವೆ ..

ಗೊತ್ತು 

ಅಲ್ಲಲ್ಲ

ನಂಬಿದ್ದೀನಿ... 

ಮತ್ತೆ ನೀನು

ವಾಪಸ್ಸಾಗುತ್ತೀಯ ಎಂದು

ಈಗ ಉಂಟಾಗಲಿರುವ

ಅಂತರ

ತುಂಬಾ ದಿನ ಅಲ್ಲವೆಂದು...

ಆದರೂ

ಹಿಂದಿನ ಅನುಭವ

ಈ "ಅಂತರ "

ಮನದೊಳಗೆ ಕಟ್ಟುತ್ತಿದೆ

ಭಯದ ಬಂಗಲೆಯ..

ನನ್ನನ್ನು ದೂಡಲು ಯತ್ನಿಸುತ್ತಿದೆ 

ಹಳೆಯ ನೋವಿನ ಒಡಲಿಗೆ

ಆದರು ಅದನ್ನೆದುರಿಸಿ

ನಿಂತಿರುವೆ ನಿನ್ನ ಬರುವಿಕೆಗಾಗಿ...

ಖಂಡಿತ ಬರುವೆಯಲ್ಲಾ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by modmani on

// ಹಿಂದಿನ ಅನುಭವ
//ಈ "ಅಂತರ "
//ಮನದೊಳಗೆ ಕಟ್ಟುತ್ತಿದೆ
//ಭಯದ ಬಂಗಲೆಯ..

ಹಿಂದಿನ ಅನುಭವದ ಮೂಸೆಯಲಿ
ಹೊಸಬಾಳ ಕಟ್ಟುವಂತಿರಲಿ
ಭಯ-ಗಿಯಗಳನು ದೂರನೂಕಿ
ಅಭಯದಲಿ ಮುಂದೆ ನುಗ್ಗಿ

ಒಳ್ಳೆಯ ಅಭಿವ್ಯಕ್ತಿ ಮಂಸೋರೆ .. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.