ಮತ್ತಷ್ಟು ಹಂಪೆಯ ಮುಖಗಳು
ಹಂಪೆಯು ಸ್ಪೂರ್ತಿಗೆ, ಇತಿಹಾಸಕ್ಕೆ, ನನ್ನಂತ ಅಲೆಮಾರಿಗಳಿಗೆ? ;) ಯಾವಾಗಲೂ ಆಸಕ್ತಿಕರ ವಿಷಯ. ಅದು ವೀಕ್ಷಕನಿಗೆ ಎಂದೂ ಬರಿದಾಗದ visual ಜೀವ ನದಿ. ನಾಗರಾಜ್ ರವರ ಚಿತ್ರಗಳು ನೋಡಿದ್ಮೇಲೆ ನನ್ನಲ್ಲಿರುವ ಚಿತ್ರಗಳನ್ನ ಹಾಕೋಣ ಅಂತ ಅನಿಸಿತು. ನಾನು ಕಳೆದ ಬಾರಿ ಹಂಪೆಗೆ ಹೋದಾಗ ಸಾಮಾನ್ಯ ದಾಖಲೀಕರಣ (common documentation) ಜೊತೆಗೆ ಕಲ್ಲು ಕಲ್ಲಲ್ಲೂ ಕಥೆ ಹೇಳೊ ಹಂಪೆಯನ್ನು ಬೇರೆ ರೂಪದಲ್ಲಿ ದಾಖಲೀಕರಣಗೊಳಿಸಲು ನಡೆಸಿದ ಪ್ರಯತ್ನದ ಒಂದು ಕಿರು ನೋಟ ಇದು.
ಇದು ಮಂತ್ರಿಗಳು ಹಾಗು ರಾಜನ ಪ್ರಮುಖ ಆಸ್ಥಾನಿಕರ ವಸತಿ ಗೃಹಗಳಿದ್ದ ಜಾಗ
ಹಜಾರರಾಮ ದೇವಸ್ಥಾನದ ಗೋಪುರದ ಮೇಲಿನ ಗಾರೆ ಶಿಲ್ಪಗಳು
ಅಂತಃಪುರ ಕಾವಲು ಗೋಪುರ
ಆನೆಲಾಯದ ಕಟ್ಟಡ
ಆನೆಲಾಯದ ಕಟ್ಟಡ
ಕಮಲ್ ಮಹಲ್ ಬಳಿಯ ಕಾವಲು ಗೋಪುರ
ಕಮಲ್ ಮಹಲ್ ಬಳಿಯ ಮ್ಯೂಸಿಯಂ ಪಕ್ಕದ ಕಟ್ಟಡದ(ಹೆಸರು ನೆನಪಿಲ್ಲಾ) ಮುಂದಿರುವ ಮುರಿದ ಸೊಂಡಿಲಿನ ಆನೆ
ಕಮಲ್ ಮಹಲ್ ಬಳಿಯ ಮ್ಯೂಸಿಯಂ ಪಕ್ಕದಲ್ಲಿ ನಡೆಯುತ್ತಿರುವ ಉತ್ಖನನ
ಕಮಲ್ ಮಹಲ್ ಬಳಿಯ ಮ್ಯೂಸಿಯಂ ಪಕ್ಕದಲ್ಲಿ ನಡೆಯುತ್ತಿರುವ ಉತ್ಖನನ
ಕಮಲ್ ಮಹಲ್ ಬಳಿಯ ಮ್ಯೂಸಿಯಂ ಪಕ್ಕದಲ್ಲಿ ನಡೆಯುತ್ತಿರುವ ಉತ್ಖನನ
ಲಕ್ಷ್ಮಿ ನರಸಿಂಹ ವಿಗ್ರಹದ ದಾರಿಯಲ್ಲಿ ಸಿಕ್ಕ ವೃದ್ದ
ತುಲಾಬಾರ ಹಾಗು ಎರಡಂತಸ್ತಿನ ದ್ವಾರ
ವಿಜಯ ವಿಠ್ಠಲ ಗುಡಿಯ ಬಳಿಯಿರುವ ೩೦೦ ವರ್ಷಕ್ಕೂ ಹಳೆಯದಾದ ಮರದಲ್ಲಿನ ಹೂವು.
- manjunath s reddy's blog
- Login or register to post comments
- 542 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಮತ್ತಷ್ಟು ಹಂಪಿಯ ಮುಖಗಳು
ಚಿತ್ರಗಳು ಚೆನ್ನಾಗಿವೆ.
>>ಕಮಲ್ ಮಹಲ್ ಬಳಿಯ ಮ್ಯೂಸಿಯಂ ಪಕ್ಕದಲ್ಲಿ ನಡೆಯುತ್ತಿರುವ ಉತ್ಖನನ,
ಲಕ್ಷ್ಮಿ ನರಸಿಂಹ ವಿಗ್ರಹದ ದಾರಿಯಲ್ಲಿ ಸಿಕ್ಕ ವೃದ್ದ
ವಿಜಯ ವಿಠ್ಠಲ ಗುಡಿಯ ಬಳಿಯಿರುವ ೩೦೦ ವರ್ಷಕ್ಕೂ ಹಳೆಯದಾದ ಮರದಲ್ಲಿನ ಹೂವು.
ತುಂಬಾ ಇಷ್ಟವಾದವು.
-ಅನಿಲ್
ಉ: ಮತ್ತಷ್ಟು ಹಂಪಿಯ ಮುಖಗಳು
ನನ್ನಿ ಅನಿಲ್.. :)
ಉ: ಮತ್ತಷ್ಟು ಹಂಪಿಯ ಮುಖಗಳು
ಹಜಾರರಾಮ ದೇವಸ್ಥಾನದ ಗೋಪುರದ ಮೇಲಿನ ಗಾರೆ ಶಿಲ್ಪಗಳು' ಈ ಚಿತ್ರದಲ್ಲಿನ ಶಿಲ್ಪಗಳು ಭಿನ್ನ(ಛಿದ್ರ)ವಾಗಿವೆ ಅಲ್ಲವೇ ?
ಉ: ಮತ್ತಷ್ಟು ಹಂಪಿಯ ಮುಖಗಳು
ಹೌದು.. :(
ಉ: ಮತ್ತಷ್ಟು ಹಂಪಿಯ ಮುಖಗಳು
>>>>>ಲಕ್ಷ್ಮಿ ನರಸಿಂಹ ವಿಗ್ರಹದ ದಾರಿಯಲ್ಲಿ ಸಿಕ್ಕ ವೃದ್ದ<<<<<
ಗಂಟೆಗಟ್ಟಲೆ ನಿಲ್ಲಬಲ್ಲ ಅದೂ ಸಹ ರಾಷ್ಟ್ರಪಿತ ಗಾಂದಿಯ ಬಂಗಿಯಲ್ಲಿ. ಪ್ರವಾಸಿಗರು ಕೊಟ್ಟ ಹಣದಿಂದ <<<
ಉ: ಮತ್ತಷ್ಟು ಹಂಪಿಯ ಮುಖಗಳು
ಎಲ್ಲರು ಎಷ್ಟೊ೦ದು ಒಳ್ಳೊಳ್ಳೆ ಹ೦ಪೆ ಚಿತ್ರಗಳನ್ನ ಚಿತ್ರ ಹಾಕಿ ಅಲ್ಲಿಗೆ ಮತ್ತೊಮ್ಮೆ ಹೋಗ್ಬೇಕು ಅನ್ನೋ ಹಾಗೆ ಮಾಡ್ತಿದಾರೆ ... :(
ಆ ತಾತನ ವಯಸ್ಸೆಷ್ಟು?
ಉ: ಮತ್ತಷ್ಟು ಹಂಪೆಯ ಮುಖಗಳು
ಹಂಪಿ ಅಲ್ಲ ಹಂಪೆ.
ಉ: ಮತ್ತಷ್ಟು ಹಂಪೆಯ ಮುಖಗಳು
ಹಂಪಿ ಯಾಕ್ ಅಲ್ಲ ?
ಉ: ಮತ್ತಷ್ಟು ಹಂಪೆಯ ಮುಖಗಳು
ಯಾಕಲ್ಲ ಅಂದ್ರೆ.. ಧಾರವಾಡ Darwar ದಾರವಾರ್ ಅಲ್ಲ.. ಅದುಕ್ಕೆ.
ಉ: ಮತ್ತಷ್ಟು ಹಂಪೆಯ ಮುಖಗಳು
ಮಾಯ್ಸರೇ :) ನೀವು ಹಂಪೆಯನ್ನ ಮಂಡ್ಯದ, ಹಾಸನದ ಕಣ್ಣಲ್ಲೇ ನೋಡ್ಬೇಡ್ರೀ ...
ಆಯಾ ಊರಿನವರೇ ತಮ್ ತಮ್ಮ ಊರಿನ ಹೆಸರು ಏನು ಅಂತ ನಿರ್ಧರಿಸಬೇಕಾದ್ರೆ, ಅದು ಹಂಪಿಯೇ ಆಗತ್ತೆ - ಯಾಕಂದರೆ, ಬಳ್ಳಾರಿ ಕಡೇವ್ರೆಲ್ಲ ಹಂಪಿ ಅಂತಲೇ ಅನ್ನೋದು.
ಮೊನ್ನೆ ಕನ್ನಡಕಂದರು ಕೊಟ್ಟಿರಲಿಲ್ಲವೇ, ಅರ್ಥ ಬದಲಾಗದಿರುವಾಗ ಬಡಗಲಿನಲ್ಲಿ ಇ ಇದ್ದದ್ದು ತೆಂಕಲಲ್ಲಿ ಎ ಎಂದಾಗುತ್ತೆ (ಮತ್ತೆ vice-versa) ಅಂತ, ಅದನ್ನ ನೆನಪಿಸ್ಕೊಳಿ. ( ಮನೆ - ಮನಿ, ಹಣೆ- ಹಣಿ ..)
-ಹಂಸಾನಂದಿ
ಉ: ಮತ್ತಷ್ಟು ಹಂಪೆಯ ಮುಖಗಳು
ನಾನು ಹಾಗೆ ನೋಡ್ತಿಲ್ಲ..
ಕರ್ನಾಟಕ ಸರಕಾರದ ಅಧಿಕೃತ ಹೆಸರು ಕನ್ನಡದಲ್ಲಿ ’ಹಂಪೆ’.
ಹಾಗೂ ಶಾಸನಗಳಲ್ಲೂ ಅದು ’ಹಂಪೆ’ಯೇ!
ತುಂಗಭದ್ರೆಯನ್ನ ತುಂಗಭದ್ರಿ
ಕೃಷ್ಣೆಯನ್ನು ಕೃಷ್ಣಿ..
ನರ್ಮದೆಯನ್ನು ನರ್ಮದಿ ಅಂತ ಅನ್ನೋಕೆ ಕನ್ನಡದಲ್ಲಿ ಬರುತ್ಯ?
ಉ: ಮತ್ತಷ್ಟು ಹಂಪೆಯ ಮುಖಗಳು
ಮಹೇಶನ್ನ ಮಾಯ್ಸ ಅಂತ ಕನ್ನಡದಲ್ಲಿ ಅನ್ನೋಕೆ ಬರುತ್ತಾ ?
ನಿಮ್ಮ ಅಧಿಕೃತ ಹೆಸರು ಮಹೇಶ ಅಲ್ವೇ ? ದಾಖಲೆಗಳಲ್ಲೂ ಹಾಗೇ ಇರಬೇಕಲ್ಲ ?
:)
ಉ: ಮತ್ತಷ್ಟು ಹಂಪೆಯ ಮುಖಗಳು
ಮಾಯ್ಸವನ್ನ ನನ್ನ ಅಧಿಕೃತ ಹೆಸರೆಂದೆಲ್ಲಿ ಹೇಳಿಕೊಂಡಿದ್ದೀನಿ.. ಅದು ನನ್ನ ಕಾವ್ಯನಾಮ :D
ಬೇಕಾದ್ರೆ.. ಈಗ ಹಂಸಾನಂದಿ, ಅನಿವಾಸಿ, ಇಲ್ವ ಹಂಗೆ
ಉ: ಮತ್ತಷ್ಟು ಹಂಪೆಯ ಮುಖಗಳು
ಹಂಪೇನೂ ಏನೂ ಹೇಳ್ಕೊಂಡಿಲ್ಲ ? !
ಉ: ಮತ್ತಷ್ಟು ಹಂಪೆಯ ಮುಖಗಳು
ಏನು ಹೇಳಿಕೋಬೇಕಿತ್ತು?
ಉ: ಮತ್ತಷ್ಟು ಹಂಪೆಯ ಮುಖಗಳು
ಅಧಿಕೃತವಾಗಿ ತನ್ನ ಹೆಸರು ಏನು ಅಂತ ! ಅದು ಹೇಳ್ಕೊಂಡಿದ್ರೆ ಈ ಪ್ರಶ್ನೇನೇ ಇರ್ತಿರ್ಲಿಲ್ಲ ಅಂತ ! :)
ಉ: ಮತ್ತಷ್ಟು ಹಂಪೆಯ ಮುಖಗಳು
ಅಲ್ವ.. ಪಾಪ ಹಂ’ಪೆ’
ಉ: ಮತ್ತಷ್ಟು ಹಂಪೆಯ ಮುಖಗಳು
ಮಾಯ್ಸರು ಅಲ್ಲಿಯ (ಹಂಪಿಯ) ಜನರ ಭಾಷಾ ಸೊಗಡನ್ನು ಲೆಕ್ಕ ಹಾಕ್ತಿಲ್ಲ ಅಂತ ಅನ್ಸುತ್ತೆ .....
ಉ: ಮತ್ತಷ್ಟು ಹಂಪೆಯ ಮುಖಗಳು
ಇಲ್ಲ.. ಲೆಕ್ಕಕ್ಕೆ ತಗೊಂಡಿಲ್ಲ
ಕತ್ತೆಯನ್ನು ಕತ್ತಿಯೆಂದ್ರೂ ’ಬರಹ’ನುಡಿಯಲ್ಲಿ ಬರೆದಾಗ ಕತ್ತೆ ಎಂದೇ ಬರೆಯಬೇಕು...
ಅದೂ ಅಲ್ಲದೇ ನಮ್ ಮಂಸೋರೆ ಬಳ್ಳಾರಿಯ ಆಡುನುಡಿಯಲ್ಲಿ ಬರೆದಿಲ್ಲ.
ಉ: ಮತ್ತಷ್ಟು ಹಂಪೆಯ ಮುಖಗಳು
ನೀವು ಹೇಳಿದ್ದು ಬರೀ ಈ ಲೇಖನಕ್ಕಾದ್ರೆ ಅದಕ್ಕೆ ಮಂಸೋರೆಯವರೇ ಉತ್ತ್ರ ಕೊಡ್ಬೇಕು ....
ಉ: ಮತ್ತಷ್ಟು ಹಂಪೆಯ ಮುಖಗಳು
ಅಂತೂ ಈಗ ಚೆಂಡು ನನ್ನ ಅಂಗಳಕ್ಕೆ ಬಂದು ಬಿದ್ದಿದೆ..
ನಾನೂ ಸಾಮಾನ್ಯವಾಗಿ ಉಚ್ಚರಿಸುವುದು ಹಂಪೆ ಎಂದೇ..
ಆದ್ದರಿಂದ ಇದರ ಬಗ್ಗೆ ಹೆಚ್ಚು ಚರ್ಚಿಸಲು ಹೋಗದೆ ಹಂಪಿಯನ್ನು .. ಹಂಪೆಯನ್ನಾಗಿಸುತ್ತೇನೆ.. :)
ಉ: ಮತ್ತಷ್ಟು ಹಂಪೆಯ ಮುಖಗಳು
:)
ಉ: ಮತ್ತಷ್ಟು ಹಂಪೆಯ ಮುಖಗಳು
ಸರಿಯಾಗಿದೆ ಈಗ.!
ಉ: ಮತ್ತಷ್ಟು ಹಂಪಿಯ ಮುಖಗಳು
ಚಿತ್ರಗಳು ಚೆನ್ನಾಗಿವೆ
ಉ: ಮತ್ತಷ್ಟು ಹಂಪೆಯ ಮುಖಗಳು
ಮಂಜು,
ಪಾಲರು ಇನ್ನೂ ಚಿತ್ರಗಳನ್ನು ನೋಡಿಲ್ಲ. ಆದ್ದರಿಂದ ಚಿತ್ರದ ವಿಮರ್ಶೆ ನನ್ನ ಹೆಗಲಿಗೆ ಬಿದ್ದಿದೆ. :)
ಮೊದಲನೇ ಚಿತ್ರ ಮರದ ಮರೆಯಿಂದ ತೆಗೆಯುತ್ತಿದ್ದರೆ ಚೆನ್ನಾಗಿತ್ತು, ಮರದಲ್ಲಿರುವ ಹಣ್ಣುಗಳು ಬ್ಲರ್ ಆಗಿದೆ.
ಎರಡನೇ ಚಿತ್ರ ಮೇಲ್ಬದಿಯಿಂದ ತೆಗೆಯುತ್ತಿದ್ದರೆ ತಲೆಗಳು ಕಾಣಿಸುತ್ತಿದ್ದುವೋ ಏನೋ..
...
...
ಕೊನೆಯ ಚಿತ್ರಕ್ಕೆ ನಿಮಗೆ ಫುಲ್ ಮಾರ್ಕ್ಸ್-೩೦೦ ವರ್ಷಕ್ಕೂ ಹಳೆಯದಾದ ಮರ ಹೂವನ್ನು ತನ್ನ ಕೈಯಾರೆ ಕೊಡಲು ಹೊರಟಂತಿದೆ. ಆದರೂ ಇನ್ನೂ ಚೆನ್ನಾಗಿ ಬರುತ್ತಿದ್ದರೆ ಒಳ್ಳೆಯದಿತ್ತು.
(ಪಾಲರು ಕ್ಷಮಿಸುತ್ತಾರೆಂಬ ನಂಬಿಕೆಯಿಂದ)
-ಗಣೇಶ.
ಉ: ಮತ್ತಷ್ಟು ಹಂಪೆಯ ಮುಖಗಳು
:) :) :)
ನಿಮ್ಮ ವಿಮರ್ಶೆಗೆ ನನ್ನೀ...
ಉ: ಮತ್ತಷ್ಟು ಹಂಪೆಯ ಮುಖಗಳು
ಮಂಜು,
"ಅಂತಃಪುರ ಕಾವಲು ಗೋಪುರ"
"ಲಕ್ಷ್ಮಿ ನರಸಿಂಹ ವಿಗ್ರಹದ ದಾರಿಯಲ್ಲಿ ಸಿಕ್ಕ ವೃದ್ದ" - ಇದರ ಮೇಲ್ಗಡೆ ಇರೋ ಕಾಲ್ಬರಹ ಇಲ್ಲದ ಚಿತ್ರ
"ತುಲಾಬಾರ ಹಾಗು ಎರಡಂತಸ್ತಿನ ದ್ವಾರ"
ತಾಂತ್ರಿಕವಾಗಿ ಈ ಮೇಲಿನ ಚಿತ್ರಗಳೆಲ್ಲಾ ಚೆನ್ನಾಗಿವೆ :)
ಗಣೇಶ್,
ಕೊನೇ ಚಿತ್ರಕ್ಕೆ ಫುಲ್ ಮಾರ್ಕ್ಸ್ ಜಾಸ್ತಿ ಆಯ್ತು :)
--
ಪಾಲ
ಉ: ಮತ್ತಷ್ಟು ಹಂಪೆಯ ಮುಖಗಳು
ಪಾಲ ನಿಮ್ಮ ಮೆಚ್ಚುಗೆಗೆ ನನ್ನೀ.. :)
ತಾಂತ್ರಿಕವಾಗಿ ಈ ಮೇಲಿನ ಚಿತ್ರಗಳೆಲ್ಲಾ ಚೆನ್ನಾಗಿವೆ>>>
ತಾಂತ್ರಿಕನಾಗಿ ಸರಿ...
ಸಂಯೋಜನೆ ಬಗ್ಗೆಯೂ ನಿಮ್ಮ ಅನಿಸಿಕೆಗಳನ್ನು, ವಿಮರ್ಷೆಗಳನ್ನು ತಿಳಿಯಬಯಸುತ್ತೇನೆ...
ಉ: ಮತ್ತಷ್ಟು ಹಂಪೆಯ ಮುಖಗಳು
ಸಂಯೋಜನೆಯ ದೃಷ್ಟಿಯಿಂದ ನನಗಿಷ್ಟವಾದ ಚಿತ್ರಗಳು ಮೇಲೆ ತಿಳಿಸಿದ್ದು. ಜೊತೆಗೆ ಆ ಚಿತ್ರಗಳನ್ನು ತೆಗೆದ ಕೋನ, ಬಳಸಿದ ಅಪಾರ್ಚರ್ ಇಷ್ಟ ಆದ್ವು. ಸ್ವಲ್ಪ ಕಡಿಮೆಯಾದದ್ದೆಂದರೆ ಬಣ್ಣ ಅಷ್ಟೆ, ಬೆಳಿಗ್ಗಿನ ಅಥವಾ ಸಂಜೆಯ ಬಿಸಿಲಲ್ಲಿ ಇನ್ನೂ ಉತ್ತಮವಾಗಿರೋ ಬಣ್ಣ ಸಿಕ್ತಾ ಇತ್ತು.
ಉ: ಮತ್ತಷ್ಟು ಹಂಪೆಯ ಮುಖಗಳು
ಸರಿ.. :)
ನಾನು ಕಳೆದ ಬಾರಿ ಹೋದದ್ದು ಜೂನ್ ತಿಂಗಳಲ್ಲಿ.. ಆಗ ಮಳೆಗಾಲ ಶುರುವಾಗಿತ್ತು.. ಆದ್ದರಿಂದ ಎಲ್ಲಾ ಚಿತ್ರಗಳಲ್ಲೂ ಬೆಳಕು ಏಟು ಕೊಡ್ತು..