ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ.
೭ ದಿನಗಳ ನಂತರ ಬರೆಯುತ್ತಿದ್ದೇನೆ.
ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು.

ಈ ಚಿತ್ರವನ್ನು ಬರೆದುಮೊನ್ನೆ ೧೩ ಕ್ಕೆ ಒಂದು ವರ್ಶವಾಯಿತು.. ಆಗ ವಿಷ್ಣುವರ್ಧನ್ ರವರ ಸಿನಿಮಾಗೆ ರಚಿಸುತ್ತಿದ್ದೇನೆ ಎಂಬ ಖುಶಿ ಮಾತ್ರವಿತ್ತೇ ಹೊರತು.. ಒಂದು ವರ್ಶದನಂತರ ಹೀಗೆ ನೆನಪಿಸಿಕೊಳ್ಳುತ್ತೇನೆ ಎಂದು ಎಣಿಸಿರಲಿಲ್ಲ.
ಈ ಚಿತ್ರವನ್ನು ಸಿನೆಮಾದಲ್ಲಿ ಒಂದು ಸಣ್ಣ ದೃಶ್ಯದಲ್ಲಿ ಬಳಸಿಕೊಳ್ಳಲಾಗಿದೆಯಾದರು... ಮರೆಯಲಾಗದ ನೆನಪನ್ನು ಮಾಡಿದೆ.
ಹಾಗೆ ಈ ಚಿತ್ರದಲ್ಲಿನ ಗರಗರನೆ ಹಾಡಿನಲ್ಲಿ ಬರುವ ಕಲಾವಿದನ ಪಾತ್ರವನ್ನು ನಾನು ಮಾಡಬೇಕಾಗಿತ್ತು...
ತೆರೆಯ ಹಿಂದೆಯೇ ಕೆಲಸ ಮಾಡಲು ಆಸಕ್ತಿ ಇದ್ದಿದ್ದರಿಂದ ಆ ಅವಕಾಶವನ್ನು ನಿರಾಕರಿಸಿದ್ದೆ.
ಆ ಪಾತ್ರವನ್ನು ಒಪ್ಪಿಕೊಂಡಿದ್ದರೆ ...
ನಾಲ್ಕು ದಿನಗಳು ವಿಷ್ಣುವರ್ಧನ್ ರೊಡನೆ ಮೈಸೂರಿನ ಲಲಿತಮಹಲ್ನಲ್ಲಿ ಚಿತ್ರೀಕರಣದಲ್ಲಿ ಕಳೆದ ದಿನಗಳು ಈಗ ಎಲ್ಲಾ ನೆನಪಾಗಿ ಕಾಡುತ್ತಿದೆ..
ಯೂಟ್ಯೂಬ್ನಲ್ಲಿ ಅಡ್ಡಾದುತ್ತಿದ್ದಾಗ ಸಿಕ್ಕಿದ್ದು..
ನಾನು ತುಂಬಾ ದಿನಗಳಿಂದ ನೋಡಲು ಕಾಯುತ್ತಿರುವ ಸಿನೆಮಾ ಇದು ಮರುದನಾಯಗನ್...
ಇದರ ವಿಶೇಷತೆಗಳು ಹಲವು...
ಅದರಲ್ಲಿ ಮುಖ್ಯವಾದುದು ಈ ಚಿತ್ರ ಬಿಡುಗಡೆಗೊಂಡರೆ... ವಿಷ್ಣುವರ್ಧನ್ ರವರ ಸಿನೆಮಾಗಳಲ್ಲಿ ಬಿಡುಗಡೆಯಾದ ಕೊನೆ ಸಿನೆಮಾ ಎಂಬ ಹೆಗ್ಗಳಿಕೆಯು ಆಪ್ತರಕ್ಷಕ ಸಿನೆಮಾದಿಂದ ಮರುದನಾಯಗನ್ ಪಾಲಾಗುತ್ತದೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ವಿಷ್ಣುವರ್ಧನ್ ರವರು ನಟಿಸಿದ್ದಾರೆ.









ಪ್ರತಿಕ್ರಿಯೆಗಳು
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ಒಹ್! ನೀವ್ ರಚಿಸಿದ್ದ ಇದನ್ನ, ಬೊಂಬಾಟ್ ರೀ ;)
ಹೌದು! ಈ ಚಿತ್ರ ಆಪ್ತರಕ್ಷಕ ಚಿತ್ರದ್ದು ಅಲ್ವಾ? ಇದ್ಯಾವ್ದು ಮರುದನಾಯಗನ್?
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ರಾಕೇಶ್,
>>>ಇದ್ಯಾವ್ದು ಮರುದನಾಯಗನ್?
-ಚಿತ್ರ ಬಿಡುಗಡೆಯಾದರೆ...ಸಾಹಸ ಸಿಂಹ ನಟಿಸಿದ ಕೊನೆಯ ಚಿತ್ರ ಇದಾಗುವುದು.ನಾಯಕ ಕಮಲ್ ಹಾಸನ್‌ಗಿಂತ, ಕನ್ನಡಿಗರು ಈ ಚಿತ್ರದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.
ಮಂಜು,
ಸೂಪರ್ ಚಿತ್ರ.
-ಗಣೇಶ.
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ಮರುದನಾಯಗನ್ ಕಮಲ್ ನ ಡ್ರೀಮ್ ಪ್ರಾಜೆಕ್ಟ್...
ಇದರ ಕಥೆ ಬ್ರಿಟೀಷರು ಭಾರತಕ್ಕೆ ಆಗಮಿಸಿದ ಕಾಲಘಟ್ಟದಲ್ಲಿ ಇಲ್ಲಿದ್ದಂತ ಒಬ್ಬ ಐತಿಹಾಸಿಕ ವ್ಯಕ್ತಿಯನ್ನು ಕುರಿತಾಗಿದ್ದು... ಇದರ ಮುಹೂರ್ತಕ್ಕೆ ೧೯೯೭ ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಂತ ರಾಣಿ ಎಲಿಜಬೆತ್ ಸಮ್ಮುಖದಲ್ಲಿ ನಡೆಯಿತು. ಆಗಲೆ ಇದರ ಚಿತ್ರೀಕರಣ ಸಂಪೂರ್ಣವಾಗಿತ್ತು. ಆದರೆ ಈ ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂದು ಸೆನ್ಸಾರ್ ಬೋರ್ಡ್ ತಡೆಹಿಡಿದಿತ್ತು. ಕಳೆದ ವರ್ಷ ಪಿರಮಿಡ್ ಸಂಸ್ಥೆಯವರು ಕೆಲವು ಬದಲಾವಣೆಗಳನ್ನು ಮಾಡಿ ಬಿಡುಗಡೆ ಮಾಡಲು ಯೋಜಿಸಿದ್ದರು. ಅದರ ಚಿತ್ರೀಕರಣವು ನಡೆದಿತ್ತು. ಅದಾದನಂತರ ಅವರು ಕಾರಣಾಂತರಗಳಿಂದ ದೂರ ಸರಿದರು. ಈಗ ಸ್ವತಃ ಕಮಲ್ ಈ ಚಿತ್ರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ನನಗೆ ತಿಳಿದ ಮಾಹಿತಿ.
http://www.behindwoo...
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ಶೆಟ್ರೇ, ``ಮರುದನಾಯಗನ್`` ಕಮಲಹಾಸನ್ ನಿರ್ಮಾಣದ, ಅಭಿನಯದ ಮಹಾತ್ವಾಕಾ೦ಕ್ಷೆಯ ಚಿತ್ರ. ``ದಶಾವತಾರ೦`` ನಿರ್ಮಿಸುವುದಕ್ಕಿ೦ತಲೂ ಮ್೦ಚೆಯೇ ಅದರ ನಿರ್ಮಾಣ ಕಾರ್ಯ ಆರ೦ಭಗೊ೦ಡಿತ್ತು. ನಿರ್ಮಾಣ ಕಾರ್ಯ ಅ೦ತ್ಯಗೊ೦ಡು, ಸಿನಿಮಾ ಬಿಡುಗಡೆಗೊಳ್ಳುವ ಹ೦ತಕ್ಕೆ ಬ೦ದಿದೆಯೇ, ಇಲ್ಲವೇ ಎ೦ಬ ಬಗ್ಗೆ ನನಗೆ ಮಾಹಿತಿ ಇಲ್ಲ.
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ಮಂಜುನಾಥ್,
ಚಿತ್ರ ಬಹಳ ಚೆನ್ನಾಗಿದೆ. ಹಂಚಿಕೊಂಡದ್ದಕ್ಕೆ ನನ್ನಿ...
ಅಂದ ಹಾಗೆ ನಾಗವಲ್ಲಿ ಚಿತ್ರ ಬರೆದವರು? :)
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ಮಂಜು ...
ಅಬ್ಬಾ ಚಂದದ ಚಿತ್ರ...:)
ಮರುದನಾಯಗನ್ ಟ್ರೈಲರ್ ನೋಡಿದರೆ.. ಅಪೋಕ್ಯಾಲಿಪ್ಟೋ ನೆನಪಿಗೆ ಬಂತು.. ಚಿತ್ರ ಬಿಡುಗಡೆಗೆ ಕಾಯುತ್ತಿದ್ದೇನೆ.
ವಿಷ್ಣುರವರ ಕಡೆಯ ಚಿತ್ರದಲ್ಲಿ ಕೆಲಸ ಮಾಡಿದ ನೀವು ಭಾಗ್ಯವಂತರೇ ಬಿಡಿ.
ಮೊದ್ಮಣಿ
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
"ಅಪೋಕ್ಯಾಲಿಪ್ಟೋ" ಸುಮಾರು ಹತ್ತು ಬಾರಿ ನೋಡಿದ್ದೇನೆ. ಆತ ತಪ್ಪಿಸಿಕೊಳ್ಳುವ ರೀತಿ ನಿಜಕ್ಕೂ ಸಂಚಲನ ಉಂಟು ಮಾಡುತ್ತೆ. ಮಂಜುನಾಥ್ ಇದೇ ರೀತಿ ವಿಷ್ಣುವರವರು ಡ್ರೆಸ್ ಮಾಡಿಕೊಂಡಿದ್ದ ಪೋಟೋವನ್ನು ಅವರ ಸಾವಿನ ದಿನದಂದು ಅವರ ಮನೆಯಲ್ಲಿ ಇಡಲಾಗಿತ್ತು. ಚಿತ್ರ ನೋಡಿ ತುಂಬಾ ಖುಷಿಯಾಯ್ತು. ನಾಗವಲ್ಲಿ ಬರೆದದ್ದು ಯಾರು. ನಿಮಗೆ ವಿಶ್ವನಾಥ್ ಹೆಗಡೆ ಗೊತ್ತಿದಾರಾ. ಅವರು ಪರ್ವ ಧಾರವಾಹಿಗೆ ಬೆಳವಾಡಿ ಪ್ರಕಾಶ ಜೊತೆಗೆ ಕೆಲಸ ಮಾಡಿದ್ದರು. ನಮ್ಮ ಕಂಪೆನಿಯಲ್ಲೂ ಸುಮಾರು ವರ್ಷಕ್ಕೂ ಹೆಚ್ಚು ಕೆಲಸ ಮಾಡಿದ್ದಾರೆ. ಅವರು ಅನಿಮೇಷನ್ ನಲ್ಲಿ ಉತ್ತಮ ಹೆಸರು ಪಡೆದಿದ್ದರು.
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ನಾಗವಲ್ಲಿ ಚಿತ್ರವನ್ನು ರಚಿಸಿದವರು ತಮಿಳುನಾಡು ಕಲಾವಿದರು.
ಹಾಗೆ ಗರನೆ ಗರಗರನೆ ಹಾಡಿನಲ್ಲಿ ಕಲಾವಿದರು ರಚಿಸುತ್ತಿರುವ ಚಿತ್ರಗಳನ್ನು ಮಾಡಿದ್ದು ನಾನು. ಅದು ಲಲಿತಮಹಲ್ ನಲ್ಲಿ ಚಿತ್ರೀಕರಣ ನಡೆದದ್ದು.
ವಿಶ್ವನಾಥ್ ಹೆಗಡೆ ಗೊತ್ತಿಲ್ಲ. :-(
ಆದ್ರೆ ಪ್ರಕಾಶ್ ಬೆಳ್ವಾಡಿ ಜೊತೆ ಪ್ರತಾಪ್ ಎನ್ನುವವರು ಕೆಲಸ ಮಾಡುತ್ತಾರೆ ಅವರು ಗೊತ್ತು.
ಉ: ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು
ಮಾಹಿತಿಗಾಗಿ ಧನ್ಯವಾದಗಳು