ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮದಿರೆಯ ನಶೆ

ಆ ಎರೆಡು ಕಣ್ಣುಗಳು...

 
ನನ್ನ ಮನದೊಳಗೆ

ಮದಿರೆಯ ನಶೆಯಾವರಿಸಿದಂತೆ

ಆವರಿಸಿತು.

ಆ ಕಾಂತಿಯ ಚೇತನದ

ಹೊಳೆಯುಕ್ಕಿ ಹರಿಯುವಂತಿದ್ದ

ಆ ನೋಟ

ನನ್ನದೆಯೊಳಗಿನ  ಸುಪ್ತಸಾಗರದ ಶಾಂತತೆಯನ್ನು 

ಕದಡಿಸಲೋ ಎಂಬಂತೆ

ಸೀಳಿ ನುಗ್ಗಿತು ನನ್ನ ಮನದ

ಜಡತ್ವದ ಕೋಟೆಯನ್ನು ಬೇದಿಸುತ್ತ.

Your rating: None Average: 3 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮದಿರೆಯ ನಶೆ

sharvari's picture

ತುಂಬಾ ಚೆನ್ನಾಗಿ ಬರೆದಿದ್ದೀರಿ ಮಂಜು ಅಣ್ಣ

ಉ: ಮದಿರೆಯ ನಶೆ

inchara123's picture

ಓಹೋ! ಮಂಸೋರೆ, ಏನ್ರೀ ಸಮಾಚಾರ? ಅಲ್ಲಿ ನೋಡಿದ್ರೆ ಸುಪ್ರೀತ್ ಕಣ್ಣುಗಳು ಬೇಟೆಯಾಡುತ್ತಿವೆ ಅಂತಿದ್ದಾರೆ! ನೀವು ನೋಡಿದ್ರೆ ಮದಿರೆಯ ನಶೆ ಅಂತಿದ್ದೀರಿ! ಒಟ್ಟಿನಲ್ಲಿ ಈ ಜೋಡಿ ಕಣ್ಣುಗಳು ಯಾರ್ಯಾರನ್ನು ಏನೇನೂ ಮಾಡುತ್ತೋ ಆ ಸ್ವಘಟ್ಟಿಯೇ ಬಲ್ಲ

ಉ: ಮದಿರೆಯ ನಶೆ

uniquesupri's picture

>>> ಈ ಜೋಡಿ ಕಣ್ಣುಗಳು ಯಾರ್ಯಾರನ್ನು ಏನೇನೂ ಮಾಡುತ್ತೋ ಆ ಸ್ವಘಟ್ಟಿಯೇ ಬಲ್ಲ
ಒಂದೇ ಜೋಡಿಯಾದರೆ ಕಷ್ಟ ಕಣ್ರೀ

ಉ: ಮದಿರೆಯ ನಶೆ

inchara123's picture

ಹಾಗಂತೀರಾ? ಈಗ ನೀವಿಬ್ಬರೂ ಮಾತಾಡಿಕೊಳ್ಳಬೇಕು ಒಂದೇ ಜೋಡಿಯೇ? ಇಲ್ಲವೇ? ಅಂತಾ.

ಉ: ಮದಿರೆಯ ನಶೆ

manjunath s reddy's picture

ಇದ್ರು ಇರ್ಬಹುದೇನೋ... ಸುಪ್ರೀತ್ ನಿಮ್ಮ ಬೇಟೆ ಕಣ್ಣುಗಳ ವಿಳಾಸ ಕಳಿಸಿ... ಕ್ಲಿಯರ್ ಮಾಡ್ಕೊಳ್ತೀನಿ..

ಉ: ಮದಿರೆಯ ನಶೆ

uniquesupri's picture

ಬಸ್ಸಿನ ಕಿಟಕಿಯ ಗಾಜಿನ ಹಿಂದಿದ್ದ ಆ ಕಣ್ಣುಗಳ ವಿಳಾಸ ಎಲ್ಲಿಂದ ಎಂದು ಹುಡುಕಿ ತೆಗೆಯಲಿ?

ಉ: ಮದಿರೆಯ ನಶೆ

inchara123's picture

ಮಂಸೋರೆ! ಆ ಮದಿರೆಯ ನಶೆಯ ಕಣ್ಣುಗಳು ಬಸ್ಸಿನ ಕಿಟಕಿಯ ಗಾಜಿನ ಹಿಂದೆ ಇದ್ದವೇ? ಮುಂದೆಯೇ? ಅಕ್ಕ ಪಕ್ಕದಲ್ಲಿಯೇ? ಬೇಗ ಹೇಳುವವರಂತಾಗಿ, ಕುತೂಹಲ ತಡೆಯಲಾಗುತ್ತಿಲ್ಲ

ಉ: ಮದಿರೆಯ ನಶೆ

manju787's picture

ಅಬ್ಬಾ! ಇದೆಂಥಾ ಕದನ ಕುತೂಹಲ!!

ಉ: ಮದಿರೆಯ ನಶೆ

inchara123's picture

ಮಂಸೋರೆ! ನನಗೆ ಕುತೂಹಲ ತಡೆಯೋಕೆ ಆಗಿಲ್ಲ. ಕಣ್ಣುಗಳು ಕಿಟಕಿಯ ಹಿಂದೆ ಇದ್ದವೇ? ಮುಂದೆಯೇ? ಅಕ್ಕಪಕ್ಕದಲ್ಲಿಯೇ?

ಉ: ಮದಿರೆಯ ನಶೆ

manjunath s reddy's picture

ಕಣ್ಣುಗಳಿದ್ದದ್ದು ಕಿಟಕಿಯ ಹಿಂದಲ್ಲ ಮುಂದಲ್ಲ..... ಅಕ್ಕಪಕ್ಕದಲ್ಲು ಅಲ್ಲ...
ಕ್ಯಾನ್ವಾಸಿನ ಮಧ್ಯದಲ್ಲಿ....

ಉ: ಮದಿರೆಯ ನಶೆ

inchara123's picture

ಓ ಹೌದಾ? ನೀವು ಇಷ್ಟು ತಡ ಮಾಡಿ ಹೇಳಿದ್ದನ್ನು ನೋಡಿದ್ರೆ ನಾನು ಬೇರೆ ಏನೋ ಅಂತಿದ್ದೆ!

ಉ: ಮದಿರೆಯ ನಶೆ

manju787's picture
3

ಏನ್ಮಂಜಣ್ಣಾ, ಏನ್ಸಮಾಚಾರ? ಯಾಕೋ ತಾವು ನಮ್ಮ "ಕ್ಲಬ್ಬಿಗೆ" ಸೇರ್ಕೊಳ್ಳೋ ಹಾಗೆ ಕಾಣಿಸ್ತಿದೆ!

ಉ: ಮದಿರೆಯ ನಶೆ

manjunath s reddy's picture

ಯಾವ ಕ್ಲಬ್ಬು... :(

ಉ: ಮದಿರೆಯ ನಶೆ

manju787's picture

"ಬ್ಲಾಕ್ ಲೇಬಲ್ ಕ್ಲಬ್"

ಉ: ಮದಿರೆಯ ನಶೆ

manjunath s reddy's picture

ಅದಕ್ಕೆ ನಾವು ಹಳೇ ಮೆಮ್ಬರ್ರು...

ಉ: ಮದಿರೆಯ ನಶೆ

drushya pradeep's picture

ಸಕ್ಕತ್ ಕವನ ಮಂಜು.

ಅಮ್ಮನ ಆಶೀರ್ವಾದನ ಆದಷ್ಟು ಬೇಗ ಪೂರ್ತಿ ಮಾಡೋಕ್ಕೆ ಹೊರಟಿರೋ ಹಾಗೆ ಕಾಣ್ತಿದೆ.. ;)

ಉ: ಮದಿರೆಯ ನಶೆ

manjunath s reddy's picture

ಅಮ್ಮನ ಆಶಿರ್ವಾದ ಮೂರು ವರ್ಶಗಳವರೆಗೂ ಇದೆಯಲ್ಲ....