ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

manjunathsinge ರವರ ಬ್ಲಾಗ್

ಕನ್ನಡ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಎಳ್ಳಷ್ಟೂ ಸಂಶಯ ಬೇಡ!

ಕಳೆದ ಕೆಲವು ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಅರ್ಹವಲ್ಲ ಎಂಬ ಕಿಡಿಗೇಡಿಗಳ ಮಾತಿನಿಂದ ಎಷ್ಟೋ ಕನ್ನಡಿಗರ ಮನಸ್ಸು ನೊಂದುಕೊಂಡಿತ್ತು. ನೊಂದ ಮನಸ್ಸು ಹೋರಾಟದ ಹಾದಿ ಹಿಡಿಯಿತು. ಹೋರಾಟದ ಹಾದಿ ಶಾಸ್ತ್ರೀಯ ಸ್ಥಾನವನ್ನು ಮತ್ತಷ್ಟು ಹತ್ತಿರಗೊಳಿಸಿತು. ಕೊನೆಗೂ ಕೇಂದ್ರ ಸರಕಾರ ತಲೆದೂಗಿ, ತೆಲೆಬಾಗಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಿತು. ಕರ್ನಾಟಕದ ಹುಟ್ಟುಹಬ್ಬದ ದಿನ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬಂದದ್ದು ಕನ್ನಡಿಗರಿಗೆಲ್ಲ ಒಂದು ಅಪೂರ್ವ ಸಂಗಮದಂತೆ ತೋರುತ್ತಿದೆ.

ಅದಿರಲಿ, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಶಾಸ್ತ್ರೀಯ ಸ್ಥಾನದಿಂದ ಕನ್ನಡಕ್ಕಾಗುವ ಲಾಭಗಳೇನು? ಇಂತಹ ಕಿಡಿಗೇಡಿ ಪ್ರಶ್ನೆಗಳನ್ನು ಬೇರು ಸಹಿತ ಕಿತ್ತು ಹಾಕಲು ನನ್ನದೊಂದು ಸಣ್ಣ ಪ್ರಯತ್ನ ಇಲ್ಲಿದೆ.  ಮುಂದೆ ಓದಿ »

~.~

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋರಿಸಿದರು. ಸಿಕ್ಕಿದ್ದೇನು? "www.leavingbangalore.com" ಅಭಿಯಾನ! ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳ ಅವಹೇಳನ. ಎಷ್ಟೋ ಜನರಿಗೆ ಬೆಂಗಳೂರು ಕಲ್ಪವೃಕ್ಷವಿದ್ದಂತೆ; ಮೊದಲ ನೌಕರಿ, ಮೊದಲ ಸಂಬಳ, ಮೊದಲ ಕಾರು, ಮೊದಲ ಮನೆ, ಎಲ್ಲಕ್ಕಿಂತ ಮಿಗಿಲಾಗಿ ತಾಳ್ಮೆಯುಳ್ಳ ಕನ್ನಡಿಗರ ಸ್ನೇಹ-ವಿಶ್ವಾಸಗಳೆಲ್ಲ ದೊರೆತದ್ದು ವಲಸಿಗರ ಸೌಭಾಗ್ಯವಲ್ಲವೇ? ಇದನ್ನು ಮರೆತ ಕೆಲ ಕಿಡಿಗೇಡಿ ವಲಸಿಗರು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ತಿರಸ್ಕೃತ ಮನೋಭಾವನೆಯಿಂದ ನೋಡುತ್ತಿರುವುದು ಅವರ ಸಂಕುಚಿತ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಮುಂದೆ ಓದಿ »

~.~

ಜೂನ್ ೪ - ಅಂತರರಾಷ್ಟ್ರೀಯ ಶೋಷಿತ ಮಕ್ಕಳ ದಿನ, ಗೊತ್ತಾ ನಿಮಗೆ?

ಅಮ್ಮನ ಉದರದಿಂದ ಧರೆಗಿಳಿದ ಮರುಕ್ಷಣ, ಶುರುವಾಯಿತು ನಮ್ಮೆಲ್ಲರ ಹೊಸ ಬದುಕಿನ ಪಯಣ.
ಅಂತಹ ಅಪೂರ್ವ ಕ್ಷಣಗಳಲ್ಲಿ ಅಮ್ಮ-ಅಪ್ಪರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಅಲ್ಲವೆ?
ಮೊದಲ ಆಳುವಿನಿಂದ ಹಿಡಿದು ಮೊದಲ ಮುಗ್ಧ ನಗುವಿನವರೆಗೆ ಅಮ್ಮನಿಂದ ಪಡೆದ ಅತ್ಯಮೂಲ್ಯವಾದ
ಪ್ರೀತಿ-ಪೋಷಣೆ ಎಲ್ಲರಿಗೂ ಸಿಕ್ಕಿದ್ದುಂಟೇ? ಎಲ್ಲರೂ ಅಷ್ಟೊಂದು
ಭಾಗ್ಯವಂತರಾಗಿರುವುದಿಲ್ಲ. ಕೆಲವರು ಮೊದಮೊದಲು ಅಮ್ಮ-ಅಪ್ಪಂದಿರ ಪೋಷಣೇ ಪಡೆದರೂ ಮತ್ತೆ
ವಂಚಿತರಾಗಿತುತ್ತಾರೆ, ಪೋಷಕರ ತಪ್ಪಿನಿಂದಲ್ಲ, ಮಾನವನ ಹೀನ ಕೃತ್ಯಗಳಾದ
ಯುದ್ಧ-ವಿವಾದಗಳಿಂದ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶೋಷಣೆಯಿಂದ. ಜಗತ್ತಿನಲ್ಲಿ
ಸುಮಾರು ೩,೦೦,೦೦೦ (ಹೌದು, ಮೂರು ಲಕ್ಷ!)ಕ್ಕೂ ಹೆಚ್ಚು ’ಬಾಲ ಸೈನಿಕ (child
soldiers)’ರಿದ್ದಾರೆ, ಅದರಲ್ಲಿ ೧೦ ವರ್ಷಕ್ಕಿಂತಲೂ ಕಡಿಮೆಯಿರುವ ಎಷ್ಟೋ
ಬಾಲಕಿಯರಿದ್ದಾರೆ. ಹೆಜ್ಜೆ ಹೆಜ್ಜೆಗೂ ಬಾಲ ಸೈನ್ಯದಲ್ಲಿರುವ ಮುಗ್ಧ ಬಾಲಕಿಯರು ಲೈಂಗಿಕ
ಕಿರುಕಿಳಕ್ಕೆ ಒಳಗಾಗುತ್ತಿದ್ದಾರೆ, ವ್ಯೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ [2001,
source].
ಕಳೆದ ಎರಡು ದಶಕಗಳಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು
ಯುದ್ಧ-ವಿವಾದಗಳಿಗೆ ಬಲಿಪಶುಗಳಾಗಿದ್ದಾರೆ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್
ನಾಡಿನಲ್ಲಿ ಪ್ರತಿ ವರ್ಷ ೮೦ ಸಾವಿರಕ್ಕೂ ಹೆಚ್ಚು ಮಕ್ಕಳು ಸಮಾಜದಲ್ಲಿ, ತಮ್ಮ ತಮ್ಮ
ಪ್ರದೇಶದಲ್ಲಿ ನಡೆಯುವ ದೌರ್ಜನ್ಯಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿ[UN].
ಶಾಲೆಯಲ್ಲಿ ಅ-ಆ-ಇ-ಈ ಕಲಿಯಬೇಕಾದ ಮಕ್ಕಳು, ಬಡತನ ಮತ್ತು ಹಸಿವಿನಿಂದಾಗಿ ಬಾಲ
ಕಾರ್ಮಿಕರಾಗುತ್ತಿತುವುದು ಹೊಸದೇನಲ್ಲ. ಅದೇನೆ ಇರಲಿ, ಈ ಮಕ್ಕಳು ಮಾಡಿದ ತಪ್ಪಾದರೂ
ಏನು? ಧರೆಗಿಳಿದು ತಮ್ಮ ಬದುಕಿನ ಪಯಣ ಪ್ರಾರಂಭಿಸಿದ್ದೇ? ಇಲ್ಲ, ಇದು ಮಾನವನ ಹೀನ
ಕೃತ್ಯಗಳಿಗೆ ಪ್ರಕೃತಿ ನೀಡುತ್ತಿರುವ ಶಿಕ್ಷೆ.  ಮುಂದೆ ಓದಿ »

~.~

ನಮ್ಮೂರಿನ ಚೋಮ, ಸಿದ್ರಾಮಜ್ಜ

ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ಕಾರಂತರ ಚೋಮನ ದುಡಿ
ನೆನಪಿಗೆ ಬರಬಹುದೇ?) ಶಬ್ದ ಕಳಿದರೆ ಸಾಕು, ಸಿದ್ರಾಮಜ್ಜನು ಬಾರಿಸುತ್ತಿದ್ದ ಹಲಗೆಯ
ನೆನಪಾಗುತ್ತದೆ. ಸುತ್ತ ಮುತ್ತ ಇದ್ದ ಹಳ್ಳಿಗಳಲ್ಲೆಲ್ಲ ಅವನು ಬಾರಿಸುತ್ತಿದ್ದ ಹಲಗೆಯ
ನಾದ ಸಿಕ್ಕಾಪಟ್ಟೆ famous. ಮದುವೆಯಿರಲಿ, ಜಾತ್ರೆಯಿರಲ್ಲಿ, ಹಬ್ಬ-ಹರಿದಿನಗಳಿರಲಿ,
ಶವಸಂಸ್ಕಾರದ ಕಾರ್ಯವಾಗಿದ್ದರೂ ಸರಿಯೇ, ಸಿದ್ರಾಮಜ್ಜನ ಹಲಗೆಯ ನಾದ
ಅನಿವಾರ್ಯವಾಗಿತ್ತು. ಸಿದ್ರಾಮಜ್ಜ ತೀರಿಹೋಗಿ ಸುಮಾರು ಐದು ವರ್ಷಗಳೇ ಕಳೆದಿರಬೇಕು.
ಅವನು ಒಂದು ರೀತಿಯಲ್ಲಿ ನಮ್ಮೂರಿನ "ಚೋಮ!", ಕಾರಂತರ ಚೋಮ ಅತ್ಯಂತ ಮುಗ್ಧ ಮತ್ತು
ಸ್ವಾಮಿನಿಷ್ಟೆಯುಳ್ಳವನು, ಆದರೆ ನಮ್ಮೂರ ಚೋಮ, ಸಿದ್ರಾಮಜ್ಜ, ಒಂದು ರೀತಿಯಲ್ಲಿ
ಕ್ರಾಂತಿಕಾರಿ, ಕ್ರಾಂತಿಕಾರಿ ಅನ್ನುವುದಕ್ಕಿಂತ ತುಂಬಾ ಸ್ವಾಭಿಮಾನದ ವ್ಯಕ್ತಿ
ಅನ್ನಬಹುದು. ಯಾರು ತನಗೆ ಗೌರವದಿಂದ ಕಾಣುತ್ತಾರೋ, ಅವರನ್ನು ಮಾತ್ರ
ಗೌರವಿಸುತ್ತಿದ್ದನು. ಕೆಲವೊಮ್ಮೆ, "ದಲಿತನಾದರೇನು, ನಾನೂ ಮನುಷ್ಯನಲ್ಲವೇ?" ಎಂದು
ಪ್ರಶ್ನಿಸುವಂಹ ಸ್ವಭಾವದವನು. ಅವನ ಇನ್ನೊಂದು ವಿಶೇಷತೆಯೆಂದರೆ, ದಿನದ ಬಹುಪಾಲು ಭಾಗ
ಸಾರಾಯಿ ಕುಡಿದ ಅಮಲಿನಲ್ಲಿರುವುದು. ಪ್ರತಿ ಸಲ ಊರಿಗೆ ಹೋದಾಗ ಯಾವತ್ತಾದರು ಸಿಕ್ಕರೆ,
ಅವನ ಬಾಯಿಯಿಂದ ಬರುತ್ತಿದ್ದ ಹೆಂಡದ ವಾಸನೆ ನನ್ನನ್ನು ಒಂದು ಮಾರು ದೂರ
ನಿಲ್ಲಿಸುತ್ತಿತ್ತು; ಈಗ ಸ್ವಲ್ಪ adjust ಆಗಿದೆ ಅನ್ಕೋಬಹುದು Smiling.  ಮುಂದೆ ಓದಿ »

~.~

ಲಕ್ಷ್ಮವ್ವ ಅಜ್ಜಿಯ ನೆನಪು

ಲಕ್ಷ್ಮವ್ವ ಅಜ್ಜಿ ನಮ್ಮೂರಿನ ನಿರ್ಲಕ್ಷಿತ ಹಿರಿಯರಲ್ಲೊಬ್ಬರು. ಮೂಲತಃ ದೇವದಾಸಿ
ಅಜ್ಜಿ. ಹಿರಿಯರು ಮಾಡಿದ ಸಣ್ಣ ತಪ್ಪಿಗಾಗಿ, ಇಡೀ ಜೀವನವನ್ನು ದೇವದಾಸಿಯಾಗಿ ಕಳೆದವಳು.
ಅವಳಿಗೆ ಸಂಭಂದಿಕರಿದ್ದಾರೆ, ಆದರೆ ಯಾರೂ ಅವಳ ಬಗ್ಗೆ ಚಿಂತಿಸುವ ಗೋಜಿಗೆ
ಹೋಗುವುದಿಲ್ಲ. ಲಕ್ಷ್ಮವ್ವ ಅಜ್ಜಿಯಂತಹ ದೇವದಾಸಿಯರಿಗೆ "ಜೋಗ"ವೇ ಜೀವನದ ಆಧಾರ. ಜೋಗ
ಎಂದರೆ ದೇವರ ಹೆಸರಿನಲ್ಲಿ ಹಿಟ್ಟು, ದವಸ ಧಾನ್ಯಗಳಿಗಾಗಿ ಭಿಕ್ಷೆ ಬೇಡುವ ಸಾಂಪ್ರದಾಯಿಕ
ಪದ್ಧತಿಗಿರುವ ಮತ್ತೊಂದು ಸೂಕ್ಷ್ಮ ಹೆಸರು. ಹಳ್ಳಿಯಲ್ಲಿ ಕೆಲವರು
ಜೋಗತಿ(ದೇವದಾಸಿ)ಯರಿಗೆ ಉದಾರವಾಗಿ ದಾನ ಮಾಡುತ್ತಾರೆ, ಕೆಲವರು ನಿರ್ದಾಕ್ಷಿಣ್ಯವಾಗಿ
’ಮುಂದೆ ಹೋಗು’ ಎನ್ನುತ್ತಾರೆ. ಕೊಡಲು ಇಷ್ಟವಿಲ್ಲವೆಂದಲ್ಲ, ಕೊಡಲು ಏನೂ
ಇಲ್ಲದಿರುವುದಕ್ಕಾಗಿ.  ಮುಂದೆ ಓದಿ »

~.~
Syndicate content