ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › manjunathsinge ರವರ ಬ್ಲಾಗ್

ಮಂಜಣ್ಣ, ನಾವಿರೋದೆ ಹಿಂಗೆ!

November 3, 2007 - 2:24am — manjunathsinge

ಮೊನ್ನೆ ಕಾಕಾ(ಚಿಕ್ಕಪ್ಪ) ಊರಿಂದ ಬಂದಿದ್ದ. ಮೊದಲ ಬಾರಿಯೇನಲ್ಲ. Promotion ಫೈಲನ್ನು ಒಂದೇ ಆಫೀಸಿನ ಮತ್ತೊಂದು ಕೋಣೆಗೆ ಸಾಗಿಸಲು ಬೆಂಗಳೂರಿಗೆ ಮೂರು ಬಾರಿ ಬಂದಿದ್ದ.
"ಯಾಕಪ್ಪ ಹಿಂಗೆ?" ಅಂದೆ.
"Head ಆಫೀಸಲ್ಲಿರೋ IAS officer ಗೆ ಮೂಡ್ ಬರ್ಬೇಕು, ಬಂದ್ ಮೇಲೆ documents ಗೆ ಸಹಿ ಹಾಕ್ಬೇಕು, ಆಮೇಲೆ ಅವನ PA ಗೆ ಮೂಡ್ ಬಂದು, promotion ಪತ್ರ ನಮ್ಮ Director ಗೆ ಕಳಿಸಿದ ಮೇಲೆ ನನ್ನ promotion!"

ಅದರ ಬಗ್ಗೆ ಅವನಿಗೆ ಕಿಂಚಿತ್ತೂ ಬೇಸರವಿರಲಿಲ್ಲ. "ಆದಾಗ ಆಯಿತು" ಅನ್ನೋ ಸ್ವಭಾವ. Times Now 9 O'clock show ನೋಡ್ತಾ ಇದ್ವಿ. ಬಿಹಾರ್ ಬಾಬು, ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಮಗ ಚಿರಾಗ್ ನೇರ ಪ್ರಸಾರದ ಚರ್ಚೆಯಲ್ಲಿ ಪಲ್ಗೊಂಡಿದ್ದರು. "My son, the actor" ಅಂದ ಪಾಸ್ವಾನ್!

"ಮಂಜಣ್ಣಾ, ರಾಜಕೀಯ ಅಂದ್ರೆ ಹಿಂಗೆ ನೋಡಪಾ, ಅಪ್ಪ ಮಾಡಿದ ಹೆಸರಿನಲ್ಲಿ ಮಗ Bollywood ಗೆ!"

"ಅಪ್ಪ ಬೀಹಾರ್ ನುಂಗ್ತಾ ಇದಾನೆ, ಮಗನ್ನ ಬಾಲಿವುಡ್ ನುಂಗ್ತಾ ಇದೆ ನೋಡು" ಅಂದೆ.

"ಅವರಿಗೇನಪಾ, ಬಿಟ್ಟಿ ರೊಕ್ಕ ಸಿಗುತ್ತೆ, ಯೇನ್ ಬೇಕಾದ್ರು ಮಾಡ್ತಾರೆ, ನಮ್ಮಂಥವರು ಹಿಂಗೆ, ಮುಂದೆ ನಾವಿರೋದು ಹಿಂಗೆ!"

"ಹೂಂ, ನೀನು ಪಾಸ್ವಾನ್ ಆಗು, ನಿನ್ನ ಮಗ ನಾನೂ, Hollywoodಗೆ ಹಾರ್ತೀನಿ!"

"ನಾನ್ ಪಾಸ್ವಾನ್ ಆಗೋದ? ರಾಜಕೀಯ ಸುದ್ದೀನೆ ಬೇಡ ಮಹರಾಯ. ರಾಜಕಾರಣಿಗಳಿಗಿರೋದು ಒಂದೇ ಕೆಲಸ, ದುಡ್ಡು ಹೀರೋದು. ಅವರು ಶ್ರೀಮಂತರಾಗ್ತ ಇರ್ತಾರೆ, ಬಡವರು ಬಡತನದಿಂದ ಸಾಯ್ತಾನೆ ಇರ್ತಾರೆ" ಅಂದ.

"ಯೇನಾದ್ರು ಹೊಸಾದ್ ಹೇಳಪಾ, ಈ topic (politics) ಬಹಳಾ ಹಳೇದು", ಅಂದೆ.

"ಮೊನ್ನೆ ನಮ್ಮ ಕಾಲೇಜಿಗೆ ಒಂದೆರಡು extra class room ಕಟ್ಟಿಸೋಕೆ 15 ಲಕ್ಷ ಬಿಡುಗಡೆ ಆಗಿತ್ತು. PWD ಬಡ್ಡಿ ಮಗ ಬಂದು 15 ಲಕ್ಷದಲ್ಲಿ ಎರಡು classroom ಕಟ್ಟೋಕೆ ಆಗಲ್ಲ ಸಾರ್ ಅಂದ! ಎಲ್ಲ estimates ಮಾಡ್ಕೊಂಡ್ ಬಂದು, ಆ ದುಡ್ಡಿನಲ್ಲಿ ಅವನು ಸ್ವಲ್ಪ ತಿಂದು, ಮೇಲಿನ ಆಫೀಸರ್ಸ್ ಗೆ ಸ್ವಲ್ಪ ತಿನಿಸಿ, ಉಳಿಯೋ ದುಡ್ಡಿನಲ್ಲಿ classroom ಕಟ್ಟಿಸ್ತಾನೋ ಕೋಳಿ ಗೂಡನ್ನ ಕಟ್ಟಿಸ್ತಾನೋ ನೋಡ್ಬೇಕು. ನಮ್ಮ ಮತಕ್ಷೇತ್ರದ MLAನೋ, MPನೋ ಸ್ವಲ್ಪ interest ತೊಗೊಂಡು ಒತ್ತಾಯ ಮಾಡಿದ್ದಿದ್ರೆ ಯಾವತ್ತೋ ಆಗೊ ಕೆಲಸ ಇನ್ನೊ ಹಂಗೆ ಇದೆ. ಈ politicians, ಸರ್ಕಾರಿ ಕಾಲೇಜುಗಳನ್ನು ಉದ್ಧಾರ ಮಾಡೋ ಗೋಜಿಗೆ ಹೋಗೊದಿಲ್ಲ. ಯಾಕೆ ಅಂದ್ರೆ ಅನ್ಯಾಯದ ದುಡ್ಡಿನಲ್ಲಿ ಅವರು ಕಟ್ಟಿಸಿದ ಕಾಲೇಜುಗಳು ನಡೀಬೇಕಲ್ಲ? ಸರ್ಕಾರಿ ಕಾಲೇಜುಗಳು ಉದ್ಧಾರ ಆದ್ರೆ ಅವರ ಕಾಲೇಜಿಗೆ ಹೋಗೊವ್ರು ಯಾರು? ಇನ್ನು ಸರ್ಕಾರಿ ಕಾಲೇಜಿನ lecturers ಕಾಲೇಜಿಗೆ ಬರೋದು ಕಲ್ಸೋಕ್ ಅಲ್ಲ. ಸಂಬಳಕ್ಕಾಗಿ. ಸರ್ಕಾರಿ ಕಾಲೇಜುಗಳು ಇರ್ಬೇಕಾದ್ರು ಯಾಕೆ? ಎಲ್ಲಾನೂ privatize (ಖಾಸಗೀಕರಣ) ಮಾಡಿದ್ರೆ ಆಗಲ್ವ?"

ಅವನನ್ನು ಮತ್ತಷ್ಟು ಪ್ರಚೋದಿಸಲು, "IIT, IIM ಅಂತಹ ಕಾಲೇಜುಗಳು ಸರ್ಕಾರಿ ಕಾಲೇಜುಗಳಪ್ಪ. ಅಲ್ಲಿ admission ಸಿಗ್ಬೇಕಾದ್ರೆ ಸಿಕ್ಕಾಪಟ್ಟೆ ಓದ್ಬೇಕು, ಇಲ್ಲಾಂದ್ರೆ at least ಯಾವುದಾದ್ರು reservation ಇರ್ಬೇಕು, ಸರ್ಕಾರಿ ಕಾಲೇಜುಗಳು ಅಂತ under estimate ಮಾಡ್ಬೇಡ" ಎಂದೆ.
"ಅಂತಹ ಕಾಲೇಜುಗಳು ಇರೋದು ಮೂಲೆಗೊಂದು ಮಾತ್ರ. ಎಲ್ಲರಿಗೂ ಅಂತಹದೇ ಶಿಕ್ಷಣ ದಕ್ಕಬೇಕಲ್ಲ?".

ಹೀಗೆ ಮಾತಾಡ್ತಾ ಮಾತಾಡ್ತ, ಮೂರ್ನಾಲ್ಕು ಗಂಟೆಗಳೇ ಕಳೆದವು. ರಾಜಕೀಯ, ಬಡತನ, ಜಾತೀಯತೆ, ಮೀಸಲಾತಿ, ಶಿಕ್ಷಣ, ಸರ್ಕಾರ, ಲಂಚ, ಹೀಗೆ ಹಲವಾರು ವಿಷಯಗಳು ನಮ್ಮನ್ನಾವರಿಸಿಕೊಂಡವು. ಜೀವನದಲ್ಲಿ ಅವನು ಕಂಡಷ್ಟು Red Tapism, ಲಂಚದ ಪ್ರಪಂಚ, ಸಮಾಜದ ನೈಜ ಕ್ರೂರತೆ ನಾನು ಕಂಡಿಲ್ಲ. ಆದರೆ ಅದೆಲ್ಲದರ ಬಗ್ಗೆ ಓದಿದ ನೆನಪು ಮಾತ್ರ. ಅವನ ವಿಚಾರಗಳು ಗಾಢವಾದ ಅಧ್ಯಯನದ ಅಭಿಪ್ರಾಯಗಳೇನು ಅಲ್ಲ. ಒಬ್ಬ ಸಾಮಾಜಿಕ ಕಳಾಕಳಿ ಇರುವ ವ್ಯಕ್ತಿಯ ನೈಜ ಪ್ರತಿಕ್ರಿಯೆಗಳಾಗಿದ್ದವು. ನಮ್ಮಿಬ್ಬರ ಈ ಚರ್ಚೆ ಹೊಸದೇನಲ್ಲ, ಎಷ್ಟೊ ಜನ ನಮ್ಮಂತೆ ದಿನಬೆಳಗಾದರೆ ಹಲವಾರು ವಿಷಯಗಳ ಬಗ್ಗೆ ಮಾತಾಡ್ತಾನೆ ಇರ್ತಾರೆ. "ಕೇವಲ ಮಾತಾಡ್ತಾನೆ ಇರ್ತಾರೆ", ಮತ್ತೇನೂ ಮಾಡೊಲ್ಲ, ಏನಾದರು ಮಾಡಬೇಕೆಂಬ ನಿರ್ಧಾರಕ್ಕೂ ಬರುವುದಿಲ್ಲ, ಬಂದರೂ ಏನನ್ನೂ ಮಾಡೊಲ್ಲ! ಇಂತಹ ಚರ್ಚೆಗಳು ತುಂಬಾ interesting ಆಗಿ ಇರುತ್ತವೆ. ಉದಾಹರಣೆಗೆ ಮೀಸಲಾತಿಯನ್ನೇ ತೆಗೆದುಕೊಳ್ಳಿ....

"ಸ್ವಾತಂತ್ರ್ಯ ಬಂದ ಮೇಲೆ "ಮೀಸಲಾತಿ" 10 ವರ್ಷಗಳಿಗೆ ಮಾತ್ರ ಮೀಸಲಾಗಿತ್ತು, ಅದು ಇನ್ನೂ ಇದೆ. ಇರಬಾರದಾಗಿತ್ತು ಎನ್ನುವುದು ತಪ್ಪು. ಮುಂದುವರಿಯುತ್ತಿರುವ "ಹಿಂದುಳಿದವರು" ಮುಂದೆ ಹೋಗುತ್ತಾನೆ ಇದ್ದಾರೆ. ಆದರೆ ನಿಜವಾದ "ಹಿಂದುಳಿದವರು" ಇನ್ನೂ ಬಹಳ ಹಿಂದೆಯೇ ಇದ್ದಾರೆ. ಸರ್ವೋಚ್ಛ ನ್ಯಾಯಾಲಯದ "Creamy Layer" ವಿಚಾರ ಒಂದು ರೀತಿಯಲ್ಲಿ ಸರಿಯಾಗಿಯೇ ಇರಬಹುದು. ಆದರೆ ಅದು ಅರ್ಜುನ್ ಸಿಂಗ್ ಅವರಿಗೆ ಗೊತ್ತಾಗಬೇಕಲ್ಲ. ಮೀಸಲಾತಿ ಕಡೆಗಾಣಿಸಿದರೆ, ನಿಜವಾದ ಹಿಂದುಳಿದವರಿಗೆ ಕೊಡಲಿಪೆಟ್ಟು, ಮೀಸಲಾತಿ ಇದ್ದರೆ ಮುಂದುವರಿದ "ಹಿಂದುಳಿದವರಿಗೆ" ಸ್ವರ್ಗ! ಜಾತಿಗಾಗಿ ಮೀಸಲಾತಿಯೆ? ರಾಜಕೀಯಕ್ಕಾಗಿ ಮೀಸಲಾತಿಯೆ ಅಥವ (ನಿಜವಾದ) ಹಿಂದುಳಿದವರಿಗಾಗಿ ಮೀಸಲಾತಿಯೆ? ಇದು ಬಿಡಿಸಲಾರದ ಸಮಸ್ಯೆ. ಅಂಬೇಡ್ಕರ್ ಅವರ ಮೀಸಲಾತಿಯ ಕನಸು ನನಸಾಗಿರಬಹುದು, ಆದರೆ ಸಮಾನತೆಯ ಬಗ್ಗೆ ಅವರಿಗಿದ್ದ ಮಹದಾಸೆ ಇನ್ನೂ ಪೂರ್ಣವಾಗಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜಾತಿಯ ಬಗ್ಗೆ ಮಾತು ಕಮ್ಮಿ. ಆದರೆ ಮಹಾನಗರದಾಚೆ, (ಕಾಕಾನ ಪ್ರಕಾರ) "ಯಾರಾದರು, ಸರಕಾರಿ ಆಫೀಸಿಗೆ ಹೊಸದಾಗಿ ಬಂದರೆ ಸಾಕು. ಅವನು ಯಾರ ಪೈಕಿ (ಯಾವ ಜಾತಿಯವ) ಅನ್ನುವುದನ್ನು ತಿಳಿದುಕೊಂಡೇ ಮುಂದಿನ ಮಾತು. ಹಳ್ಳಿಗಳಲ್ಲಂತೂ ಜಾತೀಯತೆಯ ಬೇರುಗಳು ಇನ್ನೂ ಜೀವಂತವಾಗಿವೆ. ಅಸ್ಪರ್ಷತೆ ಭೌತಿಕವಾಗಿ ದೂರವಾಗಿರಬಹುದು. ಜನರ ಮನದಾಳದಲ್ಲಿ ಇನ್ನೂ ಅದು ಹಾಗೆಯೇ ಇದೆ. ಮೇಲ್ನೋಟಕ್ಕೆ ಎಲ್ಲರೂ ಜಾತಿಹೀನರು. ಅಂತರಂಗದಲ್ಲಿ ಎಲ್ಲರೂ ಜಾತಿಯ ಆರಾಧ್ಯ ಭಕ್ತರು". ಜಾತಿ ಇತಿಹಾಸವಾಗುವುದು ನಮ್ಮ ಮೊಮ್ಮೊಕ್ಕಳ ಮಕ್ಕಳ ಕಾಲದಲ್ಲಿ!"

ಹೀಗೆ, ನೂರಾರು ಜನ ಸಾವಿರಾರು ವಿಷಯಗಳ ಬಗ್ಗೆ ಚರ್ಚಿಸುತ್ತಲೇ ಇರುತ್ತಾರೆ. ಎಲ್ಲರೂ ಮಾತನಾಡುವುದು ಒಂದೆ. "ಈ ದೇಶ ಬದಲಾಗಬೇಕು", "ನಮಗೆ ಒಳ್ಳೆಯ ರಾಜಕಾರಣಿಗಳು ಬೇಕು", "ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ಕಳಕಳಿಯಿರಬೇಕು", "ಜನ ಬದಲಾಗಬೇಕು", "ಅವರು ಹಂಗಿರಬೇಕು", "ಇವರು ಹಿಂಗಿರಬೇಕು", "ಅದು ಹಾಗಿರಬೇಕು", "ಇದು ಹೀಗಿರಬೇಕು". ಎಲ್ಲರೂ ಹೇಳುವುದು ಮತ್ತೊಬ್ಬರಿಗೆ. ಎಲ್ಲರಿಗೂ ಬೇಕಾಗಿರುವುದು ಜಗತ್ತಿನ ಬದಲಾವಣೆ, ಅದೂ ಸ್ವಲ್ಪವೇ ಸಮಯದಲ್ಲಿ. ಯಾರಿಗೂ "ನಾವು ಬದಲಾಗಬೇಕು" ಎಂಬ ಅರಿವೇ ಇಲ್ಲ!

ಏನಾದರು ಹೆಚ್ಚು ಕಮ್ಮಿ "ಮೊದಲು ನಾವು ಬದಲಾಗಬೇಕು" ಎಂದು ಹೇಳಿದರೆ, "ಒಬ್ಬನಿಂದೇನಾಗುತ್ತದೆ? ನಾನೊಬ್ಬ ಬದಲಾದರೆ ಆಯಿತೆ?" ಎನ್ನುತ್ತಾರೆ. ಬದಲಾವಣೆ ಎಂಬುವುದು ಒಂದು ನಿರಂತರ ಪ್ರಕ್ರಿಯೆ. ರಾತೋರಾತ್ರಿ ನಡೆಯುವಂತಹ ವಿಷಯವಲ್ಲ. ಒಬ್ಬನಿಂದ ಮತ್ತೊಬ್ಬ, ಅವನಿಂದ ಇನ್ನಷ್ಟು ಜನ, ಅವರಿಂದ ಮತ್ತಷ್ಟು..... ಹೀಗೆ ಬದಲಾವಣೆಯ ಸರಪಳಿ ಕಾಡ್ಗಿಚ್ಚಿನಂತೆ ಹರಡಿದರೆ ನಾವೆಲ್ಲ ಅಂದು ಕೊಂಡ ಹಾಗೆ ನಮ್ಮ ದೇಶವಿರುತ್ತದೆ. ಈ ವಿಷಯವನ್ನು ಕಾಕಾನಿಗೆ ಮನವರಿಕೆ ಮಾಡಿಕೊಡಲು ಸಿಕ್ಕಾಪಟ್ಟೆ ತಿಣುಕಾಡಿದೆ. ಗೆದ್ದೆ ಎಂದುಕೊಂಡಿದ್ದೇನೆ. ಅವನೇನು ಮಾಡುತ್ತಾನೋ ಕಾದು ನೋಡಬೇಕು!
~.~
  • manjunathsinge ರವರ ಬ್ಲಾಗ್
  • Login or register to post comments
  • 269 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂತನ
  • ನಾಳೆ ನೀವೂ ಮಾಯ.............
  • ಲಿನಕ್ಸ್‌ನಲ್ಲಿ ಕನ್ನಡ
  • ನೀಳ್ಗತೆ
  • ಇವರೀಗ ಯಾವ ಕಾಲದಲ್ಲಿದ್ದಾರೆ!
Syndicate content

ಲೇಖಕರು

manjunathsinge's picture

ಪರಿಚಯ

ಹೇಳಿಕೊಳ್ಳುವಂತಹ ಸಾಧನೆ ಇನ್ನೂ ಮಾಡಬೇಕಾಗಿದೆ. ಮಾಡುತ್ತೇನೆ, ಮಾಡಿದ ತಕ್ಷಣ update ಮಾಡುತ್ತೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:45pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:39pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:35pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 1:33pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 1:32pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 301 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator