ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › manjunathsinge ರವರ ಬ್ಲಾಗ್

ನಮ್ಮ ರತ್ನ Excellenಟು!

September 12, 2007 - 11:31pm — manjunathsinge

ಜೀವನ, ಭಾವನೆಗಳ ಒಂದು ಕೊನೆಯಿಲ್ಲದ ಸರಪಳಿ. ಮೊದಮೊದಲು ನಮ್ಮೆಲ್ಲರ ಭಾವನೆಗಳ ಮೂಲ ಯಾವುದು ಎಂಬುದರ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು "ಸ್ಪೂರ್ತಿ" ಎಂಬ ಲೇಖನವನ್ನು ಬರೆದಿದ್ದೆ [ಓದಲು ಇಲ್ಲಿ Click ಮಾಡಿ]. ಪ್ರತಿಯೊಂದು ಕ್ಷಣವೂ ನಾವು ಒಂದಿಲ್ಲ ಒಂದು ವಿಷಯದಲ್ಲಿ ನಮ್ಮನ್ನು ನಾವು ಮಗ್ನರನ್ನಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ನಮ್ಮ ಮನಸ್ಸು ಯಾವುದೋ ವಿಷಯವನ್ನು ಮೆಲುಕು ಹಾಕುತ್ತ ದೇಶದೇಶಾಂತರ ಸುತ್ತಾಡುತ್ತಿರುತ್ತದೆ. ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ ಥಟ್ಟನೆ ಹೊಳೆದು ನಮ್ಮನ್ನು ಅತೀವ ಸಂತೋಷಕ್ಕೆ ಗುರಿಮಾಡುತ್ತದೆ. ಆ ಅನುಭವವನ್ನು ನೆನೆದರೆ ಮತ್ತೆ ಅದೇ ಥರದ ರೋಮಾಂಚನ ಸಿಗುವುದಿಲ್ಲ. ಆ ಅನುಭವವನ್ನು ಬೇರೊಬ್ಬದ ಜೊತೆ ಹಂಚಿಕೊಂಡು, ಅವರೂ ಆ ರೋಮಾಂಚನವನ್ನ ಅನಭವವಿಸುವಂತೆ ಮಾಡುವುದು ಹೇಗೆ?

ಕೆಲವು ಭಾವನೆಗಳನ್ನು ಮನಸಾರೆ ಹಿಗ್ಗಿ, ನಲಿದು, ಅನುಭವಿಸಿದರೂ, ಅದನ್ನು ಮಾತಿನಲ್ಲಿ ಹೇಳುವುದು ನಮಗೆ ಎಷ್ಟೊಂದು ಕಠಿಣ! ಯಾಕೆ ಹೀಗೆ?

ಕಳೇದ ವಾರ, ಹುಡುಗಿ ಕೈಕೊಟ್ಟಳೆಂಬ ದುಃಖದಲ್ಲಿ ನನ್ನ ಸ್ನೇಹಿತ ಒಂದು ಹೊಸ ಕವನವನ್ನು ಬರೆದು ಕಳಿಸಿದ, ಅದು ಅವನೇ ಬರೆದಿದ್ದೋ copy ಹೊಡಿದಿದ್ದೋ ಗೊತ್ತಿಲ್ಲ, ಹೀಗಿತ್ತು ಅದು....
"ಕಾದು ಕಾದು ಸುಣ್ಣವಾದೆ ನೀನು ಬರದ ಹಾದಿ ನೋಡಿ,
ಸುಸ್ತಾದೆ ತಿಳಿಸಿ ತಿಳಿಸಿ ತಿಳಿಗೇಡಿ ಮನಕೆ, ನೀನು ನನ್ನಾಕೆ ಅಲ್ಲ ಎಂದು,
ಆದರೂ ಮನದ ಯಾವುದೋ ಮೂಲೆಯಲ್ಲಿ ಹಣತೆ ಉರಿಯುತಿರುವುದು ಇಂದಿಗೂ ನೀನು ನನ್ನಾಕೆಯೆಂದು!"
ಹೀಗೆ ತಾನು ಇಷ್ಟಪಟ್ಟ ಹುಡುಗಿ ಕೈಕೊಟ್ಟಳಲ್ಲ ಅನ್ನೊ ವಿಷಯವನ್ನು ಪರಿಪರಿಯಾಗಿ ದುಃಖಿಸಿ, ನೊಂದುಕೊಂಡು, ತೋಡಿಕೊಳ್ಳಲು ಬೇರೆ ದಾರಿಯಿಲ್ಲದೇ ಹೋದಾಗ ಇಂತಹ ಅದ್ಭುತವಾದ ಕವನ ಅವನ ಮನಸ್ಸಿನಿಂದ ಹೊರಬಿತ್ತು!

ನೀವು ಅವನ ಕಷ್ಟವನ್ನು ನಿಮ್ಮದೇ ಆದ ಲೋಕದಲ್ಲಿ ಊಹಿಸಿದಿರಲ್ಲವೇ? ಅವನ ಕಷ್ಟ ಹೇಗಿರಬಹುದೆಂಬ ಒಂದು ಸಣ್ಣ ಚಿತ್ರಣ ನಿಮ್ಮಲ್ಲಿ ಮೂಡಿರಬಹುದಲ್ಲವೇ? ಕೊನೆ ಪಕ್ಷ, "ಛೆ! ಹೀಗಾಗಬಾರದಾಗಿತ್ತು" ಎಂಬ ಭಾವನೆಯಾದರೂ ನಿಮ್ಮಲ್ಲಿ ಮೂಡಿರಬೇಕಲ್ಲವೆ? ಹಾಗೆ ಆದರೆ, ಅವನ ಭಾವನೆಗಳು, ಅವನ ಕವನದ ಮೂಲಕ ನಿಮ್ಮಲ್ಲಿ ಸ್ವಲ್ಪವಾದರೂ ಮೂಡಿದಂತಾಗಲಿಲ್ಲವೇ? ಹೌದು! ಅದನ್ನೆ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ (The power of expressing your feelings) ಎನ್ನುವುದು. ನಮಗಾದ ಅನುಭವವನ್ನು ಪರಿಣಾಮಕಾರಿಯಾಗಿ ಹೇಳಲು ಎರಡು ದಾರಿಗಳಿವೆ.

ಒಂದು, ನಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ನಾವು ಯಾವುದೋ ವಸ್ತುವಿನೊಂದಿಗೆ ಹೋಲಿಸಿ (ಉದಾಹರಣೆಗೆ, ಮೇಲಿನ ಕವನವನ್ನೇ ತೆಗೆದುಕೊಳ್ಳಿ, "ಕಾದು ಕಾದು ಸುಣ್ಣವಾದೆ"), ಆ ಅನುಭವದ ಮಟ್ಟವನ್ನು (ಭಾವನೆಗಳ ತೀವ್ರತೆಯನ್ನು) ವ್ಯಕ್ತಪಡಿಸುತ್ತೇವೆ. ನನ್ನ ಗೆಳೆಯ ತನ್ನ ದುಃಖವನ್ನು ವ್ಯಕ್ತಪಡಿಸಲು ತನ್ನನ್ನು "ಸುಣ್ಣ"ಕ್ಕೆ ಹೋಲಿಸಿದ, ಅವನು ಕಾದು ಕಾದು ಪರಿತಪಿಸಿದ ರೀತಿಯನ್ನು ನೀವೇ ಚಿತ್ರಿಸಿಕೊಳ್ಳಬಹುದು. ಒಂದು ವೇಳೆ ನನ್ನ ಸ್ನೇಹಿತ ಕೇವಲ, "ಲೋ ಮಗಾ, ಅವಳು ಕೈ ಕೊಟ್ಟುಬಿಟ್ಟಳೋ!" ಅಂತ ಹೇಳಿದ್ದರೆ, ಅವನ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವೇ ಆಗುತ್ತಿರಲಿಲ್ಲ!

ಎರಡನೆಯದ್ದು, ನಾವು ಅನುಭವಿಸುವ ಭಾವನೆಗಳನ್ನು, ಮತ್ತೊಂದು ವಸ್ತುವಿನೊಂದಿಗೆ ಹೋಲಿಸದೇ, ಇದ್ದದ್ದನ್ನು ಇದ್ದಂತೆ ಅತ್ಯಂತ ಪರಿಣಾಮಕಾರಿಯಾಗಿ ಹೇಳುವುದು. ಇದರಲ್ಲಿ ಜಿ. ಪಿ. ರಾಜರತ್ನಂ (ನಮ್ಮ ರತ್ನ!) ಅವರದು ಎತ್ತಿದ ಕೈ. ನಮ್ಮ ರತ್ನ, ತನ್ನ ಮಡದಿಯ ನಗುವನ್ನು ಬಣ್ಣಿಸುತ್ತಾ, "ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ!" ಎಂದಾಗ, ರತ್ನನ ಲೋಕದಲ್ಲಿ, ರತ್ನ ಏನೊ ಒಂದು ಬಣ್ಣಿಸಲಾಗದ ಅನುಭವಕ್ಕೆ ಗುರಿಯಾಗುತ್ತಾನೆ. "ಆಡ್ಬೇಕ್ ಅಂದ್ರೆ ಮಾತೆ ಸಿಕ್ದು ಉಕ್ಕ್ ಬರ್ತಿದ್ರೆ ಅಕ್ರೆ!", ನಂಜಿ ನಕ್ರೆ, ನಮ್ಮ ರತ್ನನಿಗೆ ಮಾತನಾಡಲು ಶಬ್ದಗಳೇ ಸಿಗುವುದಿಲ್ಲ! ನಂಜಿ (ನಿಜಜೀವನದಲ್ಲಿ ರತ್ನನ ಮಡದಿ ಲಲಿತಮ್ಮನವರು) ರತ್ನನನ್ನು ಅಗಲಿ ಹೋದಾಗ, ರತ್ನ ಹೇಳ್ತಾನೆ, "ಐನೋರ್ ಒಲ್ದಲ್ ಚಾಕ್ರಿ ಮಾಡ್ತ ಸಂಜಿ ಆಯ್ತಂದ್ರೆ, ಚಿಂತಿ ಮಾಡ್ತೀನ್ ಎಂಗಿರ್ತೈತೆ ನಂಜಿ ಎದ್ಬಂದ್ರೆ". ಯಜಮಾನರ ಹೊಲದಲ್ಲಿ ಕೂಲಿ ಮಾಡ್ತಾ ದಿನ ಕಳೆದು, ಸೂರ್ಯ ನಮ್ಮನ್ನಗಲುವ ಹೊತ್ತಿಗೆ, ನಮ್ಮ ರತ್ನ, ಒಂದು ವೇಳೆ ಅಗಲಿ ಹೋದ ನಂಜಿ ಮತ್ತೆ ಕಣ್ಮುಂದೆ ಬಂದರೆ ಹೇಗಿರುತ್ತೇ ಅನ್ನೋದನ್ನ ಮೆಲುಕು ಹಾಕುತ್ತಾನೆ. ಹೀಗೆ ಕೆಲವೇ ಕೆಲವು ಶಬ್ದಗಳಲ್ಲಿ, ರತ್ನ, ತಾನು ಅನುಭವಿಸಿದ ಭಾವನೆಗಳನ್ನು ನಾವೂ ಅನುಭವಿಸುವಂತೆ ಮಾಡಿಬಿಡುತ್ತಾನೆ! ಕೇವಲ ಕೆಲವೇ ಶಬ್ದಗಳು, ರತ್ನನ ಜೀವನ ಶೈಲಿಯನ್ನೇ ನಮ್ಮ ಕಣ್ಮುಂದಿಡುತ್ತವೆ. ರತ್ನ ಒಬ್ಬ ಕೂಲಿ ಆಳು ಎನ್ನುವುದು, ಅವನು ದಿನವಿಡೀ ಕಷ್ಟಪಡುವುದು, ನಂಜಿಯನ್ನು ಕಳೆದುಕೊಂಡದ್ದು, ಅವಳ ಬಗ್ಗೆ ಸದಾ ಕಾಲ ಚಿಂತಿಸುತ್ತಿರುವುದು, ಒಂದು ವೇಳೆ ನಂಜಿ ಮತ್ತೆ ತಮ್ಮ ಬದುಕಿನಲ್ಲಿ ಹೊಸದಾಗಿ ಬಂದರೆ ಹೇಗಿರುತ್ತದೆ ಎನ್ನುವುದು, ಹೀಗೆ ಹಲವಾರು ಅರ್ಥಗಳು ಒಂದೇ ಸಾಲಿನಲ್ಲಿ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿಬಿಡುತ್ತವೆ.

ರತ್ನನ ಪದಗಳಾ ಕೆಲವು ತುಣುಕುಗಳನ್ನು ಗಮನಿಸಿ....

೧. "ಎಂಡ ಮುಟ್ದಾಗ್ಲೆಲ್ಲ ನಂಗೆ ಎನೋsssss ಕುಸಿ ಆಗ್ತೈತೆ......" (ಹೆಂಡ ಕುಡಿದಾಗ ರತ್ನನಿಗೆ ಆಗುವ ಸಂತಸ!)

೨. "ಇಂಗಿಂಗೆಂತ ಎಳೂಕಾಗ್ದು ನನ್‌ ಪುಟ್ನಂಜಿ ನಕ್ರೆ, ಸೀ ಅನ್ನೋದು ಸಬ್ದ ಮಾತ್ರ ತಿನ್ನೋಡ್ಬೇಕು ಸಕ್ರೆ!" (ಸಿಹಿ ಹೇಗುರತ್ತದೆ ಅನ್ನೋದನ್ನ ಬಾಯಲ್ಲಿ ಹೇಳೊಕ್ಕೆ ಹೇಗೆ ಆಗುವುದಿಲ್ಲವೋ, ಹಾಗೆಯೇ, ರತ್ನನ ನಂಜಿ ನಕ್ರೆ, ಅದು ಹೀಗೇ ಅಂತ ಹೇಳೊಕ್ಕಾಗಲ್ಲ!).

೩. ಹೆಂಡ, ಹೆಂಡತಿ, ಕನ್ನಡ ಪದಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ "ನಮ್ಮ ರತ್ನ", ಕನ್ನಡದ ಬಗ್ಗೆ ಹೀಗೆ ಹೇಳುತ್ತಾನೆ, "ನರ್ಕಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಹೊಲ್ಸಾಕಿದ್ರುನೇ, ಮೂಗ್ ನಲ್ ಕನ್ನಡ್ ಪದ್ವಾಡ್ತೀನಿ.... (ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ, ಬಾಯಿಯನ್ನು ಹೊಲಿಸಿದರೂ, ಮೂಗಿನಲ್ಲಿ ಕನ್ನಡ ಪದವಾಡುತ್ತೇನೆ)", ಬಹುಷ ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಇಂತಹ ಹೃದಯಸ್ಪರ್ಷಿ "ಕನ್ನಡ ಅಭಿಮಾನ"ವನ್ನು ಯಾರೂ ಬಣ್ಣಿಸಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ನಮ್ಮ ರತ್ನನ ಪದಗಳನ್ನು ಓದಿ ಸಂತೋಷಪಡುವುದಕ್ಕಿಂತ, (ಒಂದು ಕಾಲದಲ್ಲಿ ಕುಡುಕರಾಗಿದ್ದ) ರಾಜು ಅನಂತಸ್ವಾಮಿ

ಯವರ(ಮೈಸೂರು ಅನಂತಸ್ವಾಮಿಯವರ ಮಗ) ಹಾಡಿನ ಮೂಲಕ ಕೇಳಿದರೆ ಅದರ ಅನುಭವವೇ ಬೇರೆ. ರಾಜು ಅನಂತಸ್ವಾಮಿಯವರ "ಎಂಡ್ಕುಡುಕ ರತ್ನ"ನ ಪದಗಳನ್ನು ಕೇಳಿ ಪಟ್ಟ ಸಂತೋಷವನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ, ನಾನು ಪಟ್ಟ ಸಂತಸದ ಅನುಭವವನ್ನು, ಈ ಲೇಖನದ ಮೂಲಕ ನೀವೂ ಸಹ ಸ್ವಲ್ಪವಾದರೂ ಅನುಭವಿಸಿ, ನಮ್ಮ ರತ್ನ Excellenಟು! ಎಂದರೆ, ಬರೆದದ್ದಕ್ಕೆ ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ!!!


------------------------------------------------------------------------------------
ರಾಜು ಅನಂತಸ್ವಾಮಿಯವರು ಹಾಡಿದ "ರತ್ನನ ಪದಗಳನ್ನು", ಈ ವಿಳಾಸದ ಮೂಲಕ ಪಡೆಯಬಹುದು.
೧. http://shopping.totalkannada.com/Select%20Category.asp?action=0106

P0697 Hale beru hosa chiguru Light Music Songs by Mysore & Raju Ananth Swamy Mysore & Raju Ananth Swamy 2.5 CALL/EMAIL

೨. http://shopping.totalkannada.com/TKDCST/TKMP3Light.htm

TK1043 Hale beru hosa chiguru 40 2.5 1.5

ನಮ್ಮ ರತ್ನನ ಬಗ್ಗೆ ಆಸಕ್ತಿ ಇದ್ದರೆ ಕೆಳಗಿನ Linksಗೆ ಭೇಟಿ ಕೊಡಿ.....
೧. ಜಿ. ಪಿ. ರಾಜರತ್ನಂ ಅವರ ರತ್ನನ ಪದಗಳ online ಪುಸ್ತಕವನ್ನು ಇಲ್ಲಿ ಓದಬಹುದು.

೨. ಜಿ. ಪಿ. ರಾಜರತ್ನಂ ಅವರ ಬಗ್ಗೆ ಕನ್ನಡ ವಿಕಿಪೀಡಿಯ: http://kn.wikipedia.org/wiki/ಜಿ_ಪಿ_ರಾಜರತ್ನಂ
೩. thatskannada.com ಅಲ್ಲಿ ಜಿ. ಪಿ. ರಾಜರತ್ನಂ ಅವರ ಬಗ್ಗೆ ಲೇಖನ.

~.~
  • manjunathsinge ರವರ ಬ್ಲಾಗ್
  • Login or register to post comments
  • 324 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 13, 2007 - 11:34pm — uniquesupri

ಉ: ನಮ್ಮ ರತ್ನ Excellenಟು!

uniquesupri's picture

ನಿಮ್ಮ ಬರಹ ಕೂಡ excellentಉ.............!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 11:10am — Sunil Jayaprakash

ಉ: ನಮ್ಮ ರತ್ನ Excellenಟು!

Sunil Jayaprakash's picture

ಜಿ.ಪಿ.ರಾಜರತ್ನಂ ಅವರು ಈ ರೀತಿಯ ಒಂದು ಪದವನ್ನೂ ಬರೆದಿದ್ದಾರೆ. ತಿಥಿ ಮಾಡೋವ್ರ್ಗೇನ್ ಗೊತ್ತು ಚಡ್ಡಿ ಒಲ್ಯೋ ಕೆಲ್ಸ - ಸಖತ್ ಮಜ್ಜಾ ಬರತ್ತೆ. ಡಿ.ಎಲ್.ಐನಿಂದ ನೇರವಾಗಿ ಪೂರ್ತಿ ಪದ್ಯ ಓದಿ ನೋಡಿ. ತಿಳಿಯತ್ತೆ ಅದರ ಕರಾಮತ್ತು.

ಮಂಜುನಾಥ್ ಸಿಂಗೆ ಚೆನ್ನಾಗಿತ್ತು ನಿಮ್ಮ ಬರಹ. ಉದ್ಭವ.ಕಾಂನಲ್ಲಿ ಎಂಡ್ಕುಡ್ಕ ರತ್ನನ ಸಿಕ್ಕಾಪಟ್ಟೆ ಪದಗಳಿವೆ. ರತ್ನನ ಪದಗಳು ಪುಸ್ತಕವನ್ನು ಓದಬೇಕೆಂದರೆ, ಇಲ್ಲಿಗೆ ಎಡತಾಕಿ.

ಪುಸ್ತಕ - ರತ್ನನ ಪದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 11:28am — manjunathsinge

ಉ: ನಮ್ಮ ರತ್ನ Excellenಟು!

manjunathsinge's picture

ಸುನೀಲ್, ಎಂಡ್ಕುಡುಕ ರತ್ನ ಪದಗಳ (ಉದ್ಭವ ಮತ್ತು ಕನ್ನಡ ಆಡಿಯೊ ದಲ್ಲಿ) link ತುಂಬಾ ಹುಡುಕಿದೆ... ಸಿಗಲಿಲ್ಲ.. ದಯವಿಟ್ಟು ಆ link ಅನ್ನು ಇಲ್ಲಿ post ಮಾಡಿ... ಹಾಡುಗಳ (ಆಡಿಯೋ) link ಇಲ್ಲಿ ಹಾಕಬೇಕೆಂದು ತುಂಬಾ ಹುಡುಕಿದೆ ಸಿಗಲಿಲ್ಲ, ಆಸಕ್ತಿ ಇದ್ದವರು online ಅಲ್ಲಿ ಖರೀದಿ ಮಾಡಲು link ಹಾಕಿಬಿಟ್ಟೆ.... Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 12:48pm — Sunil Jayaprakash

ಉ: ನಮ್ಮ ರತ್ನ Excellenಟು!

Sunil Jayaprakash's picture

ಇಗೋ ಬಂತು ನೋಡಿ...ಉದ್ಭವ.ಕಾಂನ ಕೊಂಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 16, 2007 - 2:31pm — cmariejoseph

ಉ: ನಮ್ಮ ರತ್ನ Excellenಟು!

cmariejoseph's picture

"ದೀಪದ್ ಬೆಳಕು ಬೇಕಂತಂದ್ರೆ ಓಗ್ಬೇಕ್ ಅದರ್ ತಾಕೇನೇ ನೆಳ್ಳಿನ್ ಕತ್ಲು ಬ್ಯಾಡಾಂತಂದ್ರು ಬತ್ತೈತ್ ಇಂದಾಗೇನೇ, ದೀಪದ್ ಕೆಳ್ಗೆ ನಿಂತಾಂದ್ರದೋ ಕಾಲಿನ್ ಕೆಳ್ಗೇ ನೆರಳು, ಅಗ್ನಾನ್ವೆಲ್ಲ ಗ್ನಾನಕ್ ಶರಣು ಅನ್ನೋದ್ ಅದ್ಕೆ ತಿರುಳು" ಎಂಬ ಅವರ ಪದ್ಯವನ್ನು ಸದಾ ಸ್ಮರಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂಥರಾ ಪ್ರೀತಿ...
  • ಹೌದಾ ಪಪ್ಪಾ..?
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • *kannadave satya kannadave nitya*kuvempu
Syndicate content

ಲೇಖಕರು

manjunathsinge's picture

ಪರಿಚಯ

ಹೇಳಿಕೊಳ್ಳುವಂತಹ ಸಾಧನೆ ಇನ್ನೂ ಮಾಡಬೇಕಾಗಿದೆ. ಮಾಡುತ್ತೇನೆ, ಮಾಡಿದ ತಕ್ಷಣ update ಮಾಡುತ್ತೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator