ಈಗಿನಂತೆ 5 ಸದಸ್ಯರು ಮತ್ತು 96 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಒಂದು ಪಿಗ್ಗಿನ ಕತೆ!
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
03
Jun
2006
ಬ್ಲಾಗ್ ಬರಹ
ಈಚೆಗೆ ಕನ್ನಡಪ್ರಭ ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್...
ಪ್ರತಿಕ್ರಿಯೆಗಳು: 0
ಹಿಟ್ಸ್ : 2,487
ಮತ್ತೆ ಚಿಗುರಿದೆ 'ಸಂಪದ'
hpn's picture
ಹರಿ ಪ್ರಸಾದ್ ನಾಡಿಗ್
01
Nov
2009
ಪುಟ

ಎರಡು ತಿಂಗಳ ಹಿಂದೆ ಆದ ಅವಗಢದಿಂದಾಗಿ ಸಂಪದ ಕಾರ್ಯನಿರ್ವಹಿಸದಂತಾಗಿತ್ತು. ಮುಂಚೆಯೇ ಪ್ರತಿ ದಿನ ಹೆಚ್ಚುತ್ತಿದ್ದ ಟ್ರಾಫಿಕ್ ನಿರೀಕ್ಷೆಗೆ ಮೀರಿದ ತಾಂತ್ರಿಕ ತೊಂದರೆಗಳನ್ನು...

ಪ್ರತಿಕ್ರಿಯೆಗಳು: 76
ಹಿಟ್ಸ್ : 3,075
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳನ : ಹೇಗಿರಬೇಕು, ಹೇಗಿವೆ?
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
19
Feb
2010
ಪುಟ

  ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ ’೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,389
ಹುಚ್ಚರಾಯಸ್ವಾಮಿ ಮಹಾತ್ಮೆ
suresh nadig's picture
ಸುರೇಶ್ ನಾಡಿಗ್
03
Jun
2010
ಪುಟ

ಶಿಕಾರಿಪುರದ ಆಂಜನೇಯನಿಗೆ ಹುಚ್ಚರಾಯಸ್ವಾಮಿ ಎಂದು ಕರೆಯುವುದು ಇದೆ. ಕಾರಣ ಇಲ್ಲಿ ವ್ಯಾಸರಾಯರು ಬಂದಂತಹ ಸಂದರ್ಭದಲ್ಲಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂಬ ದೇವರ...

ಪ್ರತಿಕ್ರಿಯೆಗಳು: 2
ಹಿಟ್ಸ್ : 931
ಸದನ ಚೌಪದಿ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
10
Jul
2010
ಪುಟ

  ’ಕಮಲೇ ಕಮಲೋತ್ಪತ್ತಿಃ
  ಶ್ರೂಯತೇ ನ ತು ದೃಶ್ಯತೇ’

ಹೀಗೆ ಎರಡು ಸಾಲುಗಳನ್ನು ಸವಾಲಾಗಿ ನೀಡಿ ಸಿಂಹಳದ ರಾಜ ಈ ಚೌಪದಿಯನ್ನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 970
ಬಿಲ್ಲುಗಾರ್ತಿಗೆ
hamsanandi's picture
ಹಂಸಾನಂದಿ
29
Jul
2010
ಬ್ಲಾಗ್ ಬರಹ

ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!

...

ಪ್ರತಿಕ್ರಿಯೆಗಳು: 3
ಹಿಟ್ಸ್ : 915
ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦
gopinatha's picture
ಬೆಳ್ಳಾಲ ಗೋಪೀನಾಥ ರಾವ್
11
Jul
2010
ಪುಟ

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ...

ಪ್ರತಿಕ್ರಿಯೆಗಳು: 23
ಹಿಟ್ಸ್ : 1,378
ಸೋಲಾರ್ ಇಂಪಲ್ಸ್ - ವಿಶ್ವದ ಸುತ್ತ ಒಂದು ಸುತ್ತು
omshivaprakash's picture
ಓಂಶಿವಪ್ರಕಾಶ ಎಚ್ ಎಲ್
25
Nov
2009
ಪುಟ

ವಿಶ್ವಪರ್ಯಟನೆಗೆ ಇಲ್ಲೊಂದು ತಂಡ ಸಿದ್ಧವಾಗಿ ನಿಂತಿದೆ... ಪರಿಸರ ಪ್ರೇಮಿಗಳೂ ಕೂಡ ಇದನ್ನು ಮೆಚ್ಚುವುದಂತೂ ನಿಜ. ಹೌದು... ಈ ವಿಶ್ವಪರ್ಯಟನೆಗೆ ಬೇಕಿರುವ ಇಂದನ ಸೌರಶಕ್ತಿ....

ಪ್ರತಿಕ್ರಿಯೆಗಳು: 1
ಹಿಟ್ಸ್ : 1,162
ಕಂಪ್ಯೂಟರ್ ‍ ಪಾಠ -೨ . - ಕಂಪ್ಯೂಟರ್ ರಚನೆ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
14
Sep
2006
ಬ್ಲಾಗ್ ಬರಹ
ಯಾವುದೇ ವಸ್ತುವು ಪರಮಾಣು ಮತ್ತು ಅಣುಗಳಿಂದ ಆಗಿರುವಂತೆ ಕಂಪ್ಯೂಟರ್ ಬಿಟ್ ಮತ್ತು ಬೈಟ್‍ಗಳಿಂದ ಆಗಿದೆ . ಬಿಟ್ ಎಂದರೆ binary digit . ಬಿಟ್ ಎನ್ನುವದು ಕಾಂತೀಯ(magnetic)...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,702
ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...
harshavardhan v.sheelavant's picture
harshavardhan v. sheelavant
16
Nov
2010
ಲೇಖನ

‘ಕಾಮನ್ ವೆಲ್ತ್ ಗೇಮ್ಸ್’ ಅರ್ಥಾತ್ ‘ಕಾಂಗ್ರೆಸ್ ವೆಲ್ತ್ ಗೇಮ್ಸ್’ ಎಂದು ಲೇವಡಿ ಮಾಡಿ ನಮ್ಮ ಮಾಧ್ಯಮಗಳು ಕ್ರೀಡಾಕೂಟದ  ಸಂಘಟನೆಯಲ್ಲಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 504

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋರಿಸಿದರು. ಸಿಕ್ಕಿದ್ದೇನು? "www.leavingbangalore.com" ಅಭಿಯಾನ! ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳ ಅವಹೇಳನ. ಎಷ್ಟೋ ಜನರಿಗೆ ಬೆಂಗಳೂರು ಕಲ್ಪವೃಕ್ಷವಿದ್ದಂತೆ; ಮೊದಲ ನೌಕರಿ, ಮೊದಲ ಸಂಬಳ, ಮೊದಲ ಕಾರು, ಮೊದಲ ಮನೆ, ಎಲ್ಲಕ್ಕಿಂತ ಮಿಗಿಲಾಗಿ ತಾಳ್ಮೆಯುಳ್ಳ ಕನ್ನಡಿಗರ ಸ್ನೇಹ-ವಿಶ್ವಾಸಗಳೆಲ್ಲ ದೊರೆತದ್ದು ವಲಸಿಗರ ಸೌಭಾಗ್ಯವಲ್ಲವೇ? ಇದನ್ನು ಮರೆತ ಕೆಲ ಕಿಡಿಗೇಡಿ ವಲಸಿಗರು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ತಿರಸ್ಕೃತ ಮನೋಭಾವನೆಯಿಂದ ನೋಡುತ್ತಿರುವುದು ಅವರ ಸಂಕುಚಿತ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

"ದೇಸೀ ಮಾತು" ಬ್ಲಾಗಿನಲ್ಲಿರುವ "ಹೋಗುವುದಿದ್ದರೆ ಬೇಗ ತೊಲಗಿ ಪೀಡೆಗಳೆ" ಎಂಬ ಲೇಖನದ ಶಿರ್ಷಿಕೆ ಹೇಳುವುದನ್ನು ನೇರವಾಗಿ, ಪರಿಣಾಮಕಾರಿಯಾಗಿ ಹೇಳುತ್ತದೆ. ಬೆಂಗಳೂರಿನಲ್ಲಿ ಸುಮಾರು 60%ಗಿಂತ ಹೆಚ್ಚು ಜನ ವಲಸೆ ಬಂದವರು. ಅವರೆಲ್ಲ ಇಲ್ಲಿ ಬಿಡಾರ ಹಾಕಿದ್ದರಿಂದಲೇ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಶುರುವಾಗಿದ್ದು. ಅದನ್ನು ಮರೆತ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ರಸ್ತೆಗಳು ಸರಿಯಿಲ್ಲ, ಟ್ರಾಫಿಕ್ ಮಿತಿಮೀರಿದೆ, ಪರಿಸರ ಮಾಲಿನ್ಯವಾಗುತ್ತಿದೆ, ಜನರಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ’ಗರ್ವ’ವಿದೆ, "IT Hub" ಹೋಗಿ "Begger hub" ಆಗುತ್ತಿದೆ ಎನ್ನುವುದು ಸರಿಯೇ? ಅಷ್ಟೇ ಅಲ್ಲ, "ಎಲ್ಲ ಭಾಷೆಗಳನ್ನು ಪ್ರೀತಿಸಿ, ಕನ್ನಡವನ್ನು ಪೂಜಿಸುವ" ಕನ್ನಡಿಗರಿಗೆ, ಕನ್ನಡದ ಬಗ್ಗೆ ದುರಭಿಮಾನವಿದೆಯೆನ್ನುವುದು ನ್ಯಾಯವೇ? "ಉಪ್ಪು ತಿಂದ ಮನೆಗೆ ಎರಡು ಬಗೆಯುವ" ಈ ಕಿಡಿಗೇಡಿ "ಕುನ್ನಿಗಳು" ಇದ್ದರೆಷ್ಟು ಬೆಂಗಳೂರು ಬಿಟ್ಟು ತೊಲಗಿದರೆಷ್ಟು, ಹೋದರೆ ಹೋಗಲಿ, ಬೆಂಗಳೂರಿನ ಉಪ್ಪಿನ ಋಣ ಅವರನ್ನು ಅನ್ನ ಸಿಗದ ನಗರದಿಂದ ಪುನಃ ಕೈಬೀಸಿ ಕರೆದಾಗ ಗೊತ್ತಾಗುತ್ತದೆ ಈ ನೆಲದ ಘನತೆ.

ಭಾರತದಲ್ಲಿ "ವಿವಿಧತೆಯಲ್ಲಿ ಏಕತೆ" ಇದೆ ಎಂದು ಎದೆತಟ್ಟಿ ಹೇಳುವ ನಾವೆಲ್ಲರು(ಕನ್ನಡಿಗರು+ಕನ್ನಡೇತರರು), ವಿವಿಧ ಭಾಗಗಳಲ್ಲಿರುವ ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವುದನ್ನು ಕಲಿಯಬೇಕು. ಮತ್ತೊಂದು ಪ್ರದೇಶದ/ಭಾಗದ ಭಾಷೆ ಸಂಸ್ಕೃತಿಯನ್ನು ಗೌರವಿಸುವುದರಿಂದ ನಮ್ಮ ಮಾತೃಭಾಷೆಗೇನು ಧಕ್ಕೆಯಾಗವುದಿಲ್ಲ; ಬದಲಾಗಿ ಇನ್ನೂ ಲಾಭವೇ ಎನ್ನಿ. ಬೇರೆ ಭಾಷೆ/ಸಂಸ್ಕೃತಿಯನ್ನು ಕಲಿಯುದರಿಂದ/ಗೌರವಿಸುವುದರಿಂದ ಎರಡು ಸಂಸ್ಕೃತಿಗಳ ಮಿಲನವಾಗುತ್ತದೆ, ಮಾತೃಭಾಷೆಯ ಸಾಹಿತ್ತಿಕ ಉದ್ದಗಲಗಳು ಹಿಗ್ಗುತ್ತವೆ. ಉದಾಹರಣೆಗೆ, ಮಹಾರಷ್ಟ್ರದಲ್ಲಿ ಹೋಗಿ ಅಲ್ಲಿನ ಸಂಸ್ಕ್ರತಿಯನ್ನು ಗೌರವಿಸುವುದರಿಂದ ಕನ್ನಡಕ್ಕೇನು ಧಕ್ಕೆಯಿಲ್ಲ, ಆದರೆ ಆ ಸಂಸ್ಕೃತಿಯ "ಒಳ್ಳೆತನವನ್ನು" ಕನ್ನಡಿಸಿದರೆ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆ. ಅದೇ ರೀತಿ, ಮರಾಠಿಗರು ಕರ್ನಾಟಕಕ್ಕೆ ಬಂದು ಇಲ್ಲಿನ ಸಂಸ್ಕೃತಿಯ "ಒಳ್ಳೆತನವನ್ನು" ಮರಾಠಿಗೆ ಕೊಂಡೊಯ್ದರೆ ಮರಾಠಿಗಷ್ಟೇ ಲಾಭವೇ? ಕನ್ನಡದ ಹೆಸರು ಮತ್ತಷ್ಟು ಹರಡುವುದಿಲ್ಲವೇ? ಇದನ್ನರಿಯದು ಮೂರ್ಖರು "www.leavingbangalore.com" ನಂತಹ ಕಿಡಿಗೇಡಿ ಕೆಲಸ ಮಾಡಿದ್ದು ನಿಜಕ್ಕೂ ಶೋಚನೀಯ. ಸದ್ಯಕ್ಕೆ, www.leavingbangalore... ವೆಬ್ ಸೈಟಿನ ಎತ್ತಂಗಡಿ ಕಾರ್ಯ ಮುಗಿದಿದೆ. ಆದರೆ ವಲಸಿಗರಲ್ಲಿರುವ ಸಂಕುಚಿತ ಮನೋಭಾವ ಭೂದಿ ಮುಚ್ಚಿದ ಕೆಂಡದಂತಿದೆ. ಅದನ್ನು ಆರಿಸಲು ಕನ್ನಡದಲ್ಲಿ ಒಬ್ಬ ರಾಜ್ ಥ್ಯಾಕ್ರೆ ಹುಟ್ಟಬೇಕೋ ಏನೋ... ಸೂ: ಈ ಲೇಖನದ ಶಿರ್ಷಿಕೆ ಕುಮಾರಸ್ವಾಮಿ ಕಡಾಕೊಳ್ಳರವರ ಟೀಕೆಯಿಂದ ಆಯ್ದುಕೊಂಡದ್ದು.

No votes yet
1091 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
hamsanandi's picture
16
Oct
2008
3:33

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಹೊರಡೋರು ಹೊರಡಲಿ :) ಅವರೇನು ಅರಿಶಿನ ಕುಂಕುಮದ ಜೊತೆಗೆ ಬಾಗಣಕ್ಕೆ ಕಾಯ್ತಿದಾರಾ ;) ?? -ಹಂಸಾನಂದಿ ಹರಿದಾಸ ಸಂಪದ:- http://haridasa.in/
createam's picture
16
Oct
2008
4:56

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ನನಗೂ ನೋಡಿ ತಲೆ ಕೆಡ್ತು. ಇವರು ಹೇಳ್ತಾ ಇರೋದು ನೋಡ್ದ್ರೆ ನಾವೇ ಇವರನ್ನೆಲ್ಲ ಸ್ವಾಗತ ಮಾಡಿ ಕರೆದು ತಂದಿರೋ ಹಾಗಿದೆ. ಹೊಗ್ತೀವಿ ಅಂದ್ರೆ ಹೋಗ್ಲಿ, ನಮ್ಗೂ ಒಳ್ಳೇದೇ.
mrsatish's picture
16
Oct
2008
8:19

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ನಿಮ್ಮ ಮಾತು ೧೦೦% ಸರಿಯಾಗಿದೆ... ನಿಜಕ್ಕೂ ನೀವು ಬೆಂಗಳೂರಿನ ಯಾವುದೇ ಒಬ್ಬ ಅಚ್ಚಕನ್ನಡಿಗನ ಕೇಳಿ, ಎಲ್ಲ ಕನ್ನಡಿಗರೂ ಈ ವಲಸೆಗಾರರ ಬೇಜವಾಬ್ದಾರಿ ಜೀವನ ಶೈಲಿಯ ಬಗ್ಗೆ ಬೇಸತ್ತಿದ್ದಾರೆ. ಬೆಂಗಳೂರಿಗೆ ಶಪಿಸುತ್ತಾ ಮಜಾ ತಗೋಳ್ಳೋ ಇವರುಗಳೆಲ್ಲಾ ಸದ್ದಿಲ್ಲದೇ ಇಲ್ಲೇ ಠಿಕಾಣಿ ಹೂಡುತ್ತಾರೆ...ಯಾಕೆಂದರೆ ನಮ್ಮ ದೇಶದಲ್ಲಿ ಬೆಂಗಳೂರಿನಷ್ಟು ನೆಮ್ಮದಿಯ ಜೀವನಕ್ಕೆ ಯೋಗ್ಯವಾದ ಜಾಗ ಇನ್ನೊಂದಿಲ್ಲವಲ್ಲ...
mahesha's picture
16
Oct
2008
9:22

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ನನ್ ಹಳೆ-ಕಂಪೆನಿಯಲ್ ಹೇಳ್ತಿದ್ರು ಹೊರಗಡೆಯೋರು ಇಲ್ದೇ ಇದ್ರೆ ನಮ್ ಬೆಂಗಳೂರ ಎಕಾನಮಿ ಬಿದ್ದೋಗತ್ತಂತೆ!!
sonalisiddarth's picture
16
Oct
2008
9:32

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಅಬ್ಬಾ! ಅವರೆಲ್ಲಾ ಹೋದ್ರೆ ನೆಮ್ಮದಿಯಾಗಿರಬಹುದು.......ಸಲ್ಪವಾದರೂ ಕನ್ನಡ ಕೇಳಿ ಬರುತ್ತೆ ಬೆಂಗಳೂರಿನಲ್ಲಿ!!!!
mahesha's picture
16
Oct
2008
9:42

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಯಾರು ಎಲ್ಲೂ ಹೋಗಲ್ಲ.. ಇಲ್ಲೇ ಇರ್ತಾರೆ.. ಇದೊಂತರ ನಸುಗುನ್ನಿಆಟ :) ನಸುಗನ್ನಿ = ಚಿಕ್ಕನಾಯಿಮರಿ
ರಾಮಕುಮಾರ್'s picture
16
Oct
2008
11:54

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ವಿಷಯಾಂತರಕ್ಕೆ ಕ್ಷಮಿಸಿ... ನಸುಗುನ್ನಿ ಕಾಯಿ ನೆನಪಾಯ್ತು. ನವುರಾದ ರೋಮಗಳುಳ್ಳ ಈ ಕಾಯಿ ತಾಗಿದಾಗ ಉಂಟಾಗುವ ನವೆ ಅನುಭವಿಸಿದವರಿಗೇ ಗೊತ್ತು :-)
gurubaliga's picture
16
Oct
2008
11:26

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಈ "ಬಿಟ್ಟು ಹೋಗುವ" ಅಭಿಯಾನ ಬಹುಶ ಎಲ್ಲ ಹೊರಗಿನವರ ಅಭಿಪ್ರಾಯವಾಗಿರಲಾರದು. "ಅಲ್ಲೀವರ್ಗೆ ಬಿಟ್ಟು ಬರ್ಲಾ" "ಊಟ ಮಾಡ್ಕೊಂಡು ಹೋಗಿ" "ಹೋಗಿ ಮುಟ್ಟಿದ ಮೇಲೆ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ" "ಆಯ್ತಮ್ಮ, ದಾರೀಲಿ ಹುಷಾರು" ಮುಂತಾದ ಅಭಿಯಾನಗಳು ಇನ್ನು ಹುಟ್ಟಿಕೊಳ್ಳಬಹುದು. "ಹೋಗುವುದಿದ್ದರೆ ಬೇಗ ತೊಲಗಿ" ಎನ್ನುವುದೇ ಸರಿಯಾದ ಉತ್ತರ ಇದಕ್ಕೆ. (ತುಳುವಿನಲ್ಲಿ "ಒರಾ ಪೋಲ") :-)
mahesha's picture
16
Oct
2008
11:48

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಬಲಿಗ... ತುಳು ತೆಲುಗಿಗೆ ಬಲು ಹತ್ತಿರವಾದ ನುಡಿ.. ಪೋಲ = ಪೋರ( ಹೋಗಲೇ ಅಂದ ಹಾಗೆ ) ಹಾಗೆ ಸಂಪದಿ(ದೆ)ತಿ ಇದೂ ಕೂಡ ಕನ್ನಡವೇ! :) "ವಲಸಿಗರೇ ಕರ್ನಾಟಕ ಬಿಟ್ಟು ತೊಲಗಿ" ಎಂದು ಕನ್ನಡಿಗರೇ ಹೋರಾಟ ಶುರು ಮಾಡಬೇಕು :)
gurubaliga's picture
16
Oct
2008
11:57

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!" "ವಲಸಿಗರೇ ಕರ್ನಾಟಕ ಬಿಟ್ಟು ತೊಲಗಿ" ಎಂದು "ಕನ್ನಡಿಗರೇ" ಹೋರಾಟ ಶುರು ಮಾಡಬೇಕು ತುಳುವರ ಸಹಾಯ ಬೇಡಾ ಅಂತೀರಾ? :-) ಗುರು ಬಾಳಿಗ
mahesha's picture
16
Oct
2008
12:01

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ರೀ ತುಳುವರೂ ಕನ್ನಡಿಗರೇ! ನಾನಂತು ಅವರನ್ನ ಕನ್ನಡಿಗರಲ್ಲ ಎಂದು ಎಣಿಸೇ ಇಲ್ಲ.!!
anil.ramesh's picture
16
Oct
2008
2:10

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಸೊಲ್ಮೆ ಅಂದ್ರೆ ನನ್ನಿ ನಾ? ಇಂತಿ ನಿಮ್ಮ, ಅನಿಲ್ ರಮೇಶ್.
mahesha's picture
16
Oct
2008
2:20

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಕನ್ನಡದಲ್ಲಿ ತುೞಿಲು(saluation) ತುೞಿ/ತೊೞಿ = to worship, adore, pay homage to; ತೊೞು = saluation ಇದೇ ತುಳುವಲ್ಲಿ ಸುಳಿ/ಲಿ => ಸೊಲಿಮೆ => ಸೊಲ್ಮೆ ಆಗಿದೆ. ತುರ್‍ಲಿ ಅಂತ ಒಂದು ತುಳು ಒರೆ ಇದೆಯಂತೆ. http://dsal.uchicago... Ta. tor̤u (-v-, -t-) to worship, adore, pay homage to; tor̤ukai worshipping, adoration, prayer; tor̤uvu worshipping, adoration. -- 310 -- Ma. tor̤uka to salute by joining the hands, acknowledge superiority. Ka. tur̤il salutation, obeisance, bow. Koḍ. to- (topp-, tott-) to salute. Tu. turli obeisance; solma, solmè salutation. Go. (Mu.) doṛī- to bow (Voc. 1902). Pe. ṭoḍ- (ṭoṭt-) id. Manḍ. ṭuḍ- to bow head. ? Konḍa tuRpa- to invoke gods, fulfil a religious vow, adore, worship, DED(S, N) 2904.
anil.ramesh's picture
16
Oct
2008
2:24

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಇನ್ಮುಂದೆ ಸೊಲ್ಮೆಗಳು ಅಂತನೂ ಹೇಳ್ಬೋದು... ಸೊಲ್ಮೆ: ಆಹಾ! ಅದ್ಭುತವಾಗಿದೆ... ಸೊಲ್ಮೆಗಳು ಮಹೇಶ... :-) ಇಂತಿ ನಿಮ್ಮ, ಅನಿಲ್ ರಮೇಶ್.
mahesha's picture
16
Oct
2008
2:35

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ರಮೇಶ.. ಆದರೆ ಇದು ಕನ್ನಡಕ್ಕೆ ಒಪ್ಪಿಗೆ ಆಗದೇ ಇರಬೋದು ಕನ್ನಡದಲ್ಲಿ ಸೊಲ್ ಅಂದರೆ ಹೇಳು/ಉಲಿ/ನುಡಿ ಸೊಲ್ಮೆ = ಹೇಳಿಗೆ/ನುಡಿಕೆ/ಉಲಿಕೆ ಎಂಬ ತಿಳಿವು ಬರುವುದು..! ತುಳವಲ್ಲಿ ಹೇಳು ಅನ್ನಲು... ಏನ್ ಅಂತಾರೆ..! ಈ ವಿಶಯ ಬೇರೆ ಕಡೆ ಮಾತಾಡಣ. ಇಲ್ಲಿ ಕುನ್ನಿಗಳ ಬಗ್ಗೆ..
anil.ramesh's picture
16
Oct
2008
2:40

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಸಣ್ಣ ಬದಲಾವಣೆ, ರಮೇಶ ಅಲ್ಲ ಅನಿಲ್... ರಮೇಶ್ ನನ್ನ ತಂದೆಯವರ ಹೆಸರು... ನನ್ ಹೆಸ್ರು ಅನಿಲ್. ಇಂತಿ ನಿಮ್ಮ, ಅನಿಲ್ ರಮೇಶ್.
gurubaliga's picture
16
Oct
2008
4:46

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಮಾಯ್ಸರೆ ಇಲ್ಲೊಂದು ತುಳು ಕನ್ನಡ ನುಡಿ ಚರ್ಚೆಗೆ ಚೆಲುವಾದ ಅವಕಾಶವಿದೆ. ಸುರು ಮಾಡಿ. ಇನ್ನೊಂದು ತಂತು.
vasant.shetty's picture
16
Oct
2008
6:42

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ತುಳುವರು, ಕನ್ನಡಿಗರು ಬೇರೆ ಬೇರೆ ಅಲ್ಲ. ತುಳುವರಲ್ಲಿರುವ ಭೂತ ಕೋಲ, ಭೂತಾರಾಧನೆ, ಯಕ್ಷಗಾನ, ಕಂಬಳ ಎಲ್ಲವೂ ಉಡುಪಿಯಿಂದಿಚೆಯ,ಕುಂದಾಪುರದವರೆಗಿನ ಕನ್ನಡ ಮಾತಾಡೋ ಜನರಲ್ಲೂ ಇದೆ. ತುಳು ಒಂದು ಬೇರೆಯೆ ಸಂಸ್ಕೃತಿ ಅಂತೇನು ಇಲ್ಲ. ನನ್ನ ಮನೆಯಲ್ಲೆ ತುಳು-ಕನ್ನಡ ಮಾತಾಡೋ ಸಂಬಂಧಿಗಳಿದ್ದಾರೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲೆಂದೂ ತುಳುವರು ಬೇರೆ, ಕನ್ನಡಿಗರು ಬೇರೆ ಅನ್ನುವ ಭಾವನೆ ಬಂದಿಲ್ಲ. ಅದೇನಿದ್ರೂ ಕನ್ನಡಿಗರಲ್ಲಿನ ಒಗ್ಗಟ್ಟು ಮುರಿಬೇಕು ಅನ್ನೋರು ಮಾತಾಡೋ ಹಳಸಲು ಸರಕು ಅಷ್ಟೇ. ಕರ್ನಾಟಕಕ್ಕೆ, ಕನ್ನಡಿಗರಿಗೆ ಹೆಮ್ಮೆ ತಂದ ಯೋಗರಾಜ್ ಭಟ್, ಕಯ್ಯಾರ್ ಕಿಯ್ಯಣ್ಣ ರೈ, ಹರಿಕೃಷ್ಣ ಪುನರೂರು, ಗುರುಕಿರಣ್ ಎಲ್ಲರೂ ತುಳು ಮಾತಾಡೋ ಕನ್ನಡಿಗರು. ಸುಮ್ನೆ ತುಳು ಬೇರೆ, ಕನ್ನಡ ಬೇರೆ ಅನ್ನೊ ವಾದ ಮಾಡೋರಿಗೆ ಜೋಡೆಟು ಹಾಕಬೇಕು. - ವಸಂತ
manjunathsinge's picture
16
Oct
2008
8:07

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ನಿಮ್ಮ ಮಾತು ನೂರಕ್ಕೆ ನೂರು ಸತ್ಯ ವಸಂತ ಅವರೆ. ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಸಹ ಒಂದು. ಅದು ಕನ್ನಡದ ಮಡಿಲನ್ನು ಸೇರಿ, ಕನ್ನಡದ ಲಿಪಿಯನ್ನು ಬಳಸಿ, ಕರಾವಳಿ ಕನ್ನಡಿಗರಲ್ಲಿ ಹೊಸದೊಂದು ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ತಂದುಕೊಟ್ಟ ಅಪೂರ್ವ ಭಾಷೆ. ಮಂಗಳೂರಿನ ಹತ್ತಿರ ನಾಲ್ಕು ವರ್ಷ ಕಾಲ ಕಳೆದರೂ, "ತುಳು ಗೊತ್ತಿಜ್ಜಿ ಮಹಾರಾಯರೆ" ಎನ್ನುವುದನ್ನು ಬಿಟ್ಟು (ತುಳುವಿನಲ್ಲಿ) ಬೇರೇನನ್ನು ಕಲಿಯದಿದ್ದಕ್ಕೆ ಕೆಲವೊಮ್ಮೆ ಬೇಜಾರಗುತ್ತದೆ. ಯಾರು ಏನೇ ಹೇಳಲಿ, ಕನ್ನಡೇತರರು ಬೇರೆ ಭಾಷೆಗಳ ಬಗ್ಗೆ ಏನೇ ಹೇಳಲಿ, ಅದನ್ನು ಧಿಕ್ಕರಿಸಿ, "ಎಲ್ಲಾ ಭಾಷೆಗಳನ್ನು ಪ್ರೀತಿಸು, ಕನ್ನಡವನ್ನು ಪೂಜಿಸು" ಎನ್ನುವ ಕವಿಗಳ ಮಾತಿನಂತೆ ಕನ್ನಡಿಗರು ವರ್ತಿಸಿದರೆ ಅದು ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಲೇಖನದಲ್ಲಿ ಮೊದಲೇ ಹೇಳಿದ ಹಾಗೆ, ಬೇರೆ ಭಾಷೆಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದರಿಂದ ಕನ್ನಡದ ಸಾಹಿತ್ತಿಕ ಉದ್ದಗಲಗಳು ಮತ್ತಷ್ಟು ಹಿಗ್ಗುತ್ತವೆ.
gurubaliga's picture
16
Oct
2008
10:08

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ನಿಮ್ಮ ಬರಹದ ಭಾವವನ್ನು ನಾನು ಗ್ರಹಿಸಿದ್ದೇನೆ. ಚೆನ್ನಾಗಿದೆ. "ತುಳು ಒಂದು ಬೇರೆಯೆ ಸಂಸ್ಕೃತಿ ಅಂತೇನು ಇಲ್ಲ." ತುಳುವರ ಸಂಸ್ಕೃತಿ ಕೊಂಚ ಭಿನ್ನ. ಅಲ್ಲವೇ ಶೆಟ್ರೆ.
vasant.shetty's picture
16
Oct
2008
10:54

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಭಾಷೆಯಾಗಿ ತುಳು ಕೊಂಚ ಭಿನ್ನವೇ ಹೊರತು ಆಚಾರ-ವಿಚಾರದಲ್ಲಿ ತುಳುವರಿಗೂ-ಕನ್ನಡಿಗರಿಗೂ ವ್ಯತ್ಯಾಸವಿಲ್ಲ. - ವಸಂತ
Rakesh Shetty's picture
17
Oct
2008
2:12

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ರಾಕೇಶ್ ಶೆಟ್ಟಿ ಗುರು ಯಾವುದೇ ವ್ಯತ್ಯಾಸ ಇದೆ ಅಂತ ಅನ್ನಿಸುವುದಿಲ್ಲ, ಯಾಕೆಂದರೆ ನಾನು ತುಳು ಭಾಷೆಯಾವನು , ಆದ್ರೆ ನಾನು ಕನ್ನಡಿಗ ಎಂದು ಹೇಳಲು ಹೆಮ್ಮೆಯಾಗುತ್ತದೆ ನನಗೆ. ನಾವು ಒಂದೇ ತಾಯಿಯ ಮಕ್ಕಳಿದ್ದ ಹಾಗೆ. ಇಬ್ಬರ ಗುಣ ಬೇರೆ ಇರಬಹುದು ಆದರೆ ಗುರಿ ಒಂದೇ. ಅದು ಕನ್ನಡ ಕನ್ನಡ ಕನ್ನಡ... ರಾಕೇಶ್ ಶೆಟ್ಟಿ :)
gurubaliga's picture
18
Oct
2008
12:20

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"ಅದೇ ಶೆಟ್ರೆ, ನಮ್ಮ ನಾಡಿನ ಸೊಗಡು, ಗುರಿ ಒಂದೇ. ಗುಣ ಬೇರೆ. ತುಳುವರ ಸಂಸ್ಕೃತಿ ಬೇರೆ. ತುಳುವರ ಆಚಾರ, ತಿಂಡಿ ತಿನಸು, ಜನಪದ, ಇವೆಲ್ಲ ಘಟ್ಟದ ಮೇಲಿಗಿಂತ ಭಿನ್ನವಾದದ್ದು. ಇಲ್ಲಿ ತುಳುವರ ಕನ್ನಡಾಭಿಮಾನದ ಬಗ್ಗೆ ಎರಡು ಮಾತೇ ಇಲ್ಲ.