mayajaala
----------------------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರನ ಮಾಯಾಜಾಲ!
www.mayajaala.com
ಕವಿ
ಕವಿ
ಓರ್ವ ಕಾವ್ಯ ಬರೆದರೆ ಕವಿಯಾದಂತೆ
ಈ ಲೋಕ ಕವಿಗಳದೆ ಸಂತೆ
ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ
ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ…
ಜಗವೇ ನೀನು , ಮಗುವೇ ನೀನು
ಕನ್ನಡಕ್ಕೇನಾದರೂ ಮಾಡು ನೀನು
ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು
ಬರಿ ಕಾವ್ಯ ಸವಿ ಹಾಲು ಜೇನು…
ಕವಿಯೇ ಕಾವ್ಯ , ಕಾವ್ಯವೇ ಸಿರಿ
ಇವುಗಳೇ ತಾಯಿ ನಿನ್ನ ಸಿರಿ
ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ
ಕನ್ನಡದ ಮಿತ್ರ ಯಾರಿಗೆಲ್ಲ ಅರಿ
ಕವಿಯ ಕಾವ್ಯದ ಸಿಹಿ ಸವಿ
ಬಲು ಚೆನ್ನ ಕನ್ನಡ ಎನ್ನುವಿ
ರವಿ ಕಾಣದ್ದು ಕಂಡ ಕವಿ
ಕುಡುಕನಿಗೇನು ಗೊತ್ತು ಶ್ರೇಷ್ಠನೇ ಕವಿ
>> ಧಾಮ

- mayakar ರವರ ಬ್ಲಾಗ್
- Login or register to post comments
- 186 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: