ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುಂಬೈ - ಹೀನ ಕೃತ್ಯ

ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ.

ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾಸ? ಈ ರೀತಿಯ ಮತಿಗೆಟ್ಟ ಜನರ ದುಷ್ಕೄತ್ಯ, ಜಾತಿಯ ಹೆಸರಿನಲ್ಲಿ ಸುಳ್ಳು ಭ್ರಮೆಯ ಹುಚ್ಚುತನ? ಹುಚ್ಚು ಬಹಳ ಸಣ್ಣ ಪದವೆನಿಸುತ್ತದೆ.

ಇವರಿಗೆ ಕ್ಷಮೆಯಿಲ್ಲ, ದಯೆಯಿಲ್ಲ, ಇಂಥ ಹೇಡಿತನದ ರಾಕ್ಷಸೀಯ ಕೃತ್ಯಕ್ಕೆ ನಾವು ತಲೆ ಬಾಗಿಸುವುದಿಲ್ಲ. ನಮಗೆ ತಿಳಿದ ರಾಕ್ಷಸರೂ ಕೂಡ ಕೊಂಚ ಮಾನವೀಯತೆಯಿಂದ ಮೆರೆದಿದ್ದಾರೆ.

ನಮ್ಮ ಜನ ನೆಮ್ಮದಿಗೆಟ್ಟಿದ್ದಾರೆ, ನೋವನುಭವಿಸಿದ್ದಾರೆ, ಸಂಕಟವಾಗುತ್ತದೆ, ನರಕ ಕಂಡಂತೆನಿಸುತ್ತದೆ. ಅವರೆಲ್ಲರಿಗೂ ದೇವರು ಈ ನೋವನನುಭವಿಸುವ ಶಕ್ತಿಕೊಡಲೆಂದು ಬೇಡುತ್ತೇನೆ. ಶಾಂತಿಯಿರಲಿ.

ನಮ್ಮ ಸೈನ್ಯ, ಮತ್ತು ನಮ್ಮ ಈ ಯುದ್ಧದ ನಾಯಕರ ಸತತ ಪ್ರಯತ್ನ ಬಹಳ ಪ್ರಶಂಸನೀಯ. ನಾವು ಅವರಿಗೆ ಸೋಲಲಿಲ್ಲ. ಗೆಲುವು ನಮ್ಮದಾದರು ಗಾಯಗೊಂಡಿದ್ದಾರೆ ನಮ್ಮ ಜನ.
ನಮ್ಮ ತಾಯಿ ಇಂದು ಗಾಯಗೊಂಡಿದ್ದಾಳೆ, ನೊಂದಿದ್ದಾಳೆ. ನಾವು ನೊಂದಿರುವೆವು. ನಮ್ಮಲ್ಲಿ ಕೆಲವು ಕೊರತೆಗಳಿವೆ, ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ನಮ್ಮ ಇಂದಿನ ಧೈರ್ಯ , ಸಾಹಸ ಮುಂದಿನ ಶಾಂತಿಯ ದಿನಗಳಾಗಬೇಕು. ಬಹಳಷ್ಟು ಬೆಳವಣಿಗೆಗಳು ಬೇಕಿವೆ. ಆದಷ್ಟು ಬೇಗ ಆಗಲಿಯೆಂದು ಆಶಿಸೋಣ.

ಜೈ ಹಿಂದ್

ಪ್ರವೀಣ್ ಮಾಯಾಕರ್.
--------------------------
www.mayajaala.com

No votes yet