ಕನಸು - ನನಸು
ಕನಸಿನಲಿ ಬಂದವಳೇ
ಕಂಗೆಡಿಸಿ ಹೋದವಳೇ
ಕಾಣದೆ ಹೀಗೇಕೆ
ಕೊಲ್ಲುತಿರುವೆ
ಕನಸಿನಲಿ ಬಂದವಳು
ನನಸಿನಲಿ ಬರಬಹುದೆಂದು
ಕನಸು ಕಾಣುತ
ನಾನು ಕಾಯುತಿರುವೆ
ನಿನ್ನ ಕಣ್ಣಿನ ಕುಡಿನೋಟ
ಕೊಲ್ಲುತಿತಿದೆ ನನ್ನನು
ಬಂದೂ ಬಾರದೆ
ನೀ ಹೋದೆ ಏಕೆ ?
ನಿನ್ನ ಕಣ್ಣಿನ ಮಿಂಚು
ಮಿನುಗುತಿದೆ ಅನವರತ
ನನ್ನ ಕನ್ನಂಚಿನೆದುರಲ್ಲೇ
ಕಾಯುತಿರುವೆ ನಾ
ಅದರ ಬೆಳಕಲ್ಲೇ .
*********************
ಎಮ್.ಡಿ.ಎನ್.ಪ್ರಭಾಕರ್
******************
- mdnprabhakar's blog
- Login or register to post comments
- 187 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕನಸು - ನನಸು
ಕವನ ಚೆನ್ನಾಗಿದೆ ಪ್ರಭಾಕರ್
ಉ: ಕನಸು - ನನಸು
Thanks Malathi