ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › medhadongre ರವರ ಬ್ಲಾಗ್

ವೈದ್ಯನಾರಾಯಣಕಥೆ

July 6, 2008 - 8:41am — medhadongre

’ನಿಮ್ಮನ್ನು ನೋಡಿದ್ರೆ ಇನ್ನೂ ಕಾಲೇಜ್ ವಿದ್ಯಾರ್ಥಿ ಹಾಗೆ ಕಾಣ್ತೀರಿ ’ ಅಂತ ನನ್ನ ಮುಂದೆ ಕೂತ ೨೮ ವರ್ಷದ ಜವಾನ್ತಿ(ಯುವತಿ) ಹೇಳಿದಾಗ ನಾಕನೇ ದಶಕ ಓಡುತ್ತಿರುವ ನನ್ಗೆ (ನಾನೇನೂ ೪೦+ ಅಲ್ಲ ಮಾರಾಯ್ರೇ..ಬರೀ ೩೦+…ಅಷ್ಟೇ ಅಲ್ಲ..೩೦ ರ ನಂತರ ವಯಸ್ಸು ಓಡ್ಲಿಕ್ಕೆ ಶುರು ಆಗ್ತದೆ ಮಾರಾಯ್ರೆ) ಒಂದುಸಲ ಭಯಂಕರ ಖುಷಿ ಆಗಿ ಪುಗ್ಗದ ಹಾಗೆ ಹಿಗ್ಗಿದ ನಾನು ಕೂಡ್ಲೇ ಟುಸ್ಸ್…ಅಂತ ಮುಖ ಸಣ್ಣದು ಮಾಡಿಕೊಂಡೆ. ಯಾಕೆ ಹೀಗೆ ಆಯ್ತು?..ಕಥೆ ಕೇಳಿ..
ಕರ್ಮಸಿದ್ಧಾಂತದ ಪ್ರಕಾರ ಹೇಳ್ಬೇಕಾದ್ರೆ ಘನಘೋರ ಪಾಪ ಮಾಡಿದ ನರಮಾನಿ (ಮನುಷ್ಯ) ಮರುಜನ್ಮದಲ್ಲಿ ಡಾಕ್ಟರಾಗುವುದು ಖಂಡಿತ. ಇಲ್ಲಸಲ್ಲದ ಸಮಯದಲ್ಲಿ ಫೋನ್ ಬರುವುದು, ಊಟಮಾಡುವಾಗಲೇ ಕರೆಗಂಟೆ ಬಾರಿಸುವುದು, ನೆಂಟರು ಬಂದ ದಿನವೇ ಎಮರ್ಜೆನ್ಸಿ ಕೇಸ್ ಬರುವುದು, ಡಯೇರಿಯಾ ಕೇಸ್ ನೋಡಿದ ಮೇಲೆ ಹಲಸಿನಹಣ್ಣಿನ ಪಾಯಸದ ಮೇಲೂ ಗುಮಾನಿ ಬರುವುದು..ಇದೆಲ್ಲ ಎಲ್ರಿಗೂ ಗೊತ್ತುಂಟು. ಆದ್ರೆ ಇಲ್ಲಿ ಕಥೆಯೇ ಬೇರೆ.. ವೈದ್ಯೋನಾರಾಯಣೋ ಹರಿಃ ಅನ್ನುವುದನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ನಾರಾಯಣನೇ ವೈದ್ಯನೆಂದು ಅಥವಾ ವೈದ್ಯನೇ ನಾರಾಯಣನೆಂದೂ ಅರ್ಥಮಾಡಿಕೊಳ್ಳುವ ಚಾಲಾಕ್ ರೋಗಿಗಳು ಇನ್ನು ಕೆಲವು ವಿಷಯಗಳಲ್ಲಿ ಸ್ವಲ್ಪ confused ಇರ್ತಾರೆ. ಮುಖ್ಯವಾಗಿ ಎಲ್ರಿಗೂ ಡಾಕ್ಟರೆಂಬ ಪ್ರಾಣಿಯೂ ತಮ್ಮ ಹಾಗೇ ಮನುಷ್ಯ ಜಾತಿಯಲ್ಲಿ ಬರುತ್ತದೆ, ಅದಕ್ಕೂತಮ್ಮ ಹಾಗೆ ೨ ಕಣ್ಣು , ೨ ಕಿವಿ, ೧ ಮೂಗು (ಹೋಗ್ಲಿ ಬಿಡಿ, ನಿಮಗೆ ಎಷ್ಟು ಮಾಂಸಖಂಡ, ಎಲುಬು, ನರಗಳು ಅಂತ ಹೇಳಲಿಕ್ಕೆ ಇದೇನು ಅನಾಟಮಿ ಕ್ಲಾಸಲ್ಲವಲ್ಲ..)ಮಾತ್ರವಲ್ಲ , ಒಂದು ಮನಸ್ಸೂ ಇರ್ತದೆ ಅಂತ ನೆನಪಿರುವುದಿಲ್ಲ. ಹೀಗಾಗಿ ಈ ವಿಚಿತ್ರ ಪ್ರಾಣಿಯ ಬಗ್ಗೆ ಒಂಥರ ಪೂರ್ವಾಗ್ರಹಪೀಡಿತ ಅಭಿಪ್ರಾಯ ಇಟ್ಟುಕೊಂಡಿರುವುದು ಪಂಜುರ್ಲಿ ,ಗುಳಿಗ ,ರಕ್ತೇಶ್ವರಿಯ ಆಣೆಗೂ ಸತ್ಯ. ಇವು ತಮ್ಮ ಡಾಕ್ಟರ್ ಎಷ್ಟು ಅನುಭವಿಗಳು ಅಂತ ತೀರ್ಮಾನಿಸಲು ಇರುವ ಕ್ರೈಟೀರಿಯ ಅಂತಲೂ ಹೇಳಬಹುದು.

ಮುಖ್ಯ ಕ್ರೈಟೀರಿಯಾ

೧) ಡಾಕ್ಟರ್ ನೋಡಲು ತೋರ[ ದಪ್ಪ]ವಾಗಿರಬೇಕು..

ದೊಡ್ಡ ಹೊಟ್ಟೆಯೂ ಇದ್ದರೆ ಕೇಕ್ ಮೇಲೆ ಚೆರಿ ಇದ್ದಹಾಗೆ, ಅಥವಾ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಹಾಗೆ. ಅರ್ಥ ಏನಂದ್ರೆ ಡಾಕ್ಟರ್ ಹೊಟ್ಟೆಅಳತೆ ಡೈರೆಕ್ಟ್ಲೀ ಪ್ರಪೋರ್ಷನಲ್ ಟು ಡಾಕ್ಟರ ನೈಪುಣ್ಯ. ಇದರ ವಿಷಯದಲ್ಲಿ ಜ್ಞಾನೋದಯವಾದ ಸುದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನಾಲ್ಕು ವರ್ಷದ ಹಿಂದೆ ನನ್ನ ಗಂಡನ ಕಸಿನ್ ಮನೆಗೆ ಹೋದಾಗ ಅವನು ”ನೀವೆಂಥ ಡಾಕ್ಟರ್ ಅತ್ತಿಗೆ? ಅಣ್ಣ ಆದ್ರೆ ಹೌದು,ಒಳ್ಳೆ ಡಾ…ಕ್ಟರ್ ಥರ ಕಾಣ್ತಾನೆ” ಅಂತ ನನ್ನನ್ನು ಹೀಯಾಳಿಸಿದ್ದಲ್ಲದೆ, ಅವನಣ್ಣನನ್ನೂ, ಅವರ ಹೊಟ್ಟೆಯನ್ನೂ ಗೌರವಪೂರ್ಣವಾಗಿ ನೋಡಿದ. ಸಮಾಧಾನದ ವಿಷಯವೆಂದರೆ ಈ ೪ ವರ್ಷಗಳಲ್ಲಿ ನನ್ನ ಗಂಡ ಇನ್ನೂ ದೊಡ್ಡ ಡಾಕ್ಟರಾದ್ದಲ್ಲದೇ, ನಾನೇನೂ ಕಮ್ಮಿಯಿಲ್ಲ.

೨) ಕನ್ನಡಕ ಬೇಕೇಬೇಕು…

ಇದು ಬಹಳ ಸಾಮಾನ್ಯವಾದ ಸಾಮಾನ್ಯಜ್ಞಾನ. ಸಣ್ಣ ಚಿಳ್ಳೆಪಿಳ್ಳೆಗಳೂ ಕನ್ನಡಕ ಹಾಕಿ ’ನಾನು ಡಾಕ್ಟರ್ ’ ಎನ್ನುವುದು ಮಾಮೂಲು. ಓದಿ ಓದಿ ಕಣ್ಣುಗಳು ಹಾಳಾದವು ಅಂತ ಇದರರ್ಥ. ಇಲ್ಲಿ ಗಾಜಿನ ದಪ್ಪ α ಬುದ್ಧಿವಂತಿಕೆ. ಕಣ್ಣು ಸರಿಯಾಗಿರುವವರು ಪವರ್ ಇಲ್ಲದ ಕನ್ನಡಕ ಹಾಕಿಕೊಳ್ಳಬಹುದು.

೩) ಮಾತು ಕಡಿಮೆ….

ಎಷ್ಟು ಕಡಿಮೆ, ಮೆಲ್ಲನೆ ಹಾಗೂ ಅರ್ಥವಾಗದಂತೆ ಮಾಥನಾಡುತ್ತಾರೋ ಅಷ್ಟು ಅವರ ಮೇಲೆ ಭಯ ಭಕ್ತ ಜಾಸ್ತಿ. ’ಮಾತಾಡ್ಲಿಕ್ಕೂ ಟೈಮಿಲ್ಲ, ಅಷ್ಟೂ ಬ್ಯುಸಿ ’ ಅಂತ ಹೇಳುವ ಪೇಷೆಂಟ್ ಗೆ ತಾನು ಸರಿಯಾದ ವೈದ್ಯನ ಹತ್ತಿರವೇ ಬಂದಿದ್ದೇನೆಂಬ ಅನಿರ್ವಚನೀಯವಾದ ಆನಂದ. ಇದರ ಪರಿಹಾರವೆಂದರೆ ಸರಿಯಾಗಿ ಮಾತನಾಡುವವರು ಸ್ಪೀಚ್ ಥೆರಪಿಯಂತಹದೇನಾದರೂ ಪಡೆದುಕೊಳ್ಳಬಹುದು.

೪) ಸಣ್ಣ ಪ್ರಾಯದ ಡಾಕ್ಟರಿಗೆ ಜ್ಞಾನ ಕಡಿಮೆ…

ವೈದ್ಯಕೀಯ ಜಗತ್ತಿನ ಇತ್ತೀಚಿನ ಬೆಳವಣಿಗೆಗಳನ್ನು ಓದಿ ತಾಜಾ ಮಾಹಿತಿ ಪಡೆದಿರುವವರಿಗೆ ಇದು ನುಂಗಲಾರದ ತುತ್ತು. ಈ ಶಾಪವಿಮೋಚನೆಗೆ ಒಂದೇ ಉಪಾಯ. ಒಂದಾನೊಂದು ಕಾಲದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ’ಸಂಸಾರ್’ ’ ಎಂಬ ಧಾರಾವಾಹಿಯಲ್ಲಿ ಎಲ್ಲ ಪಾತ್ರಗಳು ತಮ್ಮ ಕೂದಲಿಗೆ ಬಿಳಿಬಣ್ಣದ ಪಟ್ಟೆಗಳನ್ನು ಬಳಿದುಕೊಂದಂತೆ ನಾವೂ ಪ್ರಯತ್ನಿಸಬಹುದು. ಇದನ್ನು reverse cosmetic camouflage ಅಂತಲೂ ಹೇಳಬಹುದು

೫) ಅಕ್ಷರಗಳು ರಣರಂಗದಲ್ಲಿ ಖಡ್ಗಗಳಂತೆ ಎಲ್ಲಾ ದಿಕ್ಕುಗಳಲ್ಲೂ ಅಡ್ಡಾದಿಡ್ಡಿಯಾಗಿದ್ದು ಓದಲು ಅಸಾಧ್ಯವಾಗಿರಬೇಕು.(ಇದರ ಹಿಂದಿನ logic ಏನಿರಬಹುದೆಂದು ಊಹಿಸಲು ಅಸಮರ್ಥಳಾಗಿದ್ದೇನೆ).

ನೋಡಿದರೆ ಇಂಗ್ಲಿಷ್ ಎಂದಷ್ಟೇ ತಿಳಿಯಬೇಕು. ಇದರಲ್ಲಿ ಮುಖ್ಯ ಜಾಗ್ರತೆ ವಹಿಸಬೇಕಾದ್ದೇನೆಂದರೆ ಅಕ್ಷರಗಳು ಉರುಟಾಗಿರಬಾರದು. ಎಲ್ಲಿಯಾದರೂ ತಪ್ಪಿ ಪೇಷೆಂಟ್ ಅದು ಕನ್ನಡ ಅಂತ ಎಣಿಸಿ ಮಾನ ಹೋಗಬಹುದು. ಚಂದದ ಅಕ್ಷರದ ಡಾಕ್ಟ್ರಿಗೆ ಇದಕ್ಕೆ ಪಂಜುರ್ಲಿಗೆ ಕೋಲ ಹೇಳಿಕೊಡರೂ ಪರಿಹಾರ ಸಿಗುವುದು ಕಷ್ಟ .

೬) ಡಾಕ್ಟರ ಕೈಗುಣ ಚೆನ್ನಾಗಿರಬೇಕು…

ನಮ್ಮ ಗುರುಗಳು ಯಾವಾಗಲೂ ಹೀಗೆ ಹೇಳುವುದಿತ್ತು ”what mind does not know, eyes cannot see”..ಮೆದುಳಿಗೆ ಗೊತ್ತಿಲ್ಲದ, ಕಣ್ಣಿಗೆ ಕಾಣದ ವಿಷಯವನ್ನು ಕೈಗಳು ಬರೆಯುವುದು ಸಾಧ್ಯವೇ? ಆದರೂ, ಬುಧ್ಧಿ ಓಡಿಸಿದ ತಲೆಗೆ ಮರ್ಯಾದೆ ಕೊಡದೆ, ಕೈಯನ್ನು ಹೊಗಳುವ ಜನರನ್ನು ಕ್ಷಮಿಸಿಬಿಡಬಹುದು..ಯಾಕಂದ್ರೆ ಈ ವಿಷಯ ಅಷ್ಟೇನೂ ಸಿಂಪಲ್ಲಾಗಿಲ್ಲ. ಇದು ಕೈಗುಣ ಮತ್ತು ಜನರ ಮನಸ್ಸು ಒಟ್ಟಿಗೆ ಸೇರಿ ಮಾಡಿದ ಕರಾಮತ್ತು..

ಇನ್ನು ಮೈನರ್ ಕ್ರೈಟೀರಿಯಾ:

೧. ಡಾಕ್ಟರ್ ಗೆ ಕಾಯಿಲೆ ಬರಬಾರದು.

೨. ಡಾಕ್ಟರ್ ಮಾತನಾಡುವ ಪ್ರತಿಯೊಂದು ಮಾತೂ politically,socially,ethically ಇತ್ಯಾದಿ ಕಲಿಯುಗದ ಎಲ್ಲಾ ಕಲಿಗಳ ಪ್ರಕಾರ ಸರಿಯಾಗಿರಬೇಕು. ಹಾಗೂ ಆ ಪ್ರೌಢಿಮೆ ಅವನ/ಳಲ್ಲಿ ವೈದ್ಯಕೀಯ ಕಾಲೇಜಿಗೆ ಸೀಟ್ ಸಿಕ್ಕಿದ ದಿನದಿಂದಲೇ ಇರಬೇಕು.

೩. ಜಾಸ್ತಿ ಹಳೆಯದೂ ಅಲ್ಲದ , ಹೊಸದೂ ಅಲ್ಲದ ಫ್ಯಾಷನ್ ಸೆನ್ಸ್ ಇರಬೇಕು.ಈ ಬ್ಯಾಲೆನ್ಸ್ ಅಷ್ಟು ಸುಲಭವೇ?

ಇದಿಷ್ಟು ಕಥೆ..

ಮೊನ್ನೆ ಪೇಷೆಂಟ್ ನನಗೆ ಹಾಗಂದಾಗ ಅದು ಹೊಗಳಿಕೆಯೋ, ತೆಗಳಿಕೆಯೋ ಸರಿಯಾಗಿ ಗೊತ್ತಾಗ್ಲಿಲ್ಲ ಅಂತ ಮಂಡೆ ಕಿಂರ್ಬಿಕೊಳ್ಳುವಾಗ [ತಲೆ ತುರಿಸಿಕೊಳ್ಳುವಾಗ] ಈ ಆಲೋಚನೆಗಳಿಗೆ ಒಂದು ಮುಕ್ತಿಯನ್ನು ಕೊಡುವುದಕ್ಕಾಗಿ ನಿಮ್ಮ ಮಂಡೆಯನ್ನೂ ಸ್ವಲ್ಪ ಕೊರೆಯಬೇಕಾಯಿತು.

ಈ ಕಥೆಯನ್ನು ಓದಿದವರಿಗೆ ,ಕೇಳಿದವರಿಗೆ,ಅಥವಾ ಓದಿ ಇತರರಿಗೆ ಹೇಳಿದವರಿಗೆ ಆ ವೈದ್ಯನಾರಾಯಣನು
• ವೈದ್ಯರಲ್ಲವಾದರೆ ಆಯುರಾರೋಗ್ಯಗಳನ್ನೂ
• ವೈದ್ಯನಾದರೆ ಜತೆಗೆ ಅಪಾರ ಸಂಖ್ಯೆಯಲ್ಲಿ ರೋಗಿಗಳನ್ನೂ ದಯಪಾಲಿಸಲೆಂದುಪ್ರಾರ್ಥನೆ. ಎಲ್ಲರಿಗೂ ಒಳ್ಳೆಯದಾಗಲಿ.

  • ಹರಟೆ
~.~
  • medhadongre ರವರ ಬ್ಲಾಗ್
  • Login or register to post comments
  • 355 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 6, 2008 - 8:09pm — ಗಣೇಶ

ಉ: ವೈದ್ಯನಾರಾಯಣಕಥೆ

ಗಣೇಶ's picture

ಡಾಕ್ಟ್ರೆ,

ತಮಾಷೆಯಾಗಿ ಬರೆದಿದ್ದೀರಿ. ನಡುನಡುವಿನಲ್ಲಿ ಬಂದ ತುಳು ಶಬ್ದ (ಜವಾನ್ತಿ, ನರಮಾನಿ..)ಇನ್ನೂ ಖುಷಿ ಕೊಟ್ಟಿತು.

>>ಡಯೆರಿಯಾ ಕೇಸ್ ನೋಡಿದ ಮೇಲೆ ಹಲಸಿನಹಣ್ಣಿನ ಪಾಯಸದ ಮೇಲೂ ಗುಮಾನಿ..
- Smiling
>> ಅಕ್ಷರಗಳು ರಣರಂಗದಲ್ಲಿ ಖಡ್ಗದಂತೆ..

- Smiling Smiling

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 8:48pm — Narayana

ಉ: ವೈದ್ಯನಾರಾಯಣಕಥೆ

Narayana's picture

ಚೆನ್ನಾಗಿದೆ. ಹರಟೆ ಅನ್ನುವ ಸಾಹಿತ್ಯದ ಪ್ರಕಾರ ಕಡಿಮೆಯಾಗುತ್ತಿದೆ. ಹೀಗೇ ಹರಟಿಸುತ್ತಿರಿ ಕನ್ನಡ ಜಿಲ್ಲೆಯ ಭಾಷೆಯಲ್ಲಿ.

ಡಯೇರಿಯಾ.... ಹಲಸಿನಹಣ್ಣಿನ ಪಾಯಸ... ರಾಮರಾಮಾ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 9:06pm — karaddishivaraj

ಉ: ವೈದ್ಯನಾರಾಯಣಕಥೆ

karaddishivaraj's picture

ತುಂಬಾ ತಮಾಷೆಯಾಗಿದೆ, ಡಯೇರಿಯಾ ಅಂದರೆ ಎನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 9:30pm — kalpana

ಉ: ವೈದ್ಯನಾರಾಯಣಕಥೆ

kalpana's picture

ವೈದ್ಯೆಯಾಗಿ ನಿಮ್ಮ ವೃತ್ತಿಯ ಬಗ್ಗೆ ವಿಡಂಬನೆಯನ್ನು ಬಹಳ ಚೆನ್ನಾಗಿ ಬರೆದಿದ್ದೀರಿ, ಮೇಧ ಅವರೆ. ಹೀಗೆ ಬರೆಯುತ್ತಾ ಇರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 9:54pm — omshivaprakash

ಉ: ವೈದ್ಯನಾರಾಯಣಕಥೆ

omshivaprakash's picture

ಸೂಪರ್, ನಾವೆಲ್ಲ ನಮ್ಮ ವೃತ್ತಿಯ ನಡುವೆ ಕೆಲಸಮಯ ನಗುವಿನಮಯ ಮಾಡಿಕೊಳ್ಳಲು, ಮಾಹಿತಿ ವಿನಿಮಯಕ್ಕೂ ಇಂತಹ ಲೇಖನಗಳು ಅವಶ್ಯ. ನಗಿಸಿದ್ದಕ್ಕೆ ಮತ್ತೊಮ್ಮೆ ವಂದನೆಗಳು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 11:13pm — Sunil Jayaprakash

ಉ: ವೈದ್ಯನಾರಾಯಣಕಥೆ

Sunil Jayaprakash's picture

Smiling ಮೇಧಾ, ಓದುವಾಗ ಸಿಕ್ಕಾಪಟ್ಟೆ ಮಜ್ಜಾ ಬಂತು. ಒಂದು ವಿಶ್ಯ ಗೊತ್ತಾ. ನಮ್ಮ ಮನೆಯ ಬಳಿ ಒಬ್ಬರು ಮಾಧ್ವ ಡಾಕ್ಟರ್ ಇದ್ದಾರೆ. ಅವರು ಪ್ರಿಸ್ಕ್ರಿಪ್ಶನ್ನಿನಲ್ಲಿ ರೋಗಿಯ ಹೆಸರು, ವಯಸ್ಸು, ದಿನಕ್ಕೆ ಎಷ್ಟು ತೊಗೋಬೇಕು, ಇತ್ಯಾದಿ ಬರೆಯುವಾಗ ಕನ್ನಡದಲ್ಲಿ ಬರೀತಾರೆ (ಆಶ್ಚರ್ಯ ಬೇಡ, ಕನ್ನಡ ಲಿಪಿಯಲ್ಲಿಯೇ ಬರೆಯುತ್ತಾರೆ, ಬೇಕಿದ್ದರೆ ಯಾವಾಗಲಾದರೂ ಸ್ಕಾನ್ ಮಾಡಿ ಹಾಕುತ್ತೇನೆ). ಇದನ್ನು ಮೊಟ್ಟ-ಮೊದಲ ಬಾರಿಗೆ ನೋಡಿದಾಗ, ಸಿಕ್ಕಾಪಟ್ಟೆ ಅಚ್ಚರಿಮೂಡಿ ತುಂಬಾ ಖುಷಿಯಾಗಿ, ಗುಳಿಗೆ ನುಂಗದೇನೇ ಜ್ವರ ವಾಸಿಯಾಗಿಬಿಟ್ಟಿತ್ತು. . ಆಮೇಲೆ ಈ ವಿಷಯವನ್ನ, ಕೆಲವು ಗೆಳೆಯರಿಗೆ ಹೇಳಿದರೆ, "ಹೌದಾ! ಅವರು ನಿಜ್ವಾಗ್ಲೂ ಡಾಕ್ಟ್ರೇ ಏನೋ!!!!!!!"... ಅಂತ ಕೇಳಿದ್ರು Smiling - Smiling

ಕೊಕೊ (ಕೊನೆಯ ಕೊಸರು) - ಕಾಕತಾಳೀಯ ಗೊತ್ತಾ, ಈಗಷ್ಟೇ ನಾನೊಂಬು ಬಲೂನ್ ಕೊಂಡುತಂದೆ ಮನೆಗೆ. ನಮ್ಮ ಅತ್ತಿಗೆ ಬಲೂನಿಗೆ ಕನ್ನಡದಲ್ಲಿ ಏನು ಅಂತ ಕೇಳಿದರು, ನನಗೆ ಗೊತ್ತಿಲ್ಲ ಎಂದುದಕ್ಕೆ, ಅವರ ಊರಲ್ಲಿ "ಪುಗ್ಗ" ಎನ್ನುವರು ಎಂಬುದಾಗಿ ಹೇಳಿದರು. ಇಲ್ಲಿ ನೋಡಿದರೆ ನೀವೂ ಆ ಪದದ ಬಳಕೆ ಮಾಡಿದ್ದೀರಿ. ಸೂಪರ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 11:16pm — Sunil Jayaprakash

ಉ: ವೈದ್ಯನಾರಾಯಣಕಥೆ

Sunil Jayaprakash's picture

ಈ ಮೇಲಿನ ಕಾಮೆಂಟಿನ ಮೂಲಕ ಸಂಪದದಲ್ಲಿ ನನ್ನ ಪಾಯಿಂಟುಗಳ ಸಂಖ್ಯೆ ೩೦೦೦ ಮುಟ್ಟಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 7, 2008 - 12:50am — aniljoshi

ಉ: ವೈದ್ಯನಾರಾಯಣಕಥೆ

aniljoshi's picture

ಬಹಳ ಚನ್ನಾಗಿದೆ ಡಾಕ್ಟ್ರೇ

Quote:
೪) ಸಣ್ಣ ಪ್ರಾಯದ ಡಾಕ್ಟರಿಗೆ ಜ್ಞಾನ ಕಡಿಮೆ…

ನನ್ನ ೨ತಿಂಗಳ ಮಗುವಿನ ಪೀಡಿಯಾಟ್ರಿಶಿಯನ್ ಈಗ ತಾನೆ ಪ್ರ್ಯಾಕ್ಟೀಸ್ ಶುರುಮಾಡಿದವಳಂತಿದ್ದಾಳೆ. ನಮಗಿನ್ನೂ ಸ್ವಲ್ಪ ಗುಮಾನಿ ಅವಳ ಅನುಭವದ ಬಗ್ಗೆ Smiling (ಜ್ಞಾನದ ಬಗ್ಗೆ ಅನುಮಾನವಿಲ್ಲ)

Quote:
೫) ಅಕ್ಷರಗಳು ರಣರಂಗದಲ್ಲಿ ಖಡ್ಗಗಳಂತೆ ಎಲ್ಲಾ ದಿಕ್ಕುಗಳಲ್ಲೂ ಅಡ್ಡಾದಿಡ್ಡಿಯಾಗಿದ್ದು ಓದಲು ಅಸಾಧ್ಯವಾಗಿರಬೇಕು.(ಇದರ ಹಿಂದಿನ logic ಏನಿರಬಹುದೆಂದು ಊಹಿಸಲು ಅಸಮರ್ಥಳಾಗಿದ್ದೇನೆ).

ಮೆಡಿಕಲ್ ಕಾಲೇಜುಗಳಲ್ಲಿ ಅಕ್ಷರಗಳನ್ನು ಮೆಡಿಕಲ್ ಶಾಪುಗಳವರಿಗಷ್ಟೇ ಅರ್ಥವಾಗುವಂತೆ ಬರೆಯುವದನ್ನ ಹಾಗು ಫಾರ್ಮಸಿ ಕಾಲೇಜುಗಳಲ್ಲಿ ಡಾಕ್ಟ್ರುಗಳ ಬರವಣಿಗೆ ಅರ್ಥ ಮಾಡಿಕೊಳ್ಳುವದನ್ನ ಹೇಳಿಕೊಡುತ್ತಾರೆ ಎಂದು ನಾವು ಹಾಸ್ಯ ಮಾಡುತ್ತಿದ್ದದ್ದು ನೆನಪಾಯಿತು Smiling

ಅನಿಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಮುಖಚಿತ್ರ
  • ಕೆಟ್ಟ ಹುಳ
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
  • ಡಾಕ್ಟರ್ ವಂದನ ಶಿವ ಅವರಿಂದ ಭಾಷಣ - ವಿಷಯ: ರಾಷ್ಟ್ರೀಯ ಕೃಷಿ ನೀತಿ
  • ಕಾಯಿಲೆಗಳ ಬಗ್ಗೆ ಒ೦ದಿಷ್ಟು...
Syndicate content

ಲೇಖಕರು

medhadongre's picture

ಪೂರ್ಣ ಹೆಸರು
ಮೇಧಾ ಡೋಂಗ್ರೆ

ಪರಿಚಯ

ನಾನು ಈಗ ವಾಸಿಸುತ್ತಿರುವುದು ವಾರಾಣಸಿಯಲ್ಲಿ. ಚರ್ಮರೋಗವಿಶೇಷಜ್ಞೆ...ಊರು ಕಾರ್ಕಳ ತಾಲೂಕಿನ ಮಾಳ ಗ್ರಾಮ...ಸಂಪದವೆಂದರೆ ಬಹಳ ಬಹಳ ಪ್ರೀತಿ.ಆದರೂ ಸಂಪದದ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಾಗದಷ್ಟು ಕನ್ನಡ ಭಾಷೆಯ authentic ಜ್ಞಾನದ ಕೊರತೆ...ಹಾಗಾಗಿ ಸಂಪದ ಓದುವುದರಲ್ಲೇ ಮನರಂಜನೆ..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator