ಈಗಿನಂತೆ 5 ಸದಸ್ಯರು ಮತ್ತು 97 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಗಣೇಶೋತ್ಸವಕ್ಕೆ ಗೀಜಗ ಹಕ್ಕಿಯ ಗೂಡಿನ ಅಲಂಕಾರ ಬೇಡ ಎಂಬ ಅರಿಕೆ.
harshavardhan v.sheelavant's picture
harshavardhan v. sheelavant
06
Sep
2010
ಪುಟ

...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,385
ದಾಯ್ ಜನ್ ಗುಮ್!
benaka's picture
ಬೆನಕ
12
Sep
2006
ಪುಟ
ದಾಯ್ ಜನ್ ಗುಮ್! ಗೆಳೆಯರೇ, ಜಪಾನಿನ ದೂರದರ್ಶನದ ದುರ್ದರ್ಶನದ ಬಗ್ಗೆ ಈ ಹಿಂದೆ ಬರೆದಿದ್ದೆನಲ್ಲವೇ? ಇದ್ದುದರಲ್ಲಿ ಉತ್ತಮವೆನ್ನುವಂಥ, ಮನೆಮಂದಿಯೆಲ್ಲ ಕುಳಿತು ನೋಡುವಂಥ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,513
ಕಥೆ : ಕಂಸ {ಪೌರಾಣಿಕ ಕಥೆಯ ಒಂದು ಸೀಳು ನೋಟ}
partha1059's picture
ಪಾರ್ಥಸಾರಥಿ
14
Jun
2011
ಲೇಖನ

ಕಾರ್ಗತ್ತಲು ಜಗತ್ತನೆಲ್ಲ ಆವರಿಸಿದಂತೆ ಕಾಣುತ್ತಿತ್ತು. ಆಕಾಶದಿಂದ ಒಂದೆ ಸಮಕ್ಕೆ ಸುರಿಯುತ್ತಿರುವ ವರ್ಷದಾರೆ. ಪದೆ ಪದೆ ಮಿಂಚಿನ ಬಳ್ಳಿಯೊಂದು...

ಪ್ರತಿಕ್ರಿಯೆಗಳು: 31
ಹಿಟ್ಸ್ : 793
ನಾವೇಕೆ ಸೋಲಬೇಕು?
abdul's picture
ಅಬ್ದುಲ್ ಲತೀಫ್ ಸಯ್ಯದ್
10
May
2010
ಪುಟ

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,303
ಝೆನ್: ಕಿರು ಪರಿಚಯ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
05
Aug
2005
ಪುಟ

ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 3,803
ಅಮ್ಮಮ್ಮನ ಕಾಫಿಪ್ರೇಮ (ಒಂದು ಪ್ರಬಂಧ)
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
08
Jul
2011
ಬ್ಲಾಗ್ ಬರಹ

 

 

 

...
ಪ್ರತಿಕ್ರಿಯೆಗಳು: 8
ಹಿಟ್ಸ್ : 634
ಪತಂಜಲಿಯ ಯೋಗ
R M Rao's picture
12
Aug
2005
ಪುಟ
ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು...
ಪ್ರತಿಕ್ರಿಯೆಗಳು: 2
ಹಿಟ್ಸ್ : 3,329
ಯಾವುದು ರಕ್ಷಣೆ ???
sinchanabhat's picture
09
Mar
2006
ಬ್ಲಾಗ್ ಬರಹ
ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,429
’ಸಂಪದ’-ಸಂಕಲ್ಪ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
29
Jan
2010
ಪುಟ

’ಸಂಪದ’ದಲ್ಲಿ
Some ಪದ ಬರೆಯದಿರೋಣ
ಕನ್ನಡದ
ಸಂಪದದ ದೃಷ್ಟಿಯಿಂದ
ಬರೆಯೋಣ
ಅಕ್ಷರಲೋಕದ
ಸಂಪದ ನಮ್ಮ ಬರವಣಿಗೆ
ಆಗಲೆಂದು ಬಯಸೋಣ
...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,108
ನಮ್ಮ ಈ ಹಿತ್ತಲ ಗಿಡಗಳು ನಮಗೆ ಮದ್ದಲ್ಲ!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
31
May
2010
ಪುಟ

  ’ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ, ನಮ್ಮ ಸನಿಹದಲ್ಲೇ ಇರುವ ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ನಮಗೆ ದರ್ಶನಾರ್ಹ ಸ್ಥಳಗಳಾಗಿ ಅರಿವಿಗೆ ಬರುತ್ತಿಲ್ಲ....

ಪ್ರತಿಕ್ರಿಯೆಗಳು: 8
ಹಿಟ್ಸ್ : 1,307

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ.  ಕುವೆಂಪುರವರ  ಕೃತಿ ಗಳನ್ನೋದುವುದು ಸದಾ ಕಾಲಕ್ಕೂ  ರಸಾನುಭವವೇ.  ಕಲಿಪುರುಷ  ದ್ವಾಪರನಿಗೆ ವಚನವಿತ್ತಂತೆ,  ಕಲಿಮಾನವರು ಕುಬ್ಜರಾದರೂ,  ಎಲ್ಲರನ್ನೂ ಮೀರಿಸಿದ ಗಟ್ಟಿಗರೇ ಸೈ. ಶ್ಮಶಾನ ರುದ್ರದೇವನು ದ್ವಾಪರನಿಗೆ ತೋರುವ ಕಾಲಜ್ಞಾನದ ತುಣುಕು,  ರಸರೋಮಾಂಚನಗೊಳಿಸುವ ಸೆಳಕೇ ಸೈ. ಜಗದೀಶ  ಕೃಷ್ಣ ನ ನಾಟಕದಲ್ಲಿ ಎಲ್ಲರೂ ಅಭಿನಯಿಸಿ ನೇಪಥ್ಯಕ್ಕೆ ಸರಿಯುವ ಪಾತ್ರಧಾರಿಗಳೇ.  ದುರ್ಯೋಧನನು ಕೌರವ  ಕೃಷ್ಣ . ಧರ್ಮಜ   ಪಾಂಡವ  ಕೃಷ್ಣ . ಸೊಗಸಾದ ಪರಿಕಲ್ಪನೆಯ ಈ ನಾಟಕ,  ಕದನದ ಕೇಡನ್ನು ಮೊಗೆಮೊಗೆದು ತೋರುವ,  ಅಂತೆಯೇ  ಅಧ್ಯಾತ್ಮದ ಅಂತಃದರ್ಶನವನ್ನೂ ನೀಡುವ ಅತಿ ಸುಂದರ ನಾಟಕವನ್ನೋದುವ ಘಳಿಗೆಗಳಲ್ಲಿ   ನನ್ನ ಅಂತಃಕರಣ ಕಲಕಿ ಕಣ್ಣೀರಾಗಿ ಹರಿದದ್ದು ಸತ್ಯ.
ಇಂತಹ ದರ್ಶನಗಳು  ಕಾಲದೇಶಗಳನ್ನು ಮೀರಿ ಚಿಂತನಾಶೀಲ ಮನುಜರೆಲ್ಲರಿಗೂ ಯಾವುದೋ ಒಂದು ಕಾಲಘಟ್ಟದಲ್ಲಿ, ಅರಿಕೆಗೆ ಬರುತ್ತಲೇ ಇರುತ್ತವೆ.  ಆದರೆ ಅವನ್ನು ವ್ಯಕ್ತಪಡಿಸುವ  ಭೌತಿಕ ವಿಧಾನಗಳಲ್ಲಿ ಭಿನ್ನತೆ ಇರಬಹುದು.

ಇಂತಹ ಯೋಚನೆ ನನ್ನ ಮನಸ್ಸಿಗೆ ಬಂದಿದ್ದು   ನಾನು ಒಂದೇ ದಿನ ನೋಡಿದ ಎರಡು ವಿಭಿನ್ನ ನೆಲೆಯ ಆದರೆ  ಎಂತಹುದೂ ಸಾಮ್ಯತೆಯಿಂದ  ಹತ್ತಿರವಾದ ಚಿತ್ರಗಳು. ಅವೇ      ಮೆಲ್ ಗಿಬ್ಸನ್ ನ ಅಪೋಕ್ಯಾಲಿಪ್ಟೋ  ಮತ್ತು  ನಮ್ಮವರೇ ಜಿ.ವಿ. ಅಯ್ಯರ್ ಅವರ ಆದಿಶಂಕರಾಚಾರ್ಯ.

ಅಪೋಕ್ಯಾಲಿಪ್ಟೋ ಮೆಲ್ ಗಿಬ್ಸನ್ ನಿರ್ದೇಶನದ ೧೩ನೇ ಶತಮಾನದ  'ಮಾಯಾ' ನಾಗರೀಕತೆಯ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ನಡೆಯುವ ಘಟನೆಗಳ ಅಧಾರಿತ ಚಿತ್ರ. ಜೀವವುಳಿಸಿಕೊಳ್ಳಲು   ಬೇಟೆಗಾರರಿಂದ ತಪ್ಪಿಸಿಕೊಂಡು ಓಡುವ ನೀರುಕುದುರೆಯೊಂದರಿಂದ ಶುರುವಾಗುವ ಈ ಚಿತ್ರ,  ನೀರುಕುದುರೆಯ ಬೇಟೆಗಾರರೇ ಕ್ರೂರ ಮಾಯಾ ಜನಾಂಗದ ಜನರಿಂದ ಬೇಟೆಯಾಡಲ್ಪಡುವ,  ಮತ್ತು ಅವರಲ್ಲೊಬ್ಬ ಈ ನರಬಲಿಗಾರರಿಂದ ತಪ್ಪಿಸಿಕೊಳ್ಳುವಲ್ಲಿ ಮುಕ್ತಾಯವಾಗುತ್ತದೆ.

ಕಣ್ಣಮುಂದೆಯೇ ಹತ್ಯೆಗೊಳಗಾಗುವ  ತಂದೆ, ಆ ತಂದೆಯ ಹಿಂದೆಯೇ ಹೇಳಿದ್ದ  ಹಿತವಚನ  " ಧೈರ್ಯಗೆಟ್ಟರೆ  ಸೋತಂತೆ,  ಎಂದಿಗೂ  ಧೈರ್ಯಗೆಡಬೇಡ"  ಎನ್ನುವ ಮಾತು,  ನಾಯಕನಿಗೆ ಅತೀವ ಆತ್ಮವಿಶ್ವಾಸ ನೀಡುತ್ತದೆ.   ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ತನ್ನ ಗರ್ಭಿಣಿ ಹೆಂಡತಿ ಮತ್ತು ಮಗುವನ್ನು ಬಾವಿಯೊಂದರಲ್ಲಿ ಅವಿತಿಟ್ಟು,  ಆಕ್ರಮಣಕಾರರೊಂದಿಗೆ ಹೋರಾಡುವ ನಾಯಕ ಅವರಿಂದ ಬಂಧನಕ್ಕೊಳಗಾಗುತ್ತಾನೆ. ನರಬಲಿಗಾಗಿ ಎಳೆದೊಯ್ಯುವ  ನಿಮಿಷದಲ್ಲಿ    ಸೂರ್ಯಗ್ರಹಣವಾಗಿ ನಾಯಕನ ಜೀವವುಳಿಯುತ್ತದೆ.  ಆದರೆ   ಗೆದ್ದವರ ಬೇಟೆಯ ಆಟಕ್ಕೆ   ಗುರಿಯಾಗುವ  ಸೋತವರು, ಅವರಿಂದ ಹೇಗೋ ತಪ್ಪಿಸಿಕೊಂಡು ಓಡುವ ನಾಯಕ.  ಅವನ ಓಟಕ್ಕೆ ಶಕ್ತಿ ಬಂದಿರುವುದು ಭಯದಿಂದಲೋ,  ಅಥವಾ ಭಯವನ್ನು ಗೆದ್ದು, ಧೈರ್ಯಗೆಡಬಾರದೆಂಬ ತಂದೆಯ ಹಿತವಚನದಿಂದಲೋ..?  ಒಟ್ಟಿನಲ್ಲಿ ಓಡುತ್ತಾ, ಓಡುತ್ತಾ,  ಬೆನ್ನಟ್ಟಿ ಬರುವ ಕೇಡನ್ನು ತಪ್ಪಿಸಿಕೊಳ್ಳುವ ಅದಮ್ಯ ವಿಶ್ವಾಸಿ ನಾಯಕ, ತನ್ನ ತಾಯ್ನೆಲದಲ್ಲಿ ಹೆಜ್ಜೆಯೂರಿದ ಕ್ಷಣದಲ್ಲಿ   ಕೇಡಿನ ಜೊತೆ ಹೋರಾಡುವ ಮನೋಬಲ ತೋರುತ್ತಾನೆ.  ಪ್ರಕೃತಿ ಯೂ ಅವನ ಪರ ವಹಿಸಿ  ಬೆನ್ನಟ್ಟಿದ ಪಟುಭಟರೊಬ್ಬಬ್ಬರಾಗಿ  ಸಾವನ್ನಪ್ಪುತ್ತಾರೆ.   ಉಳಿದ ಕೆಲವರು ಹಿಡಿದ ಹಠ ಬಿಡದೆ ಬೆನ್ನಟ್ಟಿರಲು  ಸಮುದ್ರ ತಟ ತಲುಪುತ್ತಾರೆ.  ಅಲ್ಲಿ ಯೂರೋಪಿನ  ಭೂ ಶೋಧದ ಪಡೆಯ ಲಂಗರು ಕಾಣಿಸುತ್ತದೆ.  ಚಿಕ್ಕದ್ದನ್ನು ದೊಡ್ಡದು  ಅದನ್ನು ಅದಕ್ಕಿಂತಲೂ ದೊಡ್ಡದು ನುಂಗುವ  ಪ್ರಕೃತಿ   ಸಹಜ ಕ್ರಿಯೆಯ ಸಂಕೇತವಾಗಿ ಇದು ಕಾಣುತ್ತದೆ.

ಈ ಘಳಿಗೆಯಲ್ಲಿ ನಾಯಕ ಅಲ್ಲಿಂದ ತಪ್ಪಿಸಿಕೊಂಡು,  ಮಳೆಯಿಂದ ತುಂಬುತ್ತಿರುವ ಬಾವಿಯಲ್ಲಿ ಅಡಗಿಸಿದ್ದ ಹೆಂಡತೀ ಮಕ್ಕಳ ರಕ್ಷಣೆಗೆ ಬರುತ್ತಾನೆ. ಎದೆ ಮಟ್ಟ ತುಂಬಿದ ನೀರಿನಲ್ಲಿಯೇ  ಹೊಸ ಜೀವ ಜನನವಾಗುತ್ತದೆ.  ಅವರನ್ನು ಕರೆದುಕೊಂಡು ದೂರದ ಕಾಡಿಗೆ ಹೊಸಜೀವನದ ಅನ್ವೇಷಣೆಯಲ್ಲಿ ನಾಯಕ ಸಾಗುತಾನೆ.

ವಿಲ್  ಡ್ಯೂರಾಂಟರ " ಯಾವುದೇ ನಾಗರೀಕತೆ ಪರಕೀಯರಿಂದ ದಮನಗೊಳ್ಳುವುದಕ್ಕೆ ಮೊದಲು, ಒಳಗಿನಿಂದಲೇ  ಕೊಳೆಯುತ್ತಾ ಬಂದಿರುತ್ತದೆ"  ಎಂಬ ಘೋಷವಾಕ್ಯದೊಂದಿಗೆ ಶುರುವಾಗುವ ಈ ಚಿತ್ರ, ತಾತನೊಬ್ಬ ಹೇಳುವ ನೀತಿಕತೆಯಿಂದ,  ಬಾಲಕಿಯ  ಕಾಲಜ್ಞಾನದ ನುಡಿಗಳಿಂದಲೂ, ದಾರ್ಶನಿಕ ರೂಪ ಪಡೆದುಕೊಳ್ಳುತ್ತದೆ.

ತಾಂತ್ರಿಕವಾಗಿಯೂ  ಮೈ ನವಿರೇಳಿಸುವ ದೃಶ್ಯ  ಗಳನ್ನು  ನೀರುಕುದುರೆಯ ಬೇಟೆಯಲ್ಲಿ, ಜಲಪಾತದ ಮೇಲಿನಿಂದ ಜಿಗಿಯುವಲ್ಲಿ  ಅಥವಾ ನರಬಲಿಯ  ದೃಶ್ಯ  ದಲ್ಲಿ  ಕಾಣಬಹುದು.

ಈ ಗುಂಗಿನಿಂದ ನಾನು ಬಿಡಿಸಿಕೊಳ್ಳುವ ಮೊದಲೇ  ನಮ್ಮ ಜಿ.ವಿ. ಅಯ್ಯರ್ಅವರ ಆದಿಶಂಕರಾಚಾರ್ಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.

ಆಕ್ಷನ್ ಚಿತ್ರ ಮಾಡುವ ಮೆಲ್ ಗಿಬ್ಸನ್  ರಿಗೆ ಅಧ್ಯಾತ್ಮಿಕ ಹೊಳಹುಗಳು ಸಿಕ್ಕಂತೆ,   ತೀವ್ರ ಆಧ್ಯಾತ್ಮಿಕ ತುಡಿತದ ಆದಿಶಂಕರಾಚಾರ್ಯದ ಕೆಲವು ಕ್ಷಣಗಳು ನಿಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ದರೂ ಅಚ್ಚರಿಯಿಲ್ಲ. ಬಾಲ್ಯದಲ್ಲೇ ತಂದೆಯ ಸಾವನ್ನು ಕಂಡ ಶಂಕರನಿಗೆ  ಮೃತ್ಯು  ಮತ್ತು ವಿವೇಕಗಳು ಜೊತೆಯಾಗುತ್ತವೆ. ಶಂಕರನ ಕಡೆ ಘಳಿಗೆಯವರೆಗೂ  ಜೊತೆಗಿರುವ  ಇವರಲ್ಲಿ, ಶಂಕರರು  ಕಾಯಿಲೆ ಬಿದ್ದಾಗ ಮೃತ್ಯು ವೇ ಶುಶ್ರೂಷೆಗೆ ನಿಲ್ಲುವುದು ಶಂಕರನಿಗೇ ನಗು ತರಿಸುತ್ತದೆ.  ದೂರ ಸರಿ ಎನಿಸಿಕೊಂಡ ಚಂಡಾಲನಿಂದ  ದೂರ ಸರಿಯಬೇಕಾದದ್ದು ಶರೀರವೋ , ಆತ್ಮವೋ  ಎನ್ನುವ ಪ್ರಶ್ನೆ  ಎದುರಾಗುತ್ತದೆ.  ಶಂಕರನಿಗೆ ಇದರಿಂದ,  ಆತ್ಮದ  ಶಾಶ್ವತತೆಯ ಅನುಭವದ ಜೊತೆಗೆ ಅದೇ ಬ್ರಹ್ಮವಾಗುವಂತಹುದು ಎನ್ನುವ ಅರಿವಾಗುತ್ತದೆ. ಮಂಡನ ಮಿಶ್ರರೊಂದಿಗಿನ ಸಂವಾದ, ಛಾಂದೋಗ್ಯಪನಿಷತ್ತಿನ ಪರೀಕ್ಷೆಗಳಲ್ಲಿ   ಅಧ್ಯಾತ್ಮಿಕ ಸೂಕ್ಷ್ಮಗಳೂ,  ಆಚರಣೆಗಿಂತಲೂ ಅವಿನಾಭಾವವೇ ಮುಖ್ಯವೆಂಬ ದಾರಿಯೂ ಕಾಣುತ್ತದೆ.

ಈ ಎರಡೂ ಚಿತ್ರಗಳನ್ನು ನಾನು ಒಟ್ಟಾರೆಯಾಗಿ  ತೂಗಿ ನೋಡಲು ಕಾರಣಗಳಿವೆ.
######


ಮೇಲಿನವರೆಗೂ  ಬರೆದು  ನಿಂತ  ಲೇಖನವನ್ನು ಸುಮಾರು ಎರಡು ವರ್ಷಗಳ ನಂತರ ಮುಂದುವರೆಸಲು ಕುಳಿತಾಗ ನಾನು ಬರೆಯಬೇಕಿದ್ದುದೇನೆಂಬುದೇ ಮರೆತಿದೆ.  ಆದರೆ   ಈ ವಿಚಾರಕ್ಕೆ ನೆನಪಿನಲ್ಲಿರುವಂತೆ ಕೆಳಗಿನ ಮಾತುಗಳನ್ನು ಹೇಳಬಲ್ಲೆ.
ಎರಡೂ ಚಿತ್ರಗಳೂ   ಜನರಾಡದ ಭಾಷೆಯಲ್ಲಿ ಚಿತ್ರಿತವಾಗಿವೆ,  ಒಂದರಲ್ಲಿ  ಅದ್ಧೂರಿತನವಿದ್ದರೆ, ಮತ್ತೊಂದು ಸರಳತೆಯಿದೆ.  ಎರಡರಲ್ಲೂ  ಜೀವ ಹುಟ್ಟುವ  ಚಿತ್ರಣವಿದೆ. ಬೆನ್ನಟ್ಟುವ   ಮೃತ್ಯು ವಿದೆ.    ಮತ್ತು    ಎರಡೂ ಚಿತ್ರಗಳು ಕತೆಯಾಗಿ ನಮ್ಮೊಡನೆ ಸಂವಾದ ಮಾಡುತ್ತವೆ. 
 

Average: 3.5 (2 votes)
805 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ksraghavendranavada's picture
30
Mar
2011
6:55

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಅಪೋಕ್ಯಾಲಿಪ್ಪೋ ಬಗ್ಗೆ ಗೊತ್ತಿರಲಿಲ್ಲ. ಆದಿ ಶ೦ಕರಾಚಾರ್ಯ ನೋಡಿದ್ದೇನೆ.
ವಿಮರ್ಶೆ ಚೆನ್ನಾಗಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Shreshta's picture
31
Mar
2011
3:05

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ನಿಮ್ಮ ಲೇಖನ ಓದಿದಾಗ, ಹಿ೦ದೆ ಓದಿದ, ಕುವೆ೦ಪುರವರ, ಸಾಹಿತ್ಯದ ಜೊತೆಗೆ, ಜಿ.ವಿ. ಅಯ್ಯರ್ರವರ, ಚಲನಚಿತ್ರಗಳ ಅನುಭವವು ಮತ್ತೊಮ್ಮೆ ಆಯಿತು. ಆಪೋಕ್ಯಾಲಿಪ್ಟೊ ಚಿತ್ರವನ್ನು ಚೆನ್ನಾಗಿ ವಿಮರ್ಶಿಸಿದ್ದೀರಿ. ಧನ್ಯವಾದಗಳು.
ನಿಮ್ಮವ - ಅನ೦ತ.

modmani's picture
31
Mar
2011
11:28

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮೆಚ್ಚಿದ ನಾವಡರಿಗೂ ಅನಂತರಿಗೂ ನನ್ನಿ.
ಈ ದಿನ ಟೈಮ್ಸ್ ನೌ ಚಾನೆಲ್ ನಲ್ಲಿ ರಾತ್ರಿ ಒಂಬತ್ತು ಘಂಟೆಗೆ ಅಪೋಕ್ಯಾಲಿಪ್ಟೋ ಚಿತ್ರ ಪ್ರಸಾರವಿದೆ.

modmani's picture
31
Mar
2011
11:41

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಕ್ಷಮಿಸಿ ಅದು ಮೂವೀಸ್ ನೌ ಚಾನೆಲ್.

shreekant.mishrikoti's picture
17
Apr
2011
9:48

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಇವತ್ತು ರಾತ್ರಿಯೂ ಹನ್ನೊಂದೂ ಹದಿನೈದಕ್ಕೆ ಮತ್ತೆ ಅದೇ ಚಾನೆಲ್ ನಲ್ಲಿ ಇದೆ. ಆಸಕ್ತರು ನೋಡಬಹುದು.

santhosh_87's picture
31
Mar
2011
11:52

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಅಪೋಕೆಲಿಪ್ತೋ ಸುಮಾರು ಸಲ ನೋಡಿದ್ದೇನೆ. ಆದಿ ಶಂಕರಾಚಾರ್ಯ ನೋಡಿಲ್ಲ. ಅಪೋಕೆಲಿಪ್ತೋ ಚಿತ್ರದಲ್ಲಿ ತೋರಿಸಲಾಗಿರುವ ಹಿಂಸೆಗೆ ತೀವ್ರ ಪ್ರತಿಭಟನೆ ಬಂದಿತ್ತು. ಅದರಲ್ಲಿ ಕೊಂದಿರುವ ಪ್ರಾಣಿಗಳೆಲ್ಲಾ ನಿಜವಾಗಿ ಹತ್ಯೆಗೀಡಾಗಿವೆ ಎನ್ನಲಾಗಿದೆ.

Aravind M.S's picture
01
Apr
2011
3:54

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮೊದ್ಮಣಿಯವರಿಗೆ ನಮಸ್ಕಾರ,

ಅಪೊಕ್ಯಾಲಿಪ್ಟೋ ಒಂದು ಮೈ ನವಿರೇಳಿಸುವ ಚಿತ್ರ. ನಿಮ್ಮ ವ್ಯಾಖ್ಯಾನ ಚೆನ್ನಾಗಿ ಬಂದಿದೆ, ಧನ್ಯವಾದಗಳು.

- ಅರವಿಂದ

Sunil Jayaprakash's picture
06
Apr
2011
8:18

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಅಪೋಕಲಿಪ್ಟೋ ತುಂಬಾ ಬ್ರೂಟಲ್, ಹೃದಯವನ್ನು ಕಿತ್ತು ಬೆಂಕಿಗೆ ಹಾಕುವ ದೃಶ್ಯವಂತೂ ಅಬ್ಬಬ್ಬಾ..ನೋ ಕಮೆಂಟ್ಸ್, ನಿಮ್ಮ ಕಥಾನಿರೂಪಣೆ ತುಂಬಾ ಇಷ್ಟವಾಯಿತು.

drmulgund's picture
07
Apr
2011
9:50

ಉ: ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಶಂಕರಾಚಾರ್ಯ ಚಿತ್ರವನ್ನು ಹಲವು ಬಾರಿ ನೋಡಿದ್ದೆ. ನನಗೆ ಬಲು ಮೆಚ್ಚಿಗೆಯಾಗುವ ಚಿತ್ರಗಳಲ್ಲೊಂದು.
ಆದರೆ, ಅಪೊಕ್ಯಾಲಿಪ್ಟೊ ನೋಡಿರಲಿಲ್ಲ!! ಕುತೂಹಲ ಹುಟ್ಟಿ ನೋಡಿದೆ.

ಎರಡೂ ಅದ್ಭುತ ಚಿತ್ರಗಳು!

ಅಪೊಕ್ಯಾಲಿಪ್ಟೊ - ಸಾವು, ಅದರ ಕುರಿತ ಭಯ, ತನ್ನವರಿಂದ ದೂರವಾಗುವ/ಕಳೆದುಕೊಳ್ಳುವ ದಿಗಿಲು, ಮಾನವನ ಕ್ರೂರತೆ,ಅಜ್ಞಾನ ಮತ್ತು ಅದು ಮೂಡಿಸುವ ಅಂಧಕಾರ, ಅಸಹಾಯಕತೆ; ಮತ್ತು ಕೆಚ್ಚು-ಪ್ರೇಮ-ಸಾಹಸ; - ಇವುಗಳನ್ನು ಅತಿ ತೀವ್ರವಾಗಿ, ನೇರವಾಗಿ ತೆರೆದಿಡುತ್ತದೆ.

ಶಂಕರಾಚಾರ್ಯ - ಸಾವು - ಅದರ ವಿಮರ್ಶೆಯಿದೆ, ಕುತೂಹಲವಿದೆ(’ಯಮ’ನ ಸಾವು), ಭಯವಿಲ್ಲ. ಸಾವನ್ನು ಜೀವನದಷ್ಟೇ ಸಹಜವಾಗಿ ಒಪ್ಪಿಕೊಳ್ಳುವ ಪಾತ್ರಗಳಿವೆ (ಶಿವಗುರು, ಕುಮಾರಿಲ ಭಟ್ಟ). ಶಂಕರರಿಗಂತೂ ಅದು ಒಡನಾಡಿ!
ಸಾವಿನ ನಿಶ್ಚಿತತೆಯನ್ನು ಒಪ್ಪಿದರೂ ಜೀವಸೆಲೆ ಬತ್ತುವುದಿಲ್ಲ - ತಾಯಿಯ ಸಾವು ಕಣ್ಣೀರು ತರುತ್ತದೆ, ಶಂಕರರಿಗೂ! ಶಿಷ್ಯರಲ್ಲಿ ತಾನು ಗುರುವಿಗೆ ಪ್ರಿಯನಾಗಬೇಕೆಂಬ ಹಂಬಲವಿದೆ, ಮನಪರಿವರ್ತನೆಯಲ್ಲಿ ನಂಬಿಕೆಯಿದೆ, ದೈಹಿಕ ಶಿಕ್ಷೆಯಲ್ಲಲ್ಲ; ಹೊಸ / ಹೊರ ವಿಚಾರಗಳಿಂದ ಶಿಥಿಲವಾಗುತ್ತಿರುವ ತನ್ನ ಸಂಸ್ಕೃತಿಯ ಬಗ್ಗೆ ನೋವು(ಶಂಕರಕರ ಮಾಮ), ಅಸಹಾಯಕತೆ(ಗೋವಿಂದ ಭಗವತ್ಪಾದರು), ಹಾಗೇ ಸಾಹಸ (ಶ್ರೀ ಶಂಕರರು)ಗಳಿವೆ. ತ್ಯಾಗದ ಸುಂದರ ನಿದರ್ಶನಗಳಿವೆ.

ನಿಜ ಎರಡರಲ್ಲೂ - ಸಾವು-ಹುಟ್ಟು, ಸಂಸ್ಕೃತಿಗಳ ಏರಿಳಿತ, ಬಲಿ-ಹಿಂಸೆ, ಕ್ರೌರ್ಯ-ಪ್ರೇಮ, ಹತಾಶೆ-ಸಾಹಸಗಳು ಮೂಡಿಬರುತ್ತವೆ.
ಅಲ್ಲಿ ಎಲ್ಲ ನೇರ; ಇಲ್ಲಿ ಎಲ್ಲ ಪ್ರತಿಮೆ/ಉಪಮೆಗಳ ಮೂಲಕ!
ಅಲ್ಲಿ ದೈಹಿಕ; ಇಲ್ಲಿ ಮಾನಸಿಕ!
ಅಲ್ಲಿ ಭೌತಿಕ, ಇಲ್ಲಿ ಅಭೌತಿಕ!

ಎರಡೂ ಮತ್ತೆ ನೋಡಬೇಕೆಸುವ/ ವಿಚಾರಕ್ಕೆಳೆಯುವ ಚಿತ್ರಗಳು.

ಪರಿಚಯಿಸಿದ್ದಾಗಿ ಧನ್ಯವಾದಗಳು!!