ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಮಹೇಶ ಪ್ರಸಾದ ನೀರ್ಕಜೆ
ಪರಿಚಯ
ನಾನು ಮಂಗಳೂರಿನವನು! ಇಷ್ಟು ಪರಿಚಯ ಸಾಕಲ್ಲ?
ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ವೈಜ್ಙಾನಿಕ ಮೂಲಭೂತವಾದ ಎಂದರೆ ಏನು? ವಿಜ್ಙಾನವನ್ನು ಅಕ್ಷರಶಹ ನಂಬುವವರು, ಮೇಲಾಗಿ ಆ ನಂಬಿಕೆಯ ಆಧಾರದ ಮೇಲೆ ಇತರ ನಂಬುಗೆಗಳನ್ನು ತಿರಸ್ಕರಿಸುವವರು, ಅದಕ್ಕಿಂತಲೂ ಮೇಲಾಗಿ ಇತರ ವಿಚಾರಗಳನ್ನು ನಂಬಿಕೆಗಳನ್ನು ಥಿಯರಿಗಳನ್ನು ridicule ಮಾಡುವವರು. ಅಂತಹವರು ಎಲ್ಲಿದ್ದಾರೆ? ಎಲ್ಲೆಲ್ಲೂ ಇದ್ದಾರೆ. ಕೆಲವರು ಅರಿಯದೆ ಮೂಲಭೂತವಾದಿಗಳಾದರೆ, ಇನ್ನು ಕೆಲವರು ಮೂಲಭೂತವಾದವನ್ನೇ ವಿಜ್ಙಾನ ಎಂದು ತಿಳಿಯುತ್ತಾರೆ. ಇದೇ ವಿಚಾರಗಳು ಧರ್ಮ/ಮತಗಳಿಗೂ ಅನ್ವಯಿಸುತ್ತದೆ, ಆದರೆ ಅದು ಈ ಬರಹದ ವ್ಯಾಪ್ತಿಯಲ್ಲಿಲ್ಲ.
ಈಗ ತಮಗರಿವಿಲ್ಲದೆಯೇ ಜನರು ಮೂಲಭೂತವಾದವನ್ನು ಹುಟ್ಠಾಕುತ್ತಾರೆ ನೋಡೋಣ. ಈ ಉದಾಹರಣೆ ವಿಜ್ಙಾನಕ್ಕೆ ಸಂಬಂಧಿಸಿದ್ದು. ನಾವೆಲ್ಲರೂ ನಮ್ಮ ವಿಜ್ಙಾನದ ತರಗತಿಗಳಲ್ಲಿ ಕಲಿತಂತೆ ಪರಮಾಣುವೊಂದರಲ್ಲಿ ಪ್ರೋಟಾನಿನ ಸುತ್ತ ಇಲೆಕ್ಟ್ರಾನುಗಳು 'ಸುತ್ತುತ್ತಿರುತ್ತವೆ'. ಈ ವಿಶಯವನ್ನು ಯಾವನೇ ವಿಜ್ಙಾನದ ವಿದ್ಯಾರ್ಥಿಯಲ್ಲಿ ಕೇಳಿದರೂ ಹೇಳುತ್ತಾನೆ. ಅಲ್ಪ ಸ್ವಲ್ಪ ವಿಜ್ಙಾನ ಕಲಿತವರೂ ಇದರಲ್ಲಿ ಏನೂ ತಪ್ಪು ಕಾಣಲಾರರು.ಆದರೆ ಇದು ನಿಜ ಅರ್ಥದಲ್ಲಿ ಎಷ್ಟು ಸರಿ? ಇಲೆಕ್ಟ್ರಾನುಗಳು ನಿಜವಾಗಿಯೂ ಪ್ರೋಟಾನಿನ ಸುತ್ತ ಸುತ್ತುತ್ತವೆಯೇ? ಇದಕ್ಕೆ ಉತ್ತರ ಹೌದು ಮತ್ತು ಅಲ್ಲ. ಸುತ್ತುತ್ತವೆ ಅನ್ನುವುದು ಕ್ವಾಂಟಮ್ ಫಿಸಿಕ್ಸ್ ನ perceived/translated statement. ಆದರೆ ಕ್ವಾಂಟಮ್ ಫಿಸಿಕ್ಸ್ ಅನ್ನು ಆಳವಾಗಿ ಅಧ್ಯಯನ ಮಾಡಿದವರಿಗೆ ಮಾತ್ರ ಈ 'ಸುತ್ತುವಿಕೆಯ' ನಿಜ ಅರ್ಥ ತಿಳಿದಿರುತ್ತದೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಓದಿ. ಇದು ಸರಳವಾಗಿ, ಸುಂದರವಾಗಿ ವಿವರಿಸುತ್ತದೆ.
http://www.chemguide.co.uk/atoms/properties/orbitsorbitals.html#top
ಈಗ ಹೇಳಿ, ಇಲೆಕ್ಟ್ರಾನು ಪ್ರೋಟಾನಿನ ಸುತ್ತ ಸುತ್ತುತ್ತದೆ ಎನ್ನುವುದು ಅರ್ಧ ಸತ್ಯವಲ್ಲವೇ? ಇದುವೇ ಮೂಲಭೂತವಾದದ ಪ್ರಾರಂಭವಲ್ಲವೇ? ಇದು ಮುಂದುವರೆದು "ಇಲೆಕ್ಟ್ರಾನು ಪ್ರೊಟಾನಿನ ಸುತ್ತ ಸುತ್ತುವುದಿಲ್ಲ" ಎಂದು ಹೇಳುವವರನ್ನು ಅವೈಜ್ಙಾನಿಕರೆಂದು, ಮೂಢರೆಂದು ಕರೆಯಬಹುದಲ್ಲವೇ?
ಇದು ತಮಗರಿವಿಲ್ಲದೆಯೇ ಇತರರಿಗೆ ಪಸರಿಸುವ ಮೂಲಭೂತವಾದ. ಇದು ಇನ್ನೂ ಶೈಶಾವಸ್ಥೆಯಲ್ಲಿದೆ ಹಾಗೂ ಇವರಿಗೆ ಯಾರಿಗೂ ಹಾನಿಮಾಡುವ ಉದ್ದೇಶವಿರುದಿಲ್ಲ. ಇನ್ನು ದುರುದ್ದೇಶದ, ಅಹಂಕಾರದ ಮೂಲಭೂತವಾದವೂ ಇದೆ. ಅದು ತನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳು ಉತ್ತರಿಸಲ್ಪಡುವ ಮೊದಲೇ ಇನ್ನೊಬ್ಬರ ಮನಸ್ಸಿನಲ್ಲಿರುವ ನಂಬಿಕೆಗಳನ್ನು (ನಂಬಿಕೆ ಎಂದರೆ ಏನು? ಯಾವುದೋ ಒಂದು ಪ್ರಶ್ನೆಗೆ ಅವರು ಕಂಡುಕೊಂಡ ಉತ್ತರ. ಅದು ಇತರರಿಗೆ ಸರಿ ಇರಬಹುದು, ಇಲ್ಲದೆಯೂ ಇರಬಹುದು, ಆದರೆ ಅವರಿಗೆ ಅದು ಸರಿ) ridicule ಮಾಡುವುದು, ಅವು 'ಕಾಲ್ಪನಿಕ' ಎಂದು sweeping statement ಕೊಡುವುದು, ಆ ನಂಬಿಕೆಗಳಿಗೆ proof ಕೇಳುವುದು (ಅದೂ ತನ್ನದೇ ಉತ್ತರ/ನಂಬಿಕೆಗಳಿಗೆ proof ಇಲ್ಲದಿರುವಾಗ) ಇತ್ಯಾದಿ. ಇಂತಹವರು ನಮ್ಮ ಸುತ್ತ ಇದ್ದಾರೆ. ಅವರಿಗೆ ಶಾಸ್ತ್ರಗಳು, ಧರ್ಮಗ್ರಂಥಗಳೆಂದರೆ ಅಲರ್ಜಿ, ಅಷ್ಟು ಮಾತ್ರವಲ್ಲ, ಅವುಗಳು ಚರ್ಚೆಗೂ ಯೋಗ್ಯವಲ್ಲ, ಅದನ್ನು ನಂಬುವವರಿಗೆ ವೈಜ್ಙಾನಿಕ ವಿರೋಧಿಗಳು, ಮೂಢರು ಎಂಬ ಪಟ್ಟ ಕಟ್ಟಿಬಿಡುತ್ತಾರೆ. ಇಪ್ಪತ್ತೊಂದನೇ ಶತಮಾನದಲ್ಲಿ ಆವಿಶ್ಕರಿಸಲ್ಪಟ್ಟ ಕ್ವಾಂಟಮ್ ಫಿಸಿಕ್ಸ್ ನಲ್ಲೇ ಮೂಢನಂಬಿಕೆಗಳು ಶುರುವಾಗಿ ನಿಜವಾದ ಜ್ಙಾನ ಕೆಲವೇ ಕೆಲವರಲ್ಲಿ ಉಳಿದುಬಿಡಬಹುದಾದರೆ, ಸಾವಿರಾರು ವರ್ಷಗಳ ಹಿಂದೆ ಇದ್ದ ಜ್ಙಾನ ಪುಸ್ತಕ ರೂಪದಲ್ಲಿ ಬಂದಾಗ ಇದು ಶುಧ್ಧವಾಗಿ ಹೇಗೆ ಉಳಿಯುತ್ತದೆ? ಹಾಗಂದ ಮಾತ್ರಕ್ಕೆ ಅವುಗಳಲ್ಲಿ ಏನೂ ಜ್ಙಾನವಿಲ್ಲ ಎಂದರೆ ಹೇಗೆ? ಅವುಗಳನ್ನು ಅಕ್ಷರಷಹ ನಂಬಬಾರದು ನಿಜ, ಆದರೆ ಸಾರಾಸಗಟಾಗಿ ಅವುಗಳ ಬಗ್ಗೆ ತಿರಸ್ಕಾರ ಏಕೆ? ಇದೇ ರೀತಿ ಮುಂದೊಂದು ದಿನ ಕ್ವಾಂಟಮ್ ಫಿಸಿಕ್ಸ್ ಪುಸ್ತಕವನ್ನೂ ತಿರಸ್ಕರಿಸಬಹುದಲ್ಲವೇ?
ನನ್ನ ಅಭಿಪ್ರಾಯವೇನೆಂದರೆ ನಾವು ವಿಜ್ಙಾನವಾದಿಗಳಾಗಬಾರದು, ಶಾಸ್ತ್ರವಾದಿಗಳಾಗಬಾರದು, ಅಸಲಿಯಾಗಿ ಯಾವ ವಾದಿಯೂ ಆಗಬಾರದು. ಜ್ಙಾನ, ಒಳ್ಳೆಯ ವಿಶಯಗಳು ಎಲ್ಲಿದ್ದರೂ (ವಿಜ್ಙಾನದಲ್ಲಿ ಅಥವಾ ಧರ್ಮಗ್ರಂಥಗಳಲ್ಲಿ, ತಿಳಿದವರಲ್ಲಿ, ಹಿರಿಯರಲ್ಲಿ, ಕಿರಿಯರಲ್ಲಿ ಎಲ್ಲಿದ್ದರೂ) ಅವನ್ನು ತೆಗೆದುಕೊಳ್ಳುವ ಮುಕ್ತ ಮನಸ್ಸು ನಮ್ಮದಾಗಬೇಕು. ಅಲ್ಲವೇ?
ನಿಮ್ಮ ಅಭಿಪ್ರಾಯ ಏನು?
- mpneerkaje's blog
- Login or register to post comments
- 561 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ನಿಜ ಮಹೇಶ್.. ಒಳ್ಳೆಯ ವಿಷಯಗಳು ಎಲ್ಲಿದ್ದರೂ ಅದನ್ನು ತೆಗೆದುಕೊಳ್ಳುವ ಮುಕ್ತ ಮನಸ್ಸು ನಮ್ಮದಾಗಬೇಕು
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಮಹೇಶ್, ವಾಸ್ತವಕ್ಕೆ ತೀರಾ ಹತ್ತಿರವಾದ ಬರಹ. ತಮ್ಮದೇ ಸರಿಯೆಂದು ವಿತಂಡವಾದ ಮಾಡುವವರು ಇಂದು ಎಲ್ಲೆಲ್ಲೂ ತುಂಬಿದ್ದಾರೆ. ಯಾವುದು ಸರಿಯೋ ಅದನ್ನು ಸರಿ ಎಂದು ಒಪ್ಪಿಕೊಂಡು, ಎಲ್ಲಿ ಒಳ್ಳೆಯದಿದೆಯೋ ಅದನ್ನು ಹೆಕ್ಕಿಕೊಂಡರೆ ಬಾಳು ಸುಂದರ. ಆದರೆ ದುರ್ದೈವವಶಾತ್ ವಿದ್ಯಾವಂತ ಸಮುದಾಯದಲ್ಲಿಯೇ ಅದೆಷ್ಟೋ ಜನ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಸಮಾಜವನ್ನು ಅಹರ್ನಿಶಿ ತಪ್ಪುದಾರಿಗೆಳೆಯಲು ಯತ್ನಿಸುತ್ತಿರುತ್ತಾರೆ.
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
<<, ಒಳ್ಳೆಯ ವಿಶಯಗಳು ಎಲ್ಲಿದ್ದರೂ (ವಿಜ್ಙಾನದಲ್ಲಿ ಅಥವಾ ಧರ್ಮಗ್ರಂಥಗಳಲ್ಲಿ, ತಿಳಿದವರಲ್ಲಿ, ಹಿರಿಯರಲ್ಲಿ, ಕಿರಿಯರಲ್ಲಿ ಎಲ್ಲಿದ್ದರೂ) ಅವನ್ನು ತೆಗೆದುಕೊಳ್ಳುವ ಮುಕ್ತ ಮನಸ್ಸು ನಮ್ಮದಾಗಬೇಕು. ಅಲ್ಲವೇ?>>
ನಿಜ ತುಂಬಾ ಚೆನ್ನಾಗಿ ವಿವರಿಸಿದ್ದಿರ ಧನ್ಯವಾದಗಳು .
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
//ಈಗ ಹೇಳಿ, ಇಲೆಕ್ಟ್ರಾನು ಪ್ರೋಟಾನಿನ ಸುತ್ತ ಸುತ್ತುತ್ತದೆ ಎನ್ನುವುದು ಅರ್ಧ ಸತ್ಯವಲ್ಲವೇ?
ಅಲ್ಲ್. ಪೂರ್ತಿ ಸತ್ಯ. ಆದರೆ ಅದರ ಪಥವನ್ನು ನಿಖರವಾಗಿ ನಿರ್ಧರಿಸುವುದು ಸಾಧ್ಯವಿಲ್ಲ. ಎನ್ನುತ್ತದೆ ಹೈಸನ್ ಬರ್ಗರ "ಅನಿಶ್ಚಿತತಾ ಸಿದ್ಧಾಂತ"
// ಇದುವೇ ಮೂಲಭೂತವಾದದ ಪ್ರಾರಂಭವಲ್ಲವೇ? ಇದು ಮುಂದುವರೆದು "ಇಲೆಕ್ಟ್ರಾನು ಪ್ರೊಟಾನಿನ ಸುತ್ತ ಸುತ್ತುವುದಿಲ್ಲ" ಎಂದು ಹೇಳುವವರನ್ನು ಅವೈಜ್ಙಾನಿಕರೆಂದು, ಮೂಢರೆಂದು ಕರೆಯಬಹುದಲ್ಲವೇ?
ಈಗಲೂ ಭೂಮಿ ಚಪ್ಪಟೆಯಾಗಿದೆ ಎಂದು ವಾದಿಸುವರ ಬಗ್ಗೆ ಏನು ಹೇಳುತ್ತೀರಿ..?
ಅಷ್ಟಕ್ಕೂ ಎಲೆಕ್ತ್ರಾನುಗಳು ಪ್ರೋಟಾನಿನ ಸುತ್ತ ಸುತ್ತುತ್ತಿಲ್ಲ. ಬದಲಿಗೆ ಪ್ರೋಟಾನೇ ಎಲೆಕ್ಟ್ರಾನುಗಳ ಸುತ್ತಾ ಸುತ್ತುತ್ತಾ ಇದೆ ಎಂದರೆ ಏನಾಗುತ್ತದೆ? ಏನೂ ಆಗುವುದಿಲ್ಲ. ಅವನ್ನು ಪ್ರಮಾಣೀಕರಿಸುವ ಲೆಕ್ಕಾಚಾರ ಜಟಿಲವಾಗುತ್ತದೆ ಅಷ್ಟೆ.
ತಿಳುವಳಿಕೆ ಎಲ್ಲ್ಲಿಂದ ಬಂದರೂ ಅದು ಸಾದುವೇ.. ಎನ್ನುವ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅದಕ್ಕೆ ವಿಜ್ಞಾನದ ಹೊದಿಕೆ ಹೊದಿಸಬೇಕಿಲ್ಲ್. ತನ್ನದೇ ಸಿದ್ದಾಂತ ಸರಿಯಲ್ಲವೆಂದು ಒಪ್ಪಿಕೊಳ್ಳಲಿಲ್ಲವೇ ಸ್ಟೀಫನ್ ಹಾಕಿಂಗ್..?
--
ಮೊದ್ಮಣಿ
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
<< ಅಲ್ಲ್. ಪೂರ್ತಿ ಸತ್ಯ. ಆದರೆ ಅದರ ಪಥವನ್ನು ನಿಖರವಾಗಿ ನಿರ್ಧರಿಸುವುದು ಸಾಧ್ಯವಿಲ್ಲ. ಎನ್ನುತ್ತದೆ ಹೈಸನ್ ಬರ್ಗರ "ಅನಿಶ್ಚಿತತಾ ಸಿದ್ಧಾಂತ" >>
ಅಲ್ಲ. ಅದನ್ನು ನಿರ್ಧರಿಸುವುದು ಸಾಧ್ಯವಿಲ್ಲ ಎಂದು ಮಾತ್ರವಲ್ಲ. ಅಸಲು ಎನರ್ಜಿ ಲೆವೆಲ್ ಗಳ ಬಗ್ಗೆ ಮತ್ತು ಸ್ಪಿನ್ ಗಳ ಬಗ್ಗೆ ಹೇಳುತ್ತದೆಯೇ ಹೊರತು ಅದು ಸುತ್ತುತ್ತಿರುತ್ತದೆಂದಲ್ಲ. ಈ ಸುತ್ತುವ ಕಥೆಗಳು ಕೇವಲ ಅರ್ಥೈಸಿಕೊಂಬುವವರಿಗೆ ಸುಲಭವಾಗಲಿ ಎಂದು ಚಿತ್ರಿಸಲಾಗುತ್ತದೆ ಅಷ್ಟೆ. ಎಲೆಕ್ಟ್ರಾನ್ ಗೆ ಆಂಗುಲರ್ ಮೊಮೆಂಟುಮ್ ಇರುವುದು ಸತ್ಯ ಆದರೆ ಅದು ಕ್ಲಾಸಿಕಲ್ ಆಂಗುಲರ್ ಮೊಮೆಂಟಮ್ ಅಲ್ಲ.
<< ಈಗಲೂ ಭೂಮಿ ಚಪ್ಪಟೆಯಾಗಿದೆ ಎಂದು ವಾದಿಸುವರ ಬಗ್ಗೆ ಏನು ಹೇಳುತ್ತೀರಿ..? >>
ಏನೂ ಹೇಳುವುದಿಲ್ಲ, ಅವರ ವಾದ ಸರಿಯಿಲ್ಲ ನನ್ನ ಪ್ರಕಾರ ಅಷ್ಟೆ.
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
//ಅಸಲು ಎನರ್ಜಿ ಲೆವೆಲ್ ಗಳ ಬಗ್ಗೆ ಮತ್ತು ಸ್ಪಿನ್ ಗಳ ಬಗ್ಗೆ ಹೇಳುತ್ತದೆಯೇ ಹೊರತು ಅದು ಸುತ್ತುತ್ತಿರುತ್ತದೆಂದಲ್ಲ
ಅನಿಶ್ಚಿತತಾ ಸಿದ್ದಾಂತದಂತೆ, ಎಲೆಕ್ಟ್ರಾನುಗಳು ಒಂದು ಕ್ಷಣದಲ್ಲಿ ಇರಬಹುದಾದ ಜಾಗವನ್ನಾಗಲೀ ಮುಂದಿನ ಕ್ಷಣದಲ್ಲಿ ಇರಬಹುದಾದ ಜಾಗವನ್ನಾಗಲೀ ನಿಖರವಾಗಿ ನಿಷ್ಕರ್ಶೆ ಮಾಡಲು ಸಾಧ್ಯವಿಲ್ಲ. ಆದರೆ ಜಾಗ ಬದಲಾಯಿಸುವುದು ಸತ್ಯ, ಇದನ್ನು ನಾವು ಸುತ್ತುವಿಕೆ ಎನ್ನಬಹುದೇ ಎನ್ನುವುದು ಪ್ರಶ್ನೆ? ಇಲೆಕ್ಟ್ರಾನುಗಳು ಒಂದು ಸ್ಥಳದಲ್ಲಿ ಪ್ರತ್ಯಕ್ಷವಾಗಿ ಮಾಯವಾಗಿ ಮತ್ತೊಂದು ಸ್ಥಳದಲ್ಲಿ ಪ್ರತ್ಯಕ್ಷವಾಗುವಂತಹ ಪ್ರಕ್ರಿಯೆ ಸಾಧ್ಯವಿಲ್ಲ್. ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ, ನಮ್ಮ 'ಊಹೆಗೆ ನಿಲುಕದ' ರೀತಿಯಲ್ಲಿ ಚಲಿಸುತ್ತವೆ. ಮತ್ತು ಹಾಗೆ ಚಲಿಸುವಾಗ most likely ಆರ್ಬಿಟಲ್ ಎಂದು ಗುರುತಿಸಲಾಗಿರುವ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸರಿ.. ಇಲ್ಲಿರುವ ನಮ್ಮ ಊಹೆಗೆ ನಿಲುಕದ ಚಲನೆಯನ್ನು ಸುತ್ತುವಿಕೆ ಎಂದರೆ ಹೇಗೆ ತಪ್ಪಾದೀತು..?
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಮಹೇಶ..
ನೀವು ಹೇಳಿದ್ದು ಸರಿ..ಉತ್ತಮ ವಿಚಾರಗಳು ಎಲ್ಲ ಕಡೆಯಿಂದ ಹರಿದು ಬರಲಿ ಮತ್ತು ಪೂರ್ವಾಗ್ರಹಪೀಡಿತರಾಗದೆ ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಇರಲಿ.
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಮಹೇಶ್,
ಒಳ್ಳೇ ಲೇಖನ
ಅತಿ ಆದ್ರೆ, ಅಮೃತವೂ ವಿಷ ಅಂತೆ.
ಕರಾವಳಿಯ ಕೃಷಿ ಕುಟುಂಬದ ನಾವು, ಅಡುಗೆಯಿಂದ ಹಿಡಿದು ಅಭ್ಯಂಜನದ ವರೆಗೆ ಎಲ್ಲೆಲ್ಲಿ ಎಣ್ಣೆ ಉಪಯೋಗಿಸಬಹುದಿತ್ತೋ, ಅಲ್ಲೆಲ್ಲ ತೆಂಗಿನೆಣ್ಣೆ ಉಪಯೋಗಿಸುತ್ತಿದ್ದೆವು.
ಆಗೊಂದು, ಸಂಶೋಧನೆ, ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಪ್ರಮಾಣ ಜಾಸ್ತಿ, ಇದು ಆರೋಗ್ಯಕ್ಕೆ ಬಹಳ ಹಾನಿಕಾರಕ ಎಂದು ನಿರೂಪಿಸಿತು. ಇದರಿಂದ ನಮ್ಮ ಮನೆಯಲ್ಲಿ ತಲೆ ಕೆಡಿಸಿಕೊಳ್ಳದಿದ್ದರೂ, ಊರಿನ ಬಹಳ ಮಂದಿ ಚಿಂತಿತರಾದರು.
ಕೊನೆಯಲ್ಲಿ ಗೊತ್ತಾಯ್ತು ಇದೊಂದು ಅಂತರಾಷ್ಟ್ರೀಯ ಮಟ್ಟದ ಮೋಸ ಅಂತ.
ಅದಕ್ಕೆ, ಯಾರು ಏನೇ ಹೇಳಲಿ, ನಮ್ಮ ಸ್ವಂತ ಬುದ್ದಿ ಉಪಯೋಗಿಸಬೇಕು :)
ಹಾಗೆಯೇ ಈ ಕೊಂಡಿ ನೋಡಿ
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಇನ್ನೊಂದು ಉದಾಹರಣೆ,
ಹಾಗೆಯೇ ಹಿಂದಿನವರು ಲಸಿಕೆ ಹಾಕಿಕೊಂಡಿರಲಿಲ್ಲ, ಅದಕ್ಕೆ ನಮ್ಮ ಮಕ್ಕಳಿಗೂ ಹಾಕಿಸುವುದು ಬೇಡ ಅನ್ನುವುದು ಸರಿಯಲ್ಲ.
ಇದೇ ರೀತಿ ಯೋಚಿಸಿ ನನ್ನ ಸೋದರತ್ತೆಯ ಮಗನಿಗೆ ಲಸಿಕೆ ಹಾಕಿರಲಿಲ್ಲ, ಆದರಿಂದು ದುರದೃಷ್ಟವಶಾತ್ ಪೋಲಿಯೋ ಪೀಡಿತನಾಗಿ ವಿಕಲಾಂಗಚೇತನನಾಗಿದ್ದಾನೆ :(
ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಜೊತೆ ಜೊತೆಯಲ್ಲೇ ನಮ್ಮತನವನ್ನೂ ಉಳಿಸಿಕೊಳ್ಳಬೇಕು
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
Yes, you are right.. sorry I do not have kannada script here.. so typing in English..
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
"ಕನ್ನಡ ಸ್ಕ್ರಿಪ್ಟ್ ಇಲ್ಲ" ಅಂದ್ರೆ ಅರ್ಥವಾಗಲಿಲ್ಲ. "http://www.googlekannada.com/" ನಲ್ಲಿ ಬರೆದು ಇಲ್ಲಿ ಹಚ್ಚಬಹುದಲ್ಲ. ಬೇರೆ ವಿಧಾನಗಳೂ ಇವೆ.
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ನೀರ್ಕಜೆಯವರೆ:
- "ವೈಜ್ಙಾನಿಕ ಮೂಲಭೂತವಾದ" - ಚೆನ್ನಾಗಿದೆ ನೀವು ಕೊಟ್ಟ ಹೆಸರು.
- ಎಲೆಕ್ಟ್ರಾನ್ ಬಗ್ಗೆ ಈ ವಿಚಾರ ಗೊತ್ತಿರಲಿಲ್ಲ.
- ಬಿಗ್ ಬ್ಯಾಂಗ್ ಮತ್ತು ವಿಕಾಸವಾದ ಬಗ್ಗೆ ಕೂಡ, ನನಗೆ ಈ ಬಗೆಯ ಅನುಮಾನಗಳಿವೆ.
ಇತೀ, ಉಉನಾಶೆ
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
Thank you. There is soemthing called "Multiverse Interpretation" of Quantum physics. That is even more interesting :
http://en.wikipedia....
Not only this interpretation, quantum physics by itself is so interesting.. of course its except its mathematics jugglary.. For us it may not be easy to understand 100%, but it is nice to know. It is true for Theory of evolution also, unless it is loaded onto our brain by bashing religions (like it is done in sampada ) :)
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಪ್ರೀತಿಯ ಮಹೇಶ್,
ನಾವು ಹೀಗೆ ಇರಬೇಕು, ಹಾಗೆ ವಿಷಯಗಳನ್ನು ಯೋಚಿಸಬೇಕು, ಹೀಗೆ ಬದುಕಬೇಕು ಎಂಬ ಧೋರಣೆ ಸರಿಯಲ್ಲವೆಂದು ತೋರುತ್ತದೆ. ವಿಷಯಗಳನ್ನು ಯೋಚಿಸುವುದಕ್ಕೆ ಒಂದು patternನ ಅವಶ್ಯಕತೆ ಅಥವಾ ಹೊದಿಕೆ ಏಕೆ?.. ನೀವೇ ಹೇಳಿದಂತೆ, ಎಲ್ಲರಿಗೂ ಎಲ್ಲ ವಿಷಯಗಳ ಮೇಲೆ ಒಂದು ಮಟ್ಟದ ನಂಬಿಕೆ ನೆಲಸಿರುತ್ತದೆ. ಈ ನಂಬಿಕೆಗಳಿಗೆ ಕಾರಣಗಳೂ ಇರುತ್ತವೆ. ಕೆಲವು, ನಂಬಿಕೆಗಳು ಮೂಲಭೂತ ಕಾರಣಗಳಿಂದ ಉಂಟಾಗಿರುವಂತಹವು. ಮತ್ತೂ ಕೆಲವು, ನಮ್ಮ ಪರಿಸರದ ಉದಾಹರಣೆಗಳಿಂದ ಜನ್ಮತಳೆಯಲ್ಪಟ್ಟಿರುವಂತಹವು. ವಿಜ್ಙಾನದಲ್ಲಿಯೂ ಕೂಡ ಮೂಲಭೂತ ಕಾರಣ ಎಂಬ ಹಣೆಪಟ್ಟಿ ಇದ್ದ ಮಾತ್ರಕ್ಕೆ, ಅವುಗಳು ಬದಲಾಗಬಾರದು ಎಂದು ಯಾವ ಕಾನೂನು ಇಲ್ಲ. ವಿಜ್ಙಾನದ ಉದ್ದೇಶವೇ ಬದಲಾವಣೆಯನ್ನು ಇಚ್ಚಿಸುವುದಾಗಿರುತ್ತದೆ. ಬದಲಾವಣೆಯಿಂದಲೇ ಸತ್ಯಾನ್ವೇಷಣೆ. ನಮಗೇನಾದರೂ ಬದಲಾವಣೆ ಬೇಕೆನಿಸದರೆ update ಆಗಬಹುದು. ಯಾವುದೇ ವಿದ್ಯೆಯ ಮೂಲಭೂತ ವಿಷಯಗಳು, ಆ ವಿದ್ಯೆಯನ್ನು ಅರಿಯುವ ಮೆಟ್ಟಿಲುಗಳು ಅಷ್ಟೆ, . ಅಲ್ಲವೇ?!...
ಧನ್ಯವಾದಗಳು.
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
<< ನಾವು ಹೀಗೆ ಇರಬೇಕು, ಹಾಗೆ ವಿಷಯಗಳನ್ನು ಯೋಚಿಸಬೇಕು, ಹೀಗೆ ಬದುಕಬೇಕು ಎಂಬ ಧೋರಣೆ ಸರಿಯಲ್ಲವೆಂದು ತೋರುತ್ತದೆ. ವಿಷಯಗಳನ್ನು ಯೋಚಿಸುವುದಕ್ಕೆ ಒಂದು patternನ ಅವಶ್ಯಕತೆ ಅಥವಾ ಹೊದಿಕೆ ಏಕೆ?.. >>
We should have some guidelines or lessons in life.. somewhere or the other.. Isn't it? Otherwise what is the point in reading books listening to others? it is not just to give our fundas to others, but also to learn new things isn't it?
Finally it becomes a chicken and egg story - Saying that there shouldn't be any guidelines is again a guideline - There is no end to it, Isn't it? :)
ಉ: ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಮಹೇಶ..
ದಯವಿಟ್ಟು ನಮ್ಮ ಪ್ರತಿಕ್ರಿಯೆಗಳನ್ನು ಕನ್ನಡದಲ್ಲಿಯೇ ಬರಯೋಣ..ಕೆಲವೊಂದು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ..:)
ಧನ್ಯವಾದಗಳು..