ಸೋಮಾರಿ ಕಟ್ಟೆ
ಸುಮ್ನೆ, ಬೇಕಾದ್ದು, ಬೇಡದ್ದು ಮಾತಾಡೋಕೆ ಒಂದು ಸೋಮಾರಿ ಕಟ್ಟೆ....
ಅಕ್ಸಿಡೆಂಟು ನೋಡಿ
ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ್ವಾ ? ನಿಜಕ್ಕೂ ಏನೂ ಆಗಿಲ್ಲ ಆತನಿಗೆ. ಗಾಡಿ ಮಾತ್ರಾ ಗೋತಾ.
ಪ್ರೈವೇಟ್ ಬಸ್ಸಿನವರನ್ನು ಹೇಳೋರು, ಕೇಳೋರು ಯಾರೂ ಇಲ್ವಾ ? ಅಪಘಾತ ನಡೆದ ಸ್ಥಳದಲ್ಲಿ ಇದ್ದ ಪೊಲೀಸರು ಕೂಡಾ, "ಕಂಪ್ಲೇಂಟ್ ಕೊಟ್ಟು ಕೇಸು ಹಾಕೋಹಾಗಿದ್ರೆ ಹಾಕಿ, ಬೆಸ್ಟ್ ಅಂದ್ರೆ ಸುಮ್ನೆ ಕಾಂಪ್ರೋ (compromise) ಮಾಡ್ಕೊಳ್ರೀ, ಕೇಸು ಅಂತಾ ಹೋದ್ರೆ ಏನೂ ಉಪಯೋಗ ಇಲ್ಲಾ.. ಕಾಂಪ್ರೋ ಮಾಡ್ಕೊಂಡ್ರೆ atleast ನಿಮ್ಮ ಬೈಕ್ ರಿಪೇರಿ ಅವ್ರೇ ಮಾಡ್ಸಿ ಕೊಡ್ತಾರೆ..." ಅಂತಾ ಬೈಕಿನ ಮಾಲೀಕನಿಗೆ ಹೇಳ್ತಾ ಇದ್ರು. ನಮ್ಮ ಪೊಲೀಸ್ ವ್ಯವಸ್ಥೆ ಇದು.
ಸರಿ, ನೋಡಿ.. ಈ ಆಕ್ಸಿಡೆಂಟಿನ ಫೋಟೋಗಳು.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

- msprasad ರವರ ಬ್ಲಾಗ್
- Login or register to post comments
- 829 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅಕ್ಸಿಡೆಂಟು ನೋಡಿ
ಇದೇ ರೀತಿಯ ಅನುಭವದ ಕುರಿತು ಸಂಪದಿಗರೊಬ್ಬರು ಹಿಂದೊಮ್ಮೆ ಬರೆದಿದ್ದರು.
ಬೈಕಿಗೆ insurance ಇದ್ರೆ ಸ್ವಲ್ಪ ಹಣ ಬರುತ್ತೆ. ಉಳಿದದ್ದು compromise ಮೂಲಕ ಪಡೆಯಲು ಪ್ರಯತ್ನಿಸಬಹುದು. ತಕ್ಷಣ ತೆಗೆದುಕೊಳ್ಳದಿದ್ದರೆ ಪ್ರೈವೇಟ್ ವೆಹಿಕಲ್ಲಿನ ಮಾಲೀಕ ದುಡ್ಡು ಕೊಡಲು ಸತಾಯಿಸುವುದು ಸಹಜ. ಅಮೇಲೆ ಕೇಸ್ ಹಾಕುವುದೇ ಗತಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಕ್ಸಿಡೆಂಟು ನೋಡಿ
ಏನೇ ಹೇಳಿ ಸ್ವಾಮಿ, ನಮ್ಮ ಈ ಪೋಲಿಸ್ ವ್ಯವಸ್ಥೆ ಹದಗೆಟ್ಟಿದೆ.
ಭ್ರಷ್ಟಾಚಾರ, ಅನೀತಿ, ಉಡಾಫೆ... ಅಲ್ವೇ ??
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com