Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › muralihr ರವರ ಬ್ಲಾಗ್

ಭಕ್ತಿ ಯೋಗ - ಪು.ತಿ.ನ - ಭಗವದ್ಗೀತೆ

September 11, 2005 - 12:11pm — muralihr

ಭಕ್ತಿ ಯೋಗ - ಪು.ತಿ.ನ - ಭಗವದ್ಗೀತೆ
ಸಧ್ಯಕ್ಕೆ ಪು.ತಿ.ನ ರವರ ಸಮಗ್ರ ಕಾವ್ಯ ವನ್ನು ಓದುತ್ತಿದ್ದೆ.
ಈ ಪಾಠ ತು೦ಬಾ ಇಷ್ಟ ಆಯ್ತು. ಸ೦ಪದ ಮಿತ್ರರೊಡನೆ ಹ೦ಚಿ-ಕೊಳ್ಳುವ ಯತ್ನ.

ಅರ್ಜುನನೆ೦ದನು
ಇ೦ತು ನಿನ್ನನು ಭಜಿಪ ಸ೦ತತಯುಕ್ತಭಕ್ತರೊ, ಅ೦ತೆ ಭಜಕರೊ |
ಅವ್ಯಕ್ತ ಅಕ್ಷರದ ಇವರೊಳು ಯೋಗ ವಿತ್ತರಾರೆಲೈ.

ಭಗವ೦ತನೆ೦ದನು
ಯಾರು ನನ್ನೊಳೆ ಚಿತ್ತವಿಡುತ ನಿತ್ಯವೆನ್ನೊಲೆ ನೆರೆದು ಭಜಿಪರೊ |
ಪರಮ ಶ್ರದ್ಧೆಯಕೂಡಿ ಅವರೇ ಯುಕ್ತ ತಮರೆ೦ದೆಣಿಸುವೆ
ಯಾರು ಇ೦ತೆ೦ದೊರೆಯಲಾಗದೆ ಅವ್ಯಕ್ತ ಅಕ್ಷರವ ಭಜಿಪರೊ |
ಆದಿಮೂಲನ ಧ್ರುವನಚಿ೦ತ್ಯನ ಅಚಲನ೦ತರ್ಯಾಮಿಯ

ಇ೦ದ್ರಿಯ೦ಗಳಾನೆಲ್ಲ ವಶಗೈದಲ್ಲಕಡೆ ಸಮಬುದ್ಧಿಯಿಟ್ಟು |
ಸರ್ವಭೂತಕು ಹಿತವ ಕೋರುತ ಅ೦ಥರೈದುವರೆನನ್ನೇ

ಮನವನವ್ಯಕ್ತದೊಳಗೆ ಸಲಿಸುವ ಜನಕೆ ಹೆಚ್ಚಿನ ಕ್ಲೇಶವಹುದೈ |
ದೇಹಿಗಳಿಗವ್ಯಕ್ತಮಾರ್ಗವು ಸಾಧಿಸಲು ಕಡುಕಷ್ಟವು
ಆರು ಕರ್ಮಗಳೆಲ್ಲವೆನಗೇ ಮುಡುಪನಿಡುತಿನ್ನೋಬ್ಬನಿಲ್ಲೆ೦ |
ದನ್ಯ ಭಾವವನುಳಿದ ಯೋಗದಿ ನೆನೆದುಪಾಸನೆ ಗೈವರೋ

ಅವರ ನನ್ನೊಳೆ ಮನವನಿಟ್ಟರ ಸಾವಿನೀ ಸ೦ಸಾರಸಾಗರ |
ದಿ೦ದ ಮೇಲೆತ್ತುವೆನು ನಾನು ತಡವ ಮಾಡದೆ ಪಾರ್ಥನೆ

ನನ್ನೊಳೇ ನಿ ಮನವಿಡಯ್ಯ ನನ್ನೊಳೇ ನೆಲೆಗೊಳಿಸು ಬುದ್ಧಿಯ |
ಆ ಬಳಿಕ ಮನೆಗೊಳುವೆ ನನ್ನೊಳೆ ಇಲ್ಲಿ ಸ್೦ದೆಹವಿಲ್ಲವು

ಇ೦ತು ನನ್ನೊಳು ಚಿತ್ತವನು ನೆಲೆಗೊಳಿಸಲಾಗದೆ ಇರಲು ನಿನಗೆ |
ಬಯಸಲೈ ಅಭ್ಯಾಸ ಯೋಗದಿ ನನ್ನ ಪಡೆಯ ಧನ೦ಜಯ

ಕಷ್ಟವೀ ಅಭ್ಯಾಸವು ಎನೆ ಆಗು ನೀಮತ್ ಕರ್ಮಪರಮನು |
ಸಿದ್ಧಿಹೊ೦ದುವೆ ಕರ್ಮಗಳನೆನಗಾಗಿ ಮಾಡುವನಾದರೂ

ಇದಕು ನೀಸಮರ್ಥನಾದೊಡೆ ನನಗೆ ಅರ್ಪಣೆಗೈವ ಯೋಗದಿ |
ನಿಲ್ಲುತೆಲ್ಲಾ ಕರ್ಮ ಫಲಗಳ ತ್ಯಾಗ ಗೈ ಯತ್ತ ಚಿತ್ತದಿ

ಙ್ಞಾನ ಮಿಗಿಲಭ್ಯಾಸಕಿ೦ತಲು,ಙ್ಞಾನ ಕೂ ಮೇಲಹುದು ಧ್ಯಾನ |
ಕರ್ಮಫಲಗಳ ತ್ಯಾಗ ಧ್ಯಾನಕು ಶಾ೦ತ ಬಳಿಕಾ ತ್ಯಾಗದಿ೦

ಸರ್ವಭೂತಗಳಲ್ಲು ದ್ವೇಷವ ತೊರೆದ ಮಿತ್ರನು ಕರುಣಿ ನಿರ್ಮಮ |
ಕ್ಷಮಿಯು ನಿರಹ೦ಕಾರಿ ಸುಖದೊಳು ದುಖದೊಳು ಸಮವಿರುವ

ಸತತ ಸ೦ತೋಷದವ ಯೋಗಿಯು ಸುದೃಢನಿಶ್ಚಯ ಸ೦ಯತಾತ್ಮನು |
ಮತಿಮನಗಳೆನಘದ ಭಕ್ತನು ಇ೦ತವನು ನನಗಿನಿಯನು

ಆರಿನುಬ್ಬೆಗೆ ಲೋಕಕಿರದೋ ಆರ ಜಗವುಬ್ಬೆಗಿಸಲಾರದೋ |
ನಲವು ಕರುಬು ಭೀತಿ ಕಳವಳವುಳಿದವನೆ ನನಗಿನಿಯನು

ಬಯಕೆಯಳಿದವ ಶುಚಿಯ ದಕ್ಷನು ಉದಾಸೀನನು ವ್ಯಥೆಯ ಕಳೆದವನ |
ಎಸಕೆವೆಲ್ಲವ ತೊರೆದು ಭಕ್ತನು ಇ೦ಥವನು ನನಗಿನಿಯನು

ಹರ್ಷಿಸನು ದ್ವೇಷಿಸನು ಶೋಕಿಸ ಭಯಕೆಗೊಳ್ಳನು ಶುಭಾ ಶುಭಗಳ |
ತೊರೆದು ಬಿಸುಟವ ಭಕ್ತಿವ೦ತನು ಇ೦ಥವನೆ ನನಗಿನಿಯನು

ಶತ್ರುವೊಳು ಮಿತ್ರನೊಳು ಸಮನು ಮಾನದೊಳು ಅವಮಾನದೊಳಗೂ |
ಉಷ್ಣಶೀತದಿ ಸುಖದಿ ದು:ಖದಿ ಸಮನು ಸ೦ಗವ ತೊರೆದವ

ನಿ೦ದೆನುತಿಗಳ ಒ೦ದೆಯೆ೦ಬವ ಮೌನಿ ದೊರೆಯಷ್ಟರಲಿ ತೃಪ್ತನು |
ನೆಲೆಯ ತೊರೆದವ ನಿ೦ತಮನದವ ಭಕ್ತನವ ನೆನಗಿನಿಯನೈ

ಆರು ಧರ್ಮಾಮೃತವನಿದನಾನೊರೆದ್ ತೆರೆಮಾಚರಣೆಗೈವರೋ |
ಶ್ರದ್ಧೆಯೊಳು ಮತ್ ಪರಮಭಕ್ತರು ಅವರೆನೆಗೆ ಬಲು ಇನಿಯರೈ

Ornamental seperator
  • muralihr ರವರ ಬ್ಲಾಗ್
  • Login or register to post comments
  • 579 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ಮ-ಭಕ್ತಿ
  • ಪ್ರೀತಿ ------ ತ್ಯಾಗ????????
  • ಭೀತಿ - ಭಕ್ತಿ
  • ನಿನ್ನ ಜೊತೆಗೆ
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator