Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › muralihr ರವರ ಬ್ಲಾಗ್

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

April 11, 2007 - 11:28pm — muralihr

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ.
ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ??
********************************
ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎ೦ಬುದು ಜ್ಞಾನರತ್ನ.
ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ
ಆ ರತ್ನವ ನೀನು ಅಲ೦ಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿ೦ಗದಲ್ಲಿ
ನಿನ್ನಿ೦ದ ಬಿಟ್ಟು ಸಿರಿವ೦ತರಿಲ್ಲ ಕಾಣಾ ಎಲೆ ಮನವೇ .
********************************
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ ಪ್ರಸಾದ ವನರ್ಪಿಸಬಾರದು
ಗುಹೇಶ್ವರಾ ನಿಮ್ಮ ಶರಣರು ಮು೦ದನರ್ಪಿಸುವರು.
********************************
ಹೊನ್ನು ಮಾಯೆ ಎ೦ಬರು , ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎ೦ಬರು , ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎ೦ಬರು , ಮಣ್ಣು ಮಾಯೆಯಲ್ಲ.
ಮನದ ಮು೦ದಣ ಆಸೆಯ ಮಾಯೆ ಕಾಣಾ ಗುಹೇಶ್ವರ.
********************************

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ
ಬೀಸುವ ಗಾಳಿಗೆ ಮೈಯೆಲ್ಲ ಮುಖ
ಗುಹೇಶ್ವರ ನಿಮ್ಮ ಶರಣ೦ಗೆ
ಸರ್ವಾ೦ಗವೆಲ್ಲ ಲಿ೦ಗ
********************************

ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.
ಪರಧನ ಪರಸತಿಯರಿಗೆ ಅ೦ಧಕನಾಗಿರಬೇಕು.
ವಾಕಿನಿ೦ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡಿಯಲ್ಲಿ
ಮಾಗಿವ ಕೋಗಿಲೆಯ೦ತೆ ಮೂಗನಾಗಿರಬೇಕು.
'ಒ೦ದು' ಎ೦ದು ಅರಿದಲ್ಲಿ ಸ೦ದೇಹವಿಲ್ಲದಿರಬೇಕು
ಗುಹೇಶ್ವರ ಲಿ೦ಗದಲ್ಲಿ ತನ್ನ ತಾ ಮರೆದಿರಬೇಕು.

Ornamental seperator
  • muralihr ರವರ ಬ್ಲಾಗ್
  • Login or register to post comments
  • 676 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 13, 2007 - 4:20pm — mahesha

ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ!

mahesha's picture

"ಸರ್ವಜ್ಞನ ವಚನಗಳು ( ಹೆಸರೇ ಲಿಂಗಾತಿಶಯ ಪದ್ದತಿ )"

ಹರಿಬ್ರಹ್ಮರೆಂಬವರು | ಹರನಿಂದಲಾದವರು
ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ
ಸರಿ ಯಾರ ಕಾಣೆ ಸರ್ವಜ್ಞ

ಹಿರಿಯ ಬೊಮ್ಮನು ಕೆಂಚ | ಹಿರಿಯ ಹರಿ ತಾ ಕರಿಕ
ಪುರಹರನು ಶುದ್ಧ ಧವಳಿತನು - ಇರೆ ಬೇರೆ
ಹರಗೆ ಸರಿಯಹರೀ ಸರ್ವಜ್ಞ

ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ
ನೆರೆ ಹತ್ತು ಜನನವಾ ಹರಿಗೆ - ಇವರುಗಳು
ಕರೆಗೊರಲಗಣೆಯೆ ಸರ್ವಜ್ಞ

ಹುಟ್ಟಿಸುವನಜನೆಂಬ | ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರೆಯೆ - ಮತ್ತೊಂದು
ಹುಟ್ಟಿಸಿಕೊಳನೇಕೆ ಸರ್ವಜ್ಞ

ಬ್ರಹ್ಮ ನಿರ್ಮಿಪನೆಂಬ | ದುರ್ಮತಿಯೆ ನೀಂ ಕೇಳು
ಬ್ರಹ್ಮನಾ ಸತಿಗೆ ಮೂಗಿಲ್ಲ - ವಾ ಮೂಗ
ನಿರ್ಮಿಸನೇಕೆ ಸರ್ವಜ್ಞ

ನರಹರಿಯ ಕೊಲುವಂದು | ಎರಳೆಯನೆಸುವಂದು
ಮರಳಿ ವರಗಳನು ಕೊಡುವಂದು - ಸ್ಮರಹರೆಗೆ
ಸರಿಯಾರ ಕಾಣೆ ಸರ್ವಜ್ಞ

ಷಡುದರುಶನಾದಿಗಳು | ಮೃಡ ಮಾಡಲಾದುವು
ಹೊಡವಡುತೆ ನಿಗಮವರಿಸುವವು - ಅಭವನ
ಗಡಣಕೇಕೆ ಯಾರು ಸರ್ವಜ್ಞ

ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ
ಕೇಶವ ಭಕ್ತರೊಳಗೆಲ್ಲ - ಮೂರು ಕ
ಣ್ಣೇಶನೇ ದೈವ ಸರ್ವಜ್ಞ

ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ
ನೇಸರೆಂ ಜಗಕೆ ಹಿತರಿಲ್ಲ - ದೇವ ತಾ
ಈಶನಿಂದಿಲ್ಲ ಸರ್ವಜ್ಞ

"ಹರ ಸರ್ವೋತ್ತಮ" Laughing out loud
======================================

  • Login or register to post comments
  • link
  • Email this ಪ್ರತಿಕ್ರಿಯೆ
April 13, 2007 - 11:59pm — ವೈಭವ

Re: ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ!

ವೈಭವ's picture

ಹೆಚ್ಚಿನ ವಚನಗಳಿಗೆ ಇಲ್ಲಿ ಎಡತಾಗಿ

 

  • Login or register to post comments
  • link
  • Email this ಪ್ರತಿಕ್ರಿಯೆ
April 14, 2007 - 3:11pm — mahesha

ಸರ್ವಜ್ನನ ವಚನಗಳು

mahesha's picture

ಅಲ್ಲಿ ಎಡತಾಗಿದೆನು. ಆದರೆ ಸರ್ವಜ್ನನ ವಚನ ಸಿಗಲಿಲ್ಲ!!!
ಸರ್ವಜ್ನನ ವಚನಗಳು ಒಂದು ಗುಂಪು ಅರ್ಕುಟಲ್ಲಿದೆ.

ಸರ್ವಜ್ನನ ವಚನಗಳಗೆ ಒಂದು ಬಲೆತಾಣ ಮಾಡಲು ನನ್ನ ಗೆಳೆಯಲೊಬ್ಬರು ಒಬ್ಬರು ತೊಡಗಿದ್ದಾರೆ!!!

'ಎಡತು'ಇಗೆ ಕೊಂಡಿ ಕೊಡು, ವಯ್ಬವ!!

======================================

  • Login or register to post comments
  • link
  • Email this ಪ್ರತಿಕ್ರಿಯೆ
April 14, 2007 - 4:36pm — ASHOKKUMAR

Re: ಸರ್ವಜ್ನನ ವಚನಗಳು

ASHOKKUMAR's picture

http://www.vicharamantapa.net/ ನಲ್ಲಿ ವಚನಗಳು ಅಕ್ಕಮಹಾದೇವಿ,ಬಸವಣ್ಣ,ಅಲ್ಲಮ ಮತ್ತು ಸರ್ವಜ್ಞನ ವಚನಗಳಿವೆಯಲ್ಲಾ?

  • Login or register to post comments
  • link
  • Email this ಪ್ರತಿಕ್ರಿಯೆ
April 14, 2007 - 4:42pm — mahesha

Re: ಸರ್ವಜ್ನನ ವಚನಗಳು

mahesha's picture

ನೇರವಾದ ಕೊಂಡಿಯಿತ್ತರೆ ಒಳಿತು!
=====================================

  • Login or register to post comments
  • link
  • Email this ಪ್ರತಿಕ್ರಿಯೆ
April 14, 2007 - 4:44pm — ASHOKKUMAR

Re: ಸರ್ವಜ್ನನ ವಚನಗಳು

ASHOKKUMAR's picture

ವಚನಗಳು

  • Login or register to post comments
  • link
  • Email this ಪ್ರತಿಕ್ರಿಯೆ
April 14, 2007 - 5:24pm — mahesha

Re: ಸರ್ವಜ್ನನ ವಚನಗಳು

mahesha's picture

ಅಶೋಕ ಕುಮಾರ..

ಅಲ್ಲಿ ಸರ್ವಜ್ನನ ವಚನಗಳನ್ನು ಆಟೊಂದು ಸರಿಯಾಗಿ ಓಜಿಸಿಲ್ಲ.

ಸರ್ವಜ್ನನ ವಚನಗಳನ್ನು ಮೂರು ಪದ್ದತಿಗಳನ್ನಾಗಿ ಹಂಚಿದ್ದಾರೆ.
೧) ಜಾತಿಸ್ಮರಣ ಪದ್ದತಿ - ಇಲ್ಲಿ ಸರ್ವಜ್ನನು ತನ್ನ ಮನೆತನ-ತಾಯಿ-ತಂದೆ-ಹೆಸರು-ಊರು ಮುಂತಾದವುಗಳನ್ನು ಹೇಳಿದ್ದಾರೆ.
೨) ಲಿಂಗಾತಿಶಯ ಪದ್ದತಿ - ಇಲ್ಲಿ ಲಿಂಗದ ಮೈಮೆ ಇದೆ.
೩) ಗುರುಕರುಣ ಪದ್ದತಿ - ಅಲ್ಲಿ ಗುರುವಿನ ಬಗ್ಗೆ ಇದೆ.

ಇರಲಿ!!! ನನ್ನಿ!!!

ಒರ್ಕುಟಲ್ಲಿ ಇರುವ ಈ ಗುಂಪನ್ನು ನೋಡಬಹುದು
======================================

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
  • ಶ್ರೀಬಸವೇಶ್ವರರ ವಚನಗಳು
  • ವಚನ ಚಿಂತನ: ೯: ಸುಮ್ಮಸುಮ್ಮನೆ ದುಃಖ!
  • ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು
  • ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ (೩)
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator