ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!
January 30, 2008 - 11:22pm — naasomeswaraವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು.
ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩. ಸ್ಠಳ ಉಡುಪಿಯ ಬಳಿಯ ಒಂದು ಸಣ್ಣ ಊರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ. ತಾಯಿ ಕಲ್ಯಾಣಿ. ಇವರ ಹಿರಿಯ ಮಗ. ಮೆಟ್ರಿಕ್‍ವರೆಗೆ ಶಿಕ್ಷಣ. ಜಿಲ್ಲಾ ಬೋರ್ದ್ ಕಚೇರಿಯಲ್ಲಿ ಸ್ವಲ್ಪಕಾಲ ಕೆಲಸ. ನಂತರ ಮುಂಬಯಿಗೆ ಪಯಣ.
೧೯೪೪. ಕಾಲ್ಟೆಕ್ಸ್ ಸಂಸ್ಥೆಯಲ್ಲಿ ಕೆಲಸ. ೪೦ ವರ್ಷಗಳ ಸೇವೆ. ೧೯೮೪ರಲ್ಲಿ ನಿವೃತ್ತಿ.
ಮುಂಬಯಿಯಲ್ಲಿ ಯುವಕರು ‘ನುಡಿ‘ ಎಂಬ ಪ್ರತ್ರಿಕೆಯನ್ನು ನಡೆಸುತ್ತಿದ್ದರು. ೧೯೪೭. ಮೌಂಟ್ ಬ್ಯಾಟನ್ ಅವರ ಯೋಜನೆಯನ್ನು ವಿರೋಧಿಸಿ ಲೇಖನ. ಇದರಿಂದ ವ್ಯಾಸರಾಯರು ಜನಸಾಮಾನ್ಯರಗ ಮನದೊಡನೆ ಮುಂಬಯಿ ಸರ್ಕಾರದ ಗಮನವನ್ನೂ ಸೆಳೆದರು. ಮುಂದೆ ಇದರ ಸಂಪಾದಕತ್ವ. ಅಲ್ಲಿಂದ ಅವರ ಬರಹ ನಿರಂತರವಾಗಿ ಹರಿದು ಬಂದಿತು.
ಕಾದಂಬರಿಗಳು: ಅನುರಕ್ತೆ, ಆಕಾಶಕ್ಕೊಂದು ಕಂದೀಲು, ವಾತ್ಸಲ್ಯಪಥ, ಹೇಮಂತಗಾನ, ಬಂಡಾಯ, ಉತ್ತರಾಯಣ, ಹೆಜ್ಜೆ ಹಾಗೂ ಹೆಜ್ಜೆಗುರುತು. ಇವುಗಳಲ್ಲಿ ಅನುರಕ್ತೆ ಹಾಗೂ ವಾತ್ಸಲ್ಯಪಥ ಚಲನಚಿತ್ರಗಳಾದವು. ಬಂಡಾಯ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು. ಮುಂದೆ ಓದಿ »

- ೧ ಪ್ರತಿಕ್ರಿಯೆ
- 293 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡಿಗರಿಗೆ ಒಂದು ಸವಾಲು - ಸಿರಿಭೂವಲಯವನ್ನು ಬಿಡಿಸ ಬನ್ನಿ!
December 24, 2007 - 3:05pm — naasomeswara- ಸಿರಿಭೂವಲಯವು ಕನ್ನಡ ಸಾಹಿತ್ಯದ ಒಂದು ಅಪೂರ್ವ ಗ್ರಂಥ.
- ಇದನ್ನು ಕುಮುದೇಂದು ಕವಿಯು ಕ್ರಿ.ಶ.೮೧೬ರಲ್ಲಿ ರಚಿಸಿದನು.
- ಕಾವ್ಯ ರಚನೆಯನ್ನು ನಾವು ಅಕ್ಷರಗಳಿಂದ ಮಾಡುತ್ತೇವೆ. ಕುಮುದೇಂದುವು ಅಕ್ಷರಗಳ ಬದಲು ಕನ್ನಡ ಅಂಕಿಗಳನ್ನು (೧-೯) ಬಳಸಿದ್ದಾನೆ.
- ಇದು ಅಂಕಾಕ್ಷರ ಕಾವ್ಯ. ಕನ್ನಡದ ೯ ಅಂಕಿಗಳನ್ನು ೬೪ ವಿಧದಲ್ಲಿ ಕ್ರಮಜೋಡಿಸಿ ಕಾವ್ಯವನ್ನು ರಚಿಸಿದ್ದಾನೆ.
- ೬೪ ಅಂಕಗಳನ್ನು ಚಕ್ರಗಳೆಂಬ ಚೌಕಗಳಲ್ಲಿ (೨೭*೨೭=೭೨೯ ಮನೆಗಳು) ತುಂಬಿದ್ದಾನೆ. ನಮಗೆ ಇದುವರೆಗೂ ೧೨೭೦ ಚಕ್ರಗಳು ಲಭಿಸಿವೆ.
- ಒಂದೊಂದು ಅಂಕಿಯ ಸ್ತಾನದಲ್ಲಿ ಒಂದೊಂದು ಕನ್ನಡ ಅಕ್ಷರವನ್ನು ತುಂಬಿದರೆ ಕಾವ್ಯ ಸಿಧ್ಢವಾಗುತ್ತದೆ.
- ನಡುಗನ್ನಡ ಭಾಷೆಯ ಸಾಂಗತ್ಯ ಛಂದಸ್ಸಿನ ಪದ್ಯಗಳು ದೊರೆಯುತ್ತವೆ. ಇತರ ಛಂದಸ್ಸಿನ ಪದ್ಯಗಳೂ ಇವೆ.
- ಕವಿಯು ಕನ್ನಡವನ್ನು `ಸರ್ವಭಾಷಾಮಯೀ ಕನ್ನಡ` ಎಂದು ಕರೆಯುತ್ತಾನೆ. ಏಕೆಂದರೆ ಕನ್ನಡ ಭಾಷೆಯ ಈ ಕಾವ್ಯದಲ್ಲಿ ೧೮ ಮಹಾಭಾಷೆಗಳು ಹಾಗೂ ೭೦೦ ಸಾಮಾನ್ಯ ಭಾಷೆಗಳು (೭೧೮) ಅಡಗಿವೆ.
- ಈ ಚೌಕದ ಒಂದೊಂದು ಮನೆಯ ಅಕ್ಷರಗಳನ್ನು ಓದುತ್ತಾ ಹೋದರೆ, ಒಂದೊಂದು ಭಾಷೆಯಲ್ಲಿ ಕಾವ್ಯವನ್ನು ಓದಬಹುದು. ಉದಾ: ಚೌಕಗಳ ಮೊದಲ ಮನೆಯ ಅಕ್ಷರಗಳನ್ನು ಓದುತ್ತಾ ಹೋದರೆ ಪ್ರಾಕೃತ ಭಾಷೆಯ ಕಾವ್ಯ ಕಂಡು ಬರುತ್ತದೆ.
- ಕನ್ನಡದ ಜೊತೆಗೆ ಸಂಸ್ಕೃತ, ಪ್ರಾಕೃತ, ದ್ರಾವಿಡ, ಆಂದ್ರ, ಮಹಾರಾಷ್ತ್ರ, ಮಲಯಾಳ, ಗುರ್ಜರ, ಅಂಗ, ಕಳೀಂಗ, ಕಾಶ್ಮೀರ, ಕಾಂಭೋಜ, ಹಮ್ಮೀರ, ಶೌರಸೇನಿ, ವಾಲಿ, ತೇಬತಿ, ವೆಂಗಿ, ವಂಗ, ಬ್ರಾಹ್ಮಿ, ವಿಜಾಯಾರ್ಧ, ಪದ್ಮ, ವೈಧರ್ಭ, ವೈಶಾಲಿ, ಸೌರಾಷ್ಟ್ರ, ಖರೋಷ್ಟಿ, ನಿರೋಷ್ಟ, ಅಪಭ್ರಂಶಿಕ, ಪೈಶಾಚ, ರಕ್ಥಾಕ್ಷರ, ಅರಿಷ್ಟ ಹೀಗೆ ಒಟ್ಟು ೭೧೮ ಭಾಷೆಗಳ ಕಾವ್ಯ ಇಲ್ಲಿದೆ. ಹಾಗಾಗಿ ಕನ್ನಡವನ್ನು `ಸರ್ವಭಾಷಾಮಯೀ ಕನ್ನಡ` ಎಂದು ಕವಿಯು ಹೇಳಿದ್ದಾನೆ.
- ಇದರಲ್ಲಿ ಒಟ್ಟು ೫೬ ಅಧ್ಯಾಯಗಳಿವೆ. ಆರ್ಷೇಯ ಸಾಹಿತ್ಯದೊಡನೆ, ಭೌತರಸಾಯನಾದಿ ವಿಜ್ಞಾನಗಳು, ರಸವಾದ, ಜ್ಯೋತಿಷ, ಇತಿಹಾಸ, ಸಂಸ್ಕೃತಿ, ಧರ್ಮ, ದರ್ಶನ, ಲೋಹ, ಖಗೋಳ, ವೈದ್ಯ, ಗಣಿತ, ಅಣು-ಪರಮಾಣು, ಲಿಪಿ-ಭಾಷೆ ಇತ್ಯಾದಿ ವಿಷಯಗಳು ಅಡಕವಾಗಿವೆ.
- ಶ್ರೀಯುತರಾದ ಎಲ್ಲಪ್ಪಶಾಸ್ತ್ರಿ, ಕರ್ಲಮಂಗಲಂ ಶ್ರೀಕಂಠಯ್ಯ, ಕೆ.ಅನಂತಸುಬ್ಬರಾಯರು ಅಂಕೆಗಳಿಗೆ ಸೂಕ್ತವಾದ ಅಕ್ಷರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಈ ಕೆಲಸ ಪೂರ್ಣವಾಗಿಲ್ಲ.
- ನಮ್ಮ ಕನ್ನಡಿಗರು ಇಂದು ಕಂಪ್ಯೂಟರ್ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದಾರೆ. ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಹೊಂದಿದ್ದಾರೆ. ತಮ್ಮ ಕಂಪ್ಯೂಟರ್ ಸಾಮರ್ಥ್ಯವನ್ನು ಬಳಸಿಕೊಂಡು ಈ ಎಲ್ಲ ಚಕ್ರಗಳನ್ನು ಬಿಡಿಸುವ ಪ್ರಯತ್ನ ಮಾಡಬೇಕಾಗಿದೆ.
- ಈಗ ಸಿರಿಭೂವಲಯದ ಭಾಗ-೧ ಮಾರಾಟಕ್ಕಿದೆ. ಆಸಕ್ತರು ಪುಸ್ತಕಶಕ್ತಿ, ನಮ್ ೧೦೩, ೩ ನೆಯ ಮುಖ್ಯರಸ್ತೆ, ತಾತಾ ಸಿಲ್ಕ್ ಫಾರಂ, ಬಸವನಗುಡಿ, ಬೆಂಗಳೂರು-೫೬೦ ೦೦೪: ಧೂರವಾಣಿ: ೨೬೯೧೫೯೧೭ ಸಂಪರ್ಕಿಸಬಹುದು.
- ಕನ್ನಡಿಗರು ಈ ಎಲ್ಲ ಚಕ್ರಗಳನ್ನು ಬಿಡಿಸಲು ಸಾಧ್ಯವಾಗುವುದಾದರೆ, ಜಗತ್ತಿನ ೧೦ ನೆಯ ಅದ್ಭುತವನ್ನು ಜಗತ್ತಿಗೆ ಕೊಟ್ಟ ಕೀರ್ತಿಗೆ ಪಾತ್ರರಾಗುತ್ತಾರೆ.
- ಕನ್ನಡಿಗರೆ! ಈ ಸವಾಲನ್ನು ಸ್ವೀಕರಿಸಿ!!

- 4 ಪ್ರತಿಕ್ರಿಯೆಗಳು
- 333 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪ್ರಕೃತಿ ಶಾಶ್ವತ!
December 11, 2007 - 11:02am — naasomeswaraಶಾಶ್ವತ ಪ್ರಕೃತಿ
ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ
ಮಾಡುತ್ತಾರಂತೆ ಮದುವೆ|
ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ
ಇಬ್ಬರು ಮಾಗಲು ತಡವೆ?||
ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ
ಕುಡಗೋಲು ಬೀಳುವ ಹಾಗೆ| ಮುಂದೆ ಓದಿ »

- Login or register to post comments
- 191 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಭೂಪಾಲ್ ದುರಂತವಾಗಿ ಇಂದಿಗೆ ೨೩ ವರ್ಷಗಳಾದವು!
December 4, 2007 - 10:21am — naasomeswaraದಿನಾಂಕ: ಡಿಸೆಂಬರ್ ೩, ೧೯೮೪. ಬೆಳಗಿನ ಜಾವ.
ಸ್ಠಳ: ಭೂಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆ.
ಸೋರಿದ ರಾಸಾಯನಿಕ: ಮೀಥೈಲ್ ಐಸೋ ಸಯನೇಟ್
ಪ್ರಮಾಣ: ೪೩ ಟನ್!
ಅನಿಲ ದುರಂತಕ್ಕೆ ತುತ್ತಾದವರು: ಸುಮಾರು ೫,೦೦,೦೦೦ ಜನರು.
ಮರಣಿಸಿದವರು: ಸುಮಾರು ೨೦,೦೦೦ (ಇಂದಿಗೂ ಪ್ರತಿ ದಿನ ಒಬ್ಬರು ಸಾಯುತ್ತಿದ್ದಾರಂತೆ!) ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 386 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ
October 30, 2007 - 8:02pm — naasomeswaraದೇವದಾಸಿಯ ನಾಜೂಕಯ್ಯ, ಸದಾರಮೆಯ ಕಳ್ಳ, ಮಕ್ಮಲ್ ಟೋಪಿಯ ನಾಣಿ, ಭ್ರಷ್ಟಾಚಾರದ ದಫೇದಾರ್, ನಡುಬೀದಿಯ ನಾರಾಯಣ - ಇವರೆಲ್ಲರ ಜೊತೆ ಒಮ್ಮೆ ಮಾತನಾಡಬೇಕೆನಿಸಿತು. ಕೂಡಲೇ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರೆಸಿದೆವು. ಕರ್ನಾಟಕ ರಾಜ್ಯೋತ್ಸವ ಸಮಯಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರು ಬೇಕೆ? ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: