ಈಗಿನಂತೆ 5 ಸದಸ್ಯರು ಮತ್ತು 96 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,037
ಶಿವರಾತ್ರಿ ಶಂಕರನಾರಾಯಣ ಯಾತ್ರೆ
basho aras's picture
ಬಿ. ಶೋಭಾ ಅರಸ್
27
Feb
2012
ಲೇಖನ

                                       ...

ಪ್ರತಿಕ್ರಿಯೆಗಳು: 3
ಹಿಟ್ಸ್ : 200
ಜ್ಞಾನದೇವ ಮತ್ತು ಆಳಂದಿ
Rohit's picture
ರೋಹಿತ್ ರಾಮಚಂದ್ರಯ್ಯ
12
Jun
2006
ಬ್ಲಾಗ್ ಬರಹ
ಪುಣೆಗೆ ಬಂದ ಹೊಸತರಲ್ಲಿ, ಮಾಹಿತಿಗೆಂದು ಪುಣೆಯ ಕುರಿತಾದ ಪ್ರವಾಸಿ ಮಾರ್ಗದರ್ಶಿಕೆಯೊಂದನ್ನು ಕೊಂಡುಕೊಂಡಿದ್ದೆ. ಅದರ ಮೂಲಕ ನನಗೆ ಆಳಂದಿಯ ಬಗ್ಗೆ ಮೊದಲು ತಿಳಿದದ್ದು. ನಂತರ...
ಪ್ರತಿಕ್ರಿಯೆಗಳು: 3
ಹಿಟ್ಸ್ : 2,332
ಉಡುಪಿ ಕೃಷ್ಣನ ದರ್ಶನ
rajeshnaik111's picture
09
Jun
2010
ಪುಟ

...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,379
ಜೈ ಎಂದ ಬಾಲಕ ಅಂಗವಿಕಲ
suresh nadig's picture
ಸುರೇಶ್ ನಾಡಿಗ್
14
Sep
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 51
ಹಿಟ್ಸ್ : 1,633
ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ
anoopkittur's picture
18
Nov
2005
ಪುಟ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,916
ಇಂಗ್ಲೆಂಡಿನ ಸ್ಟೋನ್ ಹೆಂಜ್
anil.ramesh's picture
ಅನಿಲ್ ರಮೇಶ್
12
Nov
2009
ಪುಟ

ಇಂಗ್ಲೆಂಡಿನ ಸ್ಟೋನ್ ಹೆಂಜ್

...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,058
ನೆನಪಿನ ಚಿತ್ರಕಲಾ ಶಾಲೆ: ಭಾಗ ೨೫ -- ’ವೀರಾ ವೇಷ’
anilkumar's picture
ಎಚ್.ಎ. ಅನಿಲ್ ಕುಮಾರ್
23
Nov
2011
ಲೇಖನ

 

...

ಪ್ರತಿಕ್ರಿಯೆಗಳು: 0
ಹಿಟ್ಸ್ : 81
ಸತ್ತವರ ಹಾದಿ
uday_itagi's picture
ಉದಯ್ ಇಟಗಿ
30
Mar
2010
ಪುಟ

ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ನಿರೀಕ್ಷಿಸಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,026
ನಾವೆಷ್ಟು ಒಳ್ಳೆಯವರು?
kavinagaraj's picture
kavinagaraj
07
Dec
2011
ಲೇಖನ

     ರಸಭರಿತ ಫಲಮೂಲ ಕೊಂಬೆ ತಾನಲ್ಲ
     ಫಲಸತ್ವ ಸಾಗಿಪ ಮಾರ್ಗ ತಾನಹುದು|
    ...

ಪ್ರತಿಕ್ರಿಯೆಗಳು: 12
ಹಿಟ್ಸ್ : 165

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಸಂಪದಿಗರೆ!

ಥಟ್ ಅಂತ ಹೇಳಿ ಕಾರ್ಯಕ್ರಮದ ೧೫೦೦ ನೆಯ ಕಾರ್ಯಕ್ರಮವು ತನ್ನ ೧೫೦೦ ಕಂತುಗಳ ಪ್ರಸಾರವನ್ನು ಮುಗಿಸಿರುವ ಈ ಸಂದರ್ಭದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ. ಇದರೊಡನೆ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲು ಪ್ರಯತ್ನಿಸುತ್ತಿದ್ದೇನೆ. ದಯವಿಟ್ಟು ಬನ್ನಿ!

 

ದಿನಾಂಕ: ೧೩.೦೬.೧೦

ಸಮಯ: ಸಂಜೆ ೪ ಗಂಟೆಯಿಂದ

ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ.

 

ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ದ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡುವ ಯೋಜನೆಯಿದೆ. ಜೊತೆಗೆ ಇತರ ಮನರಂಜನೆಯ ಕಾರ್ಯಕ್ರಮವಿದೆ. ನೀವು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಿಮ್ಮ ಮನೆಮಂದಿಯೊಡನೆ ಬನ್ನಿ!

 

- ನಾಸೋ

 

(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

Average: 5 (4 votes)
1733 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಗಣೇಶ's picture
02
Jun
2010
11:37

ಉ: ಥಟ್ ಅಂತ ಹೇಳಿ - ೧೫೦೦!

ಸರ್,
-ಬ್ರೈಲ್ ಲಿಪಿ ಬಗ್ಗೆ ಈಗ ತಾನೆ ನನ್ನೆದುರು ಕುಳಿತು ವಿವರಿಸುತ್ತಿದ್ದಿರಿ!
-೧೫೦೦ನೇ ಕಂತು!!
-ಆಹ್ವಾನ ಪತ್ರಿಕೆ ತಲುಪಿತು. (ಚಿತ್ರಪುಟದಲ್ಲೇ ನೋಡಿದೆ)
ಶುಭಾಶಯಗಳು.
-ಗಣೇಶ.

shaamala's picture
02
Jun
2010
11:41

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾ. ಸೋಮೇಶ್ವರ ಅವರೇ,

ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು. ಒಳ್ಳೆಯ ಕಾರ್ಯಕ್ರಮ ತಪ್ಪಿಸಿಕೊಳ್ತಾ ಇದೀನಿ ಅಂತ ಬೇಸರವಾಗ್ತಿದೆ. ಮನೆಯಲ್ಲಿ ಹೇಳ್ತೇನೆ, ನನ್ನ ತಮ್ಮ ಅಥವಾ ತಂಗಿ ಬರಬಹುದು.

ಧನ್ಯವಾದಗಳು,
ಶಾಮಲ

shivaram_shastri's picture
03
Jun
2010
12:08

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಆಹ್ವಾನ ಪತ್ರಿಕೆ ಇಲ್ಲಿದೆ. ನನಗಂತೂ ಬರಲಾಗುತ್ತಿಲ್ಲ. ಬೆಂಗಳೂರಲ್ಲಿ ಇರುವವರೆಲ್ಲ ಹೋಗಿ, ಅನಂದಿಸುತ್ತೀರಿ ಎಂದು ಆಶಿಸುತ್ತೇನೆ. 

http://sampada.net/f...

koushikgraj's picture
03
Jun
2010
1:10

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ತುಂಬಾ ಸಂತೋಷ ಸರ್... ಖಂಡಿತ ಬರುತ್ತೇವೆ... :)

asuhegde's picture
03
Jun
2010
8:45

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾಕ್ಟ್ರೇ,

ಆಹ್ವಾನ ಸ್ವೀಕೃತವಾಗಿದೆ
ಮನಕೂ ಸಂತಸವಾಗಿದೆ
ಬರುವ ಇಚ್ಛೆ ಬಲವಾಗಿದೆ

ಹೆಚ್ಚಿನೆಲ್ಲಾ ಸಂಪದಿಗರನ್ನೂ
ಅಲ್ಲಿಯೇ ಭೇಟಿ ಮಾಡುವ
ಹೊಸ ಯೋಚನೆಯೊಂದು
ಈ ಮನದಲ್ಲಿ ಹೊಳೆದಿದೆ...

- ಆಸು ಹೆಗ್ಡೆ

chaitu78's picture
03
Jun
2010
9:01

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾ. ಸೋಮೇಶ್ವರ ಅವರೇ,

ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು,ಅಲ್ಲಿಗೆ ಬರಲಿಕ್ಕೆ ಪ್ರಯತ್ನ ಪಡುವೆ.

-ಚೈತನ್ಯ

gopinatha's picture
03
Jun
2010
9:04

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಅಭಿನಂದನೆಗಳು ನಾಸೋ ಅವರೇ
ಅದೇ ದಿನವೇ ಸಂಮಿಲನವೂ ಅಲ್ವೇ?

ambika's picture
03
Jun
2010
9:10

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾ. ನಾ. ಸೋಮೇಶ್ವರ ಅವರಿಗೆ ನಮಸ್ಕಾರಗಳು,

ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಕಂತನ್ನು ತಲುಪಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು. ಒಳ್ಳೆಯ ಕಾರ್ಯಕ್ರಮ ನನಗೂ ಬರಬೇಕೆಂಬ ಆಸೆಯಿದೆ. ಮಳೆ ನಮ್ಮ ಕಾರ್ಯಕ್ರಮಕ್ಕೆ ತೊಂದರೆಯನ್ನುಂಟು ಮಾಡದಿರಲಿ ಎಂದು ವರುಣದೇವನನ್ನು ಪ್ರಾರ್ಥಿಸುತ್ತೇನೆ.
ನಿಮ್ಮ ಆಹ್ವಾನಕ್ಕೆ ನನ್ನ ಅಭಿವಂದನೆಗಳು
ಅಂಬಿಕಾ

h.a.shastry's picture
03
Jun
2010
9:55

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಅಕ್ಷರಮಿತ್ರ ನಾಸೋ ಅವರಿಗೆ ನಮಸ್ಕಾರ.
’ಥಟ್’ ಅಂತ ಹೇಳಿಸಲು ಅಲ್ಲಿ ನೀವು ಮಾಡುವ ಶತಪ್ರಯತ್ನದಂತೆ ’ಝಟ್’ ಅಂತ ನಮಗಿಲ್ಲಿ ನೀಡಿರುವ ಆಹ್ವಾನವೂ ನನಗೆ ಮೆಚ್ಚಿಕೆಯಾಯಿತು.
’ಪ್ರಸಾರ ಭಾರತಿ’ಯು ಮುದ್ರಿಸಿರುವ ಆಮಂತ್ರಣ ಪತ್ರಿಕೆ ಕಂಡು ಕೊಂಚ ಬೇಸರವಾಯಿತು.
* ಪತ್ರಿಕೆಯಲ್ಲಿ ನಿಮ್ಮ ಹೆಸರಿರಬೇಕಿತ್ತು.
* ’೧೫೦೦’ ಎಂದು ಸಂಖ್ಯೆಯು ಕನ್ನಡಲಿಪಿಯಲ್ಲಿದ್ದಿದ್ದರೆ ಮನಸ್ಸಿಗೆ ಹೆಚ್ಚು ಮುದವಾಗುತ್ತಿತ್ತು. (ದಿನಾಂಕ ಮತ್ತು ಸಮಯ ಕೂಡ.)
* ’ಸರ್ವೋಚ್ಛ’ ಎಂಬುದು ತಪ್ಪು ಪ್ರಯೋಗ. ಅದು ’ಸರ್ವೋಚ್ಚ’ ಆಗಬೇಕು.
* ನಾಗರಾಜಯ್ಯ ’ಹಂಪಾ’ ಅಲ್ಲ, ’ಹಂ. ಪ.’ (ಕೆಳಗೆ ’ಹಂಪನಾ’ ಎಂದು ತಾವೇ ಸರಿಯಾಗಿ ನಮೂದಿಸಿರುವುದೂ ’ಪ್ರ.ಭಾ.’ ಪ್ರಭೃತಿಗಳ ಅರಿವಿಗೆ ಬರಲಿಲ್ಲ!)
* ’ಅಂತರಾಷ್ಟ್ರೀಯ’ ಸರಿಯಲ್ಲ. ’ಅಂತಾರಾಷ್ಟ್ರೀಯ’ ಸರಿ.
* ’ದೃಷ್ಠಿ’ ತಪ್ಪು. ’ದೃಷ್ಟಿ’ ಸರಿ.
* ’ಅಂತಹೇಳಿ’ ಎಂಬುದು (ಎರಡು ಕಡೆ) ’ಅಂತ ಹೇಳಿ’ ಎಂದಾಗಬೇಕು.
* ’ಸಭಿಕ’ ಎಂಬ ಪದಪ್ರಯೋಗ ಸೂಕ್ತವಲ್ಲ. ಇದರರ್ಥ ’ಜೂಜುಕೋರ’ ಎಂದಾಗುತ್ತದೆ. ಕೆಲವು ನಿಘಂಟುಗಳಲ್ಲಿ ’ಸಭಿಕ’ ಎಂಬ ಪದಕ್ಕೆ ’ಸಭಾಸದ’ ಎಂಬ ಅರ್ಥವನ್ನು ನೀಡಲಾಗಿದೆಯಾದರೂ ಎರಡೂ ವಿಭಿನ್ನಾರ್ಥ ಹೊಂದಿರುವ ಪದಗಳು. ಆದ್ದರಿಂದ ’ಸಭಾಸದ’ ಎಂಬ ಪದವೇ ಇಲ್ಲಿ ಸೂಕ್ತ.

naasomeswara's picture
03
Jun
2010
2:01

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಪ್ರತಿಕ್ರಿಯೆ ನೀಡಿದ ಹಾಗೂ ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.

ಶಾಸ್ತ್ರಿಗಳೇ! ಆಹ್ವಾನ ಪತ್ರಿಕೆಯಲ್ಲಿರುವ ಸ್ಖಾಲಿತ್ಯಗಳನ್ನು ಪಟ್ಟಿ ಮಾಡಿದ್ದೀರಿ. ಆಹ್ವಾನ ಪತ್ರಿಕೆಯನ್ನು ರೂಪಿಸುವ ಆಗಲಿ ಅಥವ ಕರಡನ್ನು ತಿದ್ದುವ ಭಾಗ್ಯ ನನಗಿರಲಿಲ್ಲ. ಇನ್ನೂ ಕೆಲವು ತಪ್ಪುಗಳಿವೆ. ದಯವಿಟ್ಟು ಕ್ಷಮಿಸಿ.
ಸಂಪದಿಗರೆಲ್ಲ ಅಂದು ಭೇಟಿಯಾಗುವುದಾದರೆ, ಕಾರ್ಯಕ್ರಮದ ಮುಗಿದ ನಂತರ ಒಟ್ಟಿಗೆ ಊಟ ಮಾಡೋಣ ಊಟದ ಸ್ಥಳವನ್ನು ನೀವೇ ನಿರ್ಧರಿಸಿ. ಆತಿಥ್ಯದ ಅವಕಾಶವನ್ನು ನನಗೆ ನೀಡಿ.
ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

-ನಾಸೋ

h.a.shastry's picture
04
Jun
2010
9:12

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಅಯ್ಯೋ! ಕ್ಷಮಿಸಬೇಕಾದ್ದು ನೀವು, ದೂರದರ್ಶನದವರನ್ನು. ಇರಲಿ.
(ನೀವಂದಂತೆ, ಆಮಂತ್ರಣಪತ್ರಿಕೆಯಲ್ಲಿ ಇನ್ನೂ ಕೆಲವು ಸ್ಖಾಲಿತ್ಯಗಳಿವೆ ಹೌದು. ವ್ಯಾಕರಣದೋಷ; ಪದದೋಷ; ’ದೃಷ್ಠಿ ವಂಚಿತ’ ಇದು ’ದೃಷ್ಟಿವಂಚಿತ’ ಎಂದಾಗಬೇಕಲ್ಲದೆ ಪದದ ಕೊನೆಯಲ್ಲಿ ಅಲ್ಪವಿರಾಮಚಿಹ್ನೆ ಇರಬೇಕು..ಹೀಗೆ. ಬಿಟ್ಟ್ಹಾಕೋಣ.)
ಸಂಪದಿಗರೆಲ್ಲ ಹದಿಮೂರರಂದು ಕಾರ್ಯಕ್ರಮ ಮುಗಿದ ನಂತರ ಒಟ್ಟಿಗೆ ಊಟಮಾಡುವ ನಿಮ್ಮ ಸಲಹೆ-ಬಯಕೆ ನಮ್ಮೆಲ್ಲರ ಬಯಕೆಯೂ ಹೌದು. ಅಂದು ನನಗೆ ಪೂರ್ವಯೋಜಿತ ಸಾರ್ವಜನಿಕ ಕಾರ್ಯಕ್ರಮವಿರುವುದರಿಂದ ಬರಲು ಸಾಧ್ಯವಾಗುವುದೇ ಅನುಮಾನ. ’ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲದು.’ ಆನಂದರಾಮ ಬರದಿದ್ದರೆ ಸಂಪದಿಗರ ಒಟ್ಟೂಟಕ್ಕೆ ಕುಂದುಂಟಾಗದು. ಖಂಡಿತ ನಡೆಯಲಿ. ಆನಂದರಾಮನು ಅನಂತರ ವಿವರ ತಿಳಿದು ಆನಂದಿಸುತ್ತಾನೆ. ಕಾರ್ಯಕ್ರಮದ ಸ್ಥಳಕ್ಕೆ ಹತ್ತಿರವಿರುವ ಯಾವುದಾದರೊಂದು ಹೋಟೆಲ್ ಸೂಕ್ತವೆನ್ನಿಸುತ್ತದೆ.

ವೆ೦ಕಟೇಶಮೂರ್ತಿ. ವಿ.ಎಸ್.'s picture
03
Jun
2010
2:26

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಶಾಸ್ತ್ರೀರವರೇ,
ನಾನು ತು೦ಬಾ ಸಮಯದಿ೦ದ ಆಮಂತ್ರಣ ಪತ್ರಿಕೆಯಲ್ಲಿನ ಭಾಷಾ ಪ್ರಯೋಗದ ಬಗ್ಗೆ ಯಾರಲ್ಲಿಯಾದರು ಕೇಳಬೇಕು ಅ೦ದು ಕೋಳ್ಳುತ್ತಿದ್ದೆ. ಅದಕ್ಕಾಗಿ ಈ ಸ೦ದರ್ಭವನ್ನು ಬಳಸಿಕೊಳ್ಳುತ್ತೇನೆ.
ಅದೇನೆ೦ದರೆ
ಆಹ್ವಾನ ಪತ್ರಿಕೆಯಲ್ಲಿ "ಅತಿಥಿಗಳು" ಎ೦ದು ಬಳಸುವ ಬಗ್ಗೆ..
"ಅತಿಥಿಗಳು" ಅ೦ದರೆ ಕರೆಯದೇ ಬರುವವರು ಎ೦ಬ ಅರ್ಥ ಬರುವುದಿಲ್ಲವೇ?
"ಅಭ್ಯಾಗತರು" ಎ೦ಬ ಪದದ ಬಳಕೆ ಸರಿಯಲ್ಲವೇ? "ಅತಿಥಿಗಳು" ಅಥವಾ "ಅಭ್ಯಾಗತರು" ಯಾವುದು ಸರಿ?
ಈ ವರೆಗೊ ನನಗೆ ಸಮ೦ಜಸವಾದ ಉತ್ತರ ಸಿಕ್ಕಿಲ್ಲ..
ನನ್ನಿ

naasomeswara's picture
03
Jun
2010
8:06

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಅತಿಥಿಗಳು = ತಿಥಿಯನ್ನು ನೋಡದೆ ಬರುವವರು; ಮೂಲ ಅರ್ಥ ಹಠಾತ್ತಾಗಿ ಮನೆಗೆ ಬರುವ ಬಂಧುಮಿತ್ರರು; ಈಗ ಈ ಶಬ್ಧದ ಅರ್ಥ ಆಮಂತ್ರಣ ಸಹಿತ ಅಥವ ಆಮಂತ್ರಣ ರಹಿತ ಬರುವ ವ್ಯಕ್ತಿಗಳು ಎಂದು ಹಿಂಜಲಾಗಿದೆ. ವಾಡಿಕೆಯಲ್ಲಿ ‘ಆಮಂತ್ರಣವನ್ನು ಪಡೆದು ಬಂದವರು’ ಎಂಬರ್ಥದಲ್ಲಿಯೇ ಹೆಚ್ಚು ಪ್ರಯೋಗವಾಗುತ್ತಿದೆ.

ಅಭ್ಯಾಗತರು=ಇದರ ಅರ್ಥವನ್ನು ಯಾರೂ ಹಿಂಜಿಲ್ಲ. ಆಮಂತ್ರಣವಿಲ್ಲದೆ ಮನೆಗೆ ಬರುವ ವ್ಯಕ್ತಿ ಎಂಬುದು ಸರಿಯಾದ ಅರ್ಥ.

ಆಹ್ವಾನ ಪತ್ರಿಕೆಯನ್ನು ಮುದ್ರಿಸುವಾಗ ಅತಿಥಿಗಳು ಎಂಬ ಶಬ್ಧವನ್ನು ಬಳಸುವ ಬದಲು ‘ಆಮಂತ್ರಿತರು’ ಎಂಬ ಶಬ್ಧವನ್ನು ಬಳಸುವುದು ಹೆಚ್ಚು ಸೂಕ್ತ.

- ನಾಸೋ

shaamala's picture
03
Jun
2010
10:08

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಈ ಕೊಂಡಿ ನೋಡಿ:

http://dsal.uchicago...

ಅಭಿ - ಹತ್ತಿರಕ್ಕೆ (ಮನೆಗೆ), ಆಗತ- ಬಂದವ - ಅಭ್ಯಾಗತ- ಮನೆಗೆ ಬಂದವ - ಆದರೆ ಆಮಂತ್ರಿತನಲ್ಲ, ಅಪರಿಚಿತನೂ ಅಲ್ಲ. ಆತ ಬರುವ ನಿರೀಕ್ಷೆ ಮನೆಯವರಿಗೆ ಇದ್ದಿಲ್ಲ.
ಅಭ್ಯಾಗಮ - (ಹತ್ತಿರಕ್ಕೆ) ಬರುವುದು, (ಹಿಂದಿಯಲ್ಲಿ ಅಭೀ ಶಬ್ದದ ಅರ್ಥ ಬೇರೆ, ಅಲ್ಲಿ ಅಭೀ ಎಂದರೆ ಈಗ ಎಂದಾಗುತ್ತದೆ.)

ಅತಿಥಿಯೂ ಅದೇ ವರ್ಗಕ್ಕೆ ಸೇರಿದವನು.
The unexpected guest is called the atithi, literally meaning "without a set time."

ಆಮಂತ್ರಿತರು, ನಿಮಂತ್ರಿತರು, ಆಹ್ವಾನಿತರು ಇವರೆಲ್ಲ ಕರೆ ಹೇಳಿಸಿಕೊಂಡು ಬರುವವರು :)

ಉತ್ತರ ಸರಿಯಿದೆಯೇ ಎಂದು ಸಂಸ್ಕೃತ ಹೆಚ್ಚು ಬಲ್ಲವರು ಹೇಳಬೇಕು :-)

ಶಾಮಲ

h.a.shastry's picture
04
Jun
2010
8:48

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ವೆಂಕಟೇಶಮೂರ್ತಿ ಅವರೇ, ಇದೀಗಷ್ಟೇ ನಿಮ್ಮ ಪ್ರಶ್ನೆಗಳನ್ನು ಹಾಗೂ ನಾಸೋ ಮತ್ತು ಶ್ಯಾಮಲಾ ಅವರ ಉತ್ತರಗಳನ್ನೂ ನೋಡಿದೆ.
ಆಗಸ್ಟ್ ೨, ೨೦೦೯ರ ’ಕನ್ನಡಪ್ರಭ’ ದಿನಪತ್ರಿಕೆಯ ’ಸಾಪ್ತಾಹಿಕ ಪ್ರಭ’ದಲ್ಲಿ ಈ ಬಗ್ಗೆ ನಾನು ಕೊಟ್ಟಿರುವ ವಿವರಣೆ ಪ್ರಕಟವಾಗಿದ್ದು ಅದು ಈ ಕೆಳಗಿನಂತಿದೆ:
’ಅಭ್ಯಾಗತ’ ಎಂದರೆ ’ಅನಿರೀಕ್ಷಿತವಾಗಿ ಆಗಮಿಸಿದ ಅತಿಥಿ’ ಎಂದರ್ಥ.
(ಅಭಿ+ಆಗತ=ಅಭ್ಯಾಗತ. ’ಅಭಿ’ ಎಂಬ ಉಪಸರ್ಗಕ್ಕೆ ಅದರೊಡನಿರುವ ಶಬ್ದಾನುಸಾರ ನಾನಾ ಅರ್ಥಗಳಷ್ಟೆ.)
’ಅತಿಥಿ’ಯು ಆಹ್ವಾನಿತನಾಗಿರಬಹುದು, ಆಗಿಲ್ಲದೆಯೂ ಇರಬಹುದು.
ಆಮಂತ್ರಣಪತ್ರವೊಂದರಲ್ಲಿ ’ಅಭ್ಯಾಗತ’ ಪದದ ಬಳಕೆಯನ್ನು ಆಕ್ಷೇಪಿಸಿ ನಾನು ಈ ವಿವರಣೆ ನೀಡಿದ್ದೆ. ಆಮಂತ್ರಣಪತ್ರದಲ್ಲಿ ’ಅತಿಥಿ’ ಪದದ ಬಳಕೆಯೇ ಸರಿ. ’ಅಭ್ಯಾಗತ’ ಎಂದರೆ ’ಅನಿರೀಕ್ಷಿತವಾಗಿ ಹಾಗೂ ಆಹ್ವಾನವಿಲ್ಲದೆ ಆಗಮಿಸಿದವ’ ಎಂದರ್ಥ.

ವೆ೦ಕಟೇಶಮೂರ್ತಿ. ವಿ.ಎಸ್.'s picture
04
Jun
2010
9:33

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾ. ನಾ. ಸೋ ರವರೇ, ಶಾಸ್ತ್ರೀರವರೇ,ಹಾಗೂ ಶಾಮಲರವರೇ
ಸಮ೦ಜಸ ವಿವರಣೆಗಾಗಿ ಧನ್ಯವಾದಗಳು.ಉತ್ತರ ಸಿಕ್ಕಿತು..:)
ನನ್ನಿ

ವೆ೦ಕಟೇಶಮೂರ್ತಿ. ವಿ.ಎಸ್.'s picture
03
Jun
2010
9:56

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾ. ನಾ. ಸೋಮೇಶ್ವರ ಅವರಿಗೆ ನಮಸ್ಕಾರಗಳು,
ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಕಂತನ್ನು ತಲುಪಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ಅಲ್ಲಿಗೆ ಬರಲಿಕ್ಕೆ ಪ್ರಯತ್ನ ಪಡುವೆ....
ನನ್ನಿ

raji's picture
03
Jun
2010
10:12

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಸೋಮೇಶ್ವರರೆ, ಪದಬಂಧ ಹೆಚ್ಚಿಗೆ ಇಡಿ ಸರ್. ಹಾಗೇ ಪುಸ್ತಕದ ಜೊತೆಗೆ ಈ ವಿಶೇಷ ಕಂತಿನಲ್ಲಿ ಏನಾದರೂ ಗಿಫ್ಟ್ ಇದೆಯಾ.
ಕಳೆದ ಒಂದು ವರ್ಷದ ಹಿಂದೆ ನಾವು ನೀವು ಹಾಸ್ ಮ್ಯಾಟ್ ಹಾಸ್ಪಿಟಲ್ ನ ಕಟ್ಟೆಯಲ್ಲಿ ಕೆಲ ಕಾಲ ಹರಟಿದ್ದೆವು. ಆಗ ನಿಮ್ಮೊಂದಿಗೆ ನಾನು ಥಟ್ ಅಂತ ಹೇಳಿ ಎನ್ನುವ ವಿಷಯದ ಚರ್ಚೆ ಇಟ್ಟಿದ್ದೆ. ನಿಮಗೆ ಮರೆತು ಹೋಗಿರುತ್ತೆ ಬಿಡಿ. ನಿಮ್ಮ 500ನೇ ಕಂತಿಗೆ ಶುಭವಾಗಲಿ

asuhegde's picture
03
Jun
2010
10:22

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಡಾಕ್ಟ್ರೇ,

ಕಳೆದ ಒಂದು ವರುಷದ ಹಿಂದೆ ಆ "ಹಾಸ್ ಮ್ಯಾಟ್ ಹಾಸ್ಪಿಟಲ್" ಕಟ್ತೆಯಲ್ಲಿ ಹರಟುವಾಗ ಥಟ್ ಅಂತ ಹೇಳಿ ಎನ್ನುವ ವಿಷಯದ ಚರ್ಚೆ ಇಟ್ಟಿದ್ದ, ಅಲ್ಲದೇ ೧೫೦೦ ನೇ ಕಂತನ್ನು ೫೦೦ಕ್ಕೆ ಇಳಿಸಿದ, ಈ ಸಂಪದಿಗರ(ಗಿತ್ತಿಯ) ಬಗ್ಗೆ ನೆನಪಾದರೆ, ಇವರ ಪರಿಚಯವನ್ನು ಅನ್ಯ ಸಂಪದಿಗರಿಗೂ ದಯವಿಟ್ಟು ಮಾಡ್ಸಿ... ಪುಣ್ಯಕಟ್ಟಿಕೊಳ್ಳಿ...

:)

raji's picture
03
Jun
2010
10:26

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಸರೇಶ್, ಈ ಮೊದಲು ಇವರು ಚಂದನ ಅಂದರೆ ಡಿಡಿ9ನಲ್ಲಿ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟದ್ದಾರೆ. ಅದರಲ್ಲಿ ನೆನಪಿರುವುದು ಇತ್ತೀಚಿಗಿನ ಥಟ್ ಅಂತ ಹೇಳಿ. ಹಾಗಾಗಿ ಆ ಹೆಸರನ್ನೇ ಹೇಳಿದೆ. ಇದು ಪ್ರಾರಂಭಾವಾಗಿ ಮೂರು ವರ್ಷಕ್ಕೂ ಹೆಚ್ಚಿಗೆ ಆಗಿದೆ ಅಲ್ವಾ. 500ನೇ ಕಂತು 500ಕ್ಕೆ ಇಳಿಸಿದ?

raji's picture
03
Jun
2010
10:29

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಆಸ್ಪತ್ರೆಗೆ ಹೊದಾಗ ಅವರು ಅಲ್ಲಿಗೆ ಬಂದಿದ್ದರು. ಅದನ್ನು ಜ್ಞಾಪಿಸಿಕೊಂಡಿದ್ದು ಅಷ್ಟೆ.
ಪುಣ್ಯ ಕಟ್ಟಿಕೊಳ್ಳೋ ಮಾತೆಲ್ಲಾ ಯಾಕ್ ಬುದ್ದಿ.

asuhegde's picture
03
Jun
2010
10:34

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ನಿಮ್ ಪರಿಚಯಾನ ಅವರು ನಮಗೆ ಮಾಡ್ಸಿ ಪುಣ್ಯ ಕಟ್ಟಿಕೊಳ್ಳಲಿ ಅನ್ನುವಾಸೆ... ಅಷ್ಟೇ...!

asuhegde's picture
03
Jun
2010
10:33

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ತಲೆಬರಹ ಓದಿ... ಇದು ೧೫೦೦ನೇ ಕಂತು!

"ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ"

mannu's picture
03
Jun
2010
10:19

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಿಮಗೆ ಹಾಗೂ
ನಿಮ್ಮ ತಂಡಕ್ಕೆ ಅಭಿನಂದನೆಗಳು.
ಇನ್ನು ಹೆಚ್ಚು ಹೆಚ್ಚು ಕಂತುಗಳು ಪ್ರಸಾರವಾಗಲೆಂದು ಆಶಿಸುತ್ತೇನೆ.ಬರಲಿಕ್ಕೆ ಆಗದಕ್ಕೆ ಖೇದ.
ಮನು

vinyasa's picture
03
Jun
2010
10:57

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ನಾಸೋ ಸರ್,

’ಥಟ್ ಅಂತ ಹೇಳಿ’ ಕಾರ್ಯಕ್ರಮ ೧೫೦೦ ರ ಗಡಿ ತಲುಪುತ್ತಿರುವ ಶುಭಸಂದರ್ಭದಲ್ಲಿ ನಿಮಗೆ ನನ್ನ ಅಭಿನಂದನೆಗಳು. ನಮಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು.

ಅರವಿಂದ್'s picture
03
Jun
2010
2:17

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಶ್ರೀಯುತ ನಾ ಸೋಮೇಶ್ವರರವರಿಗೆ,

ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಎರಡು ಮಾತಿಲ್ಲ. ಆದರೆ ಇದು ೧೫೦೦ನೇ ಸಂಭ್ರಮ ಅಂತೀರಿ, ನಿಮ್ಮ ಪರಿಚಯ ಪತ್ರದಲ್ಲಿ ಈಗಾಗಲೇ ೧೫೦೨ ಕಂತುಗಳು ಮುಗಿದಿವೆ ಎಂದು ನಮೂದಿಸಿದ್ದೀರಿ.ಯಾವುದು ಸರಿ ???

>>ದೂರದರ್ಶನದಲ್ಲಿ ಈಗ `ಥಟ್ ಅಂತ ಹೇಳಿ` ಕ್ವಿಜ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. 1502 ಕಂತುಗಳು ಮುಗಿದಿವೆ<<........????

ಅರವಿಂದ್

naasomeswara's picture
03
Jun
2010
2:43

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಅರವಿಂದ್, ಸೂಕ್ಷ್ಮವಾಗಿ ಗಮನಿಸಿದ್ದಕ್ಕೆ ಅಭಿನಂದನೆಗಳು.
ಇವೆರಡು ಮುದ್ರಣವಾದ ಹಾಗೂ ಪ್ರಸಾರವಾದ ಸಂಖ್ಯೆಗಳನ್ನು ಸೂಚಿಸುತ್ತವೆ.
ವಾಸ್ತವದಲ್ಲಿ ಈಗಾಗಲೆ ಜುಲೈ ತಿಂಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಮುದ್ರಿಸಿಟ್ಟುಕೊಂಡಿದ್ದೇವೆ. ಅಂದರೆ ಮುದ್ರಣದ ಸಂಖ್ಯೆಯು ೧೫೫೦ ನ್ನು ಮೀರುತ್ತದೆ. ಈ ಶನಿವಾರ ಹಾಗೂ ಭಾನುವಾರ ೧೫ ಕಾರ್ಯಕ್ರಮಗಳನ್ನು ಮುದ್ರಿಸಲಿದ್ದೇವೆ. ಆಗ ಒಟ್ಟು ಮುದ್ರಣವಾಗಿರುವ ಕಾರ್ಯಕ್ರಮಗಳ ಸಂಖ್ಯೆಯು ೧೫೬೫ ಆಗುತ್ತದೆ.

೧೫೦೦ ನೆಯ ಕಾರ್ಯಕ್ರಮವಿನ್ನೂ ಪ್ರಸಾರವಾಗಬೇಕಿದೆ. ಅದನ್ನು ವಿಶೇಷವಾಗಿ ಮುದ್ರಿಸಿ ಪ್ರಸಾರ ಮಾಡಲು ಈಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಒಟ್ಟು ೩ ಗಂಟೆಗಳ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಎಷ್ಟು ಗಂಟೆಯ ಕಾರ್ಯಕ್ರಮವು ಕಂತಿನ ರೂಪದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಸಧ್ಯಕ್ಕಿಲ್ಲ.

-ನಾಸೋ

mowna's picture
06
Jun
2010
5:59

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಆತ್ಮೀಯ ನಾ.ಸೋಮೇಶ್ವರ ಅವರಿಗೆ,

ನಮ್ಮ ನೆಚ್ಚಿನ "ಚಂದನ"ದಲ್ಲಿ ಮೂಡಿಬರುತ್ತಿರುವ "ಥಟ್ ಅಂತ ಹೇಳಿ" ಕಾರ್ಯಕ್ರಮ ೧೫೦೦ ರ ಗಡಿ ದಾಟಿದ್ದು ಕೇಳಿ ಬಹಳ ಸಂತೋಷವಾಯಿತು.
ನಾನು ತಾವು ಕೇಳುವ ಪ್ರಶ್ನೆಗಳನ್ನು ಬರೆದಿಟ್ಟಿಕೊಳ್ಳುತ್ತೀರುತ್ತೇನೆ. ಬರಿ ದಾರಾವಾಹಿಗಳೆ ತುಂಬಿರುವ ವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮ ಕಳಸ ಪ್ರಾಯವಾಗಿದೆ.

ನಮ್ಮ ಜ್ಞಾನವನ್ನು ಹೆಚ್ಚಿಸುವ ಈ ಕಾರ್ಯಕ್ರಮ ನಿರಂತರವಾಗಿ ಮೂಡಿಬರುತ್ತಿರಲಿ ಎಂಬುದೆ ನಮ್ಮೆಲ್ಲಾರ ಆಶಯ. ನಾನು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ
ಅದರೆ "ಚಂದನ"ದಲ್ಲಿ ಆ ವಿಶೇಷ ಕಾರ್ಯಕ್ರಮದ ತುಣುಕುಗಳನ್ನಾದರು ತೋರಿಸುವಿರಿ ಎಂದು ಚಾತಕ ಪಕ್ಷಿಯ ತರಹ ಕಾಯುತ್ತಿರುತ್ತೇನೆ.

ಚಂದನಕ್ಕೂ ತಮಗೂ ನಮ್ಮ ಹಾರ್ದಿಕ ಶುಭಾಶಯಗಳು.

ಮೌನ.

smurthygr's picture
13
Jun
2010
11:52

ಉ: ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ ಈ ಶುಭ ಸಂದರ್ಭದಲ್ಲಿ ಅಭಿನಂದನೆಗಳು.

ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾಗೂ ಇನ್ನು ಹೆಚ್ಚು ಹೆಚ್ಚು ಕಂತುಗಳು ಪ್ರಸಾರವಾಗಲೆಂದು ಹಾರೈಸುತ್ತೇನೆ.