ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಗದೊಂದಿಷ್ಟು ತರಲೆ ಕವನಗಳು!

Yes...U..R...Drunk...

ಸಮಾನಾಭಿರುಚಿ

ನನಗೆ ಈ ಗಂಡಸರನ್ನು ಕಂಡರೆ ಆಗೋಲ್ಲ

ಪಾಷಾಣ ಹೃದಯಿಗಳು ಎಂದಳು ಹುಡುಗಿ

ನನಗೂ ಹೆಂಗಸರನ್ನು ಕಂಡರೆ ಹಿಡಿಸೋಲ್ಲ

ಕರುಣೆಯಿಲ್ಲದ ಕಲ್ಲುಗಳು ಎಂದ ಹುಡುಗ

ಅರೆ! ನಮ್ಮಿಬ್ಬರದು ಸಮಾನಾಭಿರುಚಿ!

ತಡ ಯಾಕೆ? ಆಗೋಣ ಈಗಲೇ ಜೋಡಿ!

 

ಸ್ವರ್ಗೀಯ ಗಾನ

ರಿ! ನನ್ನ ಹಾಡನ್ನು ಕೇಳಿ ನಮ್ಮ ಮಹಿಳಾ ಸಂಘದ ಅಧ್ಯಕ್ಷಿಣಿ

ನನ್ನದು ಸ್ವರ್ಗೀಯ ಗಾನ ಎಂದು ಹೊಗಳಿದರು!

ಹೌದು ಕಣೇ! ಅನುಮಾನವೇ ಇಲ್ಲ! ನೀನು ಅಲ್ಲಿರಲೇ ಲಾಯಕ್ಕು

ಎಂದು ಗಂಡ ಮುಗುಮ್ಮಾಗಿ ಉತ್ತರಿಸಿದನು!!

 

ನೋ ಬಾರ್!

ದೇವದಾಸ ಕನ್ಯೆ ಬೇಕೆಂದು ನೀಡಿದ ಜಾಹೀರಾತು

ಏಜ್ ನೋ ಬಾರ್! ಕ್ಯಾಸ್ಟ್ ನೋ ಬಾರ್!

ಸ್ಟೇಟ್ ನೋ ಬಾರ್! ಕಲರ್ ನೋಬಾರ್!

ಆದರೆ ಹುಡುಗಿ ಅಪ್ಪ, ವುಡ್ ಬಿ ಫಾದರ್ ಇನ್ ಲಾ

ಶುಡ್ ಓನ್ ಅಟ್ ಲೀಸ್ಟ್ ಒನ್ ಬಾರ್!

ಬಾರ್ ಇರುವುದೇ ನಮಗಾಗಿ

ಬ್ರಾಂಡ್ ಇರುವುದೇ ನಮಗಾಗಿ

ಬ್ರಾಂದಿ ಬೇಕೆ? ವಿಸ್ಕಿ ಬೇಕೆ?

ಕುಡಿಯಿರಿ ಎಲ್ಲಾ ಹಾಯಾಗಿ

ಒಂದೇ ಬಾರಿನ ಕುಡುಕರು ನಾವು

ಸೋದರರಂತೆ ನಾವೆಲ್ಲ! 

ದೇವರ ಆಣೆ ನಿಮ್ಮನ್ನು ಬಿಟ್ಟು

ಎಂದಿಗೂ ಕುಡಿಯೋಲ್ಲ!!!

ಬಾ...ರ್ ಇಇಇರು..ವು..ದೇ ನಿಮ್..ಮಗಾ..ಗಿ!!!

 

ಅಕಟಕಟಾ!

ಅಕಟಕಟ! ಯಾವ ಆಸ್ಪತ್ರೆಯಲ್ಲಿ

ನಾನು ಆಗಿರುವೆನೋ ಡಾಕ್ಟರ್!

ಅಲ್ಲಿಯೇ ಕೆಲಸ ಮಾಡುತಿಹಳು

ನರ್ಸ್ ಆಗಿ ನನ್ನ ಹಾಫ್ ಬೆಟರ್!

ಏನು ದುರದೃಷ್ಟವಯ್ಯ ನನ್ನದು

ಹೆಂಡತಿಯನ್ನು ಕರೆಯಬೇಕಾಗಿದೆ

ಎಲ್ಲರ ಮುಂದೆ ಸಿಸ್ಟರ್..ಸಿಸ್ಟರ್!!

 -------- 

-ನಾಸೋ

www.yakshaprashne.org

http://1.bp.blogspot.com/_T3vO7zzx7CU/RvPuBJV7r6I/AAAAAAAAB2g/wOhOCGF8Jhw/s400/b1.jpg

 

Your rating: None Average: 4 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಗದೊಂದಿಷ್ಟು ತರಲೆ ಕವನಗಳು!

thesalimath's picture

ಟೈಮ್ಸ್ ನ ಮೆಟ್ರಮೊನಿಯಲ್ಲಿ ಒಂದು ಜಾಹೀರಾತು ನೋಡಿದ್ದೇ..

A beautiful bride wanted for a tall handsome groom. Age, caste, sex no bar.

'ಬಾರ್' ಬಾರಿಕ್ ಚುಟುಕು ಓದಿ ನೆನಪಿಗೆ ಬಂತು.

ಈ ಮೇಲಿನ ಚುಟುಕುಗಳನ್ನೆಲ್ಲ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಕಡೆ ಕೇಳಿದಂಗಿದೆ.

ಉ: ಮಗದೊಂದಿಷ್ಟು ತರಲೆ ಕವನಗಳು!

naasomeswara's picture

ಹೌದು...
ವಿವಿಧ ಮೂಲಗಳಲ್ಲಿ ಕೇಳಳುವಿಕೆ ಹಾಗೂ ಓದುವಿಕೆಯ ಸಮಷ್ಠಿ ರೂಪವಿದು!
-ನಾಸೋ

ಉ: ಮಗದೊಂದಿಷ್ಟು ತರಲೆ ಕವನಗಳು!

asuhegde's picture

>>Yes, You're Drunk :))<<
ನಿಂಗೆ ಹೆಂಗೆ ಗೊತ್ತಾಯ್ತಮ್ಮಣ್ಣೀ...?

ಡಾಕ್ಟ್ರೇ ನಿಮ್ಮ ತರಲೆ ಹೀಗೆಯೇ ಜಾರಿಯಿರಲಿ
ಒಂದಕ್ಕಿಂತ ಒಂದು ಹೀಗೆಯೇ ಭಾರಿಯಾಗಿರಲಿ..
:-)

ಉ: ಮಗದೊಂದಿಷ್ಟು ತರಲೆ ಕವನಗಳು!

naasomeswara's picture

:)

ಉ: ಮಗದೊಂದಿಷ್ಟು ತರಲೆ ಕವನಗಳು!

manjunathams's picture

:D :-D

ಉ: ಮಗದೊಂದಿಷ್ಟು ತರಲೆ ಕವನಗಳು!

shaamala's picture

ನಾಸೋ ರವರೆ,

ಫೋಟೋ ಸಕ್ಕತ್! :)

ಶಾಮಲ

ಉ: ಮಗದೊಂದಿಷ್ಟು ತರಲೆ ಕವನಗಳು!

manjunath s reddy's picture

ಇದೇ ರೀತಿಯ ಭಾವಚಿತ್ರವನ್ನು ಚಾಮರಾಜಪೇಟೆಯ ಒಂದು sign board ಅಂಗಡಿಯ ಬಳಿ ನೋಡಿದ್ದ ನೆನಪು.. ಈಗ ಅದನ್ನು ಅಳಿಸಿದ್ದಾರೆ.. :)

ತರ್ಲೆ ಹೀಗೆ ನಡೆಯ್ತಿರಲಿ.. ;)

ಉ: ಮಗದೊಂದಿಷ್ಟು ತರಲೆ ಕವನಗಳು!

Sunil Jayaprakash's picture

ತರಲೆ ಸುಬ್ಬ !!!

ಉ: ಮಗದೊಂದಿಷ್ಟು ತರಲೆ ಕವನಗಳು!

ambika's picture

<ನಾನು ಆಗಿರುವೆನೋ ಡಾಕ್ಟರ್!
ಅಲ್ಲಿಯೇ ಕೆಲಸ ಮಾಡುತಿಹಳು
ನರ್ಸ್ ಆಗಿ ನನ್ನ ಹಾಫ್ ಬೆಟರ್!
ಏನು ದುರದೃಷ್ಟವಯ್ಯ ನನ್ನದು >

ಕೊನೆಯ ಸಾಲನ್ನು ಓದುವ ಮೊದಲೇ ಪಾಪ ಡಾಕ್ಟರ್ ಆಸ್ಪತ್ರೆಯ ಇತರ ನರ್ಸ್ ಗಳೊಂದಿಗೆ ಮಾತನಾಡಲು ಅವರನ್ನು ಕಿಚಾಯಿಸಲು ಅಸಾಧ್ಯವಾಯಿತಲ್ಲ !!!!!
ಅನಿಸಿತು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ