ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › naasomeswara ರವರ ಬ್ಲಾಗ್

‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ

October 30, 2007 - 8:02pm — naasomeswara

ದೇವದಾಸಿಯ ನಾಜೂಕಯ್ಯ, ಸದಾರಮೆಯ ಕಳ್ಳ, ಮಕ್ಮಲ್ ಟೋಪಿಯ ನಾಣಿ, ಭ್ರಷ್ಟಾಚಾರದ ದಫೇದಾರ್, ನಡುಬೀದಿಯ ನಾರಾಯಣ - ಇವರೆಲ್ಲರ ಜೊತೆ ಒಮ್ಮೆ ಮಾತನಾಡಬೇಕೆನಿಸಿತು. ಕೂಡಲೇ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರೆಸಿದೆವು. ಕರ್ನಾಟಕ ರಾಜ್ಯೋತ್ಸವ ಸಮಯಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರು ಬೇಕೆ?

ನಮಸ್ಕಾರ ಸರ್ ಎನ್ನುತ್ತಲೇ, ಬಹಳ ಪರಿಚಯ ಇರುವವರ ಹಾಗೇ ಆತ್ಮೀಯವಾಗಿ ಬೆನ್ನ ಮೇಲೆ ಕೈಯಾಡಿಸಿ, ನಿಮ್ಮ ಕಾರ್ಯಕ್ರಮ ಚೆನ್ನಾಗಿ ಬರ್ತಾ ಇದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಸಾದನ ಕೊಠದಿಗೆ ಬರುತ್ತಾ ಇದ್ದ ಹಾಗೆ ಚಪ್ಪಲಿಯನ್ನು ಕಳಚಿದರು. ಪ್ರಸಾದನ ಸಾಮಾಗ್ರಿಗಳ ಬಳಿ ಹೋಗಿ, ಒಂದು ಚೂರು ಬಣ್ಣವನ್ನು ಬೆರಳ ತುದಿಯಿಂದ ತೆಗೆದುಕೊಂಡು ಕನ್ನಡಿಯ ಮೇಲೆ ಶ್ರೀಕಾರವನ್ನು ಬರೆದು, ನರಸಿಂಹನ ಧ್ಯಾನ ಮಾಡಿ, ಬಣ್ಣ ಹಚ್ಚಿಕೊಳ್ಳಲು ಕೂತರು.

 ಕಾರ್ಯಕ್ರಮದಲ್ಲಿ ನಾನು ಕೇಳಲಿರುವ ಪ್ರಶ್ನೆಗಳನ್ನು ಮುಂಚಿತವಾಗಿ ತಿಳಿಯಬಯಸಲಿಲ್ಲ. ಮಾಸ್ಟರ್ ಹಿರಣ್ಣಯ್ಯ ಅವರನ್ನು ರಂಗದ ಮೇಲೆ ನೋದಿಧ್ಧೆ. ಚಿತ್ರದಲ್ಲಿ ನೋಡಿದ್ದೆ. ಟಿವಿಯಲ್ಲಿ ನೋಡಿದ್ದೆ. ಇಷ್ಟು ಹತ್ತಿರದಿಂದ ಮಾತನಾದಿದ್ದು ಇದೇ ಮೊದಲು. ರಾಜಕಾರಣಿಗಳ ಜನ್ಮ ಜಾಲಾಡುವುದರಲ್ಲಿ ಸಿದ್ಢಹಸ್ತರಾದ ಇವರ ಬಗ್ಗೆ ನನ್ನ ಒಂದು ಅಸಮಾಧಾನ ಇತ್ತು. ಹಿರಣ್ಣಯ್ಯನವರು ತಮ್ಮ ‘ಕಪಿಮುಷ್ಟಿ‘ ನಾತಕವನ್ನು ಆಡುವಾಗ ಅದನ್ನು ನಿಲ್ಲಿಸಲು ಶ್ರೀಮತಿ ಇಂದಿರಾಗಾಂಧಿಯವರು ಪ್ರಯತ್ನಿಸಿದ್ದರು. ಅದನ್ನು ಹಿರಣ್ಣಯ್ಯನವರು ಸಮರ್ಥವಾಗಿ ಎದುರಿಸಿದ್ದರು. ಆದರೆ ಅವರ ಮೊಮ್ಮೊಗಳಿಗೆ ‘ಪ್ರಿಯದರ್ಶಿನಿ‘ ಎಂದು ಶ್ರೀಮತಿ ಗಾಂಧಿಯವರ ಹೆಸರನ್ನೇ ಇಟ್ಟಿದ್ದರು. ನನಗೆ ಇದೊಂದು ಒಗಟಾಗಿತ್ತು! ಈ ಬಗ್ಗೆ ಪ್ರಶ್ನೆ ಕೇಳಿದೆ.

‘ಶ್ರೀಮತಿ ಗಾಂಧಿಯವರ ಗಂಡು ಧೈರ್ಯವನ್ನು ನಾನು ಮೆಚ್ಚುತ್ತೇನೆ. ಗುಣಕ್ಕೆ ಮತ್ಸರವೇ?  ಅವರ ಹೆಸರನ್ನು ನನ್ನ ಮೊಮ್ಮೊಗಳಿಗೆ ಇಟ್ಟಿದ್ದೇನೆ‘ ಎಂದರು.

ಹಿರಣ್ಣಯ್ಯನವರು ಥಮ್ಮ ನಾಟಕಗಳಲ್ಲಿ ಲಂಚವನ್ನು, ಭ್ರಷ್ಟಾಚಾರವನ್ ತೀವ್ರವಾಗಿ ಖಂಡಿಸಿದವರು. ಅವರು ತಮ್ಮ ನಿಜ ಬದುಕಿನಲ್ಲಿ ಎಂದಾದರು ಲಂಚ ಕೊಡುವಂತಹ ಪ್ರಸಂಗ ಬಂದಿತೆ ಎಂದು ಪ್ರಶ್ನಿಸಿದೆ. ಅದಕ್ಕವರು ನಾನು ಎಂದೂ ಲಂಚವನ್ನು ಕೊಟ್ಟಿಲ್ಲ. ಆದರೆ ನನ್ನ ಪರವಾಗಿ ಬೇರೆಯವರು ಕೊಟ್ಟಿರಬಹುದು ಎಂದರು.

ಇಂತಹ ಹಲವು ಒಳನೋಟಗಳನ್ನು ನೀಡುವ ಕಾರ್ಯಕ್ರಮ ಇದೇ ರಾಜ್ಯೋತ್ಸವದ ದಿನದಂದು ‘ಚಂದನ‘ದಲ್ಲಿ ರಾತ್ರಿ ೯.೩೦ಕ್ಕೆ ಪ್ರಸಾರವಾಗುತ್ತಿದೆ. ದಯವಿಟ್ಟು ಒಮ್ಮೆ ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

-ಡಾ.ನಾ.ಸೋಮೇಶ್ವರ

~.~
  • naasomeswara ರವರ ಬ್ಲಾಗ್
  • Login or register to post comments
  • 375 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 3, 2007 - 4:12pm — ರಾಮಕುಮಾರ್

ಉ: ‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ

ರಾಮಕುಮಾರ್'s picture

ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಹಿರಣ್ಣಯ್ಯನವರ ಮೊನಚು ಮಾತು ಎಂದಿನಂತೆ ವಿಚಾರಪ್ರಚೋದಕವಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 3, 2007 - 6:45pm — Sunil Jayaprakash

ಉ: ‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ

Sunil Jayaprakash's picture

ಛೇ, ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡೆ ಎಂಬ ಕೊರಗಿದೆ. ಎಂದಾದರೂ ಇದು ಮರುಪ್ರಸಾರವಾಗುವುದೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಾ|| ಮಾಸ್ಟರ್ ಹಿರಣ್ಣಯ್ಯ
  • ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
  • ಯುಎಸ್‌ಬಿ ಬಗ್ಗೆ ನನ್ನ ಲೇಖನ
  • ಗ್ರೀನ್ ಪೆನ್ನಿನ ಮಹಿಮೆ !
Syndicate content

ಲೇಖಕರು

naasomeswara's picture

ಪೂರ್ಣ ಹೆಸರು
naasomeswara

ಪರಿಚಯ

ವೃತ್ತಿಯಲ್ಲಿ ವೈದ್ಯ. ಪ್ರವೃತ್ತಿಯಲ್ಲಿ ಬರಹಗಾರ. ವಿಜ್ಞಾನ, ವೈದ್ಯಕೀಯ ಬರಹಗಳು, ಪುಸ್ತಕಗಳು ಒಂದಷ್ಟು ಪ್ರಕಟವಾಗಿವೆ. ದೂರದರ್ಶನದಲ್ಲಿ ಈಗ `ಥಟ್ ಅಂತ ಹೇಳಿ` ಕ್ವಿಜ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. 900 ಕಂತುಗಳು ಮುಗಿದಿವೆ. ಹೊಸ ಅರಿವು, ಹೊಸ ನೋಟ, ಹೊಸ ಗೆಳೆತನದಲ್ಲಿ ಆಸಕ್ತಿಯಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:50pm
  • bvenkatraya
    ಉ: ಗೆದ್ದೆತ್ತಿನ ಬಾಲ
    October 16, 2008 - 12:39pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:38pm
  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:34pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:32pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:29pm
  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 117 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator