ಹಂಪಿಯ ಕೆಲವು ಚಿತ್ರಗಳು
ನಮಸ್ಕಾರ ಸ್ನೇಹಿತರೇ ಕಳೆದ ಬ್ಲಾಗ್ ನಲ್ಲಿ ಹಂಪಿಯ ಹಲವು ಪೋಟೋಗಳನ್ನು ಹಾಕಿದ್ದೆ ಈಗ ಇನ್ನಷ್ಟು ಪೋಟೋಗಳನ್ನು ಹಾಕ್ತಾ ಇದ್ದೇನೆ ಹೇಗಿವೆ ಇವು.....
ಹಂಪಿಯಲ್ಲಿ ನಾ ಕಂಡ ಸೂರ್ಯಾಸ್ಥಮ
ಹಂಪಿಯ ಸ್ಮಾರಕ
ಹಂಪಿಯ ಕಮಲ ಮಹಲ್ ನ ಚಿತ್ರ
ಹಂಪಿಯಲ್ಲಿ ಹಾಳು ಬಿದ್ದ ಸ್ಮಾರಕದ ನೋಟ
ಆನೆಲಾಯದ ಬಳಿ ಹಂಪಿಯ ಸ್ಮಾರಕ
ಆನೆಲಾಯ
ಕೆತ್ತನೆಯ ಚಿತ್ತಾರ
ಹಂಪಿಯ ಸ್ಮಾರಕ
ಕಲ್ಲಿನಲ್ಲಿ ಕೆತ್ತನೆ
ಕಲ್ಲಿನ ಮೇಲೆ ಚರಿತ್ರೆಯ ಕೆತ್ತನೆ
ಹಂಪಿಯ ಸ್ಮಾರಕ
ಹಂಪಿಯ ಸ್ಮಾರಕ
ಹಂಪಿಯ ಸ್ಮಾರಕ
ಹಂಪಿಯ ಸ್ಮಾರಕ
ಕಲ್ಲಿನ ರಥ
ಹಂಪಿಯ ಸ್ಮಾರಕ
ಆನೆಗುಂದಿ ದುರ್ಗ ದೇವಾಲಯ
64 ಕಂಬಗಳುಳ್ಳ ಕಲ್ಲಿನ ಮಂಟಪ
ಆಗಿನ ಕಾಲದ ಗಗನಮಹಲ್ ಈಗ ಪಂಚಾಯ್ತಿ ಕಾರ್ಯಾಲಯ
ಆನೆಗುಂದಿಯ ನವವೃಂದಾವನ
ದೂರದಲ್ಲಿ ನಾನು......
ನನ್ನನ್ನೂ ನೋಡಿ....
- Nagaraj.G's blog
- Login or register to post comments
- 920 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹಂಪಿಯ ಕೆಲವು ಚಿತ್ರಗಳು
ಅಬ್ಬಾ ಇಷ್ಟೊಂದು ಸುಂದರವಾಗಿದೆಯೇ ಹಂಪಿ!!! :) ಸೂಪರ್ಬ್ ಚಿತ್ರಗಳು.
ಉ: ಹಂಪಿಯ ಕೆಲವು ಚಿತ್ರಗಳು
ಕಣ್ಣಾರೆ ನೋಡಿದರೆ ಇನ್ನೂ ಸೂಪರ್ ಆಗಿರತ್ತೆ ದಿವ್ಯಾರವರೆ.....
ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸತ್ತೆ.....ತಮ್ಮ ಪ್ರತಿಕ್ರಿಯೆಗೆ ನನ್ನಿ.....
ನಾಗರಾಜ್
ಉ: ಹಂಪಿಯ ಕೆಲವು ಚಿತ್ರಗಳು
<<ಕಣ್ಣಾರೆ ನೋಡಿದರೆ ಇನ್ನೂ ಸೂಪರ್ ಆಗಿರತ್ತೆ ದಿವ್ಯಾರವರೆ....>>.
ನಿಜ ನಾಗರಾಜ್ ಅವರೇ,
ನಾವು ಶಾಲೆಯಿಂದ ಪ್ರವಾಸ ಹೋದಾಗ ಗೈಡ್ ಒಬ್ಬರು ವಿಜಯ ವಿಟ್ಠಲ ಮಂದಿರದ ಕಂಬಗಳಲ್ಲಿ ಮೋಹಕವಾದ ಸ್ವರಗಳನ್ನು ನುಡಿಸಿ ತೋರಿಸಿದ್ದರು. ಈ ಕಂಭಗಳ ಮಹತ್ವ ತಿಳಿಯದೆ ಪ್ರವಾಸಿಗರು ಮನಸ್ಸಿಗೆ ಬಂದ ಹಾಗೆ ಕುಟ್ಟಿ ಹೊಡೆದು ಅವುಗಳನ್ನು ಘಾಸಿ ಮಾಡುವರೆಂದು ಬಹಳ ಕಾಳಜಿ ಕಳವಳ ತೋರಿದ್ದರು ಆ ಗೈಡ್. ಈಗಲೂ ಅದು ನನಗೆ ಚೆನ್ನಾಗಿ ನೆನಪಿದೆ.
ಮತ್ತೆ ಮನೆಯವರ ಜೊತೆ ಹೋದಾಗ ಆ ಕಂಭಗಳನ್ನು ಮುಟ್ಟಲು ಯಾರಿಗೂ ಅನುಮತಿಯಿಲ್ಲ, ಹೀಗಾಗಿ ಯಾವುದೇ ಮಾರ್ಗದರ್ಶಿಗಳು ಅಲ್ಲಿ ಈಗ ಕೆಲಸ ಮಾಡುತ್ತಿಲ್ಲ ಎಂದಿದ್ದರು. ಈಗಿನ ಪರಿಸ್ಥಿತಿ ಹೇಗೋ? ಕಣ್ಣಾರೆ>
ಅಂದ ಹಾಗೆ ಚಿತ್ರಗಳು ಬಹಳ ಚೆನ್ನಾಗಿವೆ, ನೀವು ತೆಗೆದ ಮೇಲೆ ಕೇಳಬೇಕೆ? ಅವು ಬರೀ ಚಿತ್ರಗಳಲ್ಲ ಶಬ್ದಚಿತ್ರಗಳು!
ಶಾಮಲ
ಉ: ಹಂಪಿಯ ಕೆಲವು ಚಿತ್ರಗಳು
ಶಾಮಲರವರೆ ಪ್ರತಿಕ್ರಿಯೆಗೆ ನನ್ನಿ
>>>>ಮನೆಯವರ ಜೊತೆ ಹೋದಾಗ ಆ ಕಂಭಗಳನ್ನು ಮುಟ್ಟಲು ಯಾರಿಗೂ ಅನುಮತಿಯಿಲ್ಲ, ಹೀಗಾಗಿ ಯಾವುದೇ ಮಾರ್ಗದರ್ಶಿಗಳು ಅಲ್ಲಿ ಈಗ ಕೆಲಸ ಮಾಡುತ್ತಿಲ್ಲ ಎಂದಿದ್ದರು. ಈಗಿನ ಪರಿಸ್ಥಿತಿ ಹೇಗೋ?<<<<<
ಯುನೆಸ್ಕೋದವರು ಮತ್ತು ಪುರಾತತ್ವ ಇಲಾಖೆಯವರು ವಿಠ್ಠಲ ಮಂದಿರವನ್ನು ದುರಸ್ಥಿ ಮಾಡುತ್ತಿರುವುದರಿಂದ ಅಲ್ಲಿ ಯಾರನ್ನೂ ಸಹ ಬಿಡುವುದಿಲ್ಲ.<<<
ನಾಗರಾಜ್
ಉ: ಹಂಪಿಯ ಕೆಲವು ಚಿತ್ರಗಳು
<<ಯುನೆಸ್ಕೋದವರು ಮತ್ತು ಪುರಾತತ್ವ ಇಲಾಖೆಯವರು ವಿಠ್ಠಲ ಮಂದಿರವನ್ನು ದುರಸ್ಥಿ ಮಾಡುತ್ತಿರುವುದರಿಂದ ಅಲ್ಲಿ ಯಾರನ್ನೂ ಸಹ ಬಿಡುವುದಿಲ್ಲ.>>
ದೇವ್ರೇ ಗತಿ, ದುರಸ್ತಿ ನೆಪದಲ್ಲಿ ಏನೇನು ಕದ್ದು ಎಲ್ಲೆಲ್ಲಿಗೆ ಸಾಗಿಸ್ತಾರೋ, ಏನು ಹಾಳು ಮಾಡ್ತಾರೋ! ಹುಶ್!ಯುನೆಸ್ಕೋದವರು>
ಉ: ಹಂಪಿಯ ಕೆಲವು ಚಿತ್ರಗಳು
:)
ಅದಂತು ನನಗೆ ಗೊತ್ತಿಲ್ಲ. ನಾನು ನೊಡಿದ ಪ್ರಕಾರ ಬೀಳುತ್ತಿದ್ದ ಕಂಬಗಳನ್ನು ನಿಲ್ಲಿಸುವ ಕಾರ್ಯ ಮಾಡ್ತಾ ಇದ್ದರು ;)
ನಾಗರಾಜ್
ಉ: ಹಂಪಿಯ ಕೆಲವು ಚಿತ್ರಗಳು
ಚಿತ್ರಗಳು ಚನ್ನಾಗಿ ಬಂದಿವೆ.
ಸೂರ್ಯಾಸ್ತ ಮಾಲ್ಯವಂತ ಬೆಟ್ಟದ ಮೇಲಿಂದೋ ಅಥವಾ ಅಂಜನಾದ್ರಿಯ ಮೇಲಿಂದೋ ? (ಅದು ಸೂರ್ಯಾಸ್ಥಮ ಅಲ್ಲ.)
ಚಿತ್ರದ ಕೋನಗಳು ಬೆಳಕಿನ ಸಂಯೋಜನೆ ಸೂಪರ್!!!
ಉ: ಹಂಪಿಯ ಕೆಲವು ಚಿತ್ರಗಳು
ತಮ್ಮ ಪ್ರತಿಕ್ರಿಯೆಗೆ ನನ್ನಿ ಶ್ರೀ ಹರ್ಷರವರೇ....
ನಾಗರಾಜ್
ಉ: ಹಂಪಿಯ ಕೆಲವು ಚಿತ್ರಗಳು
ನಾಗರಾಜ್,
ಹ೦ಪಿಯ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು. ಚಿತ್ರಗಳು ಬಹಳ ಚೆನ್ನಾಗಿ ಬ೦ದಿವೆ. ಸಾಮಾನ್ಯವಾಗಿ ದೇವಸ್ಥಾನದ ಒಳಗಿನ ಕಲಾಕೃತಿಗಳ ಫೋಟೋ ತೆಗೆಯಲು ಬಿಡುವುದಿಲ್ಲ, ಹ೦ಪಿಯಲ್ಲೂ ಅ೦ಥಾ ನಿಯಮವೇನಾದರೂ ಇದೆಯೇ?
-amg
ಉ: ಹಂಪಿಯ ಕೆಲವು ಚಿತ್ರಗಳು
ಪ್ರತಿಕ್ರಿಯೆಗೆ ಧನ್ಯವಾದಗಳು..
ಸಾಮಾನ್ಯವಾಗಿ ಎಲ್ಲಿಯೂ ಸಹ ನಿರ್ಭಂದ ಇಲ್ಲ ಕೆಲವು ಕಡೆ ನಿರ್ಭಂದ ಇದೆ ಅಷ್ಟೆ. ಎಲ್ಲಿ ಬೇಕಾದ್ರು ಧಾರಾಳವಾಗಿ ಪೋಟೋ ಕ್ಲಿಕ್ಕಿಸಬಹುದು................
ನಾಗರಾಜ್
ಉ: ಹಂಪಿಯ ಕೆಲವು ಚಿತ್ರಗಳು
ನಾಗರಾಜ್ ಕುಳಿತಲ್ಲೇ ಹಂಪಿಯನ್ನು ನೋಡುವ ಅವಕಾಶವನ್ನು ಕಲ್ಪಿಸಿದ್ದೀರಿ.ತುಂಬಾ ತುಂಬಾ ಧನ್ಯವಾದಗಳು.
ಕಡೆಯ ಚಿತ್ರ "ನನ್ನನ್ನೂ ನೋಡಿ" ಅದು ಹೇಳಿತೇ? ಹೇಳಿದ್ದು ನಿಮಗೆ ತಿಳಿಯಿತೇ ?
ಚಿತ್ರ ಡೌನ್ ಲೋಡ್ ಅಗುವುದು ಸ್ವಲ್ಪ ತಡವಾದಾಗ ನಿಮ್ಮದೇ ಒಂದು ಭಾವಚಿತ್ರವಿರಬಹುದೆಂದು ಎಣಿಸಿದ್ದು ತಪ್ಪಾಯಿತು.
ಉ: ಹಂಪಿಯ ಕೆಲವು ಚಿತ್ರಗಳು
ತಮ್ಮ ಪ್ರತಿಕ್ರಿಯೆಗೆ ನನ್ನಿ.
>>>ಕಡೆಯ ಚಿತ್ರ "ನನ್ನನ್ನೂ ನೋಡಿ" ಅದು ಹೇಳಿತೇ? ಹೇಳಿದ್ದು ನಿಮಗೆ ತಿಳಿಯಿತೇ ?<<<
ಅದು ಜನರನ್ನ ನೋಡ್ತಾ ಇತ್ತು ಅದಕ್ಕೆ ನಾನು ಈ ರೀತಿ ಬರೆದೆ :) <
ನಾಗರಾಜ್